2 ನೇ ಹಸುರು ಕ್ರಾಂತಿಯ ಅಶಯ

ಭಾರತದಲ್ಲಿ 2 ನೇ ಹಸುರು ಕ್ರಾಂತಿ ನೈಸರ್ಗಿಕ ಕೃಷಿಗೆ ಒತ್ತು.

ನಮ್ಮ ದೇಶಕ್ಕೆ 2 ನೇ ಹಸುರು ಕ್ರಾಂತಿಯ ಅವಶ್ಯಕತೆ ಇದೆ. ಈ ಕ್ರಾಂತಿ ಮುಂದಿನ ತಲೆಮಾರಿನ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು next-generation reform ಸುಸ್ಥಿರ ಮತ್ತು ಪರಿಸರ ಸ್ನೇಹಿಯಾಗಿ  ಹವಾಮಾನ ವೈಪರೀತ್ಯಗಳಿಗೆ ಹೊಂದಾಣಿಕೆಯಾಗುವಂತಿರಬೇಕು ಎಂಬ ಧ್ಯೇಯೋದ್ದೇಶಗಳಿವೆ. ನಮ್ಮ ದೇಶದ ಪ್ರಧಾನಿಗಳು, ರಕ್ಷಣಾ ಮಂತ್ರಿಗಳು ಹಾಗೂ ಕೃಷಿ ಮಂತ್ರಿಗಳ ಹಲವು ಹೇಳಿಕೆಗಳ ಪ್ರಕಾರ ಈ 2 ನೇ ಹಸಿರು ಕ್ರಾಂತಿಯಲ್ಲಿ ನೈಸರ್ಗಿಕ ಕೃಷಿಗೆ ಮಹತ್ವ ಬರಲಿದೆ ಎಂದು ಕಾಣಿಸುತ್ತದೆ. ನೈಸರ್ಗಿಕ ಕೃಷಿ ವಿಧಾನವನ್ನು ಅನುಸರಿಸುವ ಮೂಲಕ ನಮ್ಮ ದೇಶದ ರೈತರು…

Read more
ಹೂ ಬಿಟ್ಟದ್ದೆಲ್ಲಾ ಕಾಯಿಯಾಗುವ ಉತ್ತಮ ತರಕಾರಿ ತೊಂಡೆ

ಮಂಗಗಳ ಕಾಟ ಇಲ್ಲದ ಲಾಭದ ತರಕಾರಿ ಬೆಳೆ ಇದು.

ಬಹುತೇಕ ತರಕಾರಿಗಳಲ್ಲಿ ಗಂಡು ಹೂವು, ಹೆಣ್ಣು ಹೂವು ಗಳಿರುತ್ತವೆ. ಗಂಡಿನ ಮೂಲಕ ಪರಾಗಸ್ಪರ್ಶ ಆಗಿ ಕಾಯಿ ಕಚ್ಚಬೇಕು. ಆದರೆ ತೊಂಡೆ ಕಾಯಿ ಹಾಗಲ್ಲ. ಎಲ್ಲಾ ಹೂವುಗಳೂ ಕಾಯಿಯಾಗುತ್ತದೆ. ತೊಂಡೆ ಕಾಯಿ ಬೇಡಿಕೆಯ ತರಕಾರಿ. ರಾಜ್ಯದ ಎಲ್ಲಾ ಕಡೆ  ಬೆಳೆಸಬಹುದು. ಒಮ್ಮೆ ತೊಂಡೆ ಬೆಳೆಸಿದವರು ಮತ್ತೆ  ಆ ಕೃಷಿ ಬಿಡುವುದಿಲ್ಲ. ಮಳೆ ಕಡಿಮೆ ಇರುವ ಕಡೆ ಇದನ್ನು ವರ್ಷದುದ್ದಕ್ಕೂ ಬೆಳೆಸಬಹುದು.  ಮಳೆ ಹೆಚ್ಚು ಇರುವಲ್ಲಿ ನವೆಂಬರ್ ತಿಂಗಳ ನಂತರ ಜೂನ್  ತನಕ ಬೆಳೆ  ಬೆಳೆಸಬಹುದು. 100 ಚದರ ಅಡಿಯ…

Read more
ಒಣ ದ್ರಾಕ್ಷಿ

ದ್ರಾಕ್ಷಿ ಬೆಳೆಗಾರ ಸಂಕಷ್ಟಕ್ಕೆ ಉತ್ತರ – ಒಣ ದ್ರಾಕ್ಷಿ.

ಮಣಕ ಅಥವಾ ಒಣ ದ್ರಾಕ್ಷಿ  ಮಾಡಿದರೆ ಅದನ್ನು ಹೆಚ್ಚು ಸಮಯದ ತನಕ ದಾಸ್ತಾನು ಇಟ್ಟು ಮಾರಾಟ ಮಾಡಬಹುದು. ಇದಕ್ಕೆ ಮಧ್ಯವರ್ತಿಗಳು, ದಾಸ್ತಾನುಗಾರರು, ಚಿಲ್ಲರೆ ಮಾರಾಟಗಾರರು ಬೇಕಾಗಿಲ್ಲ. ನೀವು  ಬುದ್ದಿವಂತರಾಗಿದ್ದರೆ ಆನ್ ಲೈನ್ ಮೂಲಕ ನೇರವಾಗಿ ಗ್ರಾಹಕರಿಗೆ  ಮಾರಾಟ ಮಾಡಬಹುದು. ಸರಕಾರ ದ್ರಾಕ್ಷಿ ಬೆಳೆಗಾರರ ಸಮಸ್ಯೆ ನಿವಾರಣೆಗೆ ವೈನರಿಯನ್ನು ಎಲ್ಲಾ ತೆರೆಯುವಂತೆ ಸೂಚಿಸಿದೆಯಂತೆ. ಈ ವೈನರಿಗಳು ಕೊಡುವ ಬೆಲೆ ಬರೇ ಜುಜುಬಿ. ಅದರ ಬದಲು ಮಣಕ ಮಾಡಿದರೆ ಲಾಭ ಹೆಚ್ಚು. ಉತ್ತರ ಕರ್ನಾಟಕದ ಬಿಜಾಪುರ, ಬಾಗಲಕೊಟೆಯ ದ್ರಾಕ್ಷಿ ಬೆಳೆಗಾರರು…

Read more
ಅಡಿಕೆ ಸಸಿ ನೆಡುವಾಗ ಹೀಗೆ ಮಾಡಿದರೆ ಚೆನ್ನಾಗಿ ಬೆಳೆಯುತ್ತದೆ.

ಅಡಿಕೆ ಸಸಿ ನೆಡುವಾಗ ಹೀಗೆ ಮಾಡಿದರೆ ಚೆನ್ನಾಗಿ ಬೆಳೆಯುತ್ತದೆ.

 ಇನ್ನೇನು ಆಷಾಢ  ಕಳೆದ ತಕ್ಷಣ ಅಡಿಕೆ ಸಸಿ ನೆಡುವವರು ನೆಡಲು ಪ್ರಾರಂಭಿಸುತ್ತಾರೆ. ನೆಡುವಾಗ ಸರಿಯಾಗಿ ನೆಟ್ಟರೆ ಮಾತ್ರ ಪ್ರಾರಂಭಿಕ ಹಂತದಲ್ಲೇ ಯೋಗ್ಯ ಬೆಳವಣಿಗೆಯನ್ನು  ಹೊಂದಲು ಸಾಧ್ಯ. ತೆಂಗು ಅಡಿಕೆ ಯಾವುದೇ ಸಸಿ ಇರಲಿ, ಮೊದಲ ವರ್ಷಗಳಲ್ಲಿ (Innitial growth) ತಮ್ಮ ಸಧೃಢ ಬೆಳವಣಿಗೆಯನ್ನು ಹೊಂದಿದರೆ, ಅದು ಮುಂದೆ ಉತ್ತಮ ಫಲ ಕೊಡುತ್ತದೆ. ಹಾಗಾದರೆ ಸಸಿ ಹೇಗೆ ನೆಡಬೇಕು ನೋಡೋಣ. ಅಡಿಕೆ , ತೆಂಗು, ತಾಳೆ  ಇವೆಲ್ಲಾ ಏಕದಳ ಸಸ್ಯಗಳು. ಇವುಗಳ ಬೇರು ಹರಡುವ ಕ್ರಮ ದ್ವಿದಳ ಸಸ್ಯಗಳಿಗಿಂತ…

Read more
ಸುಪ್ರೀಮ್ ಕೋರ್ಟ್

ಸುಪ್ರೀಮ್ ಕೋರ್ಟ್ ನ್ಯಾಯಮೂರ್ತಿಗಳು ಕೃಷಿಕರ ಬಗ್ಗೆ ತೋರಿದ ಕಳಕಳಿ.

ಎಲ್ಲರೂ ಕೃಷಿಕರು ಹಾಗೆ ಮಾಡುತ್ತಾರೆ, ಹೀಗೆ ಮಾಡುತ್ತಾರೆ. ಪರಿಸರ ಹಾನಿ ಮಾಡುತ್ತಾರೆ. ಮಾಲಿನ್ಯ ಮಾಡುತ್ತಾರೆ ಎಂದು ತಗಾದೆ ತೆಗೆಯುವವರು. ಇವರೆಲ್ಲರಿಗೂ ಒಂದು ರೀತಿಯಲ್ಲಿ  ಚಾಟಿ ಏಟಿನ ತರಹ ಪ್ರಶ್ನೆಯೊಂದನ್ನು ಭಾರತದ ಸುಪ್ರೀಮ್ ಕೋರ್ಟ್ ನ್ಯಾಯಾಧೀಶರಾದ ಶ್ರೀ ಎನ್ ವಿ ರಮಣ ಇವರು ಕೇಳಿದ್ದಾರೆ. ಎಲ್ಲಾ ತಕರಾರಿನಲ್ಲೂ ರೈತರ ವಿಷಯಗಳನ್ನು ನ್ಯಾಯಾಲಯದ ಕಟ್ಟಲೆಗೆ ತರುವುದು ಸೂಕ್ತವಲ್ಲ. ರೈತರು ಅವರ ಆರ್ಥಿಕ ಮೂಲಕ್ಕನುಗುಣವಾಗಿ ಕೆಲವು ಸಣ್ಣ ಪುಟ್ಟ ತಪ್ಪುಗಳನ್ನು ಕೃಷಿ ಕಾಯಕದಲ್ಲಿ ಮಾಡಬಹುದಾದರೂ ಅದನ್ನು ನಾವು ಬೇರೆ ತಪ್ಪುಗಳಿಗೆ ಹೋಲಿಸಿದರೆ…

Read more
one year areca plant

ಮೊದಲ ವರ್ಷದ ಅಡಿಕೆ ಸಸಿಗೆ ಎಷ್ಟು ಗೊಬ್ಬರ ಕೊಡಬೇಕು

ಅಡಿಕೆ ಮರಗಳು – ಸಸಿಗಳಿಗೆ  , ತೆಂಗಿನ ಮರದ  ಹಾಗೆಯೇ ಇನ್ನಿತರ ಎಲ್ಲಾ ಧೀರ್ಘಾವಧಿ ಬೆಳೆಗಳಲ್ಲಿ ಮುಂಗಾರು ಮಳೆ ಪ್ರಾರಂಭವಾಗುವ ಸಮಯದಲ್ಲಿ ಹೊಸ ಬೇರುಗಳ ಉತ್ಪತ್ತಿ ಜಾಸ್ತಿ. ಹೊಸ ಬೇರು ಮೂಡುತ್ತದೆ. ಹಳೆ  ಬೇರು ಹೆಚ್ಚು ಚುರುಕಾಗಿ ಆಹಾರ ಬಯಸುತ್ತವೆ. ಈ ಸಮಯದಲ್ಲಿ  ಕೊಡುವ ಪೋಷಕಾಂಶ ಅದರ ತುರ್ತು ಅಗತ್ಯಕ್ಕೆ ಲಭ್ಯವಾಗಿ ಬೆಳೆವಣಿಗೆಗೆ ಸಹಾಯಕವಾಗುತ್ತದೆ. ನೆಟ್ಟ ಮೊದಲ ವರ್ಷದ ಅಡಿಕೆ ಸಸಿಗೆ ಎಷ್ಟು ಗೊಬ್ಬರ ಕೊಡಬೇಕು ಎಂಬುದರ ಮಾಹಿತಿ ಇಲ್ಲಿದೆ. ಎಲ್ಲಾ ನಮೂನೆಯ ಧೀರ್ಘಾವಧಿ ಬೆಳೆಗಳಿಗೆ ಅವುಗಳ…

Read more
ಸೌತೆ ಬೆಳೆಯ ಹೊಲ

ಸೌತೆ ಬೆಳೆಯಲ್ಲಿ ಹೆಚ್ಚು ಕಾಯಿ ಪಡೆಯುವ ವಿಧಾನ .

ಸೌತೇ ಸುಮಾರಾಗಿ ಬೇಸಿಗೆಯಲ್ಲಿ ಎಲ್ಲರೂ ಬೆಳೆಸುವ ತರಕಾರಿ ಬೆಳೆ. ಸೌತೆ ಬೆಳೆಯಲ್ಲಿ ಕೆಲವು ಟ್ರಿಮ್ಮಿಂಗ್ ಮಾಡುವುದರಿಂದ ಬೇಗ ಮತ್ತು ಹೆಚ್ಚು ಇಳುವರಿ ಪಡೆಯಬಹುದು. ಟೊಮೇಟೋ, ಆಲೂಗಡ್ಡೇ ನಂತರ ಅತೀ ಹೆಚ್ಚು ಬಳಕೆಯಗುವ ತರಕಾರಿ ಸೌತೆ. ಸೌತೆ ಬೆಳೆಯನ್ನು ಹೆಚ್ಚು ನಿಗಾವಹಿಸಿ ಬೆಳೆದಾಗ ಉತ್ತಮ ಲಾಭವೂ ಇದೆ. ಸೌತೆಯಲ್ಲಿ ಎರಡು ಪ್ರಕಾರಗಳು. ಒಂದು ಉದ್ದದ ಕಾಯಿಗಳನ್ನು ಬಿಡುವ ಕೇರಳ ಮೂಲದ ಸೌತೆ. ದಕ್ಷಿ ಣ ಕರ್ನಾಟಕದ ದುಂಡಗೆಯ ತಳಿ. ತೂಕ ಸುಮಾರಾಗಿ ಏಕ ಪ್ರಕಾರವಾಗಿರುತ್ತದೆ. ಕೆಲವು ಪ್ರದೇಶಗಳಲ್ಲಿ ಇನ್ನೂ…

Read more
Well managed areca garden

ಅಡಿಕೆಮರಗಳಿಗೆ ಈಗ ಯಾಕೆ, ಮತ್ತು ಯಾವ ಗೊಬ್ಬರ ಹಾಕಬೇಕು?

ಅಡಿಕೆ ಮರಗಳಿಗೆ ಮುಂಗಾರು ಪೂರ್ವದಲ್ಲಿ ಗೊಬ್ಬರ ಹಾಕಿದರೆ ಅದರ ಫಲಿತಾಂಶ ಅಪಾರ. ಮುಂಗಾರು ಪೂರ್ವದಲ್ಲಿ ಗೊಬ್ಬರ  ಹಾಕಲು ಮಿಸ್ ಮಾಡಿಕೊಳ್ಳಬೇಡಿ. ಇದರಿಂದ ಮುಂದಿನ ವರ್ಷದ ಬೆಳೆಗೆ ತೊಂದರೆ ಆಗುತ್ತದೆ. ಬೇಸಿಗೆ ಕಾಲ ಕಳೆದು ಮಳೆಗಾಲ ಪ್ರಾರಂಭವಾಗುವ ಈ ಸಮಯದಲ್ಲಿ  ಋತುಮಾನದ ಬದಲಾವಣೆ ಉಂಟಾಗುತ್ತದೆ. ಆಗ ಸಸ್ಯಗಳ ಬೆಳೆವಣಿಗೆಯಲ್ಲಿ ಒಂದು ಬದಲಾವಣೆಯೂ ಆಗುತ್ತದೆ. ಈ ಸಮಯದಲ್ಲಿ ಎಲ್ಲಾ ಸಸ್ಯಗಳಲ್ಲೂ  ಬೇರಿನ ಬೆಳವಣಿಗೆ, ಹೊಸ ಬೇರು ಮೂಡುವುದು, ಸಸ್ಯದ ಎಲೆಗಳು ಹೆಚ್ಚು ಚಟುವಟಿಕೆಯಲ್ಲಿ ಇರುತ್ತವೆ. ಬೇಸಿಗೆಯಲ್ಲಿ ಭಾಗಶಃ ಒಣಗಿದ್ದರೂ ಸಹ…

Read more
ಶುಂಠಿ ಹೊಲ

ಶುಂಠಿ ಈಗ ನೆಟ್ಟರೆ ಬೆಳೆಗೆ ರೋಗ ಕಡಿಮೆ ಹೇಗೆ?.

ಶುಂಠಿ ಮುಂತಾದ  ಗೆಡ್ಡೆ ಗೆಣಸು ಬೆಳೆಗಳನ್ನು ಬೆಳೆಸುವರೇ ಕುಂಭ  ಮಾಸ ಅತ್ಯಂತ ಸೂಕ್ತ ಕಾಲ. ಶುಂಠಿಗೆ ಈ ವರ್ಷ ಬೆಲೆ ಕುಸಿತವಾಗಿದೆ ಎಂದು ಬೆಳೆ ಬಿಟ್ಟು ಬಿಡಬೇಡಿ. ಈ ವರ್ಷ ಮತ್ತೆ ಶುಂಠಿಗೆ ಚಾನ್ಸ್ ಬರುವ ಸಾಧ್ಯತೆ ಇದೆ. ಜೊತೆಗೆ ಬಿತ್ತನೆ ಗಡ್ಡೆಯೂ ಕಡಿಮೆ ಬೆಲೆಗೆ ಲಭ್ಯ. ಮಾರ್ಚ್ ನಂತರ ಶುಂಠಿ ನೆಟ್ಟರೆ ಮಳೆ ಬರುವ ಸಮಯಕ್ಕೆ ಗಿಡ ಬೆಳೆದು ರೋಗ ಸಾಧ್ಯತೆ ಕಡಿಮೆ. ಮಾಗಿ ತಿಂಗಳು ಅಥವಾ ಕುಂಭ ಮಾಸ ಕಳೆದರೆ ಮಳೆಗಾಲ. ಆಷಾಢ ಕಳೆದರೆ…

Read more
error: Content is protected !!