ವಾಂದಾ ತಂದೀತೇ ಅಡಿಕೆ ಬೆಲೆಗೆ ಕುತ್ತು?.

ಅಡಿಕೆಯ ವ್ಯವಹಾರದಲ್ಲಿ 90% ಕ್ಕೂ ಹೆಚ್ಚು ಮುಂಗಡ ಹಣ ಪಡೆಯದೇ  ನಡೆಯುತ್ತದೆ. ಅಡಿಕೆ ಹೋಗುತ್ತದೆ, ದುಡ್ಡು ಬರುವು  ದು  ನಂತರ. ಮಾರುಕಟ್ಟೆ ಸರಿಯಿಲ್ಲ.  ಸೇಟು ಊರಿಗೆ ಹೋದ ಕಾರಣ ಹಣದ ಅಡಚಣೆ. ಮುಂತಾದ ಮಾತುಗಳನ್ನು ಕೇಳಿದ್ದೀರಲ್ಲಾ. ಅದೇ ಮಾಲು ಕಳುಹಿಸಿ ಅವರಿಂದ ಹಣ ಪಡೆಯುವಾಗ ನಡೆಯುವ ವಾಂದಾ ವ್ಯವಹಾರ. ವಾಂದಾ ಎಂದರೆ ತಕರಾರು. ಮಾಲು ಹೋದ ನಂತರ ತಕರಾರು ಮಾಡುವವರಿಗೆ ಸಾಕಷ್ಟು ಅವಕಾಶಗಳಿರುತ್ತವೆ. ಈ ತಕರಾರು ಮಾರುಕಟ್ಟೆಯನ್ನು ಬಹಳ ಅಲ್ಲಾಡಿಸುತ್ತದೆ. ಅದು ಮುಂದೆ ಅಡಿಕೆ ಮಾರುಕಟ್ಟೆ ತೆರೆಯುವ…

Read more
'ಪೂರ್ವ ಶಿಷ್ಟ ಪದ್ದತಿ'ಗಳನ್ನು ಪಾಲಿಸಿದ ಕೃಷಿ

ಮರೆಯಾಗುತ್ತಿದೆ ಕೃಷಿ ಕ್ಷೇತ್ರದ ‘ಪೂರ್ವ ಶಿಷ್ಟ ಪದ್ದತಿ’ಗಳು.

ಪೂರ್ವ ಶಿಷ್ಟ ಪದ್ದತಿ (Customs and Usages) ಎಂದರೆ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ವ್ಯವಸ್ಥೆ. ಇದು  ಕಾನೂನಾತ್ಮಕವಾಗಿಲ್ಲದಿದ್ದರೂ ಇದನ್ನು ಕಾನೂನು ರಕ್ಷಕರು ಅಥವಾ ನ್ಯಾಯಾಲಯ ತಳ್ಳಿ ಹಾಕುವಂತಿಲ್ಲ. ಪೂರ್ವ ಪದ್ದತಿಗಳನ್ನು ಮೀರಿ ಕಾನೂನು ಅಲ್ಲ ಎಂಬುದನ್ನು ಸರ್ವೋಚ್ಚ ನ್ಯಾಯಾಯಲವೂ ಒಪ್ಪಿಕೊಳ್ಳುತ್ತದೆ. ಇವು ಬ್ರಿಟೀಷ್ ಸರಕಾರ ವ್ಯವಸ್ಥೆಯಲ್ಲಿ ಗವರ್ನರ್ ಜನರಲ್ ಗಳು ಕೊಡುತ್ತಿದ್ದ ತೀರ್ಮಾನ. ಇದು ಎಲ್ಲರೂ ಒಪ್ಪಿರುವ ನ್ಯಾಯಸಮ್ಮತವಾದ ಪದ್ದತಿ. ಅನಾದಿ ಕಾಲದಿಂದಲೂ ಇದು ಚಾಲ್ತಿಯಲ್ಲಿತ್ತು. ಇದನ್ನು ಪ್ರತೀಯೊಬ್ಬ ಕೃಷಿಕನೂ ಅನುಸರಿಸಿದ್ದೇ ಆದರೆ ಪರಸ್ಪರ ಜಗಳ, ತಕರಾರು…

Read more
pepper garden

pepper- best method of planting its cuttings.

Pepper planters prefer runner shoots for crop propagation in monsoon commencing season. Here we explain the best method of planting techniques. Pre monsoon period is the ideal time for plant its runner shoots. This is the age old practice followed by our farmers. Rooted plants are the recent development. Direct planting of runner shoot cuttings…

Read more
ಕೆಂಪಡಿಕೆ

ಅಡಿಕೆ ಧಾರಣೆ- ದಿನಾಂಕ 18-09-2021.

ದಿನಾಂಕ 18-09-2021 ರಂದು ರಾಜ್ಯದ ವಿವಿಧ ಅಡಿಕೆ ಬೆಳೆಯುವ ಪ್ರದೇಶಗಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಟೆಂಡರ್ ಆದ ದರ ವಿವರ ಹೀಗಿದೆ. ಕೆಲವು ಕಡೆ ಈ ದಿನ ಟೆಂಡರ್ ನಡೆದಿಲ್ಲ. ಅಲ್ಲಿ ಹಿಂದಿನ ದಿನದ ದರವನ್ನೇ ನಮೂದಿಸಲಾಗಿದೆ. ಊರು ದಿನಾಂಕ   ವಿಧ  ಕನಿಷ್ಟ  ದರ ಗರಿಷ್ಟ ದರ  ಸರಾಸರಿ ದರ ಬಂಟವಾಳ: 18/09/2021, Coca, 7, 10000, 22500, 20000 BANTWALA, 18/09/2021, New Variety, 2, 23500, 49000, 44500 BANTWALA, 18/09/2021, Old Variety,…

Read more
ಕೆಂಪಡಿಕೆ ಧಾರಣೆ 49000 ಕ್ಕೆ ಏರಿದೆ- ಚಾಲಿ ಸಹ ಸಧ್ಯವೇ ಏರುತ್ತದೆ.

ಕೆಂಪಡಿಕೆ ಧಾರಣೆ 49,000 ಕ್ಕೆ ಏರಿದೆ- ಚಾಲಿ ಸಹ ಸಧ್ಯವೇ ಏರುತ್ತದೆ.

ಕೆಂಪಡಿಕೆ ಧಾರಣೆ 49000 ಸಮೀಪಕ್ಕೆ ತಲುಪಿದೆ. ಇನ್ನೂ ಏರಿಕೆಯಾಗಬಹುದು ಎಂಬ ಸುದ್ದಿಗಳಿವೆ. ಕೆಂಪಡಿಕೆ ಏರಿದರೆ ಸಹಜವಾಗಿ ಚಾಲಿಯೂ ಏರಿಕೆಯಾಗಲೇಬೇಕು. ಈಗಾಗಲೇ ಚಾಲಿ ದಾರಣೆ ತುಸು ಏರಲಾರಂಭಿಸಿದೆ. ಇನ್ನೂ ಸ್ವಲ್ಪ ಏರಿಕೆ ಸಾಧ್ಯತೆಗಳಿವೆ. ಉತ್ಪಾದನಾ ಕ್ಷೇತ್ರದಿಂದ ಬೇಡಿಕೆ ಪ್ರಾರಂಭವಾಗಿದೆ. ಧೀರ್ಘ ಕಾಲದವರೆಗೆ ದರ ಇಳಿಕೆ ಹಾದಿಯಲ್ಲಿದ್ದ ಕಾರಣ ಈ ಬಾರಿ ದರ ಏರಿಕೆ ಸ್ವಲ್ಪ ಹೆಚ್ಚು ಸಮಯದ ತನಕ ಮುಂದುವರಿಯಬಹುದು ಎಂಬ ಲೆಕ್ಕಾಚಾರ ಇದೆ. ಕೆಂಪಡಿಕೆ ಮಾರುಕಟ್ಟೆಯಲ್ಲಿ ಖರೀದಿ ಉತ್ಸಾಹ ಇದೆ. ಹಾಗಾಗಿ ದರ ಸ್ವಲ್ಪ ಸ್ವಲ್ಪವೇ ಏರಿಕೆಯಾಗುತ್ತಿದೆ….

Read more

ಎಣ್ಣೆ ತಾಳೆ ಬೆಳೆಗೆ ಮರುಳಾಗದಿರಿ. ಹೇಳುವಷ್ಟು ಸುಲಭದ ಬೆಳೆ ಅಲ್ಲ.

ಸರಕಾರದ ಇಲಾಖೆಗಳು ದೇಶೀಯವಾಗಿ ಖಾದ್ಯ ಎಣ್ಣೆ ಉತ್ಪಾದನೆಗಾಗಿ ನಮ್ಮನ್ನು ಹುರಿದುಂಬಿಸುತ್ತಿವೆ.ಆದರೆ ಎಣ್ಣೆ ತಾಳೆ  ಬೆಳೆ ನಮಗೆಷ್ಟು ಕೈ ಹಿಡಿಯಬಹುದು ಎಂಬುದನ್ನು ಇಲ್ಲಿ ಓದಿ ನಂತರ ನಿರ್ಧರಿಸಿ. ತಾಳೆ ಎಣ್ಣೆ ಎಂಬುದು ಪ್ರಮುಖ ಖಾದ್ಯ ಮತ್ತು ಅಖಾಧ್ಯ ಎಣ್ಣೆ ಮೂಲವಾಗಿದ್ದು, ಇದನ್ನು  ರೈತರು ತಮ್ಮ ಹೊಲದಲ್ಲಿ  ಸಸಿ ನೆಟ್ಟು  ಬೆಳೆಸಿ ಅದರ  ಫಲದಿಂದ ಪಡೆಯಲಾಗುತ್ತದೆ. ಇದು ನಮ್ಮ ದೇಶದ ಮೂಲದ ಬೆಳೆಯಲ್ಲ. ಮಲೇಶಿಯಾ, ಇಂಡೋನೇಶಿಯಾ ಮುಂತಾದ ದೇಶಗಳಲ್ಲಿ ಬೆಳೆಯುತ್ತಿರುವ ಈ ತಾಳೆ ಮರ, ಈಗ ಖಾದ್ಯ ಎಣ್ಣೆ ಸ್ವಾವಲಂಭನೆ …

Read more
ಹೂ ಬಿಟ್ಟದ್ದೆಲ್ಲಾ ಕಾಯಿಯಾಗುವ ಉತ್ತಮ ತರಕಾರಿ ತೊಂಡೆ

ಮಂಗಗಳ ಕಾಟ ಇಲ್ಲದ ಲಾಭದ ತರಕಾರಿ ಬೆಳೆ ಇದು.

ಬಹುತೇಕ ತರಕಾರಿಗಳಲ್ಲಿ ಗಂಡು ಹೂವು, ಹೆಣ್ಣು ಹೂವು ಗಳಿರುತ್ತವೆ. ಗಂಡಿನ ಮೂಲಕ ಪರಾಗಸ್ಪರ್ಶ ಆಗಿ ಕಾಯಿ ಕಚ್ಚಬೇಕು. ಆದರೆ ತೊಂಡೆ ಕಾಯಿ ಹಾಗಲ್ಲ. ಎಲ್ಲಾ ಹೂವುಗಳೂ ಕಾಯಿಯಾಗುತ್ತದೆ. ತೊಂಡೆ ಕಾಯಿ ಬೇಡಿಕೆಯ ತರಕಾರಿ. ರಾಜ್ಯದ ಎಲ್ಲಾ ಕಡೆ  ಬೆಳೆಸಬಹುದು. ಒಮ್ಮೆ ತೊಂಡೆ ಬೆಳೆಸಿದವರು ಮತ್ತೆ  ಆ ಕೃಷಿ ಬಿಡುವುದಿಲ್ಲ. ಮಳೆ ಕಡಿಮೆ ಇರುವ ಕಡೆ ಇದನ್ನು ವರ್ಷದುದ್ದಕ್ಕೂ ಬೆಳೆಸಬಹುದು.  ಮಳೆ ಹೆಚ್ಚು ಇರುವಲ್ಲಿ ನವೆಂಬರ್ ತಿಂಗಳ ನಂತರ ಜೂನ್  ತನಕ ಬೆಳೆ  ಬೆಳೆಸಬಹುದು. 100 ಚದರ ಅಡಿಯ…

Read more
ಸರ್ಕಾರೀ ಗೊಬ್ಬರಗಳು

ಸರ್ಕಾರೀ ಗೊಬ್ಬರಗಳನ್ನು ಬಳಸಿ- 75% ದಷ್ಟು ಗೊಬ್ಬರದ ಖರ್ಚು ಉಳಿಸಿ.

 ಭಾರತ ಸರಕಾರ ರೈತರಿಗೆ ಸಹಾಯಧನದ ಮೂಲಕ ಒದಗಿಸುವ ಸರ್ಕಾರೀ ಗೊಬ್ಬರವನ್ನೇ ಬಳಸಿದರೆ ರೈತರ ಗೊಬ್ಬರದ ಖರ್ಚು 75% ಕ್ಕೂ ಹೆಚ್ಚು ಉಳಿತಾಯವಾಗುತ್ತದೆ.  ಇತ್ತೀಚೆಗೆ ಅಡಿಕೆ ತೋಟಕ್ಕೂ ಸಾಲ್ಯುಬಲ್ ಗೊಬ್ಬರಗಳನ್ನು ಕೊಟ್ಟು ಬೆಳೆಸುವ ಕ್ರೇಜಿ ಪ್ರಾರಂಭವಾಗಿದೆ.  ಇದಕ್ಕಾಗಿ ಸಾಕಷ್ಟು ಖರ್ಚುಗಳನ್ನೂ ಮಾಡಿ ದುಬಾರಿ ಬೆಲೆಯ ಸಾಲ್ಯುಬಲ್ ಗೊಬ್ಬರಗಳನ್ನು ಖರೀದಿಸಿ ತಂದು ಬಳಸಲಾರಂಭಿಸಿದ್ದಾರೆ. ಅಡಿಕೆಗೆ ಬೆಲೆ ಬಂದಿದೆ ಎಂದೋ ಕೈಯಲ್ಲಿ ದುಡ್ಡು ತುಳುಕುವ ಕಾರಣದಿಂದಲೋ ಜನ ಹೊಸ ಹೊಸತಕ್ಕೆ ಬೇಗ ಮರುಳಾಗುತ್ತಿದ್ದಾರೆ.ಧೀರ್ಘಾವಧಿ ಬೆಳೆಗಳಿಗೆ ದಿನಕ್ಕೊಮ್ಮೆ, ವಾರಕ್ಕೊಮ್ಮೆ ಗೊಬ್ಬರ ಕೊಡಬೇಕಾದ ಅಗತ್ಯ…

Read more
pruned plant and yield

ಸೀಬೆ ಬೆಳೆಯಲ್ಲಿ ಅಧಿಕ ಇಳುವರಿಗೆ ಪ್ರೂನಿಂಗ್ ಮಾಡಿ.

ಹಣ್ಣಿನ ಸಸ್ಯಗಳಿಗೆ  ಟೊಂಗೆ ಪ್ರೂನಿಂಗ್  ಮಾಡುವುದರಿಂದ ಇಳುವರಿ ಹೆಚ್ಚಳವಾಗುತ್ತದೆ. ದ್ರಾಕ್ಷಿ , ದಾಳಿಂಬೆ, ಅಂಜೂರ ಮುಂತಾದ ಬೆಳೆಗಳನ್ನು ಬೆಳೆಸುವ ರೈತರು ಇದನ್ನು ಹಿಂದಿನಿಂದಲೂ ಅನುಸರಿಸುತ್ತಾ ಬಂದಿದ್ದಾರೆ. ಈಗ ಮಾವು, ಗೇರು, ಸೀತಾಫಲ, ಸೀಬೆ ಮುಂತಾದ ಬೆಳೆಗಳನ್ನು ಬೆಳೆಸುವವರೂ ಪ್ರೂನಿಂಗ್ ಮಾಡಿ ಇಳುವರಿ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಯಾಕೆ ಸೀಬೆಗೆ ಪ್ರೂನಿಂಗ್: ಫಲ ಬಿಡುವ ಹಣ್ಣು ಹಂಪಲಿನ ಸಸ್ಯಗಳನ್ನು  ಅದರಷ್ಟಕ್ಕೇ  ಬೆಳೆಯಲು ಬಿಟ್ಟರೆ ಅದರಲ್ಲಿ ಸಸ್ಯ ಬೆಳವಣಿಗೆಯೇ ಹೆಚ್ಚಳವಾಗುತ್ತದೆ. ಸಸ್ಯ ಬೆಳವಣಿಗೆಯನ್ನು ಟೊಂಗೆ ಸವರುವ ಮೂಲಕ ನಿಯಂತ್ರಿಸಿದಾಗ ಸಸ್ಯ ಬೆಳವಣಿಗೆಗೆ ಒಮ್ಮೆ…

Read more
Wilt damage

ಬದನೆಯ ಕಾಯಿ ಕೊಳೆಯಲು ಕಾರಣ ಮತ್ತು ಪರಿಹಾರ.

ಬದನೆ ಬೆಳೆಯುವವರು ಎದುರಿಸುತ್ತಿರುವ ಕಾಯಿ ಕೊಳೆಯುವ ಸಮಸ್ಯೆ ಒಂದು ರೋಗವಾಗಿದ್ದು, ಇದಕ್ಕೆ ಸಮರ್ಪಕ ಪರಿಹಾರ ನೈರ್ಮಲ್ಯ ಮಾತ್ರ. ಬದನೆ ಬೆಳೆಗಾರರ ಹೊಲದಲ್ಲಿ ನೋಡಿದರೆ ಕೊಯಿದ ಬದನೆಯ ಅರ್ಧ ಪಾಲು ಹೊಲದ ಮೂಲೆಯಲ್ಲಿ ಬಿಸಾಡಿದ್ದು ಸಿಗುತ್ತದೆ. ಬದನೆ ಎಲ್ಲಿ ಬೆಳೆದರೂ ಪರಿಸ್ಥಿತಿ ಹೀಗೆಯೇ. ಇದು ಒಂದು ಸೊರಗು ರೋಗ.  ಇದಕ್ಕೆ ಬೇಸಾಯ ಪದ್ದತಿಯಲ್ಲಿ ಮಾರ್ಪಾಡು ಮತ್ತು ನೈರ್ಮಲ್ಯ ಮಾತ್ರ ಸೂಕ್ತ ಪರಿಹಾರ. ಬದನೆ  ಬೆಳೆ ಎಷ್ಟು ಇಳುವರಿ ಬಂದರೂ  ಬೆಳೆಗಾರರಿಗೆ ಸಿಗುವುದು ಅರ್ಧ ಮಾತ್ರ. ಉಳಿದವು ಕೊಳೆಯುತ್ತದೆ. ಇತ್ತೀಚಿನ…

Read more
error: Content is protected !!