Rs.1500 per Kg Spice

Rs.1500 per Kg Spice – An intercrop to areca garden.

Here we take in a progressive farmer, who is managing his areca nut garden expenses by spice intercrops. This is Mr. KV Timmappa Hegade, of Khandika village of Sagara taluk Shimogga Dist, Karnataka. Around 40  years back his father Late Venkatagiriyappa Hegade, thought areca nut garden must have intercrops. He visited many places and selected…

Read more
ಧೀರ್ಘ ಆಯುಷ್ಯ – ಸ್ವಸ್ಥ ಆರೋಗ್ಯಬೇಕೇ? ಹಾಸು ಸಾಕಣೆ ಮಾಡಿ

ದೀರ್ಘ ಆಯುಷ್ಯ – ಸ್ವಸ್ಥ ಆರೋಗ್ಯಬೇಕೇ? ಹಸು ಸಾಕಣೆ ಮಾಡಿ.

ಇಂದಿನ ಹೊಸ ತಲೆಮಾರು ಆರೋಗ್ಯ – ಆಯುಷ್ಯಕ್ಕಾಗಿ ಎಷ್ಟು ಬೇಕಾದರೂ ಖರ್ಚು ಮಾಡುತ್ತಾರೆ. ಆದರೆ ನಮ್ಮ ಹಿರಿಯರು ಖರ್ಚು ಮಾಡಿ ಆರೋಗ್ಯವಂತರಾಗಿರಲಿಲ್ಲ. ಅವರ ದೈನಂದಿನ ಕೆಲಸ ಕಾರ್ಯಗಳು ಅವರನ್ನು ಆರೋಗ್ಯವಾಗಿಟ್ಟಿದೆ. ಅದರಲ್ಲಿ ಒಂದು ಹಸು ಸಾಕಾಣಿಕೆ. ಹಸು ಸಾಕಾಣಿಕೆಯಿಂದ ಪ್ರತ್ಯಕ್ಷವಾಗಿಯೂ ಆರೋಗ್ಯ, ಆಯುಸ್ಸು ವೃದ್ಧಿಸುತ್ತದೆ. ಪರೋಕ್ಷವಾಗಿಯೂ ವೃದ್ಧಿಸುತ್ತದೆ. ಇದು ನಿಜವೋ, ಅಲ್ಲವೋ ಎಂಬುದನ್ನು  ಹತ್ತಾರು ಕಡೆ ನೋಡಿ, ತಿಳಿದು ಎಲ್ಲರೂ  ಗಮನಿಸಬಹುದು. ಹಸು ಸಾಕಾಣಿಕೆ ಎಲ್ಲರಿಗೂ ಮಾಡಲಿಕ್ಕೆ ಸಾಧ್ಯವಿಲ್ಲ. ಪೇಟೆ ಪಟ್ಟಣದಲ್ಲಿರುವವರು ಹಸು ಸಾಕುವುದು ಅಸಾಧ್ಯ. ಆದರೆ…

Read more
ಜಾನುವಾರುಗಳ ಚರ್ಮ ಗಂಟು ರೋಗ

ಜಾನುವಾರುಗಳ ಚರ್ಮ ಗಂಟು ರೋಗಕ್ಕೆ ಈಗ ಔಷಧಿ ಸಿದ್ದವಾಗಿದೆ.

ಜಾನುವಾರುಗಳ ಚರ್ಮದಲ್ಲಿ ಅಲ್ಲಲ್ಲಿ ಗಂಟುಗಳಂತೆ ಅಥವಾ ಗುಳ್ಳೆಗಳಂತೆ ಎದ್ದು ಉಂಟಾಗುವ ಅಸ್ವಾಸ್ಥ್ಯ ಔಷಧಿ ಇಲ್ಲದೆ  ಇತ್ತೀಚೆಗೆ ಕೆಲವು ಕಡೆ ತೀವ್ರ ಸ್ವರೂಪ ಪಡೆಯುತ್ತಿದೆ.  ಇದನ್ನು Lumpy skin disease (LSD) ಎಂದು ಕರೆಯುತ್ತಾರೆ. ಇದರ ಔಷದೋಪಚಾರಕ್ಕೆ ಹೈನುಗಾರರು ಸಿಕ್ಕ ಸಿಕ್ಕ ವೈದ್ಯರ, ಮೆಡಿಕಲ್ ಶಾಪ್ ಗಳ ಮೊರೆ ಹೋಗುತ್ತಿದ್ದಾರೆ, ಈ ತನಕ ಇದಕ್ಕೆಂದೇ ಔಷಧಿ ಬಿಡುಗಡೆ ಆಗಿಲ್ಲ. ಹಾಗಾಗಿ ಔಷದೋಪಚಾರದಿಂದ ಈ ರೋಗ ವಾಸಿಯಾಗಿಲ್ಲ. ರೋಗಕ್ಕೆ ಕಾರಣ ಒಂದು ವೈರಸ್ ( ನಂಜಾಣು ) ಆಗಿರುತ್ತದೆ.  ಹಿಂದೆ…

Read more
ಕೊಳೆರೋಗ ಹೆಚ್ಚಳಕ್ಕೂ ಸಸ್ಯ ಆರೋಗ್ಯ

ಕೊಳೆ ರೋಗ ಹೆಚ್ಚಳಕ್ಕೂ ಸಸ್ಯ ಆರೋಗ್ಯಕ್ಕೂ  ಸಂಬಂಧಗಳಿರಬಹುದೇ ಯೋಚಿಸಿ.

ಈ ವರ್ಷ ಬಹಳಷ್ಟು ಅಡಿಕೆ ಬೆಳೆಗಾರರು ಅಡಿಕೆ ಕಾಯಿಗಳಿಗೆ ಕೊಳೆ ರೋಗ ಬಂದಿದೆ ಎಂದು ಹೇಳುತ್ತಿದ್ದಾರೆ.  ಹೆಚ್ಚಿನ ಕಡೆ ಕೊಳೆ ರೋಗ ಬಂದಿದೆ. ಇದಕ್ಕೆ ಸಸ್ಯ ಆರೋಗ್ಯ  ಕಾರಣ ಇರಬಹುದೇ? ಕೆಲವು ದೃಷ್ಟಿಕೋನದಲ್ಲಿ ಇದು ನಿಜ ಎನ್ನಿಸುತ್ತದೆ. ಅಡಿಕೆಯ ಕೊಳೆ ರೋಗ ಬಂದಂತೆ ಅಡಿಕೆ ಸಸಿ/ ಮರಗಳಿಗೆ , ತೆಂಗಿನ ಮರಗಳಿಗೆ ಸುಳಿ ಕೊಳೆ ರೋಗವೂ  ಇತ್ತೀಚೆಗೆ ಬಹಳಷ್ಟು ಹೆಚ್ಚಾಗುತ್ತಿದೆ. ಪೋಷಕಾಂಶಗಳು ಅಸಮತೋಲನವಾಗಿ ಸಸ್ಯಕ್ಕೆ ಲಭ್ಯವಾಗದಿರುವುದೇ ಇದಕ್ಕೆ ಒಂದು ಕಾರಣ ಇರಬಹುದೇ ಎಂಬ ಬಗ್ಗೆ ಸಂಶಯವಿದೆ.  ನಾವೆಲ್ಲಾ…

Read more
ಏರಿಕೆಯತ್ತ ಅಡಿಕೆ ದಾರಣೆ- ಸದ್ಯವೇ ಬೆಳೆಗಾರರ ನಿರೀಕ್ಷೆ

ಏರಿಕೆಯತ್ತ ಅಡಿಕೆ ದಾರಣೆ- ಸದ್ಯವೇ ಬೆಳೆಗಾರರ ನಿರೀಕ್ಷೆ ರೂ.500 ರತ್ತ.

ಆಗಸ್ಟ್ ಮೊದಲ ವಾರದಲ್ಲಿ ಮಾರುಕಟ್ಟೆಗೆ ಅಡಿಕೆ ಬರುವ ಪ್ರಮಾಣವೇ ಕಡಿಮೆಯಾದ ಕಾರಣ ಸ್ವಲ್ಪ ಸಂಚಲನ ಆಗುವ ಲಕ್ಷಣ ಕಂಡು ಬಂದಿತ್ತಾದರೂ ಅದಕ್ಕೆ ವಿರುದ್ಧವಾಗಿ ಧಾರಣೆ ಏರಿಕೆಯಾತ್ತ ಸಾಗುತ್ತಿದೆ. ಚಾಲಿ ಮಾರುಕಟ್ಟೆಯಲ್ಲಿ ಎರಡು ತಿಂಗಳಿಂದ ನಿಂತಲ್ಲೇ ಸ್ಥಬ್ಧವಾಗಿದ್ದ ಹೊಸ ಅಡಿಕೆ ಧಾರಣೆಗೆ ಸಂಚಲನ ಸಿಕ್ಕಿತು. ಹಳತು ಸಹ ಸ್ವಲ್ಪ ಏರಿತು. ಕೆಂಪಡಿಕೆಯೂ ಏರಿಕೆಯಾಗಲಾರಂಭಿಸಿತು.  ಎಷ್ಟರ ತನಕ ಏರಬಹುದು, ಎಂಬದರ ಯಾವ ಮಾಹಿತಿಯೂ ಇಲ್ಲ. ಪರಿಸ್ಥಿತಿಯನ್ನು ನೋಡಿದರೆ ಇನ್ನು ಏರುತ್ತಾ ಹೂವುದೇ ಒರತು ಇಳಿಕೆ ಸಾಧ್ಯತೆ ತುಂಬಾ ಕಡಿಮೆ. ಕೆಲವು…

Read more
ಕೃಷಿಯಲ್ಲಿ ಲಾಭವಿಲ್ಲವೇ? ಹಾಗಿದ್ದರೆ ಇದರಲ್ಲಿ ಖಾತ್ರಿಯ ಲಾಭವಿದೆ.

ಕೃಷಿಯಲ್ಲಿ ಲಾಭವಿಲ್ಲವೇ? ಇದರಲ್ಲಿ ಖಾತ್ರಿಯ ಲಾಭವಿದೆ.

ಕೃಷಿಕರಲ್ಲಿ ಹೊಲ ಇರುತ್ತದೆ.  ಬಹಳ  ಜನ ಹಿರಿಯ ಕೃಷಿಕರಿಗೆ ಕೃಷಿ ಮಾಡಿ ಲಾಭ ಮಾಡಿಕೊಳ್ಳಲು ಅಸಾಧ್ಯ ಎಂಬುದು ಮನವರಿಕೆಯಾಗಿದೆ. ಹೊಟ್ಟೆ ಬಾಯಿ ಕಟ್ಟಿ ಒಂದಷ್ಟು ಮೊತ್ತದ ಹಣವನ್ನು ತಮ್ಮ ವೃದ್ದಾಪ್ಯದ ಜೀವನಕ್ಕೆ ಬೇಕು ಎಂದು ಕೂಡಿಟ್ಟಿದ್ದರೆ ಅದನ್ನು  ಖಾತ್ರಿಯ ಲಾಭ ಇರುವ ಕಡೆ ಹೂಡಿಕೆ ಮಾಡಿ , ಠೇವಣಿ ಇತ್ಯಾದಿಗಳಿಂದ ಪಡೆಯುವ ಆದಾಯಕ್ಕಿಂತ ಹೆಚ್ಚಿನ ಆದಾಯವನ್ನು ಪಡೆಯಲು ಸಾದ್ಯ. ಮುಂದಿನ ದಿನಗಳಲ್ಲಿ ಏನಾಗಬಹುದು? ಈ ಯೋಚನೆ ಮಾಡಬೇಕಾದರೆ ಹಿಂದೆ ಏನೆಲ್ಲಾ ಆಗಿದೆ ಎಂಬುದನ್ನು ಒಮ್ಮೆ ನೆನಪು ಮಾಡಿಕೊಳ್ಳಬೇಕಾಗುತ್ತದೆ….

Read more
ಅತೀ ದೊಡ್ಡ ಗಾತ್ರದ ನೇಂದ್ರ ಬಾಳೆ ಕಾಯಿ

ಅತೀ ದೊಡ್ಡ ಗಾತ್ರದ ನೇಂದ್ರ ಬಾಳೆ ಕಾಯಿ

ನೇಂದ್ರ   ಬಾಳೆಯ ಬಹು ಉಪಯೋಗದ ಕಾರಣ ಇದಕ್ಕೆ ಉಳಿದೆಲ್ಲಾ ಬಾಳೆಗಳಿಗಿಂತ ಅಧಿಕ ಬೆಲೆ. ಮತ್ತು ನಿರಂತರ ಬೇಡಿಕೆ. ಇದರಲ್ಲಿ ಒಂದು ಕಾಯಿ ¾ ಕಿಲೋಗೂ ಹೆಚ್ಚು ತೂಗುವ ಅತೀ ದೊಡ್ಡ ಗಾತ್ರದ  ಬಾಳೆ ಕಾಯಿ ಇದೆ.ಇದನ್ನು ಎಲ್ಲರೂ ಬೆಳೆಸಬಹುದು. ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಒಂದು  ಬಾಳೆಗೊನೆಯಲ್ಲಿ ಸರಾಸರಿ 3 ಹೆಣಿಗೆಗಳು, 30  ಕಾಯಿಗಳು ಸರಾಸರಿ 15  ಕಿಲೋ ತೂಕ, (20 ಕಿಲೋ ತನಕವೂ ಬರುತ್ತದೆ)ಇರುವ ಬಹು ಉಪಯೋಗಿ ಬಾಳೆ ಎಂಬುದು ಇದ್ದರೆ ಅದು ನೇಂದ್ರ ಬಾಳೆಯಲ್ಲಿ….

Read more
ಕರಿಮೆಣಸು ಬೆಳೆಗೆ ಭಾರೀ ರೋಗ- ತಕ್ಷಣದ ಪರಿಹಾರಗಳು

ಕರಿಮೆಣಸು ಬೆಳೆಗೆ ಭಾರೀ ರೋಗ- ತಕ್ಷಣದ ಪರಿಹಾರಗಳು ಏನು?

ಕರಿಮೆಣಸಿಗೂ ಅತಿಯಾದ ಮಳೆಗೂ  ಬಾರೀ ವಿರೋಧ. ನೀರು ಮೆಣಸಿಗೆ ಆಗದೆಂದಲ್ಲ. ಬಳ್ಳಿಯ ಬುಡದಲ್ಲಿ ನೀರು ಹರಿದು ಹೋದರೂ ಬಳ್ಳಿ ಸಾಯಲಾರದು. ಆದರೆ ನೀರು ಬಳ್ಳಿ ಬುಡದಲ್ಲಿ 20 ನಿಮಿಷಕ್ಕಿಂತ ಹೆಚ್ಚು ಸಮಯ ನಿಂತಿರಬಾರದು. ಮಳೆಗೆ ನೀರು ಸರಿಯಾಗಿ ಬಸಿಯಲಾರದ ಕಡೆಗಳಲ್ಲಿ ರೋಗ ಬರುವುದು ಗ್ಯಾರಂಟಿ. ಈಗಾಗಲೇ ಬಹಳಷ್ಟು ಕಡೆಗಳಲ್ಲಿ ರೋಗ ಬಂದಿದ್ದು, ಬಳ್ಳಿಯಲ್ಲಿ ಎಲೆ ಹಳದಿಯಾಗಿದೆ. ಕೆಲವು ರೋಗದ ಅಮಲಿನಲ್ಲಿವೆ. ಈ ಸಮಯದಲ್ಲಿ ತಕ್ಷಣ ಯಾವ ಪರಿಹಾರ ಕ್ರಮ ಕೈಗೊಂಡರೆ ಅಲ್ಪ ಸ್ವಲ್ಪ ರೋಗ ರೋಗ ಸೋಂಕು ತಗಲಿದ…

Read more
ಮರಕೆಸುವಿನ ಸೇವನೆಯಿಂದ ಪ್ರಯೋಜನಗಳು.

ಮರಕೆಸುವಿನ ಸೇವನೆಯಿಂದ ಪ್ರಯೋಜನಗಳು.

Remusatia vivipara ಎಂಬ ಸಸ್ಯ ಶಾಸ್ತ್ರೀಯ ಹೆಸರಿನ ಮರಕೆಸು ಕೆಸು ತನ್ನದೇ ಆದ ವಿಶೇಷತೆಯನ್ನು ಹೊಂದಿದ್ದು, ಇದು ಮಳೆ ಬಂದ ನಂತರ ಹುಟ್ಟಿಕೊಂಡು ಬೆಳೆದು ಮಳೆ ಮುಗಿಯುವಾಗ ಮರೆಯಾಗುತ್ತದೆ. ಈ ಅವಧಿಯಲ್ಲಿ ಎಲೆಗಳು ದೊಡ್ಡದಾಗಿ ಬೆಳೆಯುವ ಆಷಾಢ ಮಾಸದಲ್ಲಿ ಇದರ ಖಾದ್ಯ ಮಾಡಿ ಸೇವಿಸಿದರೆ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳಿವೆ. ಮರ ಕೆಸು, ಕಾಡುಗಡ್ಡೆ ( ತುಳುವಿನಲ್ಲಿ ಮರಚೇವು, ಕೊಂಕಣಿಯಲ್ಲಿ ರುಕಾಲುಮ್,ಮಲಯಾಳಂ ಮರಚೆಂಬು, ಮರಾಠಿ ಲಾಲ್ಖಂಡ್, ಸಂಸ್ಕೃತದಲ್ಲಿ ಲಕ್ಷ್ಮಣ ) ನೆಲ ಕೆಸುವಿನ ಜಾತಿಯದ್ದೇ. ಇದು ಮರಗಳನ್ನು  ಆಶ್ರಯಿಸಿ…

Read more
ಕೃಷಿ ಗಣತಿ 2022

ಕೃಷಿ ಗಣತಿ 2022 ನೇ ಇಸವಿಯಲ್ಲಿ ಇದೆ.

ಭಾರತ ಸರಕಾರವು  ಪ್ರತೀ 5 –ವರ್ಷಕ್ಕೊಮ್ಮೆ ಕೃಷಿ ಗಣತಿಯನ್ನು ಮಾಡುತ್ತಾ ಬಂದಿದೆ. ಈ ಹಿಂದೆ 2015-16 ರಲ್ಲಿ 10 ನೇ ಕೃಷಿ ಗಣತಿ ನಡೆದಿದ್ದು, ಈ ವರ್ಷ 2022-23 ರಲ್ಲಿ 11 ನೇ ಕೃಷಿ ಗಣತಿ ನಡೆಯಲಿದೆ.ಇದನ್ನು ಯಾಕೆ ಮಾಡುತ್ತಾರೆ, ಹೇಗೆ ಮಾಡಿದರೆ ಒಳ್ಳೆಯದು? ನಮ್ಮ ದೇಶದಲಿ ಇನ್ನೂ 50% ಕ್ಕಿಂತಲೂ ಹೆಚ್ಚಿನ ಜನ ಕೃಷಿಯನ್ನು  ಜೀವನೋಪಾಯಕ್ಕಾಗಿ ಅವಲಂಭಿಸಿದ್ದಾರೆ. ಹೀಗಿರುವಾಗ ಕೃಷಿ ಸಂಬಂಧಿತ ಯಾವುದೇ ಯೋಜನೆ ನೀತಿ ನಿಯಮಾವಳಿಗಳನ್ನು  ತಯಾರಿಸುವಾಗ ಈ ಗಣತಿ ಮಾರ್ಗದರ್ಶಿಯಾಗಲಿದೆ. ಈಗಾಗಲೇ ಗಣತಿಯ …

Read more
error: Content is protected !!