ಕರಿಮೆಣಸು ಬೆಳೆಗೆ ಭಾರೀ ರೋಗ- ತಕ್ಷಣದ ಪರಿಹಾರಗಳು

ಕರಿಮೆಣಸು ಬೆಳೆಗೆ ಭಾರೀ ರೋಗ- ತಕ್ಷಣದ ಪರಿಹಾರಗಳು ಏನು?

ಕರಿಮೆಣಸಿಗೂ ಅತಿಯಾದ ಮಳೆಗೂ  ಬಾರೀ ವಿರೋಧ. ನೀರು ಮೆಣಸಿಗೆ ಆಗದೆಂದಲ್ಲ. ಬಳ್ಳಿಯ ಬುಡದಲ್ಲಿ ನೀರು ಹರಿದು ಹೋದರೂ ಬಳ್ಳಿ ಸಾಯಲಾರದು. ಆದರೆ ನೀರು ಬಳ್ಳಿ ಬುಡದಲ್ಲಿ 20 ನಿಮಿಷಕ್ಕಿಂತ ಹೆಚ್ಚು ಸಮಯ ನಿಂತಿರಬಾರದು. ಮಳೆಗೆ ನೀರು ಸರಿಯಾಗಿ ಬಸಿಯಲಾರದ ಕಡೆಗಳಲ್ಲಿ ರೋಗ ಬರುವುದು ಗ್ಯಾರಂಟಿ. ಈಗಾಗಲೇ ಬಹಳಷ್ಟು ಕಡೆಗಳಲ್ಲಿ ರೋಗ ಬಂದಿದ್ದು, ಬಳ್ಳಿಯಲ್ಲಿ ಎಲೆ ಹಳದಿಯಾಗಿದೆ. ಕೆಲವು ರೋಗದ ಅಮಲಿನಲ್ಲಿವೆ. ಈ ಸಮಯದಲ್ಲಿ ತಕ್ಷಣ ಯಾವ ಪರಿಹಾರ ಕ್ರಮ ಕೈಗೊಂಡರೆ ಅಲ್ಪ ಸ್ವಲ್ಪ ರೋಗ ರೋಗ ಸೋಂಕು ತಗಲಿದ…

Read more

ಅಡಿಕೆಯ ಕಥೆ ವ್ಯಥೆಯಾಗುವ ಮುನ್ಸೂಚನೆ

ರಾಜ್ಯ ಸರಕಾರ  ಜನತೆಗೆ ಮನೆ ಹೊರಡದಂತೆ ಕರ್ಫ್ಯೂ  ವಿಧಿಸಿದೆ. ಅಗತ್ಯ ಸಾಮಾಗ್ರಿಗಳಿಗೆ ವಿನಾಯಿತಿ ನೀಡಿದ್ದರೂ ಅಡಿಕೆ ಎಂಬುದು ಅಗತ್ಯ ಸಾಮಾಗ್ರಿಗಳ ಅಡಿಯಲ್ಲಿ ಬಾರದ ಕಾರಣ ಅಡಿಕೆ ಕೊಳ್ಳುವವರು ತಮ್ಮ ವ್ಯವಹಾರ ನಿಲ್ಲಿಸುವುದು ಗ್ಯಾರಂಟಿ.  ಇನ್ನು ವ್ಯಾಪಾರ ಏನಿದ್ದರೂ ಪರಿಸ್ಥಿತಿ ಅನುಕೂಲಕರವಾಗಿ ಬಂದರೆ ಎಪ್ರೀಲ್ 1 ತರುವಾಯ. ಅಡಿಕೆ, ಕರಿಮೆಣಸು , ಶುಂಠಿ ಮುಂತಾದ ಕೃಷಿ ಉತ್ಪನ್ನಗಳ ಮಾರುಕಟ್ಟೆ  ಎಂಬುದು ಪರಿಸ್ಥಿತಿ ಸರಿಯಾಗಿದ್ದರೆ ಎಲ್ಲವೂ ಸಲೀಸಾಗಿ ಮುಂದುವರಿಯುತ್ತದೆ. ಎಲ್ಲಾದರೂ ಸ್ವಲ್ಪ  ಪರಿಸ್ಥಿತಿ  ಬಿಗಡಾಯಿಸಿದರೆ  ಹೇಗೆ ಮಾರುಕಟ್ಟೆ ಕುಸಿಯುತ್ತದೆ ಎಂದೇ…

Read more

ಸಾಗುವಾನಿ (ತೇಗ)ಮರದ ಗೆಲ್ಲು ಕಡಿದರೆ ಏನಾಗುತ್ತದೆ?

ಮರಮಟ್ಟುಗಳಲ್ಲಿ ಚಿನ್ನದ ಮರವೆಂದೇ ಖ್ಯಾತವಾದ ಸಾಗುವಾನಿ (ತೇಗ) ಮರವನ್ನು ನೇರವಾಗಿ ಬೆಳೆಯಲಿ ಎಂದೋ, ಇತರ ಉದ್ಡೆಶಗಳಿಗಾಗಿಯೋ ಗೆಲ್ಲು ಸವರುತ್ತೇವೆ. ಗೆಲ್ಲು ಸವರುವುದರಿಂದ ಮರದ ಗುಣಮಟ್ಟ ಏನಾಗುತ್ತದೆ ಎಂಬುದರ ಪೂರ್ಣ ಮಾಹಿತಿ. ಬಹಳ ಜನ ನಮ್ಮ ಹಲಸಿನ ಮರ ಸಾಗುವಾನಿ ಮರ ಹೆಬ್ಬಲಸಿನ ಮರದಲ್ಲಿ ಒಡಕು( ಬಿರುಕು) ಬಂದು ಯಾವುದಕ್ಕೂ ಆಗದಂತಾಯಿತು ಎಂದು ಹೇಳುತ್ತಾರೆ.  ಇದಕ್ಕೆ ಕಾರಣ ನಾವೇ ಹೊರತು ಮರ ಅಲ್ಲ. ಸಾಗುವಾನಿ ಇರಲಿ, ಇನ್ಯಾವುದೇ ನಾಟಾ ಉದ್ದೇಶದ ಮರಮಟ್ಟುಗಳು  ಇರಲಿ ನಾವು ತಿಳಿದೋ ತಿಳಿಯದೆಯೋ  ಗೆಲ್ಲುಗಳನ್ನು…

Read more
ಸುಪ್ರೀಮ್ ಕೋರ್ಟ್

ಸುಪ್ರೀಮ್ ಕೋರ್ಟ್ ನ್ಯಾಯಮೂರ್ತಿಗಳು ಕೃಷಿಕರ ಬಗ್ಗೆ ತೋರಿದ ಕಳಕಳಿ.

ಎಲ್ಲರೂ ಕೃಷಿಕರು ಹಾಗೆ ಮಾಡುತ್ತಾರೆ, ಹೀಗೆ ಮಾಡುತ್ತಾರೆ. ಪರಿಸರ ಹಾನಿ ಮಾಡುತ್ತಾರೆ. ಮಾಲಿನ್ಯ ಮಾಡುತ್ತಾರೆ ಎಂದು ತಗಾದೆ ತೆಗೆಯುವವರು. ಇವರೆಲ್ಲರಿಗೂ ಒಂದು ರೀತಿಯಲ್ಲಿ  ಚಾಟಿ ಏಟಿನ ತರಹ ಪ್ರಶ್ನೆಯೊಂದನ್ನು ಭಾರತದ ಸುಪ್ರೀಮ್ ಕೋರ್ಟ್ ನ್ಯಾಯಾಧೀಶರಾದ ಶ್ರೀ ಎನ್ ವಿ ರಮಣ ಇವರು ಕೇಳಿದ್ದಾರೆ. ಎಲ್ಲಾ ತಕರಾರಿನಲ್ಲೂ ರೈತರ ವಿಷಯಗಳನ್ನು ನ್ಯಾಯಾಲಯದ ಕಟ್ಟಲೆಗೆ ತರುವುದು ಸೂಕ್ತವಲ್ಲ. ರೈತರು ಅವರ ಆರ್ಥಿಕ ಮೂಲಕ್ಕನುಗುಣವಾಗಿ ಕೆಲವು ಸಣ್ಣ ಪುಟ್ಟ ತಪ್ಪುಗಳನ್ನು ಕೃಷಿ ಕಾಯಕದಲ್ಲಿ ಮಾಡಬಹುದಾದರೂ ಅದನ್ನು ನಾವು ಬೇರೆ ತಪ್ಪುಗಳಿಗೆ ಹೋಲಿಸಿದರೆ…

Read more
ಕಾಲಸ್ಥಿತಿಗೆ ಅನುಗುಣವಾಗಿ ಕೃಷಿ ಮಾಡಬೇಕು- ಅಶೋಕ್ ಕುಮಾರ್ ಕರಿಕಳ..

ಕಾಲಸ್ಥಿತಿಗೆ ಅನುಗುಣವಾಗಿ ಕೃಷಿ ಮಾಡಬೇಕು- ಅಶೋಕ್ ಕುಮಾರ್ ಕರಿಕಳ.

ಕೃಷಿಕರಾದವರು ಕಾಲಸ್ಥಿತಿಗೆ ಅನುಗುಣವಾಗಿ ತಮ್ಮ ವೃತ್ತಿಕ್ಷೇತ್ರದಲ್ಲಿ ಮಾರ್ಪಾಡುಗಳನ್ನು ಮಾಡಿಕೊಂಡು ಬಂದರೆ  ಯಾವುದೋ ಕಷ್ಟವಿಲ್ಲದೆ ಅದರಲ್ಲಿ ಯಶಸ್ಸನು ಹೊಂದಬಹುದು ಎಂಬುದು ಕರಿಕಳ ಅಶೋಕ್ ಕುಮಾರ್ ಇವರ ಅನುಭವದ ಮಾತು. ಇವರು ಹುಟ್ಟು ಕೃಷಿಕರು. ಅದೇ ಕ್ಷೇತ್ರದಲ್ಲಿ ವ್ಯಾಸಂಗವನ್ನೂ ಮಾಡಿದವರು. ಜೊತೆಗೆ ಅದೇ ಕ್ಷೇತ್ರದಲ್ಲೇ ತನ್ನ ಬದುಕನ್ನೂ ಕಟ್ಟಿಕೊಂಡವರು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಮಣ್ಯ ಸಮೀಪದ ಕರಿಕಳ ಎಂಬಲ್ಲಿ ವೈದ್ಯರ ಮಗನಾಗಿ ಹುಟ್ಟಿ, ಈಗ ಬೆಂಗಳೂರು ದೊಡ್ಡಬಳ್ಳಾಪುರದಲ್ಲಿ ಕೃಷಿ ಮತ್ತು ಅದಕ್ಕೆ ಪೂರಕ ವೃತ್ತಿ ನಡೆಸುತ್ತಿದ್ದಾರೆ. ಇವರರನ್ನು  ಕೃಷಿ…

Read more

ಕಡಿಮೆ ಬೆಲೆಯ ಉತ್ತಮ ಜೈವಿಕ ಗೊಬ್ಬರಗಳು.

ಕೃಷಿ ಪದ್ಧತಿಯನ್ನು ಸುಸ್ಥಿರಗೊಳಿಸಲು ರಾಸಾಯನಿಕ ಗೊಬ್ಬರಗಳ ಬಳಕೆ ಮತ್ತು ಅವುಗಳ ಮೇಲಿನ ಅವಲಂಬನೆಯು ದೀರ್ಘ ಕಾಲದವರೆಗೂ ಮುಂದುವರೆಯಲು ಅಸಾಧ್ಯ.  ಸುಸ್ಥಿರ ಕೃಷಿಗೆ  ಮಣ್ಣಿನ ಆರೋಗ್ಯ ಅತ್ಯಗತ್ಯ. ಇದನ್ನು ಕಾಪಾಡುವಲ್ಲಿ ಹಸಿರು ಎಲೆ ಗೊಬ್ಬರ, ಜೈವಿಕ ಮತ್ತು ಸಾವಯವ ಗೊಬ್ಬರಗಳು ಪ್ರಮುಖ ಪಾತ್ರ ವಹಿಸುತ್ತವೆ. ಇಂದು ಹಲವಾರು ಖಾಸಗಿ ಜೈವಿಕ ಗೊಬ್ಬರ ಪೂರೈಕೆದಾರರು ಇದರ  ಸದುಪಯೋಗ  ಮಾಡಿಕೊಳ್ಳುತ್ತಿದ್ದಾರೆ. ಅದರೆ ಭಾರತೀಯ ತೋಟಗಾರಿಕಾ ಸಂಶೋಧನಾ  ಕೇಂದ್ರದಲ್ಲಿ ಇಂತಹ ಹಲವಾರು  ಸೂಕ್ಷ್ಮಾಣು ಜೀವಿಗಳ  ಉತ್ಪನ್ನಗಳನ್ನು ತಯಾರಿಕೆ ನಡೆಯುತ್ತಿದ್ದು, ಅರ್ಕಾ ಹೆಸರಿನಲ್ಲಿ ಇದು…

Read more
ಅಡಿಕೆ ಹರಾಜು ಪ್ರದೇಶ

ಕೆಂಪಡಿಕೆ- ಕರಿಮೆಣಸು ಏರಿಕೆ:ದಿನಾಂಕ:21-10-2021 ರ ಧಾರಣೆ.

ಕೆಲವು ಮೂಲಗಳ ಮಾಹಿತಿಯಂತೆ ಕೆಂಪಡಿಕೆ -ಕರಿಮೆಣಸು ದರ ಸ್ವಲ್ಪ ಏರಿಕೆ ಆಗಬಹುದು ಎಂಬ ಹಿಂದಿನ ಸುದ್ದಿ ಪ್ರಕಟಣೆ ನಿಜವಾಗುತ್ತಿದೆ. ಆದರೆ ಇದು ಇನ್ನೂ ಭಾರೀ ಮೇಲೆ ಹೋಗಬಹುದು ಎಂಬ ಯಾವ ಮುನ್ಸೂಚನೆಯೂ ಇಲ್ಲ. ಸ್ವಲ್ಪ ಏರಿಕೆ ಸ್ವಲ್ಪ ಇಳಿಕೆ ಆಗುತ್ತಾ 2-3 ತಿಂಗಳ ತನಕವು ಮುಂದುವರಿಯುವ ಸಾಧ್ಯತೆ ಇದೆ. ಕರಾವಳಿಯಲ್ಲಿ ಚಾಲಿ ಅಡಿಕೆ ಧಾರಣೆ ಏರಿಕೆಯೂ ಆಗದೆ ಇಳಿಕೆಯೂ ಅಗದೆ ಮುಂದುವರಿದಿದೆ. ಖಾಸಗಿಯವರ ಖರೀದಿ ಭರ ಸ್ವಲ್ಪ ಕುಗ್ಗಿದೆ. ಕ್ಯಾಂಪ್ಕೋ ಗೆ ಅಡಿಕೆ ಬರುವಿಕೆ ಕಡಿಮೆ ಇದೆ….

Read more
ಈ ಹಂತದಲ್ಲಿ ಥಿನ್ನಿಂಗ್ ಮಾಡಬೇಕು

ದ್ರಾಕ್ಷಿ ಥಿನ್ನಿಂಗ್ ಮಾಡಿ – ಗುಣಮಟ್ಟ ಹೆಚ್ಚಿಸಿ.

ದ್ರಾಕ್ಷಿ ಗೊಂಚಲಿನಲ್ಲಿ ಎಲ್ಲಾ ಒಂದೇ ಗಾತ್ರದ  ಹಣ್ಣುಗಳಿದ್ದರೆ ತುಂಬಾ ಆಕರ್ಷಕವಾಗಿರುತ್ತದೆ. ಅದು ಉತ್ತಮ ಬೆಲೆಗೆ ಮಾರಾಟವಾಗುತ್ತದೆ. ಎಲ್ಲದಕ್ಕೂ  ಗಾತ್ರ ಮತ್ತು ನೋಟವೇ ಮುಖ್ಯ. ಇದು ತನ್ನಷ್ಟಕ್ಕೇ ಆಗುವುದಲ್ಲ. ಬೆಳೆಗಾರರು ಅದಕ್ಕೆ ಬೇಕಾದ ಥಿನ್ನಿಂಗ್ ಮಾಡಿದರೆ ಮಾತ್ರ ಹೀಗೆ ಇರುತ್ತದೆ. ದ್ರಾಕ್ಷಿ ಗೊಂಚಲಿನಲ್ಲಿ ಹೆಚ್ಚಿನ ಹೂವುಗಳು ಪರಾಗಸ್ಪರ್ಶಕ್ಕೊಳಗಾಗಿ ಕಾಯಿಕಚ್ಚುತ್ತವೆ. ಎಲ್ಲವೂ ಕಾಯಿಯಾದರೆ ಕೆಲವು ಬಟಾಣಿ ಗಾತ್ರ , ಮತ್ತೆ ಕೆಲವು ಇನ್ನೂ ಸಣ್ಣ ಗಾತ್ರ ಕೆಲವು ಯೋಗ್ಯ ಗಾತ್ರ, ಹೀಗೆ ಕಾಯಿಗಳಲ್ಲೆಲ್ಲಾ ಆಕಾರ ವೆತ್ಯಾಸ ಇರುತ್ತದೆ. ಹೀಗೆ ಆದರೆ…

Read more
ಸಕ್ಕರೆ ಕಾಯಿಲೆಗೆ ಇದು ರಾಮಬಾಣ- ಖರ್ಚು ಇಲ್ಲದ ಚಿಕಿತ್ಸೆ.

ಸಕ್ಕರೆ ಕಾಯಿಲೆಗೆ ಇದು ರಾಮಬಾಣ- ಖರ್ಚು ಇಲ್ಲದ ಚಿಕಿತ್ಸೆ.

ಸಕ್ಕರೆ ಖಾಯಿಲೆ, ಮಧುಮೇಹ, ಡಯಾಬಿಟಿಸ್ ಗೆ ರಾಮಬಾಣದಂತೆ ಕೆಲವು ಮನೆಮದ್ದುಗಳು ಕೆಲಸಮಾಡುತ್ತವೆ. ವೈದ್ಯರಿಗೆ  ಖರ್ಚು ಮಾಡಿ ಚಿಕಿತ್ಸೆ ಮಾಡಿದರೂ ತಾತ್ಕಾಲಿಕ ಉಪಶಮನ ಮಾತ್ರ ಆಗುವ ಈ ಖಾಯಿಲೆಗೆ ಶಾಶ್ವತ ಪರಿಹಾರ ಕೊಡುವಲ್ಲಿ ಈ ಔಷಧಿ ಸಹಾಯಕ. ಇದಕ್ಕೆ ಖರ್ಚು ಇಲ್ಲ. ಮನೆಯಲ್ಲಿ  ನಾವೇ ತಯಾರಿಸಿಕೊಳ್ಳಬಹುದು. ಸಕ್ಕರೆ ಖಾಯಿಲೆ ಬರುವುದು ರಕ್ತದಲ್ಲಿ ಇನ್ಸುಲಿನ್ ಎಂಬ ಹಾರ್ಮೋನ್ ನ ಉತ್ಪಾದನೆ ಕಡಿಮೆಯಾಗಿ. ಕೆಲವರಿಗೆ ಎಳೆ ಪ್ರಾಯದಲ್ಲಿ ಈ ಸಮಸ್ಯೆ ಉಂಟಾಗುತ್ತದೆ. ಹೆಚ್ಚಿನವರಿಗೆ 50 ವಯಸ್ಸು ದಾಟಿದ ನಂತರ ಪ್ರಾರಂಭವಾಗುತ್ತದೆ. ಅಪರೂಪವಾಗಿ…

Read more

ಗುಣಮಟ್ಟದ ಹಲಸು ಪಡೆಯುವ ವಿಧಾನ.

ಹಲಸಿನ ಮರದಲ್ಲಿ ಮಿಡಿ ಕಾಯಿಗಳು ಬಿಡಲು ಪ್ರಾರಂಭವಾಗಿವೆ. ಇನ್ನು ಬರುವ ಚಳಿ, ಒಣ ಹವೆಯಿಂದ ಇನ್ನೂ ಸ್ವಲ್ಪ ಕಾಯಿ ಬಿಡಬಹುದು. ಬಿಟ್ಟ ಎಲ್ಲಾ ಕಾಯಿಗಳನ್ನೂ ಉಳಿಸಬೇಡಿ. ಒಂದು ಮರಕ್ಕೆ  ಇಂತಿಷ್ಟು ಎಂಬ ಲೆಕ್ಕಾಚಾರದಲ್ಲಿ ಕಾಯಿ ಉಳಿಸಿಕೊಂಡರೆ ಗುಣಮಟ್ಟದ ಹಲಸಿನ ಕಾಯಿ ಪಡೆಯಬಹುದು. ಹಲಸಿನ ಮರದಲ್ಲಿ ಮಿಡಿಗಳು ಸಾಕಷ್ಟು ಬಿಟ್ಟರೆ  ಎಲ್ಲಾ ಕಾಯಿಗಳೂ ಒಳ್ಳೆಯ ರೀತಿಯಲ್ಲಿ ಬೆಳೆವಣಿಗೆ ಹೊಂದುವುದಿಲ್ಲ. ಕೆಲವು ಚಪ್ಪಟೆಯಾಗುತ್ತದೆ. ಕೆಲವು ಮಾತ್ರ ಪುಷ್ಟಿಯಾಗುತ್ತದೆ. ಚಪ್ಪಟೆ ಇಲ್ಲದ ಎಲ್ಲಾ ಭಾಗವೂ ಏಕಪ್ರಕಾರವಾಗಿ ಉಬ್ಬಿರುವ ಹಲಸಿನ ಕಾಯಿಯಲ್ಲಿ ಸೊಳೆಗಳು…

Read more
error: Content is protected !!