ಅಧಿಕಇಳುವರಿಗೆ ನೆರವಾಗುವ ರಾಸಾಯನಿಕ ಇಲ್ಲದ NPK ಪೋಷಕ.

ಕೆಲವು ರೈತರು ಬೆಳೆಗಳಿಗೆ ಎಲ್ಲಾ ರೀತಿಯ ಗೊಬ್ಬರಗಳನ್ನು ಕೊಡುತ್ತಾರೆ. ವರ್ಷದಿಂದ ವರ್ಷಕ್ಕೆ ಗೊಬ್ಬರ ಕೊಡುವ ಪ್ರಮಾಣವನ್ನೂ ಹೆಚ್ಚಿಸುತ್ತಾರೆ. ಆದರೆ ವರ್ಷದಿಂದ ವರ್ಷಕ್ಕೆ ಫಸಲು ಕಡಿಮೆಯಾಗುತ್ತದೆ. ಸಸ್ಯ ದ ಆರೋಗ್ಯವೂ ಹಾಳಾಗುತ್ತದೆ. ಇದಕ್ಕೆ ಕಾರಣ ಮಣ್ಣಿನ ಜೈವಿಕತೆ ಕ್ಷೀಣಿಸುವುದು. ಪರಿಸ್ಥಿತಿಗೆ ಸಹಜವಾಗಿ ಮಣ್ಣಿಗೆ ಸಾವಯವ ವಸ್ತುಗಳನ್ನು ಹೇರಳವಾಗಿ ಪೂರೈಕೆ ಮಾಡಲು ಆಗುತ್ತಿಲ್ಲ. ಇದರಿಂದಾಗಿ ಮಣ್ಣಿನ ಜೈವಿಕ ಗುಣ ಕ್ಷೀಣವಾಗುತ್ತಾ ಬರುತ್ತದೆ. ಹಾಕಿದ ಗೊಬ್ಬರವನ್ನು ಲಭ್ಯಸ್ಥಿತಿಗೆ ತಂದು ಅಧಿಕಇಳುವರಿ ಪಡೆಯಲು ಈ ಜೈವಿಕ ಸಮ್ಮಿಶ್ರಣ ನೆರವಾಗುತ್ತದೆ. ನಾವು ತಿನ್ನುವ ಆಹಾರ ದೇಹದಲ್ಲಿ…

Read more
ಸೀತಾಫಲದ ಹಣ್ಣುಗಳು

ಸೀತಾಫಲ ಬೆಳೆ ಜೀವನಕ್ಕೆ ಹೊಸ ತಿರುವು ಕೊಟ್ಟಿತು.

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಸಂಗೊಳಗಿಯ 45 ವಯಸ್ಸಿನ ಸಣ್ಣ ರೈತ ವೆಂಕಟರಾವ ಬಿರಾದಾರ ಒಂದು ಎಕರೆಯಲ್ಲೇ ತರಹೇವಾರಿ ಹಣ್ಣು ತರಕಾರಿ ಬೆಳೆದು ವರ್ಷಕ್ಕೆ ಸುಮಾರು 5 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ಹಗಲಿರುಳು ಕಠಿಣ ಪರಿಶ್ರಮದಿಂದ ಅರ್ಧ ಎಕರೆಯಲ್ಲಿ ಬೆಳೆದ ಸೀತಾಫಲ ಹಣ್ಣಿನಿಂದ  ತನ್ನ ಆರ್ಥಿಕ ಸ್ಥಿತಿಗತಿಯೇ  ಬದಲಾಯಿತು. ಇದು ಇತರೆ ಸಣ್ಣ ರೈತರಿಗೆ ಮಾದರಿಯಾಗಿದೆ. ಕೃಷಿ ಒಂದೇ ಅವಕಾಶವಾಗಿತ್ತು: ವೆಂಕಟರಾವ್ ಬಡತನದ ಕಾರಣ ಎಸ್.ಎಸ್.ಎಲ್.ಸಿ. ನಂತರ ವಿದ್ಯಾಭ್ಯಾಸ ಮುಂದುವರಿಸಲಿಲ್ಲ. ಕಲಬುರಗಿ ಕೃಷಿ ವಿಜ್ಞಾನ ಕೇಂದ್ರದ…

Read more
ರಬ್ಬರ್ ತೋಟದಲ್ಲಿ ಜೇನು ಪೆಟ್ಟಿಗೆ

ರಬ್ಬರ್ ಜೇನು ಎಷ್ಟು ಉತ್ತಮ?

ರಬ್ಬರ್ ಮರದಲ್ಲಿ ಚಿಗುರುವ ಸಮಯದಲ್ಲಿ ಎಲೆ ಭಾಗದಲ್ಲಿ ಒಂದು ರಸ ಸ್ರವಿಸುತ್ತದೆ. ಇದು ಮಾರ್ಚ್ ತನಕವೂ ಮುಂದುವರಿಯುತ್ತದೆ.  ಈಗ ಹಿಂದಿನಂತೆ ಕಾಡು ಜೇನು ಕಡಿಮೆ. ಇರುವುದು ಬಹುತೇಕ ರಬ್ಬರ್ ಮರದ ಜೇನು.  ಜೇನು ಎಂದರೆ ಅದು ನಿಸರ್ಗದ  ವೈವಿಧ್ಯಮಯ ಹೂವುಗಳ ಮಧುವನ್ನು ಜೇನು ನೊಣ ಎಂಬ ಜೀವಿ ತನ್ನ ಶರೀರದ ಒಳಗೆ  ಹೀರಿಕೊಂಡು ಸಂಗ್ರಹಿಸಿದ ದ್ರವ. ನೊಣಗಳು  ಅದನ್ನು ತಮ್ಮ ಗೂಡಿಗೆ ತರುತ್ತವೆ. ಅಲ್ಲಿ ಸ್ವಲ್ಪ ಕಾಲ ತಮ್ಮ ದೇಹದಲ್ಲಿ ಇಟ್ಟುಕೊಂಡು ನಂತರ ಅದನ್ನು ತಾವೇ ನಿರ್ಮಿಸಿದ…

Read more
ಭತ್ತದ ಬೆಳೆಗಾರರಿಗೆ ಭಾರತ ಸರಕಾರದ ಸಹಾಯ.

ಭತ್ತದ ಬೆಳೆಗಾರರಿಗೆ ಭಾರತ ಸರಕಾರದ ಸಹಾಯ.    

ಭಾರತ ಸರಕಾರ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಅಕ್ಕಿ ಹಾಗೂ ಇತರ ಆಹಾರ ಧಾನ್ಯಗಳನ್ನು ಇನ್ನೂ ಐದು  ವರ್ಷದ ವರೆಗೆ ಉಚಿತವಾಗಿ ನೀಡಲು ಮುಂದಾಗಿದೆ. ಭತ್ತ ಗೋಧಿ ಮುಂತಾದ ಆಹಾರ ಬೆಳೆಗಳ  ಬೆಂಬಲ ಬೆಲೆಯನ್ನು ಹೆಚ್ಚಿಸಿದೆ. ಈ ಕಾರಣದಿಂದ ಭತ್ತದ, ಗೋಧಿಯ ಬೆಲೆ ಹೆಚ್ಚಳವಾಗಿದೆ. ಇನ್ನೂ ಹೆಚ್ಚಳವಾಗಲಿದೆ. ಸರಕಾರದ ಯೋಜನೆ ರೈತಾಪಿ ವರ್ಗಕ್ಕೆ ಪರೋಕ್ಷವಾಗಿ ಲಾಭದಾಯಕವಾಗಿದೆ.  ಕಳೆದ ವರ್ಷದಿಂದ ಭತ್ತದ ಬೆಲೆ ಏರಿಕೆ ಆದ ಕಾರಣದಿಂದಾಗಿ ಬೆಳೆ ಪ್ರದೇಶ ಹೆಚ್ಚಳವಾಗಲಾರಂಭಿಸಿದೆ. ಭತ್ತದ ಬೆಳೆಗಾರರು ಈ ತನಕ ಬೇಸಾಯ…

Read more

ತೆಂಗಿನ ಗಿಡ ಯಾಕೆ ಫಲಕೊಡುವುದಿಲ್ಲ.

ತೆಂಗಿನ ಸಸಿಗಳಲ್ಲಿ ಗಿಡ್ದ, ಎತ್ತರದ ತಳಿಗಳು ಎಂಬ ಎರಡು ಬಗೆ. ಗಿಡ್ಡ ತಳಿಗಳು ನಾಟಿ ಮಾಡಿ ಮೂರು ವರ್ಷಕ್ಕೆ ಹೂ ಗೊಂಚಲು ಬಿಟ್ಟರೆ ಎತ್ತರದ ತಳಿ ನಾಟಿ ಮಾಡಿ 5  ವರ್ಷಕ್ಕೆ ಹೂಗೊಂಚಲು ಬಿಡುವುದು ವಾಡಿಕೆ. ಕೆಲವೊಮ್ಮೆ ಇದು ತಡವಾಗಬಹುದು, ಬೇಗವೂ ಆಗಬಹುದು. ಆದರೆ ಕೆಲವು ಮರಗಳು ತಮ್ಮ ಜೀವನ ಪರ್ಯಂತ ಇಳುವರಿ ಕೊಡುವುದೇ ಇಲ್ಲ. ಕಾರಣ ಅದರ ವಂಶ ಗುಣ. ತೆಂಗಿನ ಸಸಿ ಇಳುವರಿ ಪ್ರಾರಂಭಿಸುವುದಕ್ಕೆ ತಳಿ ಗುಣದ ಜೊತೆಗೆ ಆರೈಕೆಯೂ ಅಗತ್ಯ. ಪ್ರಾರಂಭಿಕ ಆರೈಕೆ…

Read more
ಅಡಿಕೆ ಮರದ ಸುಳಿ ಬಂದ್ ರೋಗ ನಿವಾರಣೆ

ಅಡಿಕೆ ಮರದ ಸುಳಿ ಬಂದ್ ರೋಗ ನಿವಾರಣೆ ಹೇಗೆ ?

ಅಡಿಕೆ ಸಸ್ಯದ ಸುಳಿಯ ಭಾಗದ ಎಲೆಗಳು ಮುರುಟಿ, ತುದಿ ಗಂಟು ಕಟ್ಟಿದಂತೆ ಅಗುವುದಕ್ಕೆ “ಬಂದ್ ರೋಗ” ಎನ್ನುತ್ತಾರೆ. ಇದು ರೋಗವಲ್ಲ ಬೇರು ಜಂತು ಹುಳ ಮುಖ್ಯ ಕಾರಣ. ಇದು ಬೇರನ್ನು ಬೆಳೆಯಲು ಬಿಡದೆ ಸಸ್ಯಕ್ಕೆ ಆಹಾರ ಸರಬರಾಜು ಕಡಿಮೆಯಾಗಿ ಅದರ ಬೆಳೆವಣಿಗೆಯನ್ನು ಹತ್ತಿಕ್ಕುತ್ತದೆ. ಇದನ್ನು ರಾಸಾಯನಿಕವಾಗಿಯೂ, ಜೈವಿಕವಾಗಿಯೂ ಹತೋಟಿ ಮಾಡಬಹುದು. ವರ್ಷದಿಂದ ವರ್ಷಕ್ಕೆ ಅಡಿಕೆ ಬೆಳೆಗಾರರ ತೋಟದಲ್ಲಿ ಮರಗಳ ಸುಳಿ ಭಾಗ ಕುಬ್ಜವಾಗುವುದು ಹೆಚ್ಚಾಗುತ್ತಿದೆ. ಮಲೆನಾಡಿನ ಶಿವಮೊಗ್ಗ ಭಾಗದಲ್ಲಿ  ಇದು ಸುಮಾರು 30-40  ವರ್ಷದ ಹಿಂದೆಯೇ ಇತ್ತು….

Read more
ರೈತರ ಹೊರಾಟ- PTI image

ರೈತ ಹೋರಾಟದಲ್ಲಿ ಸತ್ತವರಿಗೆ ಪರಿಹಾರವೇ ಇಲ್ಲವಂತೆ.

ಕೇಂದ್ರದ ಕೃಷಿ ಕಾಯಿದೆಯ ವಿರುದ್ದ ಹಗಲು ರಾತ್ರೆ ಎನ್ನದೆ  ಒಂದು ವರ್ಷಕ್ಕೂ ಹೆಚ್ಚಿನ ಕಾಲ ಧರಣಿ ಪ್ರತಿಭಟನೆ ಮಾಡಿದ ರೈತರ ಪೈಕಿಯಲ್ಲಿ ಸುಮಾರು 700 ಮಂದಿ ಸತ್ತಿದ್ದಾರೆ ಎಂಬುದಾಗಿ ಸುದ್ದಿಗಳಿತ್ತು. ಸತ್ತವರಿಗೆ ಪರಿಹಾರ ಕೊಡಬೇಕು ಎಂಬುದಾಗಿ ವಿರೋಧ ಪಕ್ಷಗಳು ಬೊಬ್ಬಿಟ್ಟರೂ ಪ್ರಯೋಜನ ಆಗಲಿಲ್ಲ. ಸತ್ತವರು ಬೀದಿ ನಾಯಿ ಸತ್ತಂತೆ ಆಯಿತಲ್ಲಾ ದುರ್ಗತಿ! ಈ ತನಕ ಭಾರತದ ಇತಿಹಾಸದಲ್ಲೇ ನಡೆದಿರದ ಸುಧೀರ್ಘ ರೈತ ಹೋರಾಟ ಜಯವನ್ನೇನೋ ಪಡೆಯಿತು. ಆದರೆ ರೈತರೆಂದು ಹೋರಾಟದಲ್ಲಿ ಭಾಗವಹಿಸಿದವರು ಸತ್ತರೆ ಅವರ ದಾಖಲೆಯೇ ಇಲ್ಲವೆಂದರೆ…

Read more
ಸುಪ್ರೀಮ್ ಕೋರ್ಟ್

ಸುಪ್ರೀಮ್ ಕೋರ್ಟ್ ನ್ಯಾಯಮೂರ್ತಿಗಳು ಕೃಷಿಕರ ಬಗ್ಗೆ ತೋರಿದ ಕಳಕಳಿ.

ಎಲ್ಲರೂ ಕೃಷಿಕರು ಹಾಗೆ ಮಾಡುತ್ತಾರೆ, ಹೀಗೆ ಮಾಡುತ್ತಾರೆ. ಪರಿಸರ ಹಾನಿ ಮಾಡುತ್ತಾರೆ. ಮಾಲಿನ್ಯ ಮಾಡುತ್ತಾರೆ ಎಂದು ತಗಾದೆ ತೆಗೆಯುವವರು. ಇವರೆಲ್ಲರಿಗೂ ಒಂದು ರೀತಿಯಲ್ಲಿ  ಚಾಟಿ ಏಟಿನ ತರಹ ಪ್ರಶ್ನೆಯೊಂದನ್ನು ಭಾರತದ ಸುಪ್ರೀಮ್ ಕೋರ್ಟ್ ನ್ಯಾಯಾಧೀಶರಾದ ಶ್ರೀ ಎನ್ ವಿ ರಮಣ ಇವರು ಕೇಳಿದ್ದಾರೆ. ಎಲ್ಲಾ ತಕರಾರಿನಲ್ಲೂ ರೈತರ ವಿಷಯಗಳನ್ನು ನ್ಯಾಯಾಲಯದ ಕಟ್ಟಲೆಗೆ ತರುವುದು ಸೂಕ್ತವಲ್ಲ. ರೈತರು ಅವರ ಆರ್ಥಿಕ ಮೂಲಕ್ಕನುಗುಣವಾಗಿ ಕೆಲವು ಸಣ್ಣ ಪುಟ್ಟ ತಪ್ಪುಗಳನ್ನು ಕೃಷಿ ಕಾಯಕದಲ್ಲಿ ಮಾಡಬಹುದಾದರೂ ಅದನ್ನು ನಾವು ಬೇರೆ ತಪ್ಪುಗಳಿಗೆ ಹೋಲಿಸಿದರೆ…

Read more
ಅಡಿಕೆ ಗಿಡ ಮಾಡಲು ಮೊಳಕೆ ಬರಿಸುವ ಸೂಕ್ತ ವಿಧಾನ

ಅಡಿಕೆ ಗಿಡ ಮಾಡಲು ಮೊಳಕೆ ಬರಿಸುವ ಸೂಕ್ತ ವಿಧಾನ.

ಅಡಿಕೆ ಗಿಡ ಮಾಡುವಾಗ ಬೀಜದ ಗೋಟು ಅಥವಾ ಹಣ್ಣು ಅಡಿಕೆಯನ್ನು ಗರಿಷ್ಟ ಪ್ರಮಾಣದಲ್ಲಿ ಮೊಳಕೆ ಬರುವಂತೆ ಮಾಡಲು ಕೆಲವು ಸರಳ ಕ್ರಮಗಳನ್ನು ಅನುಸರಿಸಬೇಕು. ಸಾಮಾನ್ಯವಾಗಿ ನಾವು 100 ಬೀಜಗಳನ್ನು ಮೊಳಕೆ ಬರಿಸಲು ಇಟ್ಟರೆ ಅದರಲ್ಲಿ  60-80 ರಷ್ಟು ಮಾತ್ರ ಮೊಳಕೆ ಪಡೆಯುತ್ತೇವೆ. ಇದು ನಾವು ಮೊಳಕೆಗೆ ಇಡುವ ಕ್ರಮ ಸರಿಯಿಲ್ಲದೆ ಆಗುವ ಸಮಸ್ಯೆ. ಸರಿಯಾದ ಮೊಳಕೆಗೆ ಇಡುವ ವಿಧಾನ ಹೀಗಿದೆ. ಅಡಿಕೆ ತೋಟ ಇದ್ದವರು ಹಣ್ಣಾಗಿ ಬಿದ್ದು, ಹೆಕ್ಕಲು ಸಿಕ್ಕದೆ ಅವಿತುಕೊಂಡು ಬಾಕಿಯಾದ ಅಡಿಕೆ ಹೇಗೆ ತನ್ನಷ್ಟೆಕ್ಕೆ…

Read more
ಸುಣ್ಣ ಹೆಚ್ಚಾದ ಬೋರ್ಡೋ ದ್ರಾವಣ

ಬೋರ್ಡೋ ದ್ರಾವಣಕ್ಕೆ ಸುಣ್ಣ ಹೆಚ್ಚಾದರೆ ಏನಾಗುತ್ತದೆ?

ಬೋರ್ಡೋ ದ್ರಾವಣ ತಯಾರಿಸಲು ಬಳಸುವ ಮೂಲವಸ್ತುಗಳೆಂದರೆ  ಮೈಲುತುತ್ತೆ ಮತ್ತು ಸುಣ್ಣ. ಇವೆರಡರ ಸರಿಯಾದ ಮಿಶ್ರಣಕ್ಕೆ ಬೋರ್ಡೋ ದ್ರಾವಣ ಎಂದು ಕರೆಯುತ್ತಾರೆ. ಇಲ್ಲಿ ಸಮಪಾಕ ಎಂಬ ಒಂದು ತತ್ವ ಇದೆ. ಇದನ್ನು ಪಾಲಿಸದಿದ್ದರೆ  ಅದು ಸರಿಯಾದ ಮಿಶ್ರಣ ಆಗಲಾರದು. ಇದನ್ನು ಪ್ರತೀಯೊಬ್ಬ ರೈತರೂ ತಿಳಿದಿರಬೇಕು. ಅಡಿಕೆ ಮರದ ಕೊಳೆ ರೋಗ ನಿಯಂತ್ರಣಕ್ಕೆ ಹಾಗೆಯೇ ಇನ್ನಿತರ ಬೆಳೆಗಳ ಕೊಳೆ ರೋಗದ ಶಿಲೀಂದ್ರಗಳನ್ನು ತಡೆಯಲು ಶಿಫಾರಿತ ಪ್ರಮಾಣದ ಬೋರ್ಡೋ ದ್ರಾವಣ ಎಂದರೆ ಶೇ. 1 . ಅಂದರೆ 1 ಕಿಲೋ ಮೈಲು…

Read more
error: Content is protected !!