ಹೀಗೆ ಮಾಡಿದರೆ ನೀರು ತುಂಬಾ ಕಡಿಮೆ ಸಾಕು.

ಕೆಲವು ಮಣ್ಣಿನಲ್ಲಿ  ಮಳೆ ಬಂದರೆ  ನೀರು ವಾರಗಟ್ಟಲೆ  ಆರುವುದೇ ಇಲ್ಲ. ಬಿಸಿಲು ಬಂದರೆ  ನೆಲ ಟಾರು ರಸ್ತೆ  ತರಹ. ಇಂತಲ್ಲಿ   ಇಬ್ಬನಿ ರೂಪದಲ್ಲಿ ಬಿದ್ದ ನೀರೂ ಸಹ ಪೋಲಾಗದೆ ಬೆಳೆಗೆ ದೊರೆಯುವಂತಾಗಲು ರೈತರು ಕಂಡುಕೊಂಡ ವಿಧಾನ ಉಸುಕು ಹಾಕುವಿಕೆ.   ಕಪ್ಪು ಹತ್ತಿ ಮಣ್ಣು  ಒಂದು ಮಳೆ ಬಂದರೆ ಅಂಟು ಅಂಟಾಗುತ್ತದೆ. ಇದಕ್ಕೆ ಮಳೆ ಹನಿ ಬಿದ್ದಾಗ ಮಣ್ಣು ಕರಗಿ ಹೋಗುತ್ತದೆ. ನೀರು ಕಡಿಮೆಯಾದಾಗ ಮಣ್ಣು ಒಡೆದು ಹೂಗುತ್ತದೆ. ರಾಜ್ಯದಲ್ಲಿ  ಬಿಜಾಪುರ, ಗದಗ, ನರಗುಂದ ಧಾರವಾಡದ ಕೆಲ…

Read more

ಪ್ರಪಂಚದಲ್ಲೇ ಇದು ಅಧ್ಬುತ– ಮಿಡಿ ಮಾವು.

ಅಪ್ಪೆ ಮಿಡಿ ಒಂದು ಸುಗಂಧಿತ ಮಾವು. ಇದು ಬೆಳೆಯುವುದು ಹೊಳೆ ದಂಡೆಯಲ್ಲಿ. ಅದಕ್ಕಾಗಿ ಈ ಮಾವಿಗೆ ಹೊಳೆಸಾಲು ಅಪ್ಪೆ ಎಂಬ ಹೆಸರು. ಇದು ನಮ್ಮ ರಾಜ್ಯದ ಮಲೆನಾಡಿನ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ಕಂಡು ಬರುತ್ತದೆ. ಇದರ ಮಿಡಿಯ ಉಪ್ಪಿನ ಕಾಯಿ ಅಲ್ಲದೆ ಕೆಲವು ಖಾದ್ಯಗಳು ಸರ್ವಶ್ರೇಷ್ಟ. ಮಿಡಿ ಉಪ್ಪಿನ ಕಾಯಿ ಸವಿಯುವುದೇ ಅದರೆ, ಅಪ್ಪೆ ಮಿಡಿಯ ಸವಿಯನ್ನು ಒಮ್ಮೆ ನೋಡಿ. ಅದೂ ಮಲೆನಾಡಿನ ಕೆಲವು ಪಾಕಶಾಸ್ತ್ರಜ್ಞರ ಕೈಯಲ್ಲಿ ಮಾಡಿದ್ದೇ ಆಗಬೇಕು. ಮಾವಿನ ಮಿಡಿ ಒಯ್ದು ಉಪ್ಪಿನ…

Read more

ವರ್ಜಿನ್ ಕೋಕೋನಟ್ (VCO) ಎಂಬುದು ಎಲ್ಲಾ ಸತ್ಯವಲ್ಲ.

ಕೊರೋನಾ ರೋಗದ ವಿರುದ್ಧ ದೇಹದ ಅಂತಃ ಶಕ್ತಿ ಹೆಚ್ಚಿಸಲು ವರ್ಜಿನ್ ಕೋಕೋನಟ್ ಆಯಿಲ್ ಒಳ್ಳೆಯದು ಎಂದು ಪ್ರಚಾರ ಪ್ರಾರಂಭವಾಗಿದೆ. ಅದರ ಜೊತೆಗೆ ಈ ಎಣ್ಣೆಗೆ ಬೇಡಿಕೆ ಹೆಚ್ಚಿದೆ. ನಿಜವಾಗಿ ವರ್ಜಿನ್ ಕೋಕೋನಟ್ ಆಯಿಲ್ ಮತ್ತು ತೆಂಗಿನೆಣ್ಣೆಗೆ ಏನು ವ್ಯತ್ಯಾಸ. ತೆಂಗಿನ ಕಾಯಿಯಿಂದಲೇ ಹಿಂದಿನಿಂದಲೂ ಎಣ್ಣೆ ತೆಗೆಯುತ್ತಿದ್ದುದು. ಇತ್ತೀಚಿನ ಕೆಲವು ವರ್ಷಗಳ ಹಿಂದೆ ನಮ್ಮಲ್ಲಿ ಶತಮಾನಗಳಿಂದ ಪ್ರಚಲಿತದಲ್ಲಿದ್ದ ಗಾಣದಿಂದ ಎಣ್ಣೆ ತೆಗೆಯುವ ತಂತ್ರಜ್ಞಾನ ವನ್ನು ಓವರ್ ಟೇಕ್ ಮಾಡಿ ಬಂದ ತಂತ್ರಜ್ಞಾನವೇ ವರ್ಜಿನ್ ಕೋಕೋನಟ್ ಆಯಿಲ್. ತೆಂಗಿನ ಕಾಯಿಯಿಂದ…

Read more
ploughing

“ಮಾಗಿ ಉಳುಮೆ” ಮಾಡುವುದರಿಂದ ಪ್ರಯೋಜನ

ಬೆಳೆ ಬೆಳೆಯುವ ಮಣ್ಣು ಪ್ರಾಕೃತಿಕವಾಗಿ ಸೂರ್ಯನ ಬೆಳಕಿನಿಂದ ವರ್ಷ ವರ್ಷವೂ ಪುನಶ್ಚೇತನ ಆಗಬೇಕು. ಅದಕ್ಕೆ ನೆರವಾಗುವ ಒಂದು ಬೇಸಾಯ ಕ್ರಮ ಮಾಗಿ ಉಳುಮೆ. ಕೃಷಿ ಮಾಡುವಾಗ ಮಣ್ಣಿನ ಉತ್ಪಾದಕತೆ ಎಂಬುದು ಅತೀ ಪ್ರಾಮುಖ್ಯ. ಹೊಲದ ಉತ್ಪಾದಕತೆಯು ಮಣ್ಣಿನ ಗುಣಲಕ್ಷಣಗಳು ಆರೋಗ್ಯ ಮತ್ತು ಪ್ರಮುಖವಾಗಿ ಮಣ್ಣಿನ ಫಲವತ್ತತೆಯನ್ನು ಅವಲಂಬಿಸಿದೆ. ಸಸ್ಯಗಳ ಬೆಳವಣಿಗೆಗೆ ಅತ್ಯವಶ್ಯವಿರುವ ನೀರು ಮತ್ತು ಗಾಳಿಯನ್ನು ಹಿಡಿದಿಟ್ಟುಕೊಳ್ಳುವುದು, ಅಗತ್ಯವಾದಷ್ಟು ಪೋಷಕಾಂಶಗಳನ್ನು ಒದಗಿಸುವುದು ಮಣ್ಣು. ಮಣ್ಣು ಪೋಷಕಾಂಶಗಳ ಆಗರ..ಮಣ್ಣು ಸವೆತದೊಂದಿಗೆ ಮಣ್ಣಲ್ಲಿನ ಉಪಯುಕ್ತವಾದ ಪ್ರಧಾನ ಮತು ಲಘು ಪೋಷಕಾಂಶಗಳು…

Read more

ಬೇಗ ಬೆಳೆಯುವ, ನಾರು ಇಲ್ಲದ ಹರಿವೆಯ ತಳಿಗಳು.

ಹರಿವೆ ಸೊಪ್ಪು ಒಂದು ಪೌಷ್ಟಿಕ ತರಕಾರಿ. ಇದನ್ನು ಅಮರಾಂತಸ್,(Amaranthus sp) ದಂಟಿನ ಸೊಪ್ಪು ಎಂಬ ಹೆಸರುಗಳಿಂದ ಕರೆಯಲಾಗುತ್ತದೆ.  ದೇಹದ ರಕ್ಷಣೆಗೆ ಬೇಕಾದ ಜೀವ ಸತ್ವಗಳನ್ನು ಒದಗಿಸುವ ಸೊಪ್ಪು ತರಕಾರಿ. ಸಾವಿರಾರು ವರ್ಷಗಳಿಂದಲೂ ಇದು ನಮ್ಮ ದೇಶದಲ್ಲಿ ಬೆಳೆಯಲ್ಪಡುತ್ತಿತ್ತು. ಭಾರತವೇ ಇದರ ಮೂಲ ಎನ್ನಬಹುದು. ಬೇರೆ ದೇಶಗಳಲ್ಲೂ ಇದು ಬೆಳೆಯಲ್ಪಡುತ್ತಿದೆ.           ಹರಿವೆಯಲ್ಲಿ ನೂರಾರು ಪ್ರಬೇಧಗಳಿವೆ. ದಂಟಿನ ಉದ್ದೇಶಕ್ಕೆ, ಸೊಪ್ಪಿನ ಉದ್ದೇಶಕ್ಕೆ, ಬೀಜದ ಉದ್ದೇಶಕ್ಕೆ  ಮತ್ತೆ ಕೆಲವು ಕಳೆ ಸಸ್ಯಗಳಾಗಿಯೂ ಇವೆ. ವಾಣಿಜ್ಯ ತಳಿಗಳು: ದೇಶದ…

Read more
ಉತ್ತಮ ಬೆಳವಣಿಗೆಯ ಸಸಿ

ಬಯಲುಸೀಮೆಯ ಅಡಿಕೆ ಬೆಳೆಗಾರರಿಗೆ ಪ್ರಮುಖ ಸಲಹೆಗಳು.

ಬಯಲು ಸೀಮೆಯ ರೈತರು ಈ ತನಕ ನಷ್ಟದ ಬೆಳೆಗಳಾದ ಜೋಳ, ಭತ್ತ ಮುಂತಾದ ಬೆಳೆಗಳನ್ನೇ ಬೆಳೆಸುತ್ತಿದ್ದವರು. ಈಗ ಹೊಸ ಆಕಾಂಕ್ಷೆಯಲ್ಲಿ ಹೆಚ್ಚಿನ ಆದಾಯ ಕೊಡಬಲ್ಲ ಅಡಿಕೆ ಬೆಳೆಯಲು ಪ್ರಾರಂಭಿಸಿದ್ದಾರೆ.  ಇವರಿಗೆ ಅಡಿಕೆ ಬೆಳೆ ಏನು, ಇದನ್ನು ಬೆಳೆಸುವ ಕುರಿತಾಗಿ ಸ್ವಲ್ಪ ಮಟ್ಟಿನ ಸಲಹೆ ಕೊಡುವುದು ಈ ಬರಹದ ಉದ್ದೇಶ.  ಈಗ ಸಾಂಪ್ರದಾಯಿಕ ಬೆಳೆ ಪ್ರದೇಶದ ಪರಿದಿಯನ್ನು ಮೀರಿ  ವ್ಯಾಪಿಸಿದೆ.  ಕರಾವಳಿ ಮಲೆನಾಡಿನ  ರೈತರು ಮಾತ್ರ ಅಡಿಕೆಯಂತಹ ಬೆಳೆ ಬೆಳೆದು ಹೆಚ್ಚು ಆದಾಯ ಸಂಪಾದಿಸುವುದಲ್ಲ. ಇವರೂ ಸಂಪಾದಿಸಬೇಕು. ನಮ್ಮ…

Read more
brinja

ಬಿಟಿ ಬದನೆ ಬಂದರೆ ಕೀಟನಾಶಕ ಬಳಸದ ಬದನೆ ತಿನ್ನಬಹುದು.

ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬಿಟಿ ಬದನೆಯ ಬೇಸಾಯ ಸದ್ದಿಲದ್ದೆ ಕರ್ನಾಟಕದಲ್ಲಿ ರೈತರು ಎಚ್ಚರದಿಂದಿರಿ ಎಂಬ    ವಿರೋಧಿ ಹೋರಾಟದ ಸಂದೇಶಗಳು ರವಾನೆಯಾಗುತ್ತಿವೆ. ಯಾಕೆ ಬಿಟಿ ಬದನೆ ಬೇಡ ಎಂದು ತಿಳಿಯುತ್ತಿಲ್ಲ. ವೈಜ್ಞಾನಿಕ ಮೂಲಗಳು ಬಿಟಿಯಿಂದ ತೊಂದರೆ ಇಲ್ಲ ಎಂಬುದನ್ನು ಆದಾರ ಸಹಿತ ಹೇಳಿದರೆ  ಬಿಟಿ ಬೇಡ ಎನ್ನುವವರು ತಮ್ಮದೇ ಆದ ವಾದಗಳಿಂದ ಜನರನ್ನು ಅಂಜಿಸುತ್ತಿದ್ದಾರೆ. ವಿಜ್ಞಾನ ಹೇಳುತ್ತದೆ ಹೀಗೆ: ಬಿಟಿ ಎಂದರೆ ವಂಶವಾಹಿ ಮಾರ್ಪಾಡು ಮಾಡಲಾದ ತಳಿ. ಮಾರ್ಪಾಡು ಎಂದರೆ ಕೆಲವು ಅವಗುಣಗಳನ್ನು ತೆಗೆದು ಅಗತ್ಯ ಗುಣಗಳನ್ನು ಅದರ…

Read more
arecanut spray

ಮಿಡಿ ಅಡಿಕೆ ಉದುರುತ್ತಿದೆಯೇ ? ಈ ಸಿಂಪರಣೆ ಮಾಡಿ.

ಮಿಡಿ ಅಡಿಕೆ ಉದುರುವ ಸಮಸ್ಯೆ ಇದ್ದಲ್ಲಿ ಅದಕ್ಕೆ ಕೀಟನಾಶಕ , ಶಿಲೀಂದ್ರ ನಾಶಕ ಸಿಂಪರಣೆ  ಮಾಡುವ ಮುಂಚೆ ಒಮ್ಮೆ ಅಥವಾ ಎರಡು ಬಾರಿ ಪೋಷಕಾಂಶ ಸಿಂಪರಣೆ ಮಾಡಿ. ಬಹುತೇಕ ಮಿಡಿ ಉದುವುದು ಆಹಾರದ ಕೊರತೆಯಿಂದ. ಸುಮ್ಮನೆ ಕೀಟನಾಶಕ, ಶಿಲೀಂದ್ರ ನಾಶಕ ಬಳಸಿ ಖರ್ಚು ಮಾಡುವ ಬದಲು ಮಿತ ಖರ್ಚಿನಲ್ಲಿ ಇದನ್ನು ಮಾಡಿ ನೊಡಿ. ಒಂದು ಇನ್ಟಂಟ್ ಆಹಾರವಾಗಿ ಇದು ಕೆಲಸ ಮಾಡಿ ಮಿಡಿ ಉದುರುವುದನ್ನು ಕಡಿಮೆ ಮಾಡುತ್ತದೆ. . ಯಾವುದೇ ಬೆಳೆಯಲ್ಲಿ ಎಳೆ ಕಾಯಿಗಳು ಉದುರುವುದು, ರೋಗ…

Read more
ಅಡಿಕೆ ಸಿಂಗಾರ

ಅಡಿಕೆ – ಸಿಂಗಾರಕ್ಕೆ ಸಿಂಪರಣೆ ಯಾವಾಗ ಯಾವುದನ್ನು ಮಾಡಬೇಕು?

ಅಡಿಕೆಯ ಮಿಡಿ ಉಳಿಸುವುದಕ್ಕೆ ಕೀಟನಾಶಕ, ಶಿಲೀಂದ್ರನಾಶಕದ ಬಳಕೆ ಯಾವಾಗ ಯಾವುದನ್ನು ಮಾಡಬೇಕು, ಅನವಶ್ಯಕವಾಗಿ ಸಿಂಪಡಿಸಿದರೆ ನಷ್ಟ ಏನು ಎಂಬ ಬಗ್ಗೆ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ ಹಿರಿಯ ರೋಗ ಶಾಸ್ತ್ರಜ್ಞ ಡಾ. ವಿನಾಯಕ ಹೆಗಡೆಯವರ ಜೊತೆ ಚರ್ಚಿಸಿ ಆ ಪ್ರಕಾರ ರೈತರಿಗೆ ತಿಳಿಸುವ ಮಾಹಿತಿ ಇದು. ಅಡಿಕೆಗೆ ಬೆಲೆ ಚೆನ್ನಾಗಿದೆ. ಹಾಗಾಗಿ  ಹೇಗಾದರೂ ಮಾಡಿ ಹೂ ಗೊಂಚಲಿನಲ್ಲಿ ಇರುವ ಎಲ್ಲಾ ಕಾಯಿಗಳನ್ನೂ ಉಳಿಸಿಕೊಳ್ಳಬೇಕು, ಗರಿಷ್ಟ ಇಳುವರಿ ಪಡೆಯಬೇಕು ಎಂಬ  ಆಸೆಯಲ್ಲಿ ಇತ್ತೀಚೆಗೆ ನಾವು ಹೂಗೊಂಚಲಿಗೆ ಕೀಟನಾಶಕ,…

Read more
ಒಂದೆಲಗ

ಒಂದೆಲಗಕ್ಕೆ ಭಾರಿ ಬೇಡಿಕೆ ಮತ್ತು ಬೆಲೆ ಇದೆ.

ಒಂದೆಲಗ ಇನ್ನೊಂದು ದಿನ ಕಾಣುವುದಕ್ಕೇ ಸಿಗದ ಸ್ಥಿತಿ ಉಂಟಾದರೂ ಅಚ್ಚರಿ ಇಲ್ಲ. ಈಗ ಹಿಂದಿನಂತೆ ಇದು ಕಾಣಸಿಗುತ್ತಿಲ್ಲ. ಬೆಳೆಸಿ ಉಳಿಸದಿದ್ದರೆ ಇನ್ನು ಕೆಲವೇ ವರ್ಷ . ಕಳೆ ನಾಶಕಗಳು, ಮಣ್ಣು ಅಗೆಯುವ ಯಂತ್ರಗಳು ಇದನ್ನು  ಬಲಿ ತೆಗೆದುಕೊಂಡಾವು. ಇದು ಇಂದಿನ ಅತೀ ದೊಡ್ಡ ಸಮಸ್ಯೆಯಾದ  ಬೊಜ್ಜು ಕರಗಳು ಉತ್ತಮ ಔಷಧಿ. ಜೊತೆಗೆ  ಬೇಡಿಕೆ. ಒಂದೆಲಗ  ಒಂದು ಅತ್ಯುತ್ತಮ ಮೂಲಿಕಾ ಸಸ್ಯ. ಇದು ಎಲ್ಲರ ಹೊಲಗಳಲ್ಲಿ ಕಂಡು ಬರುವ ಒಂದು ನೆಲದಲ್ಲಿ ಹಬ್ಬಿ ಬೆಳೆಯುವ  ಬಳ್ಳಿ ಸಸ್ಯ. ಇದರ…

Read more
error: Content is protected !!