ಕೃಷಿಕರ ಮನೆಯಲ್ಲಿ ಇರಲೇಬೇಕಾದ ಸಾಧನ ಸಲಕರಣೆಗಳು

ಕೃಷಿಕರ ಮನೆಯಲ್ಲಿ ಇರಲೇಬೇಕಾದ ಸಾಧನ ಸಲಕರಣೆಗಳು.

ಕೃಷಿಕನ ಮನೆಯೆಂದರೆ ಅದು ಸಾಧನ ಸರಂಜಾಮುಗಳ ಉಗ್ರಾಣ ಎಂದರೆ ತಪ್ಪಾಗಲಾರದು . ಕೃಷಿ ಮಾಡಿ ತಮ್ಮದೇ ಹೊಲದ ಮನೆಯಲ್ಲಿ ವಾಸ್ತವ್ಯ ಇರುವವರು ಏನಾದರೂ ಪೇಟೆ ಪಟ್ಟಣದ ತಮ್ಮ ಮಕ್ಕಳ ಮನೆಯಲ್ಲಿ ವಾಸ್ತವ್ಯವಿರು ವಂತಾದರೆ ಮಕ್ಕಳು ಒಂದೆರಡು ದಿನದಲ್ಲಿ ನೀವು ಹೀಗೆಲ್ಲಾ ನಿಮ್ಮ ಹಳ್ಳಿ ಮನೆಯಲ್ಲಿ ಮಾಡಿದಂತೆ ಮಾಡಬಾರದು ಎಂದು ಮಕ್ಕಳು ಹೇಳಿದರೆ ಅಚ್ಚರಿ ಇಲ್ಲ . ಇದು ಸೂಚ್ಯವಾಗಿ ಮರಳಿ ಹಳ್ಳಿ ಮನೆಗೆ ಕಳಿಸಬೇಕಾಗುತ್ತದೆ ಎಂಬ ಮಾತಿನ ಧಾಟಿಯೂ ಇರಬಹುದು . ಕೃಷಿಕನ ಮನೆ ಸಣ್ಣ ಮಟ್ಟಿಗೆ…

Read more
ನಾಟಿ ಹತ್ತಿ

ನಾಟಿ ಹತ್ತಿಯನ್ನು ಕೊಳ್ಳುವವರೇ ಇಲ್ಲ. ಬಿಟಿ ಗೇ ಬೇಡಿಕೆ

ಹತ್ತಿ  ಬೆಳೆಯುವ ರೈತರು ಯಾರ ಮಾತನ್ನೂ  ನಂಬಲಿಲ್ಲ. ನಾಟಿ ಹತ್ತಿಗೆ ವಿದಾಯ ಹೇಳಿಯೇ ಬಿಟ್ಟರು. ನಮಗೆ ಹುಳ ಬಾರದ ಹತ್ತಿ ತಳಿ ಬೇಕು ಎಂದು ಬೋಲ್ ಗಾರ್ಡ್  (ಬಿಟಿ) ಹತ್ತಿ ಬೀಜವನ್ನು ಕದ್ದು ಮುಚ್ಚಿಯಾದರೂ ಬೆಳೆಸಿದರು. ಈಗ ದೇಶದಲ್ಲಿ ಬೆಳೆಸಲ್ಪಡುವ  99 %   ಹತ್ತಿ ಬಿಟಿಯೇ. ಇದರ ಬೀಜ ಮಾತ್ರ ಸಿಗದಿದ್ದರೆ ರೈತರು ಏನು ಮಾಡಲಿಕ್ಕೂ ಹಿಂಜರಿಯಲಿಕ್ಕಿಲ್ಲ. ಅಷ್ಟೂ ಜನ ಬಿಟಿ ಹತ್ತಿಯನ್ನು ಹಚ್ಚಿಕೊಂಡಿದ್ದಾರೆ. ಮಾರುಕಟ್ಟೆಯೂ ಸಹ ಬಿಟಿ ಪರವಾಗಿದ್ದು, ಅದಕ್ಕೆ ಬೇಡಿಕೆ- ಬೆಲೆ. ನಮ್ಮ ರಾಜ್ಯದಲ್ಲಿ…

Read more
ಅಡಿಕೆ ಬೆಳೆಗೆ ಯಾವಾಗ ಸಮಯಕ್ಕೆ ಯಾವ ಗೊಬ್ಬರ

ಅಡಿಕೆ ಬೆಳೆಗೆ ಯಾವ ಸಮಯಕ್ಕೆ ಯಾವ ಗೊಬ್ಬರ ಸೂಕ್ತ?

ಅಡಿಕೆ, ತೆಂಗು ಮುಂತಾದ ತೋಟಗಾರಿಕಾ ಬೆಳೆಗಳಿಗೆ ಆಯಾಯಾ ಬೆಳವಣಿಗೆ ಹಂತದಲ್ಲಿ ನಿರ್ದಿಷ್ಟ ಪೋಷಕಗಳನ್ನು ಕೊಡುವುದರಿಂದ ಫಸಲು  ಹೆಚ್ಚಾಗುತ್ತದೆ, ಫಸಲಿನ ಗುಣಮಟ್ಟವೂ ಸಹ ಉತ್ತಮವಾಗಿರುತ್ತದೆ. ಸಸ್ಯದ ಹಸುರು ಭಾಗದ  ಬೆಳವಣಿಗೆಗೆ ಅನುಕೂಲವಾಗುವ ಪೋಷಕವನ್ನು ವರ್ಷದುದ್ದಕ್ಕೂ, ಹೂವು ಬರಲು ಸಹಾಯಕವಾಗಿವ ಗೊಬ್ಬರವನ್ನು ವರ್ಷದಲ್ಲಿ ಕೆಲವೇ ತಿಂಗಳುಗಳಲ್ಲಿಯೂ, ಕಾಯಿ ಬೆಳವಣಿಗೆಗೆ ಸಹಾಯಕವಾಗುವ ಪೋಷಕವನ್ನು ವರ್ಷದುದ್ದಕ್ಕೂ ಕೊಡುತ್ತಾ ಇದ್ದರೆ ಫಲಿತಾಂಶ ಉತ್ತಮವಾಗಿರುತ್ತದೆ. ಅಡಿಕೆಯೊಂದೇ ಅಲ್ಲ ಎಲ್ಲಾ ಬೆಳೆಗಳಲ್ಲೂ ಅದರ ನಿರ್ದಿಷ್ಟ ಹಂತದ ಬೆಳವಣಿಗೆಗೆ ಅನುಕೂಲವಾಗುವಂತೆ ಪೊಷಕಗಳನ್ನು ಕೊಟ್ಟರೆ ಅದರ ಫಲವೇ ಭಿನ್ನವಾಗಿರುತ್ತದೆ. ಈ…

Read more
10:26:26 ಗೊಬ್ಬರ

10:26:26  ಗೊಬ್ಬರ ಸಿಗುತ್ತಿಲ್ಲವೇ? ಬದಲಿಗೆ ಏನು ಹಾಕಬಹುದು?

ನಮ್ಮ ಕೃಷಿಕರಿಗೆ ಅಚ್ಚುಮೆಚ್ಚಿನ ಗೊಬ್ಬರ 10:26:26 ಸಂಯೋಜನೆಯ NPK.ಯಾವುದೋ ಕಾರಣಕ್ಕೆ ಈ ಗೊಬ್ಬರದ ಕೊರತೆ ಉಂಟಾಗಿದೆ. ಮಾರುಕಟ್ಟೆಗೆ ಸರಬರಾಜು ಆಗುತ್ತಿಲ್ಲ. ಹಾಗಾಗಿ ಜನ ಕೇಳುವುದು ಈ ಗೊಬ್ಬರ ಎಲ್ಲಿ ಸಿಗುತ್ತದೆ ತಿಳಿಸಿ ಎಂದು? ಈ ಒಂದು ಸಂಯೋಜನೆಯ ಗೊಬ್ಬರ ಇಲ್ಲದಿದ್ದರೆ ಆಕಾಶ ಏನೂ ತಲೆಗೆ ಬೀಳಲಾರದು. ಇದರ ಬದಲು ಬೇರೆ ಗೊಬ್ಬರಗಳನ್ನು ಅದೇ ಪ್ರಮಾಣಕ್ಕೆ ಅಥವಾ ಶಿಫಾರಿತ ಪ್ರಮಾಣಕ್ಕೆ ಅನುಗುಣವಾಗಿ ತಯಾರಿಸಬಹುದು. ಇಷ್ಟಕ್ಕೂ ಈ ಗೊಬ್ಬರ ಅಡಿಕೆಗೆ ಸಮತೋಲನ ಗೊಬ್ಬರ ಅಲ್ಲ.  ಈ ಸಂಯೋಜನೆಯ ಗೊಬ್ಬರ ಮಾರುಕಟ್ಟೆಗೆ…

Read more
ಒಂದೆಲಗ

ಒಂದೆಲಗಕ್ಕೆ ಭಾರಿ ಬೇಡಿಕೆ ಮತ್ತು ಬೆಲೆ ಇದೆ.

ಒಂದೆಲಗ ಇನ್ನೊಂದು ದಿನ ಕಾಣುವುದಕ್ಕೇ ಸಿಗದ ಸ್ಥಿತಿ ಉಂಟಾದರೂ ಅಚ್ಚರಿ ಇಲ್ಲ. ಈಗ ಹಿಂದಿನಂತೆ ಇದು ಕಾಣಸಿಗುತ್ತಿಲ್ಲ. ಬೆಳೆಸಿ ಉಳಿಸದಿದ್ದರೆ ಇನ್ನು ಕೆಲವೇ ವರ್ಷ . ಕಳೆ ನಾಶಕಗಳು, ಮಣ್ಣು ಅಗೆಯುವ ಯಂತ್ರಗಳು ಇದನ್ನು  ಬಲಿ ತೆಗೆದುಕೊಂಡಾವು. ಇದು ಇಂದಿನ ಅತೀ ದೊಡ್ಡ ಸಮಸ್ಯೆಯಾದ  ಬೊಜ್ಜು ಕರಗಳು ಉತ್ತಮ ಔಷಧಿ. ಜೊತೆಗೆ  ಬೇಡಿಕೆ. ಒಂದೆಲಗ  ಒಂದು ಅತ್ಯುತ್ತಮ ಮೂಲಿಕಾ ಸಸ್ಯ. ಇದು ಎಲ್ಲರ ಹೊಲಗಳಲ್ಲಿ ಕಂಡು ಬರುವ ಒಂದು ನೆಲದಲ್ಲಿ ಹಬ್ಬಿ ಬೆಳೆಯುವ  ಬಳ್ಳಿ ಸಸ್ಯ. ಇದರ…

Read more
ನೋನಿ-ಆರೋಗ್ಯ ಸಂಜೀವಿನಿಯಾದರೂ ಬೆಳೆದವನಿಗಿಲ್ಲ ಬೆಲೆ

ನೋನಿ-ಆರೋಗ್ಯ ಸಂಜೀವಿನಿಯಾದರೂ ಬೆಳೆದವನಿಗಿಲ್ಲ ಬೆಲೆ

ನೋನಿ ಎಲ್ಲಾ ಕಡೆ ಬೆಳೆಯಬಹುದಾದ ಬೆಳೆ. ಇದರ ಇದಕ್ಕಿರುವ ಔಷಧೀಯ ಗುಣ ಅಪಾರ. ಇದರ ಆರೋಗ್ಯವರ್ಧಕ ಉತ್ಪನ್ನಗಳ ಬೆಲೆ ಭಾರೀ ದುಬಾರಿ. ಹಾಗೆಂದು ಬೆಳೆದವನಿಗೆ ಈ ಹಣ್ಣಿಗೆ ಕಿಲೋ 25 ರೂ ಸಹ ಸಿಗುತ್ತಿಲ್ಲ.  ಹಣ್ಣಿಗೆ ಬೆಲೆ ಇಲ್ಲದಿದ್ದರೂ ಹಣ್ಣಿನ ಉತ್ಪನ್ನಗಳಿಗೆ ಭಾರೀ ಬೆಲೆ ಇದೆ. ಮೌಲ್ಯವರ್ಧನೆ ಮಾಡುವವರಿಗೆ ಬೆಳೆಸುವುದು ಸುಲಭ. ಉತ್ತಮ ಲಾಭವೂ ಇದೆ. ನೋನಿ ಹಣ್ಣು ಬಗ್ಗೆ ಇತ್ತೀಚೆಗೆ  ಜನರಲ್ಲಿ  ಅರಿವು ಮೂಡಿದೆ. ಇದು ಹೊಸ ಹಣ್ಣು ಏನೂ ಅಲ್ಲ.  ನಮ್ಮಲ್ಲಿ  ಅಲ್ಲಲ್ಲಿ  ಇದು…

Read more
ಎಲೆ ಚುಕ್ಕೆ ಪೀಡಿತ ಅಡಿಕೆ ಮರ

ಎಲೆ ಚುಕ್ಕೆ ರೋಗ-ಅಡಿಕೆ ಬೆಳೆಗಾರರ ಪಾಲಿಗೆ ಯಾವತ್ತೂ ಭಯ.

ಎಲೆ ಚುಕ್ಕೆ ರೋಗ ಎಂಬ ಅಡಿಕೆ ತೆಂಗು ಬೆಳೆಯ ಪ್ರಾಮುಖ್ಯ ರೋಗ ಈಗ ಎಲ್ಲಾ ಪ್ರದೇಶಗಳಲ್ಲಿ  ವ್ಯಾಪಿಸಲಾರಂಭಿದೆ. ಕೆಲವರು ಗುರುತಿಸಿರಬಹುದು. ಇನ್ನು ಕೆಲವರು ಗುರುತಿಸದೆಯೂ ಇರಬಹುದು. ಆದರೆ 90% ಕ್ಕೂ ಹೆಚ್ಚಿನ ಅಡಿಕೆ ತೋಟಗಳಲ್ಲಿ ಎಲೆ ಚುಕ್ಕಿ ರೋಗ ಇದೆ ಎಂದರೆ ಅಚ್ಚರಿಯಾಗಬಹುದು.  ಈಗ ಇದು ಚುಕ್ಕೆಯಾಗಿ ಕಂಡರೂ ಇದು ಮುಂದೆ ದೊಡ್ಡದಾದರೂ ಅಚ್ಚರಿ ಇಲ್ಲ.ಕ್ರಮೇಣ ಅಡಿಕೆ ಬೆಳೆಗಾರರ ಬದುಕಿನ ಮೇಲೆಯೇ ಇದು ಸವಾರಿ ಮಾಡಿದರೂ ಅಚ್ಚರಿ ಇಲ್ಲ.  ಬಹಳಷ್ಟು ಜನ ಅಡಿಕೆ ಬೆಳೆಗಾರರು ಶಿವಮೊಗ್ಗ ಜಿಲ್ಲೆಯಲ್ಲಿ…

Read more
ಸೀತಾಫಲವೂ ಲಕ್ಷ್ಮಣ ಫಲದಂತೆ ಔಷಧೀಯ

ಸೀತಾಫಲವೂ ಲಕ್ಷ್ಮಣ ಫಲದಂತೆ ಔಷಧೀಯ- ಬೆಳೆ ಸುಲಭ- ಲಾಭವು ಅಧಿಕ.

ಚಳಿಗಾಲದ ಮೊದಲ ಹಣ್ಣು ಎಂದರೆ ಸೀತಾಫಲ. ಮಳೆಗಾಲ ಕಳೆದ ತಕ್ಷಣ ಈ ಹಣ್ಣು ಮಾರುಕಟ್ಟೆಯಲ್ಲಿ ಹಾಜರ್. ಎಂತಹ ರುಚಿ. ಜೊತೆಗೆ ಆರೋಗ್ಯಕ್ಕೂ ಬಹಳ ಉತ್ತಮ. ಅಧಿಕಾ ನಾರಿನ ಅಂಶ ಉಳ್ಳ ಈ ಹಣ್ಣನ್ನು ಸೀಸನ್ ನಲ್ಲಿ ತಿನ್ನುವುದರಿಂದ ಆರೋಗ್ಯ ಬಹಳ ಒಳ್ಳೆಯದು. ಇದನ್ನು ಬರಗಾಲದ ನಾಡಿನಲ್ಲಿ ಬೆಳೆಯುವ ಹಣ್ಣು ಎನ್ನುತ್ತಾರೆ. ಸೀತಾಫಲ ಅತ್ಯಂತ ರುಚಿಕಟ್ಟಾದ ಹಣ್ಣು. ಒಮ್ಮೆ ಈ ಹಣ್ಣನ್ನು ಸವಿದರೆ ಮತ್ತೆ  ಬೇರೆ ಹಣ್ಣು ರುಚಿಸದು. ಅಂಥಹ ರುಚಿ ಹೊಂದಿದೆ. ಹಣ್ಣಿನ ಉತ್ಪಾದನೆ  ತುಂಬಾ ಕಡಿಮೆ …

Read more
banana plants

ಮಳೆಗಾಲದಲ್ಲಿ ಬಾಳೆ ಸಸ್ಯ ಮಗುಚಿ ಬೀಳುವುದಕ್ಕೆ ಕಾರಣ- ಪರಿಹಾರ.

ಮಳೆಗಾಲದಲ್ಲಿ ಬಾಳೆ ದಂಟು ಮುರಿದು ಬೀಳುವ ಸಮಸ್ಯೆ ಎಲ್ಲಾ ಕಡೆಯಲ್ಲೂ ಕಂಡು ಬರುತ್ತದೆ. ಅಂತಹ ಬಾಳೆಯ ಕಾಂಡವನ್ನು ಸ್ವಲ್ಪ ಕಡಿದು ನೋಡಿದರೆ ಕಾಂಡ ಹಾಳಾಗಿರುತ್ತದೆ. ಬಾಳೆಯ ಸಸ್ಯಗಳು ಇನ್ನೇನೋ ಗೊನೆ ಹಾಕಬೇಕು ಎಂಬ ಹಂತದಲ್ಲಿ, ಅಥವಾ ಗೊನೆ ಹಾಕಿ ಬೆಳೆಯುತ್ತಿರುವ ಹಂತದಲ್ಲಿ ಇದಕ್ಕೆ ಇಂದು ಕೀಟ ತೊಂದರೆ  (Pseudostem borer,and Rhizome weevil)ಮಾಡುತ್ತದೆ. ಈ ಕೀಟದ ಚಟುವಟಿಕೆ ಮಳೆಗಾಲ ಪ್ರಾರಂಭದಲ್ಲಿ ಮತ್ತು ಕೊನೆಗೆ ಹೆಚ್ಚು. ಇದರಿಂದ ಇಡೀ  ಗೊನೆ ಹಾಳಾಗುತ್ತದೆ. ಉಳಿದ ಬಾಳೆಗೂ ಪ್ರಸಾರವಾಗುತ್ತದೆ. ಬಾಳೆ ಗೊನೆ…

Read more
ಭೂತಾನ್ ದೇಶದ ಅಡಿಕೆ – ಸಾಗರಕ್ಕೆ ಒಂದು ಕೊಡ ನೀರು ಚೆಲ್ಲಿದಂತೆ

ಭೂತಾನ್ ದೇಶದ ಅಡಿಕೆ – ಸಾಗರಕ್ಕೆ ಒಂದು ಕೊಡ ನೀರು ಚೆಲ್ಲಿದಂತೆ.

ಭಾರತ ಸರಕಾರ ನೆರೆಯ ಭೂತಾನ್ ನಿಂದ ಹಸಿ ಅಡಿಕೆಯನ್ನು ಆಮದು ಮಾಡಿಕೊಳ್ಳುವ ಕುರಿತು ಅನುಮತಿ ನೀಡಿದೆ   ಇದು ನಮ್ಮ ದೇಶದ ಉತ್ಪಾದನೆಗೆ ಹೋಲಿಸಿದರೆ ಸಾಗರಕ್ಕೆ ಒಂದು ಕೊಡ ನೀರು ಚೆಲ್ಲಿದಂತೆ. ಸುದ್ದಿ  ಮಾತ್ರ ಭಾರೀ ಎಲ್ಲರಲ್ಲೂ ಆತಂಕವನ್ನು ಸೃಷ್ಟಿಸಿದೆ. ಭಾರತ ಸರಕಾರದ ವಿದೇಶಿ ವ್ಯಾಪಾರದ ನಿರ್ಧೇಶನಾಲಯದ (Directorate general of Foreign Trade ) ಈ ಆಮದಿಗೆ ಅನುಮತಿಸಿದೆ ಎನ್ನಲಾಗುತ್ತಿದೆ. ಈ ನಿರ್ಧೇಶನಾಲಯದ ಅಧಿಕೃತ ವೆಬ್ ಸೈಟ್ ನಲ್ಲಿ ಈ ಕುರಿತಂತೆ ಒಂದು ಸುತ್ತೋಲೆಯೂ ಇದೆ. ಹಾಗಾಗಿ…

Read more
error: Content is protected !!