ಸಗಣಿ ಮಾರುವ ಕನಸು ಬೇಡ- ಇದು ಅಶುಭ.
ರಾಜಸ್ಥಾನದ ಜೈಪುರ ದಿಂದ ಅರಬ್ ರಾಷ್ಟ್ರಕ್ಕೆ (ಕುವೆಟ್) ಸಗಣಿ ರಪ್ತು ಆದದ್ದನ್ನು ನಾವು ಹಾಡಿ ಹೊಗಳುತ್ತೇವೆ.ನಮ್ಮ ದನಗಳ ಸಗಣಿಗೆ ಇಷ್ಟು ಮಹತ್ವ ಇದೆ ಎಂದು ಬೀಗುತ್ತೇವೆ. ಕೆಲವರು ಸಗಣಿ ಮಾರಾಟದ ಕನಸಿನಲ್ಲೂ ಇರಬಹುದು. ಸಗಣಿ ಮಾರಾಟ ಮಾಡುವುದಿದ್ದರೆ ಅದಕ್ಕೆ ಅರಬ್ ರಾಷ್ಟ್ರಗಳೇ ಆಗಬೇಕಾಗಿಲ್ಲ. ಭಾರತದ ಒಳಗೆಯೂ ಸಾಕಷ್ಟು ಬೇಡಿಕೆ ಇದೆ. ಬೆಲೆಯೂ ಇದೆ. ಕೃಷಿ ಪ್ರಧಾನವಾದ ನಮ್ಮ ದೇಶಕ್ಕೆ ಕೃಷಿಯ ಅವಿಭಾಜ್ಯ ಅಂಗವಾದ ಸಗಣಿಯನ್ನು ಬೇರೆಯವರಿಗೆ ಮಾರಾಟ ಮಾಡುವುದು ಒಳ್ಳೆಯದಲ್ಲ. ಕೃಷಿ ಮಾಡುವ ಭೂಮಿಯನ್ನು ಹೇಗೆ ಮಾರಾಟ…
