ಹೂ ಬೆಳೆದವರಿಗೂ ನಷ್ಟ ಮಾರುವವರಿಗೂ ನಷ್ಟ

ಕೃಷಿ ಕ್ಷೇತ್ರವನ್ನು ಬಗ್ಗು ಬಡಿಯಲಿದೆ ಕೊರೋನಾ ಮಹಾಮಾರಿ.

ಈಗಾಗಾಲೇ ಹಣ್ಣು ಹಂಪಲು, ಹೂವು, ತರಕಾರಿ ಬೆಳೆದ ರೈತರು ಭಾರೀ ನಷ್ಟ ಅನುಭವಿಸಿದ್ದಾರೆ. ಸದ್ಯವೇ ಹಾಲಿಗೆ ಬೇಡಿಕೆ ಕಡಿಮೆಯಾದ ಕಾರಣ ಹಾಲಿನ ಬೆಲೆಯೂ ಇಳಿಮುಖವಾಗುವ ಸೂಚನೆ ಇದೆ. ನಷ್ಟ ಭರ್ತಿಗಾಗಿ ಮತ್ತೆ ಅದೇ ಬೆಳೆ ಬೆಳೆಯುವ ಬದಲು ಆಹಾರ ಬೆಳೆಗಳ ಕಡೆಗೆ ಗಮನಹರಿಸುವುದು ಉತ್ತಮ. ಪರಿಸ್ಥಿತಿ ಸುಧಾರಣೆಯಾದ ನಂತರ ಇಂತಹ ಬೆಳೆಗಳನ್ನು ಬೆಳೆಸುವುದು ಸೂಕ್ತ.  ಕೊರೋನಾ ಮಹಾಮಾರಿ ಪ್ರಾರಂಭವಾಗಿ 3 ತಿಂಗಳು ಕಳೆದಿದೆ ಅಷ್ಟೇ . ಈ ತನಕ ಕೆಲವು ಬೆಳೆಗಾರರಿಗೆ ನಷ್ಟವಾಯಿತು. ಅದು ಮುಗಿದ ಸುದ್ದಿಯಾಯಿತು….

Read more
ಹುಳ ಇರುವ ಬದನೆಕಾಯಿ

ಬದನೆಯಲ್ಲಿ ಹುಳ ಹೇಗೆ ಆಗುತ್ತದೆ.

ತರಕಾರಿ ಬೆಳೆಗಳಲ್ಲಿ ಬದನೆ, ಬೆಂಡೆ ಮುಂತಾದವುಗಳಿಗೆ  ಕಾಯಿ ಕೊರಕ ಎಂಬ ಹುಳು ತೊಂದರೆ ಮಾಡುತ್ತದೆ. ಒಂದು ಪತಂಗ ಕಾಯಿಯ ಮೇಲೆ  ಮೊಟ್ಟೆ ಇಟ್ಟು, ಅದು ಮರಿಯಾಗಿ ಹುಳವಾಗುವುದು. ಬದನೆ ಬೆಳೆಯಲ್ಲಿ ಪ್ರಮುಖ ಸಮಸ್ಯೆ ಕಾಯಿ ಮತ್ತು ಚಿಗುರು ಕೊರಕ ಹುಳು. ಇದರ ಹೆಸರು Leucinodes orbonalis ಈ ದಿನ ಸರಿ ಇದ್ದ ಗಿಡ ನಾಳೆ ಬಾಡುತ್ತದೆ. ಒಂದು ಗಿಡಕ್ಕೆ ಪ್ರಾರಂಭವಾದರೆ  ಮತ್ತೆ ಹೆಚ್ಚುತ್ತಾ  ಹೋಗುತ್ತದೆ. ಕಾಯಿ ಕೊರಕವೂ ಇಂದು ಚೆನ್ನಾಗಿದ್ದ ಕಾಯಿಯಲ್ಲಿ ನಾಳೆ ಸಣ್ಣ ತೂತು ಕಂಡು…

Read more

ಮೆಕ್ಕೇ ಜೋಳ ಬೆಳೆಗಾರರು ಕಂಗಾಲಾಗಬೇಕಾಗಿಲ್ಲ.

  ಕೈಯಲ್ಲಿ ತುತ್ತು ಹಿಡಿದುಕೊಂಡ ನಂತರ ಅದನ್ನು ಬಾಯಿಗೆ ಇಡಲೇ ಬೇಕು. ಅದನ್ನು ಸಿಟ್ಟಿನಲ್ಲಿ  ಹೊರ ಚೆಲ್ಲಿದರೆ  ಯಾರಿಗೂ ಏನೂ ಪ್ರಯೋಜನ ಇಲ್ಲ. ನಮ್ಮ ರೈತರು ದಾಸ್ತಾನು ಇಡಬಹುದಾದ ಬೆಳೆಗಳ ಬೆಲೆ ಕುಸಿತವಾದಾಗ ತೆಗೆದುಕೊಳ್ಳೂವ ಅವಸರದ ತೀರ್ಮಾನ ಅವನಿಗೇ ನಷ್ಟದ  ಬಾಬ್ತು ಆಗುತ್ತದೆ. ಮೆಕ್ಕೇ ಜೋಳದ ಬೆಲೆ ಕುಸಿತಕೆ ಕಾರಣ, ಕೋಳೀ  ಉದ್ದಿಮೆಯ ನಷ್ಟ ಎನ್ನಲಾಗುತ್ತಿದೆ. ನಮ್ಮಲ್ಲಿ  ಬೆಳೆಯುವ ಸುಮಾರು 60 % ಹೆಚ್ಚಿನ ಮೆಕ್ಕೇ ಜೋಳ ಕೋಳೀ  ಆಹಾರ ತಯಾರಿಕೆಗೇ ಬಳಸಲ್ಪಡುತ್ತದೆ. ಉಳಿದದ್ದು ಪಶು ಆಹಾರ …

Read more

ಅಡಿಕೆ ಧಾರಣೆ ಕುಸಿಯುತ್ತಿದೆ – ಏನು ಕಾರಣ ಇರಬಹುದು? ಯಾವಾಗ ಏರಬಹುದು?

ಕಳೆದ ಒಂದು ತಿಂಗಳಿಂದ ಕೆಂಪಡಿಕೆ ಧಾರಣೆ ಶೇ.40 ರಷ್ಟು ಕಡಿಮೆಯಾಗಿದೆ. ಸಪ್ಟೆಂಬರ್ ತಿಂಗಳಲ್ಲಿ ಹಸಿ ಅಡಿಕೆ ಕ್ವಿಂಟಾಲಿಗೆ 7200 ತನಕ ಇದ್ದುದು, ಇಳಿಕೆಯಾಗುತ್ತಾ ಸಪ್ಟೆಂಬರ್ ಕೊನೆಗೆ 6600 ಕ್ಕೆ ಕುಸಿಯಿತು. ಹಾಗೆಯೇ ಕಡಿಮೆಯಾಗುತ್ತಾ  ಈಗ 5200-5000 ಕ್ಕೆ ಇಳಿದಿದೆ.ವರ್ತಮಾನ ಪರಿಸ್ಥಿತಿಯಲ್ಲಿ ಇನ್ನೂ ಇಳಿಕೆಯ ಸಾದ್ಯತೆಗಳು ಕಾಣಿಸುತ್ತಿದೆ. ಹಾಗೆಯೇ ಧಾರಣೆ 55,000 ಕ್ಕೆ ಏರಿದ್ದು, ಈಗ ಸರಾಸರಿ-40,000 ದ ಸಮೀಪಕ್ಕೆ ಬಂದಿದೆ. ಎಲ್ಲಾ ಅಡಿಕೆ ಬೆಳೆಗಾರರ ಕುತೂಹಲ ಧಾರಣೆ ಯಾವಾಗ ಏರಬಹುದು ಎಂಬುದು ಒಂದೇ. ಅಡಿಕೆ ಚೇಣಿ ವಹಿಸಿಕೊಳ್ಳುವವರು…

Read more

ಭೂ ತಾಯಿ ಮುನಿದಿದ್ದಾಳೆ- ನಾವೆಲ್ಲಾ ಒಟ್ಟಾಗಿ ಪ್ರಾರ್ಥಿಸೋಣ.

ಪ್ರತೀ ವರ್ಷ ಎಪ್ರೀಲ್ 22 ದಿನವನ್ನು ಜಾಗತಿಕ ಭೂಮಿಯ ದಿನ ಎಂದು ಆಚರಿಸಲಾಗುತ್ತದೆ. ಪ್ರತೀ ವರ್ಷ ಒಂದೊಂದು ಧ್ಯೇಯಗಳನ್ನು ಇಟ್ಟುಕೊಂಡು ಈ ದಿನವನ್ನು ವಿಶೇಷ ಪ್ರಾತಿನಿಧ್ಯ ಕೊಟ್ಟು ಆಚರಿಸಲಾಗುತ್ತದೆ. ಈ ವರ್ಷ ಹವಾಮಾನ ಬದಲಾವಣೆಯಂತಃ ಗಂಭೀರ ಸಮಸ್ಯೆಯನ್ನು ಮುಂದಿಟ್ಟುಕೊಂಡು ಅದನ್ನು ಆಚರಿಸಲಾಗುತ್ತದೆ. ಬಹುಷಃ ಈ ವರ್ಷದ  ಆಚರಣೆಗೆ ಪ್ರಕೃತಿಯ ಅಸಮಾಧಾನ ಏನೋ ಇದ್ದಂತಿದೆ. ಕೊರೋನಾ ಎಂಬ ಮಹಾ ಮಾರಿ ರೂಪದಲ್ಲಿ ಮನುಕೂಲದ ಮೇಲೆ ಭೂ ತಾಯಿ ಮುನಿದಂತಿದೆ. ಜಗತ್ತೇ ಮನುಕುಲ ಕಾಣದ ಅನಾಹುತದ ಸುಳಿಯಲ್ಲಿ ಸಿಕ್ಕಿಕೊಂಡಿದೆ. ಇದು…

Read more

ತರಕಾರಿಗಳಲ್ಲಿ ವಿಷ ಹೆಚ್ಚಾಗುತ್ತಿದೆ- ಎಚ್ಚರ!

ಗ್ರಾಹಕರ ಓಲೈಕೆಗೆ ಸರಿಯಾಗಿ ನೋಟ ಚೆನ್ನಾಗಿರಲು ಮಾಡುವ ಉಪಚಾರ ನಮ್ಮನ್ನು ಕೊಲ್ಲುತ್ತದೆ. 2050 ರ ಸುಮಾರಿಗೆ ತರಕಾರಿ ತಿನ್ನುವವರೂ  ಅಧಿಕ ಪ್ರಮಾಣದಲ್ಲಿ ರೋಗಗಳಿಗೆ ತುತ್ತಾಗಿ ಬೇಗ ಸಾಯಬಹುದು, ಅಥವಾ ಅಸ್ವಾಸ್ತ್ಯಕ್ಕೊಳಗಾಗಬಹುದು ಎಂಬ ವರದಿ ಇದೆ.   ಕೃಷಿ ಉಳಿಸುವ ಭರದಲ್ಲಿ ರೈತರು ಬೇರೆ ಪರ್ಯಾಯ ವ್ಯವಸ್ಥೆಗಳಿಲ್ಲದೆ, ಅಪಾಯಕಾರಿಯೋ, ಅಲ್ಲವೋ ಎಂಬುದನ್ನೂ ಅರಿಯದೆ ಬೇರೆ ಬೇರೆ ಕೃಷಿ ರಾಸಾಯನಿಕಗಳನ್ನು ಬಳಕೆ ಮಾಡುತ್ತಾರೆ. ಕೊಯಿಲಿನ ಸಮಯದಲ್ಲೇ  ಅಂತರ್ವ್ಯಾಪೀ ಕೀಟನಾಶಕ – ರೋಗ ನಾಶಕ ಬಳಕೆ ಮಾಡುತ್ತಾರೆ. ಬೆಳೆದವರು ತಾವು ಬೆಳೆದ…

Read more
ತೆಂಗಿನ ಮರಗಳ ಶಿರ ಸ್ವಚ್ಚತೆ

ತೆಂಗಿನ ಮರಗಳ ಶಿರ ಭಾಗ ಸ್ವಚ್ಚತೆ ಮತ್ತು ಇಳುವರಿ

ಯಾರ ತೆಂಗಿನ ಮರದಲ್ಲಿ ಪ್ರತೀ ವರ್ಷವೂ ಅಧಿಕ ಇಳುವರಿ ಬರುತ್ತದೆಯೋ ಅಂತವರ ತೆಂಗಿನ ಮರದ ಶಿರಭಾಗವನ್ನು ಒಮ್ಮೆ ನೋಡಿ. ಬಹಳ ಸ್ವಚ್ಚವಾಗಿ ಇರುತ್ತದೆ. ತೆಂಗಿನ ಮರಗಳಿಗೆ ಗೊಬ್ಬರ, ನೀರು ಕೊಡುವುದಲ್ಲದೆ ಅಗತ್ಯವಾಗಿ ಮಾಡಬೇಕಾದ ಕೆಲಸ ಶಿರ ಭಾಗದ ಸ್ವಚ್ಚತೆ. ಹೀಗೆ ಮಾಡುವುದರಿಂದ ಮರ ಆರೋಗ್ಯವಾಗಿರುತ್ತದೆ. ಉತ್ತಮ ಇಳುವರಿಯೂ ಬರುತ್ತದೆ. ತೆಂಗಿನ ಮರದ ಶಿರ ಬಾಗವನ್ನು  ಸ್ವಚ್ಚ ಮಾಡುವ ಕ್ರಮ ಅನಾದಿ ಕಾಲದಿಂದಲೂ ನಡೆದು ಬಂದಿರುವ ನಿರ್ವಹಣೆಗಳಲ್ಲಿ ಒಂದು. ನಮ್ಮ ಹಿರಿಯರು ವರ್ಷಕ್ಕೊಮ್ಮೆ ಶಿರಭಾಗವನ್ನು ಪೂರ್ಣ ಸ್ವಚ್ಚ ಮಾಡುತ್ತಿದ್ದರು….

Read more

ಬಯೋ NPK ಒಂದೇ ಸಾಕು? ಇದೆಷ್ಟು ನಿಜ.

ಬಹುತೇಕ  ರೈತರ ಬಳಿಗೆ ಕೆಲವು ನೆಟ್ ವರ್ಕ್ ಸಂಘಟನೆಗಳು, ಹಾಗೆಯೇ ಕೆಲವು ಸಾವಯವ ಗೊಬ್ಬರ ಪ್ರಚಾರಕರು ಒಂದೆರಡೂ ಬಾಟಲಿಗಳನ್ನು ಅಥವಾ ಪ್ಯಾಕೆಟುಗಳನ್ನು  ಪರಿಚಯಿಸಿ ಈ ಪ್ಯಾಕೇಟ್/ಬಾಟಲಿಯ ದ್ರಾವಣ ಹಾಕಿದರೆ ಬೇರೆ ಗೊಬ್ಬರ ಬೇಕಾಗಿಲ್ಲ. ಭಾರೀ ಫಸಲು ಎಂದು  ಹೇಳುತ್ತಾರೆ. ಇದು ಬಯೋ( ಜೈವಿಕ) ಗೊಬ್ಬರ ಎಂಬುದಾಗಿಯೂ ಹೇಳುತ್ತಾರೆ. ಅಧಿಕ ಇಳುವರಿಯ ಆಶೆಯಲ್ಲಿ ಜನ ಖರೀದಿಸಿ ಬಳಸುತ್ತಾರೆ. ಇಂತಹ ಜೈವಿಕ ಗೊಬ್ಬರಗಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ. ಬಯೋ NPK ಗೊಬ್ಬರ ಎಂದರೆ ಜೈವಿಕವಾಗಿ ಸಾರಜನಕ , ರಂಜಕ…

Read more

ಕೆಂಪಡಿಕೆ ರಾಶಿ- 40,000 ಆಗಬಹುದು ಎನ್ನುತ್ತಾರೆ.

ಉತ್ತರ ಭಾರತದ ವ್ಯಾಪಾರಿಗಳು ಅಡಿಕೆ ಬೇಕು ಎಂದು ಕೇಳಿಕೊಂಡು ಬರುತ್ತಿದ್ದಾರೆ. ಈ ಕಾರಣದಿಂದ ಸ್ಥಳೀಯ ವ್ಯಾಪಾರಿಗಳು ದರವನ್ನು ಸ್ವಲ್ಪ ಸ್ವಲ್ಪವೇ ಏರಿಕೆ ಮಾಡುತ್ತಿದ್ದಾರೆ. ಒಂದು ವಾರದಿಂದ ಚಾಲಿ ದರ ಕ್ವಿಂಟಾಲಿಗೆ 300 ರೂ. ಹೆಚ್ಚಳವಾಗಿದೆ. ಕೆಂಪು ಅಡಿಕೆಯ ಬೆಲೆ 2000 ರೂ. ಹೆಚ್ಚಾಗಿದೆ. 3-4 ವರ್ಷಗಳಿಂದ ಕೆಂಪಡಿಕೆಯಲ್ಲಿ ದರದಲ್ಲಿ ಏನೂ ದೊಡ್ಡ ಏರಿಕೆ ಆಗದ ಕಾರಣ ಈ ಬಾರಿ ಸ್ವಲ್ಪ ಏರಿಕೆ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ ಕೆಲವು  ವ್ಯಾಪಾರದ ಅನುಭವಿಗಳು. ಕೆಲವು ಮೂಲಗಳ ಪ್ರಕಾರ ಈಗ…

Read more

ಸಿರ್ಸಿ ಅಡಿಕೆ ಎಂಬ ವಿಶಿಷ್ಟ ಅಡಿಕೆ ತಳಿ.

ಮನುಷ್ಯರೆಲ್ಲರೂ ಒಂದೇ. ಆದರೆ  ಗುಣಗಳು ಮಾತ್ರ ಭಿನ್ನ. ಕೆಲವರು ಬಹಳ ಚುರುಕು. ಮತ್ತೆ ಕೆಲವರು ಮಂದ. ಹಾಗೆಯೇ ಫಲ ಕೊಡುವ ಸಸ್ಯಗಳಲ್ಲೂ ಇದೆ. ಕೆಲವು ಉತ್ತಮ ಗುಣವನ್ನು ತಮ್ಮ ಜೀನ್ ನಲ್ಲೇ ಒಳಗೊಂಡಂತದ್ದನ್ನು ಆಯ್ಕೆ  ಮಾಡಿ ಅದನ್ನು ಅಭಿವೃದ್ದಿಪಡಿಸಿ ಬೆಳೆಸಬಹುದಾದ್ ಅತಳಿಯಾಗಿ ಬಿಡುಗಡೆ ಮಾಡಲಾಗುತ್ತದೆ. ಅಂತದ್ದೇ ಇದು ಶಿರಸಿಯ ಆಕೆ ತಳಿ ಅಡಿಕೆ.(SAS). ಎಕ್ರೆಗೆ 28 ಕ್ವಿಂಟಾಲು ಅಡಿಕೆ: ಶಿರ್ಸಿಯ ಆಯ್ಕೆ ಅಡಿಕೆ  ( Sirsi areca selection 1 )  ಉತ್ತರಕನ್ನಡ ಜಿಲ್ಲೆಯ ಶಿರಸಿ ಭಾಗದ…

Read more
error: Content is protected !!