ಜೇಡಗಳನ್ನು ಕೊಲ್ಲದಿರಿ -ಇವು ರೈತರ ಮಿತ್ರರು.
ಜೇಡರ ಬಲೆ ಕಂಡರೆ ಸಾಕು ಕೋಲು ಹಿಡಿದು ಆದನ್ನು ಬಿಡಿಸಿ ಅವುಗಳ ಬದುಕಿನಲ್ಲಿ ಆಟವಾಡುವವರೇ ಹೆಚ್ಚು. ಯಾರ ಹೊಲದಲ್ಲಿ ಇವು ಹೆಚ್ಚಾಗಿ ಬಲೆ ಕಟ್ಟಿ ಇರುತ್ತದೆಯೋ ಅಲ್ಲಿ ಕೀಟಗಳು ಹೆಚ್ಚು ಇವೆ ಎಂದೂ ಅಲ್ಲಿ ಕಡಿಮೆ ವಿಷ ರಾಸಾಯನಿಕ ಬಳಸಲಾಗಿದೆ ಎಂಡು ಹೇಳಬಹುದು. ಮಳೆಗಾಲ ಮುಕ್ತಾಯದ ಸಮಯದಲ್ಲಿ ಬಿಸಿಲು ಇದ್ದಾಗ ನಿಮ್ಮ ಹೊಲದಲ್ಲಿ ಅಸಂಖ್ಯಾತ ಸಣ್ಣ ದೊಡ್ಡ ಜೇಡಗಳು ಬಲೆಕಟ್ಟಿಕೊಂಡು ಕಾಣಬಹುದು. ಕಾರಣ ಈ ಸಮಯದಲ್ಲಿ ಹುಳ ಹುಪ್ಪಟೆಗಳು ಅಧಿಕ ಸಂಖ್ಯೆಯಲ್ಲಿ ಇರುತ್ತವೆ. ಜೇಡಗಳಿಗೆ ಆ ಹುಳ…
