ಸಾವಯವ ರಸಗೊಬ್ಬರ – ರಾಸಾಯನಿಕ ಗೊಬ್ಬರಕ್ಕೆ ಪರ್ಯಾಯ.
ಸಾವಯವ ರಸಗೊಬ್ಬರ ಎಂದರೆ ಅದು ರಾಸಾಯನಿಕ ಗೊಬ್ಬರಗಳಿಗೆ ಸಮನಾದ ಫಲಿತಾಂಶವನ್ನು ಕೊಡುವಂತಹ ಸಾವಯವ ಮೂಲವಸ್ತುಗಳನ್ನು ಸೇರಿಸಿ ತಯಾರಿಸಿದ ಗೊಬ್ಬರ. ರಸ ಗೊಬ್ಬರ, ರಾಸಾಯನಿಕ ಗೊಬ್ಬರ ಬೇರೆ ಬೇರೆ. ರಸ ಗೊಬ್ಬರ ಎಂಬುದು ಹೆಚ್ಚು ಸಾತ್ವಾಂಶಗಳ ಯಾವುದೇ ಮೂಲವಸ್ತುಗಳ ಮೂಲಕ ತಯಾರಿಸಬಹುದು. ‘ರಸ’ ಎಂದರೆ ಹೆಚ್ಚು ಸತ್ವ ಉಳ್ಳ ತಯಾರಿಕೆ. ರಾಸಾಯನಿಕ ಮಾತ್ರವಲ್ಲ, ಸಾವಯವ ಮೂಲದಲ್ಲೂ ರಸಗೊಬ್ಬರ ತಯಾರಿಸಬಾರದು ಎಂದಿಲ್ಲ. ತಯಾರಿಸಬಹುದು. ಇದು ಹೊಸ ತಂತ್ರಜ್ಞಾನವಂತೂ ಅಲ್ಲ. ಮರೆತು ಹೋಗಿರಬಹುದು ಅಥವಾ ಕಷ್ಟ ಎಂದು ಬಿಟ್ಟಿರಬಹುದು. ಸಾವಯವ…
