ಎಷ್ಟು ಸಮಯದ ತನಕ ಮಳೆ ಬರುವ ಮುನ್ಸೂಚನೆ ಇದೆ?
ಜಾಗತಿಕ ತಾಪಮಾನದ ವ್ಯತ್ಯಯದಿಂದಾಗಿ ಮಳೆಯ ಲಯ ತಪ್ಪಿದೆ. ಅಕಾಲದಲ್ಲಿ ಮಳೆಯಾಗುವುದು, ಹಂಚಿಕೆ ವ್ಯತ್ಯಾಸವಾಗುವುದು ಕಳೆದ ಮೂರು ವರ್ಷಗಳಿಂದ ನೊಡುತ್ತಿದ್ದೇವೆ. ಕಳೆದ ವರ್ಷ ಡಿಸೆಂಬರ್ ತನಕವೂ ಮಳೆ ಬಂದು ಕೃಷಿಕರಿಗೆ ಬಹಳಷ್ಟು ತೊಂದರೆ ಅಗಿದೆ. ಈ ವರ್ಷ 2022 ಜುಲೈ ತಿಂಗಳು, ಇಡೀ ಋತುಮಾನದಲ್ಲಿ ಬರುವ ಮಳೆಯ ¾ ಪ್ರಮಾಣದಷ್ಟು ಈಗಾಗಲೇ ಬಂದಾಗಿದೆ. ಇನ್ನು ಮಳೆ ಕಡಿಮೆಯಾಗಬಹುದೇ? ಎಷ್ಟು ಸಮಯದ ತನಕ ಮುನ್ಸೂಚನೆ ಇದೆ ಎಂಬುದರ ಮಾಹಿತಿ ಇಲ್ಲಿದೆ. ಮಳೆಯ ಪ್ರಮಾಣ ಭಾರೀ ಹೆಚ್ಚಳವಾಗಿದೆಯೋ ಅಥವಾ ಹಂಚಿಕೆ ವ್ಯತ್ಯಾಸವಾಗಿದೆಯೋ…
