ರಾಸಿ ಅಡಿಕೆ ರಾಶಿ

ಈಗ ಚಾಲಿ – ಮುಂದೆ ಕೆಂಪು – ಅಡಿಕೆ ಮಾರುಕಟ್ಟೆ ಸ್ಥಿತಿ. 26/11/2021 ಶುಕ್ರವಾರದ ಧಾರಣೆ.

ಚಾಲಿ ಅಡಿಕೆಗೆ ಭಾರೀ ಬೇಡಿಕೆ ಉಂಟಾಗಿದ್ದು, ಇದರ ಮುನ್ಸೂಚನೆ ಶಿರಸಿ, ಸಿದ್ದಾಪುರ, ಸಾಗರ ಮಾರುಕಟ್ಟೆಯ ಮೂಲಕ ಕಾಣಿಸುತ್ತಿದೆ. ಇಲ್ಲಿನ ಅಡಿಕೆಗೆ ದರ ಹೆಚ್ಚಳವಾದರೆ ಸಧ್ಯವೇ ಉಳಿದೆದೆ ದರ ಏರುವುದು ಹಿಂದಿನಿಂದಲೂ ಬಂದ ವಾಡಿಕೆ. ಇಂದು ಶಿವಮೊಗ್ಗ, ಉತ್ತರಕನ್ನಡದ ಮಾರುಕಟ್ಟೆಯಲ್ಲಿ ಚಾಲಿ ಕ್ವಿಂಟಾಲಿಗೆ  51000 ರೂ.ತಲುಪಿದೆ. ಕರಾವಳಿಯಲ್ಲೂ ಸಧ್ಯವೇ 53,000 ದಾಟುವ ಮುನ್ಸೂಚನೆ ಕಾಣಿಸುತ್ತಿದೆ. ಮಾರುಕಟ್ಟೆಯಲ್ಲಿ ಚಾಲಿ ಅಡಿಕೆ ಕೊರತೆ ಇದೆ. ಈ ವರ್ಷ ದರ ಏರಿಕೆಯಲ್ಲೇ ಇದ್ದ ಕಾರಣ ಹಾಗೆಯೇ ಅನಿಶ್ಚಿತತೆ ವಾತಾವರಣ ಇದ್ದ ಕಾರಣ  ಬಹುತೇಕ…

Read more
ಹೂವು ಬಿಟ್ಟ ಮಾವಿನ ಮರ

ಮಾವಿನ ಹೂವು ಉದುರದಂತೆ ರಕ್ಷಿಸುವ ವಿಧಾನ.

ಈ ವರ್ಷ ಮಾವಿನ ಮರಗಳೆಲ್ಲಾ ಹೂವು  ಬಿಟ್ಟಿವೆ. ಎಲ್ಲಾ ಹೂವು ಕಾಯಿಕಚ್ಚಿ ಕಾಯಿಯಾದರೆ ಮಾವಿನ ಮಾರುಕಟ್ಟೆಯೇ ಸಾಕಾಗದು. ಆದರೆ ಬಹುತೇಕ ಮಾವಿನ ಹೂವು ಉಳಿಯುವುದಿಲ್ಲ.  ರಕ್ಷಿಸಲು ಕೆಲವು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಮಾವಿನ ಮರದಲ್ಲಿ ಹೂ ಬಿಡುವ ಹಂತ ಬಹಳ ನಿರ್ಣಾಯಕ ಹಂತವಾಗಿದ್ದು, ದೊಡ್ಡ ದೊಡ್ಡ ಬೆಳೆಗಾರರರು  ಹೂ ಉಳಿದು ಕಾಯಿ ಹೆಚ್ಚಲು ಗರಿಷ್ಟ ಸಿಂಪರಣೆ ಮಾಡುತ್ತಾರೆ.ವಾಣಿಜ್ಯಿಕ ಮಾವು ಬೆಳೆಗೆ ಇದೆಲ್ಲಾ ಸರಿ. ಸಣ್ಣ ಸಣ್ಣ ಹಿತ್ತಲಿನ ಹಣ್ಣು ಹಂಪಲು ಮರವುಳ್ಳವರು ಹೂವು ಬಿಟ್ಟದ್ದನ್ನು ರಕ್ಷಿಸಿಕೊಳ್ಳುವ  ಉಪಾಯ…

Read more
ಜಂಬಿಟ್ಟಿಗೆ ಮಣ್ಣು

ಈ ಮಣ್ಣು ಬೆಳೆಯ ಗುಣಮಟ್ಟ ಹೆಚ್ಚಿಸುತ್ತದೆ. ಯಾಕೆ?

ಮಣ್ಣಿನ ಗುಣ ಎಂಬುದು ನಮಗೆಲ್ಲಾ ಗೊತ್ತಿರುವ ಸಂಗತಿ. ಮಣ್ಣಿನ ಗುಣ ಚೆನ್ನಾಗಿದ್ದರೆ ಕೃಷಿ ಲಾಭದಾಯಕವಾಗುತ್ತದೆ. ನಾವು ಬೆಳೆಯುವ ಬೆಳೆಯ ಫಸಲಿಗೆ ಗುಣಮಟ್ಟ ಬರುತ್ತದೆ.  ಮಣ್ಣು ಎಂಬುದು ಶಿಲಾ ಶಿಥಿಲತೆಯಿಂದ ಆದ ವಸ್ತು. ಶಿಲೆಯಲ್ಲಿರುವ ಖನಿಜಗಳು,  ಸಸ್ಯ , ಪ್ರಾಣಿಗಳ ಕಳಿಯುವಿಕೆಯಿಂದಾದ ಸಾವಯವ ವಸ್ತುಗಳು ಸೇರಿ, ಅದು ಬೇರೆ ಬೇರೆ ರೂಪಾಂತರ ಹೊಂದಿವೆ. ಒಂದೊಂದು ಕಡೆಯ ಮಣ್ಣು ಒಂದೊಂದು ರೀತಿಯಲ್ಲಿ ಇರುತ್ತವೆ. ಇದಕ್ಕೆಲ್ಲಾ ಕಾರಣ ಅಲ್ಲಿ ಆದ ಶಿಲೆ ಮತ್ತು ಅದರ ರೂಪಾಂತರ. ಕರಾವಳಿಯ ಮಣ್ಣು, ಮಲೆನಾಡಿನ ಮಣ್ಣು,…

Read more
ಹಳೆ ಆಡಿಕೆ

ಹಳೆ ಅಡಿಕೆ- ಹೊಸ ಅಡಿಕೆ ಬೆಲೆ ವ್ಯತ್ಯಾಸ ರೂ.100 ಯಾಕೆ?

ಅಡಿಕೆ ಹಳೆಯದಾದರೆ ಅದಕ್ಕೆ ವಾರ್ಷಿಕ ಶೇ.25 ರ ಬಡ್ಡಿ ಬರುತ್ತದೆ ಎಂಬುದು ಈ ವರ್ಷದ  ಧಾರಣೆಯಲ್ಲಿ ಮನವರಿಯಾಗಿದೆ. ದರ ಹೀಗೇ ಉಳಿದರೆ ಮುಂದೆ ಬೆಳೆಗಾರರು ಯಾವುದಾದರೂ ಬ್ಯಾಂಕ್ ನಲಿ ಸಾಲ ಮಾಡಿ ಅದರ ಬಡ್ಡಿ ಕಟ್ಟಿದರೂ ಹೊಸ ಅಡಿಕೆ ಮಾರಾಟ ಮಾಡಬೇಕಾಗಿಲ್ಲ. ಹೊಸ ಅಡಿಕೆ ಮುಂದಿನ ಫಸಲು ಬರುವ ವರೆಗೆ ಉಳಿಸಿಕೊಂಡರೆ ಅದಕ್ಕೆ ಕಿಲೋ ಮೇಲೆ 100 ರೂ. ಹೆಚ್ಚು ಸಿಗುತ್ತದೆ. ಈ ತನಕ ಹಳೆ ಅಡಿಕೆಗೂ ಹೊಸ ಅಡಿಕೆಗೂ ವ್ಯತ್ಯಾಸ ರೂ. 30-40 ಇರುತ್ತಿತ್ತು.  ಆದರೆ…

Read more
sprinkler installation

ಸ್ಪ್ರಿಂಕ್ಲರ್ ನೀರಾವರಿ ಮಾಡುವವರು ತಿಳಿಯಬೇಕಾದ ಮಾಹಿತಿ.

ಬಹುತೇಕ ಕರಾವಳಿ ಮಲೆನಾಡಿನ ಅಡಿಕೆ ತೋಟದ ಬೆಳೆಗಾರರ ಮೊದಲ ಆಯ್ಕೆ ಸ್ಪ್ರಿಂಕ್ಲರ್. ಈ  ವ್ಯವಸ್ಥೆ ಹೇಗಿದ್ದರೆ ಉತ್ತಮ ಇಲ್ಲಿದೆ ಮಾಹಿತಿ. ಸ್ಪ್ರಿಂಕ್ಲರ್ ನೀರಾವರಿ ಎಂದರೆ ಹೇಳಿದಷ್ಟು ಸರಳ ಅಲ್ಲ. ಈ ನೀರಾವರಿ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಿದರೆ ಮಾತ್ರ ಅದರಲ್ಲಿ ಫಲ.ಹೆಸರೇ ಹೇಳುವಂತೆ ನೀರು ಮಳೆಯಂತೆ ಎಲ್ಲಾ ಕಡೆಗೂ ಸಿಂಚನವಾಗಬೇಕು. ಎಲ್ಲಾ ಭಾಗವೂ ಒದ್ದೆಯಾಗಬೇಕು. ಹೀಗೆ ಆಗಬೇಕಿದ್ದರೆ ಅದಕ್ಕೂ ಒಂದು ಡಿಸೈನ್ ಎಂಬುದು ಇದೆ. ಆ ಡಿಸೈನ್ ಪ್ರಕಾರ ಮಾಡಿದ್ದೇ ಆದರೆ ಸ್ರಿಂಕ್ಲರ್ ನೀರಾವರಿ ಉತ್ತಮ ಫಲ ಕೊಡುತ್ತದೆ.  ಹರಿ…

Read more

ಅಡಿಕೆ ಮರಗಳು ಹೀಗೆ ಯಾಕೆ ಆಗುತ್ತವೆ?

ಸಹಜ ಸ್ಥಿತಿಯಲ್ಲಿ ಅಡಿಕೆ ಮರದ ಗಂಟುಗಳು  ಒಂದೇ ನೇರಕ್ಕೆ  ಸುತ್ತು ಬಂದಿರಬೇಕು.ಆದರೆ  ಕೆಲವು ತೊಟಗಳಲ್ಲಿ ಕೆಲವು ಮರಗಳಲ್ಲಿ ಅದರ ಗಂಟು ವಿಚಿತ್ರವಾಗಿ ಗರಗಸದ ತರಹ ಬೆಳೆಯುತ್ತವೆ. ಇದ್ದು ರೋಗವೋ ಎಂಬ ಸಂದೇಹ ರೈತರಲ್ಲಿದೆ. ಇದು ರೋಗವಲ್ಲ.  ಪೊಷಕಾಂಶದ ಅಸಮತೋಲನ. ಗರಗಸ ಗಂಟು ಹೇಗೆ ಆಗುತ್ತದೆ? ಅದು 2005 ನೇ ಇಸವಿ. ಬಂಟ್ವಾಳ ತಾಲೂಕು, ಕಾಅವಳ ಮುಡೂರು ಗ್ರಾಮದ ಕೆದ್ದಳಿಕೆ ಗಣೇಶ್ ಭಟ್ ಇವರ ತೋಟಕ್ಕೆ  ಹೋಗಿದ್ದೆ. ಆಗ ಅವರು ತಮ್ಮ ಅಡಿಕೆ ಮರಗಳಿಗೆ ಕೊಡುತ್ತಿದ್ದ ಗೊಬ್ಬರ ಹರಳಿನ ಹಿಂಡಿ. ಹನಿ…

Read more
ಕೀಟ-ರೋಗನಾಶಕ ಸಿಂಪರಣೆ

ಕೀಟನಾಶಕಗಳು ಮೈಗೆ ಕೈಗೆ ತಾಗಿದರೆ ಏನು ಮಾಡಬೇಕು?

ಬೆಳೆ ರಕ್ಷಣೆಯಲ್ಲಿ ರೈತರು ಕೀಟನಾಶಕಗಳನ್ನು ಬಳಸಿದಾಗ ಕೆಲವೊಮ್ಮೆ ಅಪ್ಪಿ ತಪ್ಪಿ ಅದು ಚರ್ಮ, ಕಣ್ಣು, ಬಾಯಿ ಮುಂತಾದ ಭಾಗಗಳಿಗೆ ತಾಗುತ್ತದೆ. ಅದರ ವಾಸನೆ ಉಸಿರಾಟದ ಮೂಲಕ ದೇಹದ ಒಳಗೆ ಸೇರುತ್ತದೆ.  ಹೀಗಾದಾಗ ಅದನ್ನು ನಿರ್ಲಕ್ಷ್ಯ ಮಾಡಬಾರದು.ಪ್ರಥಮ ಚಿಕಿತ್ಸೆ ಅಥವಾ ಹೆಚ್ಚು ತೊಂದರೆಗಳಿದ್ದರೆ ತಜ್ಞ ವೈದ್ಯರಲ್ಲಿಗೆ ಹೋಗಿ ಚಿಕಿತ್ಸೆ ಮಾಡಿಸಿಕೊಳ್ಳಬೇಕು. ಇದು ನಮ್ಮ ದೇಹವನ್ನು ನಿಧಾನ ವಿಷಕ್ಕೆ ಬಲಿಯಾಗುವಂತೆ ಮಾಡುತ್ತದೆ.  ರೈತರ ಮತ್ತು ಕೃಷಿಕಾರ್ಮಿಕರು ಕೀಟನಾಶಕಗಳನ್ನು ಮತ್ತು ಸಿಂಪರಣೆ ಯಂತ್ರಗಳನ್ನು ಸಮರ್ಪಕವಾಗಿ ಉಪಯೋಗ ಮಾಡಿದಾಗ ಮಾತ್ರ ಅದು ಸುರಕ್ಷಿತ….

Read more
good yielded plant

ಒರಿಜಿನಲ್ ಮಂಗಳ ಅಡಿಕೆ ಮರ ಹೀಗಿರುತ್ತದೆ.

ಮಂಗಳ ಅಡಿಕೆ ತಳಿ ಪ್ರಸ್ತುತ ಅಡಿಕೆ ಬೆಳೆಗಾರರ ಹಿತ ದೃಷ್ಟಿಯಲ್ಲಿ ಪರಿಚಯಿಸಲಾದ ತಳಿ ಎಂದೇ ಹೇಳಬಹುದು. 30  ವರ್ಷವಾದರೂ 35-40 ಅಡಿ ಎತ್ತರ. ಹೆಚ್ಚು ಪೋಷಕಾಂಶ ಕೊಟ್ಟಷ್ಟೂ ಹೆಚ್ಚು ಇಳುವರಿ. ಮರದಲ್ಲಿ 4-5 ಭರ್ತಿ ಕಾಯಿಗಳ ಗೊನೆ.  ಅಡಿಕೆ ಬೆಳೆಯುವವರ ಅಂಗಳದ ತುಂಬಾ ಅಡಿಕೆ ಹರಡಿದ ಸಮೃದ್ಧಿ ಉಂಟಾದುದೇ ಈ ತಳಿ ಬಂದ ನಂತರ. ಆದರೆ ಈ ಮೂಲ ತಳಿ ಈಗ ಭಾರೀ ಅಪರೂಪವಾಗಿದೆ.  ಬೆಳ್ತಂಗಡಿ ತಾಲೂಕಿನ ನಿಟ್ಟಡೆ ಗ್ರಾಮದ ಕುಬಳಬೆಟ್ಟು ಗುತ್ತುವಿನ ಪ್ರಗತಿಪರ ಕೃಷಿಕರಾಗಿದ್ದ ದಿವಂಗತ…

Read more
ಧೀರ್ಘ ಆಯುಷ್ಯ – ಸ್ವಸ್ಥ ಆರೋಗ್ಯಬೇಕೇ? ಹಾಸು ಸಾಕಣೆ ಮಾಡಿ

ದೀರ್ಘ ಆಯುಷ್ಯ – ಸ್ವಸ್ಥ ಆರೋಗ್ಯಬೇಕೇ? ಹಸು ಸಾಕಣೆ ಮಾಡಿ.

ಇಂದಿನ ಹೊಸ ತಲೆಮಾರು ಆರೋಗ್ಯ – ಆಯುಷ್ಯಕ್ಕಾಗಿ ಎಷ್ಟು ಬೇಕಾದರೂ ಖರ್ಚು ಮಾಡುತ್ತಾರೆ. ಆದರೆ ನಮ್ಮ ಹಿರಿಯರು ಖರ್ಚು ಮಾಡಿ ಆರೋಗ್ಯವಂತರಾಗಿರಲಿಲ್ಲ. ಅವರ ದೈನಂದಿನ ಕೆಲಸ ಕಾರ್ಯಗಳು ಅವರನ್ನು ಆರೋಗ್ಯವಾಗಿಟ್ಟಿದೆ. ಅದರಲ್ಲಿ ಒಂದು ಹಸು ಸಾಕಾಣಿಕೆ. ಹಸು ಸಾಕಾಣಿಕೆಯಿಂದ ಪ್ರತ್ಯಕ್ಷವಾಗಿಯೂ ಆರೋಗ್ಯ, ಆಯುಸ್ಸು ವೃದ್ಧಿಸುತ್ತದೆ. ಪರೋಕ್ಷವಾಗಿಯೂ ವೃದ್ಧಿಸುತ್ತದೆ. ಇದು ನಿಜವೋ, ಅಲ್ಲವೋ ಎಂಬುದನ್ನು  ಹತ್ತಾರು ಕಡೆ ನೋಡಿ, ತಿಳಿದು ಎಲ್ಲರೂ  ಗಮನಿಸಬಹುದು. ಹಸು ಸಾಕಾಣಿಕೆ ಎಲ್ಲರಿಗೂ ಮಾಡಲಿಕ್ಕೆ ಸಾಧ್ಯವಿಲ್ಲ. ಪೇಟೆ ಪಟ್ಟಣದಲ್ಲಿರುವವರು ಹಸು ಸಾಕುವುದು ಅಸಾಧ್ಯ. ಆದರೆ…

Read more
ಗೇರು ಮರಕ್ಕೆ ಗೊಬ್ಬರ ಕೊಡುವ ವಿಧಾನ

ಗೇರು – ಗೊಬ್ಬರ ಕೊಟ್ಟರೆ ಬಂಪರ್ ಇಳುವರಿ ಪಡೆಯಬಹುದು.

ಗೇರು ಬೆಳೆಗೆ ವರ್ಷದಲ್ಲಿ 3 ತಿಂಗಳು ಮಾತ್ರ ಕೆಲಸ, ನೀರಾವರಿ ಬೇಡ. ಉತ್ತಮವಾಗಿ ಗೊಬ್ಬರ ಕೊಟ್ಟು ನಿಗಾ ವಹಿಸಿ ಬೆಳೆದರೆ 5-6  ವರ್ಷದ ಮರದಲ್ಲಿ 10 ಕಿಲೋ ತನಕ ಇಳುವರಿ ಪಡೆಯಬಹುದು. ಕನಿಷ್ಟ 1000 ರೂ ಆದಾಯಕ್ಕೆ ತೊಂದರೆ ಇಲ್ಲ ಎಂಬ ಕಾರಣಕ್ಕೆ ರೈತರು ತಮ್ಮಲ್ಲಿ ಖಾಲಿ ಇರುವ ಸ್ಥಳದಲ್ಲಿ ಗೇರು ಬೆಳೆ ಬೆಳೆಸಿದ್ದಾರೆ. ಬರೇ ನೆಟ್ಟರೆ ಸಾಲದು ಅದಕ್ಕೆ ಅಗತ್ಯ ಪೊಷಕಗಳನ್ನು ಕಾಲ ಕಾಲಕ್ಕೆ ಕೊಟ್ಟರೆ ಉತ್ತಮ ಇಳುವರಿ ಪಡೆಯಲು ಸಾಧ್ಯ.     ಗೇರು ಮರ ಚೆನ್ನಾಗಿ…

Read more
error: Content is protected !!