ಸಾವಯವ ಅಂಶ ಇಲ್ಲದಿದ್ದರೆ ಬೆಳೆ ಬರಲಾರದು.

ಕೃಷಿ ಮಾಡುವಾಗ ರಾಸಾಯನಿಕ ಗೊಬ್ಬರ ಒಂದನ್ನೇ ಮಣ್ಣಿಗೆ ಕೊಡುತ್ತಾ ಇದ್ದರೆ, ನಿಧಾನವಾಗಿ ಮಣ್ಣಿನ ರಚನೆ ಕೆಳಮಟ್ಟಕ್ಕೆ ಇಳಿಯುತ್ತದೆ. ಮಣ್ಣಿನ ರಚನೆ ವ್ಯತ್ಯಾಸವಾದರೆ ರಸಗೊಬ್ಬರಗಳು ಕೆಲಸ ಮಾಡುವುದಿಲ್ಲ. ಯಾವುದೇ ರಸ ಗೊಬ್ಬರಗಳನ್ನು ನೇರವಾಗಿ ಸಸ್ಯಗಳು ಬಳಕೆ ಮಾಡಿಕೊಳ್ಳಲಾರವು. ಮಣ್ಣಿನ ಜೀವಾಣುಗಳ ಸಹಕಾರದಿಂದ ಅವು ಸಸ್ಯಗಳಿಗೆ ಲಭ್ಯವಾಗುತ್ತದೆ. ಮಣ್ಣಿನಲ್ಲಿ ಜೀವಾಣುಗಳು ಇದ್ದರೆ ಅದು ಜೀರ್ಣಕ್ಕೊಳಪಡುತ್ತದೆ. ಫಲವತ್ತತೆ ಕಡಿಮೆಯಾದ ಮಣ್ಣಿನಲ್ಲಿ ಜೀವಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ. ಆಗ ರಸ ಗೊಬ್ಬರಗಳ ಕ್ಷಮತೆಯೂ ಕಡಿಮೆಯಾಗುತ್ತದೆ. ಆದ ಕಾರಣ ಅಧಿಕ ಇಳುವರಿಗೆ  ಅಗತ್ಯವಿದ್ದರೆ ರಸಗೊಬ್ಬರ ಹಿತ…

Read more

ಮಿಡತೆಗಳು – ನಮ್ಮ ತಲೆಯೊಳಗೆ ಹೊಕ್ಕಿದ ಹುಳಗಳು!

ಉತ್ತರ ಭಾರತದ ಹರ್ಯಾಣ, ಉತ್ತರ ಪ್ರದೇಶ, ಪಂಜಾಬ್, ರಾಜಸ್ಥಾನ , ಮಧ್ಯಪ್ರದೇಶ ಮುಂತಾದ ಕಡೆ ಮಿಡತೆಗಳು ರೈತರ ಹೊಲಕ್ಕೆ ಧಾಳಿ ಮಾಡಿ ದ ವರದಿ ಇದೆ. ಈಗ ಅದು ಮಹಾರಾಷ್ಟ್ರದ  ನಾಗ್ಪುರ ಸುತ್ತಮುತ್ತ  ಇದೆಯಂತೆ. ಇನ್ನು ಇದು ಮಹಾರಾಷ್ಟ್ರದ ಗಡಿಯಾದ ಗುಲ್ಬರ್ಗಾಕ್ಕೆ ಬಂದರೆ ಏನು ಗತಿ ಎಂದು ರೈತರು ಆತಂಕದಲ್ಲಿದ್ದಾರೆ. ಅಂತದ್ದೇನೂ ಆಗುವುದಿಲ್ಲ. ಮೂಲದಲ್ಲಿ ಇದ್ದಷ್ಟು ಸಂಖ್ಯೆ ಮುಂದುವರಿದಂತೆ ಕಡಿಮೆಯಾಗಿದೆ. ಇನ್ನು ಕರ್ನಾಟಕಕ್ಕೆ ಬಂದಾಗ ಅದರ ಸಂಖ್ಯೆ ತುಂಬಾ ಕಡಿಮೆಯಾಗಬಹುದು.  ಈ ಮಿಡತೆಗೆಳು ನಾವು ಕರೆಯುವ ಗ್ರಾಸ್…

Read more
ಕರಿಮೆಣಸಿಗೆ ಬೋರ್ಡೋ ದ್ರಾವಣ ಸಿಂಪಡಿಸಿದಾಗ

ಕರಿಮೆಣಸಿಗೆ ಬೋರ್ಡೋ ಸಿಂಪರಣೆ ಯಾಕೆ ಮತ್ತು ಹೇಗೆ?

ಕರಿಮೆಣಸಿಗೆ ಬಹಳ ಜನ ರೈತರು ಬೋರ್ಡೋ ಸಿಂಪರಣೆ ಮಾಡುವ ವಿಧಾನ ಸರಿಯಾಗಿಲ್ಲ. ಅದರ ಸೂಕ್ತ ವಿಧಾನ ಹೀಗೆ. ಹೆಚ್ಚಿನ ಬೆಳೆಗಾರರು ಕರಿಮೆಣಸಿಗೆ ಬೋರ್ಡೋ ದ್ರಾವಣ ಸಿಂಪಡಿಸುತ್ತೀರಾ ಎಂದರೆ ನಾವು ಅಡಿಕೆಗೆ ಹೊಡೆಯುವಾಗ ಅದು ಹಾರಿ ಅದಕ್ಕೂ ಬೀಳುತ್ತದೆ. ಅಷ್ಟೇ  ಸಾಕಾಗುತ್ತದೆ ಎನ್ನುತ್ತಾರೆ. ಮತ್ತೆ ಕೆಲವರು ಸಿಂಪರಣೆ ಮಾಡುವವರಿದ್ದರೂ ಸಹ ಎಲೆಗಳೆಲ್ಲಾ ಬಿಳಿ ಬಿಳಿ ಆಗುವಂತೆ ಸಿಂಪರಣೆ  ಮಾಡುತ್ತಾರೆ.  ಇದು ಯಾವುದೂ ವೈಜ್ಞಾನಿಕವಾಗಿ ಸೂಕ್ತ ವಿಧಾನ ಅಲ್ಲ. ಇದರಿಂದ ರೋಗ ಪ್ರವೇಶಕ್ಕೆ ತಡೆ ಉಂಟಾಗುವುದಿಲ್ಲ. ರೋಗ ಬಾರದಿದ್ದರೆ ಚಾನ್ಸ್….

Read more

ಕಿಸಾನ್ ಕ್ರೆಡಿಟ್ ಕಾರ್ಡ್ ಸರಕಾರದ ಕೊಡುಗೆಯೇ ?

ಕೇಂದ್ರ ಸರಕಾರ  ಮೇ. 14-2020 , ರಂದು ವಿಶೇಷ ಪ್ಯಾಕೇಜ್  ಅಡಿಯಲ್ಲಿ 2.5 ಕೋಟಿ ಹೊಸ ಕೃಷಿಕರಿಗೆ  ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸುವ ಯೋಜನೆ ಹಾಕಿಕೊಂಡಿದೆ. ಬಹಳಷ್ಟು ಜನ ಈ ಕಿಸಾನ್ ಕ್ರೆಡಿಟ್ ಕಾರ್ಡ್ ಅಂದರೆ ಸರಕಾರ  ಸರಕಾರ  ಕೊಡುವ ಸವಲತ್ತು ಎಂದು ಭಾವಿಸಿದೆ. ಇದು ಹಾಗಲ್ಲ. ರೈತರು ಬ್ಯಾಂಕ್ ವ್ಯವಹಾರ ಮಾಡುವಾಗ ಹಣ  ತೆಗೆಯಲು ಆನುಕೂಲವಾಗುವಂತೆ ಕೊಡುವ ಕ್ರೆಡಿಟ್  ಕಾರ್ಡ್ ಇದು. ಇದರಲ್ಲಿ ನಿಮ್ಮ ಖಾತೆಯಲ್ಲಿ ಜಮಾ ಇದ್ದರೆ ಅದು ಮುಗಿಯುವ  ತನಕ  ಹಣ ತೆಗೆಯಬಹುದು….

Read more
ಹುತ್ತಗಳಿಂದ ಕೃಷಿಕರಿಗೆ ಏನು ಲಾಭ? ಕಡಿಮೆಯಾಗಲು ಕಾರಣ ಏನು?

ಹುತ್ತಗಳಿಂದ ಕೃಷಿಕರಿಗೆ ಏನು ಲಾಭ? ಕಡಿಮೆಯಾಗಲು ಕಾರಣ ಏನು?

ನಮ್ಮ ಸುತ್ತಮುತ್ತ ಎಲ್ಲಾ ಕಡೆಯಲ್ಲಿ ಕಾಣಸಿಗುತ್ತಿದ್ದ ಹುತ್ತಗಳು ಈಗ ಅಪರೂಪವಾಗಲಾರಂಭಿಸಿದೆ.  ಇದು ನಮ್ಮ ಹೊಲದ ಮಣ್ಣು  ಸಾವಯವ ಅಂಶ ಕಳೆದುಕೊಡಿರುವುದರ ಸೂಚನೆ. ಬಯಲು ಸೀಮೆಯ ಕಡೆ, ಕಾಡು ಇರುವಲ್ಲಿ ಮಾನವ ಹಸ್ತಕ್ಷೇಪ ಇಲ್ಲದ ಕಡೆ ಸ್ವಲ್ಪ ಮಟ್ಟಿಗೆ ಹುತ್ತಗಳು ಕಾಣಸಿಕ್ಕರೆ ಉಳಿದೆಡೆ ಹುತ್ತಗಳಿಲ್ಲ. ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುತ್ತಗಳ ಸಂಖ್ಯೆಯೇ ಕ್ಷೀಣಿಸುತ್ತಿದೆ! ಹುತ್ತಗಳು ಇಲ್ಲದಿದ್ದರೆ ಗೆದ್ದಳು ಇಲ್ಲವಲ್ಲಾ ಒಳ್ಳೆಯದೇ ಅಯಿತಲ್ಲಾ ಎಂದು ಭಾವಿಸಬೇಡಿ. ಹುತ್ತಗಳು ನಮ್ಮ ಭೂಮಿಯ ಫಲವತ್ತತೆಯ ಸಂಕೇತ. ಹುತ್ತಗಳು ಬೆಳೆಯುವುದು ಭೂಮಿಯಲ್ಲಿರುವ ಸಾವಯವ…

Read more
ಆಷಾಢದಲ್ಲಿ (ಆಟಿ) ಬಾಳೆದಂಡು ಯಾವ ಉದ್ದೇಶಕ್ಕೆ ತಪ್ಪದೆ ತಿನ್ನಬೇಕು

ಆಷಾಢದಲ್ಲಿ (ಆಟಿ) ಇದನ್ನು ಯಾವ ಉದ್ದೇಶಕ್ಕೆ ತಪ್ಪದೆ ತಿನ್ನಬೇಕು?

ಆಷಾಢ ಮಾಸದಲ್ಲಿ ಕೆಲವು ಆಹಾರ ವಸ್ತುಗಳನ್ನು ತಪ್ಪದೆ ತಿನ್ನಬೇಕು, ಇದರಲ್ಲಿ ಸಾಕಷ್ಟು  ಆರೋಗ್ಯ ಗುಣಗಳಿವೆ ಎಂಬುದೇ ನಮ್ಮ ಹಿರಿಯರು ಹೇಳಿರುವ ಉದ್ದೇಶ. ಇದರಲ್ಲಿ ಬಾಳೆ ದಂಡು ಒಂದು. ಬಾಳೆ ದಂಡನ್ನು ಬೇರೆ ಬೇರೆ ಅಡುಗೆಗಳ ಮೂಲಕ ಬಳಸಬಹುದಾಗಿದ್ದು , ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಈ ದಂಡಿನಲ್ಲಿ ಹಲವಾರು ಪೋಷಕಾಂಶಗಳಿರುವ ಕಾರಣ  ದೇಹಕ್ಕೆ ಶಕ್ತಿ ಕೊಡುತ್ತದೆ. ಆಷಾಢ ಮಾಸದಲ್ಲಿ  ಮಳೆ ಹೆಚ್ಚು. ಹಿಂದೆಲ್ಲಾ ಈ ತಿಂಗಳಲ್ಲಿ  ವಾರಗಟ್ಟಲೆ ನಿರಂತರ ಮಳೆ ಬರುವುದು, ಮನೆಯಿಂದ ಹೊರಗೆ ತಲೆ ಹಾಕುವುದಕ್ಕೂ…

Read more
ಕೊಟ್ಟಿಗೆ ಗೊಬ್ಬರದ ಪೋಷಕಾಂಶ ನಷ್ಟ ತಡೆಯುವುದು ಹೇಗೆ?

ಕೊಟ್ಟಿಗೆ ಗೊಬ್ಬರದ ಪೋಷಕಾಂಶ ನಷ್ಟ ತಡೆಯುವುದು ಹೇಗೆ?

ಕೊಟ್ಟಿಗೆ ಗೊಬ್ಬರದಲ್ಲಿ  Farm Yard Manure ಉತ್ತಮ ಪೊಷಕಾಂಶಗಳಿದ್ದರೂ ಆದರ ಪೂರ್ಣ ಪ್ರತಿಫಲವನ್ನು ನಾವು ಪಡೆಯಲಾಗುತ್ತಿಲ್ಲ. ಅದಕ್ಕೆ ಕಾರಣ  ಈ ಗೊಬ್ಬರವನ್ನು ನಾವು  ಸರಿಯಾಗಿ ದಾಸ್ತಾನು ಮಾಡುವುದಿಲ್ಲ. ಸರಿಯಾದ  ವಿಧಾನದಲ್ಲಿ ಬಳಕೆಯನ್ನೂ ಮಾಡುವುದಿಲ್ಲ.  ಕೊಟ್ಟಿಗೆ ಗೊಬ್ಬರದ ವಿಚಾರದಲ್ಲಿ ತಾತ್ಸಾರ ಬೇಡ. ಅದರಲ್ಲಿ ಸತ್ವಗಳು ಕಡಿಮೆಯಾದರೂ ಅದರ ಗುಣಕ್ಕೆ ಸರಿಸಾಟಿ ಇನ್ನೊಂದಿಲ್ಲ.. ಹಾಗಾಗಿ ಇದನ್ನು ಪೋಷಕಾಂಶ ನಷ್ಟವಾಗದಂತೆ ಸಂಗ್ರಹಿಸಬೇಕು ಮತ್ತು ಬಳಕೆ ಮಾಡಬೇಕು. ಕೊಟ್ಟಿಗೆ ಗೊಬ್ಬರ (ತಿಪ್ಪೆ ) ಎಂಬುದು ನಮ್ಮ ಹೊಲದಲ್ಲೇ ನಾವು ತಯಾರಿಸುವ ಗೊಬ್ಬರಕ್ಕೆ ಇಟ್ಟಿರುವ…

Read more

ತೆಂಗಿನ ಕಾಯಿಯ ನೀರಿನಲ್ಲಿದೆ ಅಸಾಧಾರಣ ಶಕ್ತಿ.

ಹೆಚ್ಚಿನವರು ತೆಂಗಿನ ಕಾಯಿ ಒಡೆದು ಆ ನೀರನ್ನು ಚೆಲ್ಲುತ್ತಾರೆ. ಅದನ್ನೇ ಕುಡಿದಿರೆಂದಾದರೆ ನಿಮಗೆ ಯಾವ ರೋಗಗಳೂ ಬಾರದು. ತೆಂಗಿನ ಕಾಯಿಯ ಒಳಗೆ ಇರುವ ನೀರು ಸಾಧಾರಣ ನೀರು ಎಂದು ಭಾವಿಸದಿರಿ. ಇದರಲ್ಲಿ ಬಹಳಷ್ಟು  ಸತ್ವಗಳು ಅಡಗಿವೆ. ನಾವು ಕಾಲಬುಡದಲ್ಲಿರುವ ನೈಸರ್ಗಿಕ ಸತ್ವವನ್ನು ಬಿಸಾಡಿ, ಕೃತಕ ವಿಟಮಿನ್ ಮಿನರಲ್ ಮಾತ್ರೆಗಳನ್ನು ಸೇವಿಸುತ್ತೇವೆ. ತೆಂಗಿನ ಕಾಯಿಯನ್ನು ಒಡೆಯುವಾಗ ಅದರ ನೀರನ್ನು ಒಂದು ಬೊಟ್ಟೂ ವ್ಯಯ ಮಾಡದೆ ಕುಡಿಯುತ್ತಿದ್ದರೆ ನಿಮ್ಮ ದೇಹಾರೋಗ್ಯಕ್ಕೆ ಬೇಕಾಗುವ ಬಹುತೇಕ ಪೋಶಕಾಂಶಗಳು ಅದರಲ್ಲೇ ದೊರೆಯುತ್ತದೆ. ತೆಂಗಿನ ಕಾಯಿ…

Read more
ಸೂಜಿ ಮೆಣಸಿನ ಇಳುವರಿ

ಅಧಿಕ ಲಾಭದ ಮಿಶ್ರ ಬೆಳೆ – ಸೂಜಿ ಮೆಣಸು

ಸೂಜಿ ಮೆಣಸಿನ ಬೆಳೆಯಲ್ಲೂ ಲಾಭವಿದೆಯೇ ಎಂದು ಹುಬ್ಬೇರಿಸಬೇಡಿ. ಇದಕ್ಕೆ ಒಣ ಮೆಣಸಿಗೆ ಕಿಲೋ 800 ರೂ. ತನಕ ಬೆಲೆ ಇದೆ. ಖರೀದಿ ಮಾಡುವವರೂ ಇದ್ದಾರೆ. ಮಲ್ಲಿಗೆ ಬೇಸಾಯಕ್ಕಿಂತ ಇದು ಸುಲಭ. ಮಲೆನಾಡಿನಲ್ಲಿ ಇದನ್ನು  ಬೆಳೆಸಿಯೇ ವರ್ಷಕ್ಕೆ 50,000 ಕ್ಕೂ ಮಿಕ್ಕಿ ಆದಾಯ ಮಾಡಿಕೊಳ್ಳುವವರು ತುಂಬಾ ಜನ ಇದ್ದಾರೆ. ಕಾಗೆ ಮೆಣಸು, ಜೀರಿಗೆ  ಮೆಣಸು, ಸೂಜಿ ಮೆಣಸು ಇದೆಲ್ಲಾ ಒಂದೇ. ಬಹುತೇಕ ಎಲ್ಲರ ತೋಟದಲ್ಲೂ  ಇದರ ಸಸಿ ಇದೆ. ಅದು ನೆಟ್ಟು ಬೆಳೆಸಿದ್ದಲ್ಲ. ಅದರಷ್ಟಕ್ಕೇ ಹುಟ್ಟಿದ್ದು. ಅನುಕೂಲ ಇದ್ದರೆ …

Read more
6 ವರ್ಷಕ್ಕೆ ಅಡಿಕೆ -ಫಲ – High yield in arecanut

ಅಡಿಕೆ -ಫಲ ಬರುವ ಸಮಯಕ್ಕೇ ತೋಟ ಫ್ರೀ –ಹೇಗೆ?

ಅಡಿಕೆ ತೋಟ ಎಂದರೆ  ನಿರ್ದಿಷ್ಟ ವರ್ಷಕ್ಕೇ ಇಳುವರಿ ಬರಬೇಕು. ಗರಿಷ್ಟ  ಇಳುವರಿ ಸಿಗಬೇಕು. ಅದಕ್ಕೆ ಎಳವೆಯಲ್ಲಿ ಸೂಕ್ತ ಮಿಶ್ರ ಬೆಳೆ ಆರಿಸಬೇಕು. ಅಡಿಕೆ ಬೆಳೆಸುವಾಗ ಪ್ರಾರಂಭದ ಮೂರು ನಾಲ್ಕು ವರ್ಷಗಳ ಕಾಲ ಯಾವ ಮಿಶ್ರ ಬೆಳೆ ಬೆಳೆಯುತ್ತೇವೆಯೋ ಅದನ್ನು ಅವಲಂಭಿಸಿ, ಅದರ ಇಳುವರಿ ನಿರ್ಧಾರವಾಗುತ್ತದೆ. ಎಳೆ ಪ್ರಾಯದಲ್ಲಿ ಮಗುವನ್ನು ಯೋಗ್ಯ ರೀತಿಯಲ್ಲಿ ಸಾಕಿದರೆ ಮಾತ್ರ ಅದರ ಮುಂದಿನ ಭವಿಷ್ಯ ಉತ್ತಮವಾಗುತ್ತದೆ. ಇದರಂತೆ ಅಡಿಕೆ, ತೆಂಗು ಮುಂತಾದ  ಧೀರ್ಘಾವಧಿ ಬೆಳೆಗಳೂ ಸಹ. ಮಿಶ್ರ ಬೆಳೆಗಳಿಂದ ಬರುವ ಆದಾಯದಿಂದ ಇಡೀ ಹೊಲವೇ…

Read more
error: Content is protected !!