ಅಡಿಕೆ ಧಾರಣೆ ಏನಾಗಬಹುದು? ಯಾಕೆ ಏನೂ ಸಂಚಲನ ಇಲ್ಲ ?
ಅಡಿಕೆ ಧಾರಣೆ ಕಳೆದ ಎರಡು ತಿಂಗಳಿಂದ ನಿಂತ ನೀರಿನ ತರಹ ಮುಂದುವರಿದಿದೆ. ಯಾವ ಏರಿಕೆಯೂ ಇಲ್ಲ. ಇಳಿಕೆಯೂ ಇಲ್ಲ. ಕರಾವಳಿಯ ಅಡಿಕೆ ಬೆಳೆಗಾರರು ಅಡಿಕೆ ಕೊಡುವುದನ್ನು ಕಡಿಮೆಮಾಡಿದ್ದಾರೆ. ಕೆಂಪಡಿಕೆ ಮಾಡುವ ಕಡೆಯೂ ಜನ ದರ ಏರಿಕೆಗೆ ಕಾಯುತ್ತಿದ್ದಾರೆ. ಮಾರುಕಟ್ಟೆಗೆ ಬರುವ ಅಡಿಕೆ ಪೂರ್ತಿ ಚೇಣಿ ಮಾಡಿದವರ ಕಮಿಟ್ಮೆಂಟ್ ಹಾಗೂ ಮುಂದಿನ ಚೇಣಿ ವಹಿಸಿಕೊಳ್ಳುವುದಕ್ಕೇ ಬೇಕಾದ ಫಂಡ್ ಕ್ರೋಡೀಕರಣಕ್ಕೆ ಎಂಬ ಸುದ್ದಿಗಳಿವೆ. ಇಷ್ಟಕ್ಕೂ ಮುಂದೆ ಅಡಿಕೆ ಧಾರಣೆ ಏನಾಗಬಹುದು, ಏನಾದರೂ ಸಂಚಲನ ಉಂಟಾಗಬಹುದೇ ಎಂಬ ಕುತೂಹಲ ಎಲ್ಲರದ್ದೂ. ಅಡಿಕೆ…
