ಗೇರು ಮರಕ್ಕೆ ಪುನಃಶ್ಚೇತನ

ಗೇರು – ಮಾವು- ಹಲಸು ಹಳೆ ಮರಗಳಿಗೆ ಪುನಃಶ್ಚೇತನ.

ನಮ್ಮಲ್ಲಿ ಇರುವಂತಹ ಹಳೆಯ ಮಾವು- ಗೇರು-ಹಲಸು ಇನ್ಯಾವುದೇ ಹಣ್ಣಿನ  ತೊಟಗಳಲ್ಲಿ ಹೆಚ್ಚಿನವುಗಳು ಅನಾಮಧೇಯ ತಳಿಯ ಬೀಜಗಳಿಂದ ಆದವುಗಳು. ಇವು ಈಗಲೇ  ಹಳೆಯದಾಗಿ ಅನುತ್ಪಾದಕವೂ ಆಗಿರಬಹುದು. ಇಂತಹ ಮರಗಳು ಹೆಚ್ಚಾಗಿ ನಿರ್ವಹಣೆ ಇಲ್ಲದೇ ನಿರ್ಲಕ್ಷ್ಯದಿಂದ ಬೆಳೆದಿರುತ್ತವೆ. ಇವುಗಳನ್ನು ಇಳುವರಿ ಅಭಿವೃದ್ಧಿಯ ದೃಷ್ಟಿಯಿಂದ ಪುನಶ್ಚೇತನ ಮಾಡುವುದು ಉತ್ತಮ.  ಹಳೆಯ ಅಥವಾ ಕಡಿಮೆ ಇಳುವರಿ ಕೊಡುವಂತಹ ಮರಗಳನ್ನು ಸವರುವಿಕೆಯಿಂದ ಹಾಗು ಕಸಿ ವಿಧಾನದ ಮೂಲಕ ಪುನಶ್ಚೇತನಗೊಳಿಸಿದರೆ  ಹೊಸ ಮರವನ್ನಾಗಿ ಪರಿವರ್ತಿಸಬಹುದು. ಪುನಶ್ಚೇತನದ ಉದ್ದೇಶಗಳು : ಹಳೆಯ ಹಾಗೂ ಕಡಿಮೆ ಇಳುವರಿಯ ಗಿಡಗಳ…

Read more
ಚಾಲಿ ಅಡಿಕೆ ತುಸು ಹಿಮ್ಮುಖ- ಕೆಂಪು ರಾಶಿ ಮಾರುಕಟ್ಟೆ ಸ್ಥಿರ

ಚಾಲಿ ಅಡಿಕೆ ತುಸು ಹಿಮ್ಮುಖ- ಕೆಂಪು ರಾಶಿ ಮಾರುಕಟ್ಟೆ ಸ್ಥಿರ.

ಚಾಲಿ ಅಡಿಕೆ ಧಾರಣೆಯಲ್ಲಿ ಸ್ವಲ್ಪ ಹಿಮ್ಮುಖವಾಗಿದೆ ಎಂಬ ಸುದ್ದಿ. ಹಾಗೆಂದು ದೊಡ್ಡ ಇಳಿಕೆ ಆಗಿಲ್ಲ. ದರ ಮೇಲೆ ಏರಲಿಲ್ಲ ಎಂದಷ್ಟೇ ಹೇಳಬಹುದು. ಕ್ಯಾಂಪ್ಕೋ ತನ್ನ ಸೂಚಿತ ಮಾಮೂಲಿ ದರವನ್ನೇ ಮುಂದುವರಿಸಿದೆ. ಆದರೆ ಗುಣಮಟ್ಟದ ಹೆಸರಿನಲ್ಲಿ ಅಡಿಕೆ ಖರೀದಿಯಲ್ಲಿ  ಸ್ವಲ್ಪ ಹಿಮ್ಮುಖ ಅಷ್ಟೇ. ಒಳ್ಳೆಯ ಅಡಿಕೆಗೆ ಖಾಸಗಿಯವರು 48,000-48500  ತನಕ ಖರೀದಿ ಮಾಡುತ್ತಿದ್ದಾರೆ. ಪರಿಸ್ಥಿತಿ  ಪಿತೃ ಪಕ್ಷ ಮುಗಿಯುವ ತನಕ ಹೀಗೇ ಮುಂದುವರಿಯಲಿದೆ ಎಂಬ ಸುದ್ದಿಗಳು ಕೇಳಿ ಬರುತ್ತಿವೆ. ಬೆಳೆಗಾರರು ನಿರಾಶರಾಗಬೇಕಾಗಿಲ್ಲ. ಅಡಿಕೆಗೆ ಬೇಡಿಕೆ ಇದೆ. ಬೆಲೆಯೂ ಬರುತ್ತದೆ….

Read more
ಸಕ್ಕರೆ ಹೆಚ್ಚಾಗಿದೆ- ರೈತರು ಕಬ್ಬು ಬೆಳೆಯಬೇಡಿ

ಸಕ್ಕರೆ ಉತ್ಪಾದನೆ ಹೆಚ್ಚಿದೆ- ರೈತರು ಕಬ್ಬು ಬೆಳೆಯಬೇಡಿ. ಸರಕಾರದ ಹೇಳಿಕೆ.

ದೇಶದಲ್ಲಿ ಸಕ್ಕರೆ ಉತ್ಪಾದನೆ ಹೆಚ್ಚಾಗಿದೆ. ಹಾಗಾಗಿ ಕಬ್ಬು ಬೆಳೆಯುವ ರೈತರು ಇನ್ನು ಬೆಳೆಯಬೇಡಿ. ಬೆಳೆ ಪರಿವರ್ತನೆ ಮಾಡಿ, ಇಂಧನ ಮತ್ತು ಶಕ್ತಿ ಉತ್ಪಾದನೆ ಕಡೆಗೆ ಗಮನಹರಿಸಬೇಕು ಎಂಬುದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಮಂತ್ರಿಗಳಾದ ನಿಥಿನ್ ಗಡ್ಕರಿಯವರ ಮಾತು.  ಭಾರತ ದೇಶದಲ್ಲಿ ಕಬ್ಬು ಬೆಳೆ ಹೆಚ್ಚಾಗುತ್ತಿದ್ದು, ಎಲ್ಲರೂ ಸಕ್ಕರೆ ಕಾರ್ಖಾನೆಗೆ ಕಬ್ಬು ಹಾಕುತ್ತಾರೆ. ಉತ್ಪಾದಿಸಿದ ಸಕ್ಕರೆ ಮಿಗತೆಯಾಗಿ ಕಾರ್ಖಾನೆಗಳು ನಷ್ಟಕ್ಕೊಳಗಾಗುತ್ತಿವೆಯಂತೆ. ನಮ್ಮ ದೇಶದಲ್ಲಿರುವ ಬಹುತೇಕ ಸಕ್ಕರೆ ಕಾರ್ಖಾನೆಗಳು ಈಗ ಸಕ್ಕರೆ ಉತ್ಪಾದನೆಗಾಗಿ ಕೆಲಸ ಮಾಡುತ್ತಿಲ್ಲ. ಬದಲಿಗೆ…

Read more
ಡಿಜಿಟಲೀಕರಣದ ಪ್ರಯೋಜನ ಪಡೆಯುತ್ತಿರುವವರಲ್ಲಿ ವಯಸ್ಕರೂ ಇದ್ದಾರೆ.

ಡಿಜಿಟಲೀಕರಣದಲ್ಲಿ ಹೊಸ ಆಯಾಮವನ್ನು ಸೃಷ್ಟಿಸಿದ ನಮ್ಮ ದೇಶದ ಜನಸಮೂಹ.

ಭಾರತ ಸರಕಾರದ ಡಿಜಿಟಲೀಕರಣ  ದೇಶದಲ್ಲಿಹೊಸ ಆಯಾಮವನ್ನು ಸೃಷ್ಟಿಸಿದೆ. ನಮ್ಮ ಜನ ಇದಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ. ನಮ್ಮೂರಿನ ಜನ ತರಕಾರಿ ಅಂಗಡಿಗೆ ಹೋದರೂ ಈಗ ಕೇಳುತ್ತಾರೆ, ಪೆಟಿಯಂ ಇದೆಯಾ,ಎಂದು.ಅಂಗಡಿಯವನಿಗೂ ಇದು ಒಂದು ಘನತೆಯ ವಿಷಯವಾಗಿದೆ.ಪಾನ್ ಬೀಡಾ ಅಂಗಡಿಯಲ್ಲೂ ಆನ್ ಲೈನ್ ಪೇಮೆಂಟ್.  ಒಂದಲ್ಲ ಎರಡು ಮೂರು ಕಡೆ QR ಕೋಡ್ ಹಾಳೆ ನೇತಾಡಿಸಿರುತ್ತಾರೆ. ಅಂಗಡಿಯವರು ಹೇಳುತ್ತಾರೆ, ಹಿಂದೆ ನಾಳೆ ಕೊಡುತ್ತೇನೆ ಎಂದು ಸಾಲ ಕೊಂಡೋಗುವ ಪ್ರಶ್ಣೆ ಇಲ್ಲ.  ಫೋನ್ ಹಿಡಿದು ತಟ್ಟನೆ ಹಣ ಹಾಕುತ್ತಾರೆ. ನಿಜ ಹಿಂದೆ ನಾವೆಲ್ಲಾ ಅಂಗಡಿಯಿಂದ…

Read more
ಚಾಲಿ, ಕೆಂಪು ಎರಡೂ ತೇಜಿ

ಚಾಲಿ, ಕೆಂಪು ಎರಡೂ ತೇಜಿ- ಬೆಳೆಗಾರರ ಬೆಲೆ ನಿರೀಕ್ಷೆ ಇನ್ನೂ ಮುಂದೆ.

ಚಾಲಿ ಅಡಿಕೆ ಧಾರಣೆ ನಿರೀಕ್ಷೆಯಂತೆ ಈ ತಿಂಗಳಾಂತ್ಯದ ಒಳಗೆ ಕಿಲೋ.500 ತಲುಪುವುದು ಬಹುತೇಕ ಖಾತ್ರಿಯಾದಂತಾಗಿದೆ. ಜೊತೆಗೆ ಕೆಂಪಡಿಕೆಯೂ ಏರಿಕೆ ಕಂಡಿದೆ. ಅದರೆ ನಿರೀಕ್ಷೆ ಮಾತ್ರ 60,000 ದ ವರೆಗೆ ಎಂದಿತ್ತು. ಅದಕ್ಕೆ ಪೂರಕವಾಗಿ ಪರಿಸ್ಥಿತಿಯೂ ಇತ್ತು. ಆದರೆ ದರ ಆ ಮಟ್ಟಕ್ಕೆ ಏರಿಕೆಯಾಗಲಿಲ್ಲ. 49,000 ದ ಆಸುಪಾಸಿನಲ್ಲಿದ್ದುದು, 52,000 -53,000 ಕ್ಕೆ ಏರಿಕೆಯಾಯಿತಷ್ಟೇ. ಕೆಂಪಡಿಕೆಯ ಮಾರುಕಟ್ಟೆಯನ್ನು ಚಾಲಿ ನುಂಗಿದಂತಾಗಿದೆ. ಸಾಮಾನ್ಯವಾಗಿ ಹಿಂದೆ ಆಗಸ್ಟ್ ತಿಂಗಳಿನಿಂದ ಸಪ್ಟೆಂಬರ್ ತಿಂಗಳ ನವರಾತ್ರೆ ವರೆಗೆ ಅಡಿಕೆ ತೇಜಿ ಆಗುವುದು ಮಾಮೂಲು. ಹಿರಿಯ…

Read more
ರೈತರಿಗೆ ಕೇಂದ್ರ ಸರಕಾರ ಕೊಡುತ್ತಿದೆ 4500-00 ರೂ. ಬಡ್ಡಿ ರಿಯಾಯಿತಿ.

ರೈತರಿಗೆ ಕೇಂದ್ರ ಸರಕಾರ ಕೊಡುತ್ತಿದೆ 4500-00 ರೂ. ಬಡ್ಡಿ ರಿಯಾಯಿತಿ.

ಭಾತರ ಸರಕಾರ ಕೃಷಿಕರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು, ರೈತರು ಮಾಡಿದ 3ಲಕ್ಷ ವರೆಗಿನ ಸಾಲಕ್ಕೆ 4500-00 ರೂ. ಬಡ್ಡಿ ರಿಯಾತಿಯನ್ನು ಘೋಷಿಸಿದೆ. ಇದು ಈ ವರ್ಷಕ್ಕೆ ಮಾತ್ರವಲ್ಲ. ಮುಂದಿನ ವರ್ಷಕ್ಕೂ ಇದೆ. ಬ್ಯಾಂಕುಗಳ ಮೂಲಕ ಬೆಳೆ ಸಾಲ ( ಅಲ್ಪಾವಧಿ) ಪಡೆದಿರುವ ಎಲ್ಲಾ ರೈತರೂ ಈ ಕೊಡುಗೆಯ ಫಲಾನುಭವಿಗಳು. ಇದು ಬರೇ ಬೆಳೆ ಸಾಲ ಮಾತ್ರವಲ್ಲ, ಪಶು ಸಂಗೋಪನೆ, ಹೈನುಗಾರಿಕೆ, ಮೀನುಗಾರಿಕೆ, ಮತ್ತು ಕೋಳಿ ಸಾಕಣೆ ಎಲ್ಲದಕ್ಕೂ ಅನ್ವಯವಾಗುತ್ತದೆ. ರೈತರು ಬೆಳೆ ಬೆಳೆಯುವ ಸಮಯದಲ್ಲಿ  ಬೇಕಾಗುವ ಹಣಕಾಸಿನ…

Read more
ಅಡಿಕೆ ಮಾರುಕಟ್ಟೆಗೆ ಹೊಸ ಹುರುಪು- ಕೆಂಪು 52,000 ಚಾಲಿ 48,500

ಅಡಿಕೆ ಮಾರುಕಟ್ಟೆಗೆ ಹೊಸ ಹುರುಪು- ಕೆಂಪು 52,500 ಚಾಲಿ 48,500

ಈ ವಾರದಲ್ಲಿ ಅಡಿಕೆ ಮಾರುಕಟ್ಟೆಗೆ ಹೊಸ ಹುರುಪು ಬಂದಿದೆ. ಚಾಲಿ ಅಡಿಕೆದರ ಏರುತ್ತಿದೆ. ಕೆಂಪಡಿಕೆಯೂ ಏರಿಕೆಯಾಗಲಾರಂಭಿಸಿದೆ. ಇಂದು ಹೊಸ ಚಾಲಿ ಖಾಸಗಿ ಮಾರುಕಟ್ಟೆಯಲ್ಲಿ 48,500 ತನಕ ಖರೀದಿ ಮಾಡುವುದಾಗಿ ದರ ಪ್ರಕಟಿಸಿರುತ್ತಾರೆ. ಕೆಂಪಡಿಕೆ ಸರಾಸರಿ 52,500 ದಾಟಿದೆ. ಅಡಿಕೆ ಬೆಳೆಗಾರರ ಬಹುದಿನಗಳ ಆಸೆ ಇನ್ನು ಮುಂದಿನ ದಿನಗಳಲ್ಲಿ ಈಡೇರುವ ನಿರೀಕ್ಷೆ ಇದೆ. ಎಲ್ಲೆಡೆಯಲ್ಲೂ ಅಡಿಕೆಗೆ ಬೆಲೆ ಏರಿದ್ದೇ ಸುದ್ದಿ, ಎಲ್ಲರಿಗೂ ಖುಷಿಯೋ ಖುಷಿ. ದೇಶದ ಮಾರುಕಟ್ಟೆಗೆ  ಮಲೇಶಿಯಾ, ಇಂಡೋನೇಶಿಯಾ, ಶ್ರೀಲಂಕಾ ಗಳಿಂದ ಅಡಿಕೆ ಆಮದು ಆಗುತ್ತಲೇ ಇದೆ….

Read more
ಸೌಗಂದ್” ಅಡಿಕೆಯ ಬಳಕೆ ಹೆಚ್ಚಿಸಬಹುದಾದ ಮೌಲ್ಯವರ್ಧಿತ ಉತ್ಪನ್ನ

“ ಸೌಗಂದ್” ಅಡಿಕೆಯ ಬಳಕೆ ಹೆಚ್ಚಿಸಬಹುದಾದ ಮೌಲ್ಯವರ್ಧಿತ ಉತ್ಪನ್ನ.  

ಕ್ಯಾಂಪ್ಕೋ ಸಂಸ್ಥೆಯಿಂದ ಈಗ ಅಡಿಕೆಯ ಬಳಕೆ ಜನಸಾಮಾನ್ಯರೂ ಮಾಡಬಹುದಾದ ಉತ್ಪನ್ನ  “ಸೌಗಂಧ್” (Saugandh) ಅನ್ನು ಬಿಡುಗಡೆ ಆಗಿದೆ. ಬಹುಶಃ ಈ ಒಂದು ಉತ್ಪನ್ನವನ್ನು ಸಮರ್ಪಕವಾಗಿ ಮಾರುಕಟ್ಟೆ ಮಾಡಿದಲ್ಲಿ ಅಡಿಕೆಯ ಬಳಕೆ ಹೆಚ್ಚಳವಾಗಿ ಬೆಳೆಗಾರರಿಗೆ ಅನುಕೂಲವಾಗಬಹುದು. ಸಂಸ್ಥೆಯು ಸುಮಾರು 15 ವರ್ಷಕ್ಕೆ ಮೊತ್ತ ಮೊದಲಬಾರಿಗೆ ಅಡಿಕೆಯನ್ನು ಬಾಲಕರಿಂದ ಹಿಡಿದು ವೃದ್ಧರ ವರೆಗೂ, ಗಂಡಸರು ಹೆಂಗಸರೆಂಬ ಭೇಧವಿಲ್ಲದೆ ತಿನ್ನಬಹುದಾದ  “ಕಾಜೂ ಸುಪಾರಿ” ಎಂಬ ಎಂಬ ಉತ್ಪನ್ನವನ್ನು ಪರಿಚಯಿಸಿ ಜನಮನ್ನಣೆಗಳಿಸಿತ್ತು.  ಬಹುಶಃ ನಮ್ಮ ಅಡಿಕೆ ಬೆಳೆಗಾರರಿಗೆ ಗೊತ್ತಿದೆಯೋ ಇಲ್ಲವೋ, ನಮ್ಮ ಮನೆಯ ಶುಭ…

Read more
ಸಾವಯವ- ನೈಸರ್ಗಿಕ ಕೃಷಿ

ಸಾವಯವ- ನೈಸರ್ಗಿಕ ಕೃಷಿಗೆ ಬನ್ನಿ- ಸರಕಾರಕ್ಕೆ 2.10 ಲಕ್ಷ ಕೋಟಿ ಉಳಿಸಿ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸ್ವಾತಂತ್ರದ ಅಮೃತ ಮಹೋತ್ಸವದ ಸಂದರ್ಭದ  ಭಾಷಣದಲ್ಲಿ ಕೃಷಿಕರಿಗೆ ನೀಡಿದ ಸಂದೇಶ ಸಾವಯವ – ನೈಸರ್ಗಿಕ ಕೃಷಿಗೆ ಬದಲಾಗಿ ದೇಶಕ್ಕೆ ಲಕ್ಷಾಂತರ ಕೋಟಿ ಉಳಿಸಿ ಎಂದು. ಪ್ರಧಾನಿಗಳ ಆಶಯ ಸರಿ. ದೇಶ ಈಗಾಗಲೇ ಕೃಷಿಗಾಗಿ ಬಳಕೆಮಾಡುವ ರಸಗೊಬ್ಬರವನ್ನು ಆಮದು ಮಾಡಿಕೊಳ್ಳುವುದಕ್ಕಾಗಿ 2.10 ಲಕ್ಷ ಕೋಟಿ ಹಣವನ್ನು ವಿದೇಶಗಳಿಗೆ ಸಂದಾಯ ಮಾಡುತ್ತದೆ. ದೇಶದಲ್ಲಿ ಬಹುಷಃ ರಸಗೊಬ್ಬರ ತಯಾರಾಗುವುದಿಲ್ಲ. ವಿದೇಶಗಳಿಂದ ಕಚ್ಚಾ  ಸಾಮಾಗ್ರಿಗಳನ್ನು ತಂದು ಇಲ್ಲಿ ಪ್ಯಾಕಿಂಗ್ ಮಾಡಿ ರೈತರಿಗೆ ಒದಗಿಸಲಾಗುತ್ತದೆ ಎನ್ನಿಸುತ್ತದೆ. ಪ್ರಧಾನ ಮಂತ್ರಿಗಳಲ್ಲ,…

Read more
ಫಸಲು ಕೊಡುವ ಅಡಿಕೆ ಮರ

ಫಸಲು ಕೊಡುವ ಅಡಿಕೆ ಮರಗಳಿಗೆ ಗೊಬ್ಬರ – ಯಾವುದು ಹೇಗೆ ಕೊಡಬೇಕು?

ಫಸಲು ಕೊಡುವ ಅಡಿಕೆ ಮರಲ್ಲಿ ವರ್ಷ ಪೂರ್ತಿ ಬೆಳೆವಣಿಗೆ ಇರುತ್ತದೆ. ಮಳೆಗಾಲದಲ್ಲಿ ಬೆಳೆಯುವ ಮಿಡಿಗಳು, ಚಳಿಗಾಲದಲ್ಲಿ ಬಲಿಯುತ್ತಿರುವ ಕಾಯಿಗಳು ಮತ್ತು ಮೂಡುತ್ತಿರುವ ಹೂ ಗೊಂಚಲು ಹಾಗೂ ಬೇಸಿಗೆಯಲ್ಲಿ ಅರಳುತ್ತಿರುವ ಹೂ ಗೊಂಚಲುಗಳು. ಈ ಮೂರೂ ಋತುಮಾನದಲ್ಲೂ ಅಗತ್ಯ ಪೋಷಕಗಳು ಬೇಕು. ಮಳೆಗಾಲ ಪ್ರಾರಂಭದಲ್ಲಿ ಪೋಷಕಗಳ ಕೊಟ್ಟರೆ ಅದು ಗರಿಷ್ಟ ಪ್ರಮಾಣದಲ್ಲಿ ಬಳಕೆಯಾಗುತ್ತದೆ. ಈಗ ಸಾರಜನಕ ಗೊಬ್ಬರವನ್ನು ಕಡಿಮೆ ಪ್ರಮಾಣದಲ್ಲೂ, ರಂಜಕ ಮತ್ತು ಪೊಟ್ಯಾಶ್ ಗೊಬ್ಬರಗಳನ್ನು  ನಿಗದಿತ ಪ್ರಮಾಣದಲ್ಲೂ ಕೊಡಬೇಕು. ಕಾರಣ ಮಳೆ ಸಿಡಿಲು ಮಿಂಚುಗಳಿಂದ ಸಾಕಷ್ಟು ಸಾರಜನಕ…

Read more
error: Content is protected !!