ಕೀಟನಾಶಕ ಸಿಂಪಡಿಸುತ್ತೀರಾ? ಹಾಗಾದರೆ ಸುರಕ್ಷತೆ ಬಗ್ಗೆ ತಿಳಿದುಕೊಂಡಿರಿ

ಕೀಟನಾಶಕ ಸಿಂಪಡಿಸುತ್ತೀರಾ? ಹಾಗಾದರೆ ಸುರಕ್ಷತೆ ಬಗ್ಗೆ ತಿಳಿದುಕೊಂಡಿರಿ.

ಪ್ರತೀಯೊಬ್ಬ ಕೃಷಿಕರೂ ಒಂದಲ್ಲ ಒಂದು ಬೆಳೆಗೆ ಕೀಟನಾಶಕ ಸಿಂಪಡಿಸುತ್ತಾರೆ. ಸಿಂಪಡಿಸುವವರು ಕೀಟನಾಶಕದಿಂದ ಆಗುವ ಯಾವುದೇ ಅನಾಹುತಗಳಿಗೆ ಮೊದಲ ಬಲಿಪಶುಗಳು. ಆದುದರಿಂದ ರೈತರೇ ಮೊದಲು ಜಾಗರೂಕತೆ ವಹಿಸಬೇಕು. ಕೀಟನಾಶದ ಬಳಕೆ ಪ್ರಮಾಣ, ಅದರ ಜೊತೆಗೆ ಕೊಟ್ಟಿರುವ ಹಸ್ತ ಪ್ರತಿ ಇತ್ಯಾದಿಗಳನ್ನು ಸರಿಯಾಗಿ ತಿಳಿದುಕೊಂಡು ಸುರಕ್ಷತೆಯಿಂದ  ಬಳಸಬೇಕು. ರಾಸಾಯನಿಕ ಕೀಟ – ರೋಗ ನಾಶಕ ಗೊಬ್ಬರಗಳ ಬಗ್ಗೆ  ಸಮಾಜ ಅಪಸ್ವರ ಎತ್ತಲು ಕೃಷಿಕರಾದ ನಾವೂ ಕಾರಣರು. ನಮ್ಮ ಕೃಷಿ ಜ್ಞಾನದಲ್ಲಿ ಬೆಳೆ ಪೊಷಕ,ಸಂರಕ್ಷಕಗಳನ್ನು ವೈಜ್ಞಾನಿಕವಾಗಿ ಹೇಗೆ ಬಳಕೆ ಮಾಡಬೇಕೆಂಬುದು ತಿಳಿದಿಲ್ಲ….

Read more
ಕೆಂಪಡಿಕೆ ಚೇತರಿಕೆ ಪ್ರಾರಂಭವಾಗಿದೆ.

ಕೆಂಪಡಿಕೆ ಚೇತರಿಕೆ ಪ್ರಾರಂಭವಾಗಿದೆ- ಚಾಲಿಗೆ ಮುಹೂರ್ತ ಕೂಡಿಲ್ಲ. ರಾಶಿ 50,000 ದಾಟಿದೆ.

ಕೆಂಪಡಿಕೆ ರಾಶಿಗೆ ಶಿರಸಿಯಲ್ಲಿ, ಹೊಸನಗರದಲ್ಲಿ ಇಂದು ಕ್ವಿಂಟಾಲಿಗೆ 50,000 ದಾಟಿದೆ. ಯಲ್ಲಾಪುರದಲ್ಲಿ 54,000 ದಾಟಿದೆ. ಇನ್ನೇನು ಕೆಲವೇ ವಾರಗಳಲ್ಲಿ ಇನ್ನೂ ಚೇತರಿಕೆ ಆಗುವ ಸಂಭವ ಇದೆ ಎನ್ನುತ್ತಾರೆ ಶಿವಮೊಗ್ಗದ ವರ್ತಕರೊಬ್ಬರು. ಚಾಲಿ ದರ ಮಾತ್ರ ಏರಿಲ್ಲ. ಆದರೆ ಮಾರುಕಟ್ಟೆಗೆ ಅಡಿಕೆ ಬಾರದ ಕಾರಣ ಏನಾಗುತ್ತದೆ ವ್ಯಾಪಾರಿ ತಂತ್ರ ಎಂಬುದನ್ನು ಕಾದು ನೋಡಬೇಕಾಗಿದೆ. ಚಾಲಿಗೂ ಬೇಡಿಕೆ ಇದೆ. ಕೆಂಪಡಿಕೆಗೂ ಬೇಡಿಕೆ ಇದೆ. ಆದರೆ ದರ ಏರಿಕೆಗೆ ಸೂಕ್ತ ಮುಹೂರ್ತ ಕೂಡಿ ಬರಬೇಕು. ಬಹಳ ಜನ ಈ ವರ್ಷ ಅಡಿಕೆಗೆ…

Read more
ಕಳೆ ಸೇವಂತಿಗೆ ಸಸ್ಯ

ಕಳೆ ಸೇವಂತಿಗೆ ಸಸ್ಯದ  ಸ್ವಾಭಾವಿಕ ನಿಯಂತ್ರಣ ಸಾಧ್ಯ.

ಯಾವುದೇ ಒಂದು ಸಸ್ಯ  ಶಾಶ್ವತವಾಗಿ ಉಳಿಯುವುದೇ ಇಲ್ಲ. ಸಸ್ಯಗಳನ್ನು  ಭೂಮಿಯಿಂದ ನಿರ್ಮೂಲನೆ ಮಾಡಲು ಮನುಷ್ಯ ಮಾತ್ರರಿಂದ ಸಾಧ್ಯವಿಲ್ಲ. ಮನುಷ್ಯ ಏನಾದರೂ ಮಾಡಿದರೆ ಅದು ತಾತ್ಕಾಲಿಕ ಮಾತ್ರ. ಕಳೆ ನಾಶಕ ಹೊಡೆದರೆ 2 ತಿಂಗಳಲ್ಲಿ ಮತ್ತೆ ಬೆಳೆಯುತ್ತದೆ. ಕೈಯಿಂದ ಕಿತ್ತರೆ ಮತ್ತೆ ಒಂದು ವಾರದಲ್ಲಿ ಚಿಗುರುತ್ತದೆ. ಯಂತ್ರದಿಂದ ಕಿತ್ತರೆ ಸಹ ಹೀಗೆಯೇ. ಆದರೆ ಅನಾದಿ ಕಾಲದಿಂದಲೂ ಒಂದೊಂದು ಕಳೆಯಂತೆ ಬಾಧಿಸುವ ಸಸ್ಯ ಅಥವಾ ಹುಲ್ಲು ಸಸ್ಯ ಹುಟ್ಟಿ ಮೆರೆದು ತನ್ನಷ್ಟಕ್ಕೆ ಅಳಿದು ಮತ್ತೊಂದು ಬಂದು ಚಕ್ರ ಮುಂದುವರಿಯುತ್ತಲೇ ಇದೆ….

Read more
ಲಕ್ಷ ಲೆಕ್ಕದಲ್ಲಿ ಆದಾಯ ಕೊಡುವ ಮರ ಸಾಂಬಾರ

ಖರ್ಚು ಇಲ್ಲದೆ ನಿರಂತರ ಲಕ್ಷ ಲೆಕ್ಕದಲ್ಲಿ ಆದಾಯ ಕೊಡುವ ಮರ ಸಾಂಬಾರ. .

ಕೃಷಿಕರು ಬೆಳೆ ಬೆಳೆದು ಪಡೆಯುವ ಆದಾಯದಲ್ಲಿ  ಖರ್ಚು ಕಳೆದರೆ ನಿವ್ವಳ ಉಳಿಯುವುದು ಕೂಲಿ ಕೆಲಸದವರ ಆದಾಯಕ್ಕಿಂತ ಕಡಿಮೆ. ಅದಕ್ಕೇ ಬಹುತೇಕ ಕೃಷಿಕರು ಖರ್ಚು ವೆಚ್ಚಗಳನ್ನು ಬರೆದಿಡುವುದಿಲ್ಲ. ಸ್ವಲ್ಪ ಸ್ವಲ್ಪವಾದರೂ ಖರ್ಚು ಇಲ್ಲದೆ ಪಡೆಯಬಹುದಾದ ಬೆಳೆಗಳ ಬಗ್ಗೆ  ಕೃಷಿಕರು ಯೋಚಿಸಬೇಕಾಗಿದೆ. ಕೃಷಿಯೊಂದಿಗೆ ಬೆಲೆಬಾಳುವ ಮರಮಟ್ಟನ್ನು ಬೆಳೆಸಿದರೆ  ನಿವೃತ್ತಿಯ ಕಾಲದಲ್ಲಿ ಅದು ಒಂದು ಆಸ್ತಿಯಾಗಬಲ್ಲದು. ಕೆಲವು ವರ್ಷವೂ ವಾಣಿಜ್ಯ ಮಹತ್ವ ಉಳ್ಳ ಮರಮಟ್ಟು ಬೆಳೆದರೆ ಅದರಲ್ಲಿ ಬರುವ ಫಸಲು ವರ್ಷ ವರ್ಷವೂ ಆದಾಯಕೊಡುತ್ತದೆ. ಅಂತಹ ಮರಮಟ್ಟುಗಳಲ್ಲಿ ರಾಂ ಪತ್ರೆ, ಮುರುಗಲ,…

Read more
ಹಾಲು ಕರೆಯುವುದು

ದನಗಳು ಇನ್ನು ಹಾಲು ಕೊಡಲಾರವು!

ಕೆಲ ದಿನಗಳ ಹಿಂದೆ ಶ್ರೀ ರಮೇಶ್ ದೇಲಂಪಾಡಿಯವರು  ಅನಿಲ್ ಕುಮಾರ್ ಜಿ ಅವರ ಒಂದು ಪೋಸ್ಟ್ ಹಂಚಿಕೊಂಡಿದ್ದರು. ದನಗಳು ಹಾಲು ಕೊಡುವುದಿಲ್ಲ ಎಂಬ ವಿಚಾರವನ್ನು ಮಕ್ಕಳಿಗೆ ತಿಳಿಸುವ ಒಂದು ಅರ್ಥಗರ್ಭಿತ ಬರಹ. ಇದಕ್ಕೆ ಪೂರಕವಾಗಿ ಇಂದಿನ ಹಸು ಸಾಕಾಣೆ ಮತ್ತು ಅದನ್ನು ಮುಂದುವರಿಸುವ ಕಷ್ಟದ ಬಗ್ಗೆ ಇಲ್ಲಿ ಕೆಲವು ವಿಚಾರಗಳನ್ನು ಹಂಚಿಕೊಳ್ಳಲಿದ್ದೇವೆ. ಅನಾದಿ ಕಾಲದಿಂದಲೂ ಹಸು ಸಾಕುವುದು ಮಾನವನ ಒಂದು ಉಪಕಸುಬಾಗಿತ್ತು. ಹಸುಗಳನ್ನು ಸಾಕಿದರೆ ಮಾತ್ರ ಅದು ಉಳಿಯುತ್ತದೆ. ಇದು ಅನ್ಯರ ಆಶ್ರಯದಲ್ಲಿ ಬೆಳೆಯಬೇಕಾದ ಪ್ರಾಣಿ. ಅದಕ್ಕಾಗಿಯೇ…

Read more
ಅಡಿಕೆ ಮಾರುಕಟ್ಟೆ ಸ್ಥಿರ

ಅಡಿಕೆ ಮಾರುಕಟ್ಟೆ ಸ್ಥಿರ : ಕುಸಿಯುವ ಭೀತಿ ಇಲ್ಲ.

ಎಪ್ರೀಲ್ ತಿಂಗಳಲ್ಲಿ ಅಡಿಕೆ ಮಾರುಕಟ್ಟೆ ಸ್ವಲ್ಪ ಚೇತರಿಕೆ ಆಗಬಹುದು ಎಂಬ ಊಹನೆ ಇತ್ತು. ಊಹನೆಯಂತೆ ಹಳೆ ಚಾಲಿ ಮತ್ತು ಪಟೋರಾ ಅಡಿಕೆ ದರ ಸ್ವಲ್ಪ ಏರಿತಾದರೂ ಹೊಸ ಅಡಿಕೆ ದರ ಸ್ಥಿರವಾಗಿಮುಂದುವರಿದಿದೆ. ಅಡಿಕೆ ಉತ್ಪಾದನೆ ಜಾಸ್ತಿ ಇದೆ ಎಂಬ ಮಾಹಿತಿಗಳ ನಡುವೆ, ದರ ಕುಸಿಯುವ ಭೀತಿ ಇಲ್ಲ ಎಂಬುದಾಗಿ ವರ್ತಕರ ಹೇಳಿಕೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಧಾರಣೆ ಸ್ವಲ್ಪ ಏರಿಕೆಯಲ್ಲೇ ಇದೆ. ಕಳೆದ ವರ್ಷದಷ್ಟು ಇಳಿಕೆಯ ಅಂಜಿಕೆಯೂ ಇಲ್ಲ. ಒಟ್ಟಿನಲ್ಲಿ ಅಡಿಕೆ ಆಮದು ಆಗುವ…

Read more
ಬೇರು ಹುಳ ಪೀಡಿತ ಅಡಿಕೆ ತೋಟ

ಬೇರು ಹುಳ ನಿಯಂತ್ರಣಕ್ಕೆ ಜೈವಿಕ ನಿಯಂತ್ರಕ –EPN.

ಜೈವಿಕವಾಗಿ ಕೆಲವು ಕೀಟಗಳನ್ನು ನಿಯಂತ್ರಿಸಲು ಸಾಧ್ಯ. ಅದರಲ್ಲಿ ಒಂದು EPN.  ಇದು ಬೇರು ಹುಳಗಳನ್ನೇ ಆಶ್ರಯಿಸಿ ಬದುಕಿ, ಅದನ್ನು ಕೊಲ್ಲುತ್ತದೆ. ಇದರ ಬಳಕೆ ಸುಲಭ. ಇದನ್ನು ರೈತರೇ ಉತ್ಪಾದಿಸುವ ತಂತ್ರಜ್ಝಾನವನ್ನು  CPCRI ಹೇಳಿಕೊಡುತ್ತದೆ. ಅಡಿಕೆ ತೆಂಗು, ಕಬ್ಬು ಬೆಳೆಗಾರರು ಬೇರು ಹುಳದ ಸಮಸ್ಯೆಗೆ ಯಾವುದು ಉತ್ತಮ ಪರಿಹಾರ ಎಂಬ ಹುಡುಕಾಟದಲ್ಲಿದ್ದಾರೆ. ಇತ್ತೀಚೆಗೆ ಈ ಹುಳ  ನಿಯಂತ್ರಣಕ್ಕೆ ಜೈವಿಕ ಪರಿಹಾರ ಉತ್ತಮವಾಗಿ ಕೆಲಸ ಮಾಡುತ್ತದೆ ಎಂದು ತಿಳಿಯಲಾಗಿದೆ. ಇದರಲ್ಲಿ ಒಮ್ದು ಎಂಟಮೋ ಪಥೋಜೆನಿಕ್ ನಮಟೋಡ್ (EPN) Entomopathogenic Nematodes ಇದನ್ನು ಬಳಸಿ…

Read more
ಹುಲುಸಾಗಿ ಬೆಳೆದ ನೀಲಗಿರಿ ಮರಗಳು

ನೀಲಗಿರಿ- ಹಾಳೂ ಅಲ್ಲ – ತೀರಾ ಒಳ್ಳೆಯದೂ ಅಲ್ಲ.

ನೀಲಗಿರಿಯ ನೆಡುತೋಪುಗಳು ಪ್ರಾರಂಭವಾಗಿ ಸುಮಾರು 150  ವರ್ಷ ಕಳೆದಿದೆ. ಈಗ ಪ್ರಾರಂಭವಾಗಿದೆ ಈ ಮರದಿಂದ ನೀರು ಬರಿದಾಗುತ್ತದೆ ಎಂದು. ನಿಜಕ್ಕೂ ನೀರು ಬರಿದಾಗುವುದು ಹೌದೇ?ಅಥವಾ ಇದು ಒಂದು  ಅಪ ಪ್ರಚಾರವೇ ಸ್ವಲ್ಪ ಚರ್ಚೆ ಮಾಡೋಣ. ತಜ್ಜರ ಪ್ರಕಾರ ಇದು  ಹಾಳೂ ಅಲ್ಲ- ತೀರಾ ಒಳ್ಳೆಯದೂ ಅಲ್ಲ. ನೀಲಗಿರಿ ಮರ ಏನು: ನೀಲಗಿರಿ Eucalyptus ಎಂಬ ಮರ ಬಹಳ ವೇಗವಾಗಿ ಬೆಳೆಯುವ ಮರ. ಆಸ್ಟ್ರೇಲಿಯಾ ಮೂಲದ ಈ ಮರವನ್ನು  1790 ರಲ್ಲಿ  ಕರ್ನಾಟಕದ ರಾಜ್ಯದ ನಂದಿ ಬೆಟ್ಟಗಳಲ್ಲಿ ಬೆಳೆಸಲಾಯಿತು….

Read more
ಬೊರ್‍ವೆಲ್ ಕೆಲಸ

ಬೋರ್ವೆಲ್ ಗೆ ಪಂಪು ಇಳಿಸುವ ಬಗ್ಗೆ ಮಾಹಿತಿ.

ಇಂದು ಕೃಷಿ ನೀರಾವರಿಗೆ, ಮನೆಬಳಕೆಯ ನೀರಿಗೆ ಎಲ್ಲದಕ್ಕೂ ಬೋರ್ವೆಲ್ ಮೂಲವೇ ಆದಾರ. ಕೊಳವೆ ಬಾವಿಯನ್ನು ತೋಡುವಾಗ ನೀರು ಸಿಗುತ್ತದೆ.  ಆದರೆ ಬಾವಿಯೊಳಗೆ ನೀರು ಎಷ್ಟು ಇದೆ, ಎಷ್ಟು ತೆಗೆಯಲು ಸಾಧ್ಯ ಎಂಬುದನ್ನು ಮೇಲಿನಿಂದು ನೋಡಿ ಲೆಕ್ಕಾಚಾರ ಹಾಕಲಿಕ್ಕೆ ಆಗುವುದಿಲ್ಲ. ಪಂಪು ಇಳಿಸಿ ನೀರನ್ನು ಹೊರ ತರಬೇಕು. ಎಷ್ಟು ಆಳಕ್ಕೆ ಪಂಪು ಇಳಿಸಬೇಕು.  ಎಷ್ಟು ಅಶ್ವ ಶಕ್ತಿ ಇವೆಲ್ಲದರ ಮಾಹಿತಿ ಇಲ್ಲಿದೆ. ಹೆಚ್ಚಿನವರು ಕೊಳವೆ ಬಾವಿ ತೋಡುತ್ತಾರೆ. ಸುಮಾರು 500 ಅಡಿ ಹೋಗಿದೆ, ಪಂಪು ಎಷ್ಟು ಇಳಿಸಬೇಕು ಎಂಬ…

Read more
ಗೇರು ಹಣ್ಣುಗಳನ್ನು ಸ್ವಚ್ಚ ಮಾಡುತ್ತಿರುವುದು

ಗೇರು ಕೃಷಿಗೆ  ರೈತರಿಂದ ಗುಡ್ ಭೈ – ತೀರಾ ನಷ್ಟದ ಬೆಳೆ

ಒಂದು ಕಾಲದಲ್ಲಿ ಕರಾವಳಿಯ ಎಲ್ಲಾ ಭಾಗಗಳಲ್ಲಿ ಗೇರು ಬೆಳೆ ನಳನಳಿಸುತ್ತಿತ್ತು.  ಎಂತೆಂತಹ ಮರಗಳು, ಬುಟ್ಟಿ ಬುಟ್ಟಿ ಗೇರು ಹಣ್ಣುಗಳು. ಇಂದು ಆ ವೈಭವ ಇಲ್ಲ.ಗೇರು ಮರದಲ್ಲಿ ಹಣ್ಣು ಆದರೂ ಕೊಯ್ಯುವ ಗೋಜಿಗೇ ಹೋಗದ ಜನ, ಕೊಯ್ದ ಮಜೂರಿ ಹುಟ್ಟದ ನಷ್ಟದ ಬೆಳೆಯಾಗಿ, ಗೇರು ಕೃಷಿಗೆ ರೈತರು ಈಗಾಗಲೇಗುಡ್ ಭೈ ಹೇಳುತ್ತಿದ್ದಾರೆ.. ಸದ್ಯವೇ  ಗೇರು ಬೆಳೆ ಎಂಬುದು ನಮ್ಮಲ್ಲಿ ಗತ ವೈಭವವಾದರೂ ಅಚ್ಚರಿ ಇಲ್ಲ.   ಗೇರು ಮರಗಳಿಂದ (Cashew) ಕೊಕ್ಕೆ ಹಾಕಿ ಹಣ್ಣು ಕೊಯ್ಯುವುದು, ಹೆಕ್ಕುವುದು, ಬೀಜ ಪ್ರತ್ಯೇಕಿಸುವುದು,…

Read more
error: Content is protected !!