ಅಡಿಕೆಯ ಧಾರಣೆ ಏನಾಗಬಹುದು? ಇಳಿಕೆಯೋ ಏರಿಕೆಯೋ

ಅಡಿಕೆಯ ಧಾರಣೆ ಏನಾಗಬಹುದು? ಇಳಿಕೆಯೋ ಏರಿಕೆಯೋ?

ಅಡಿಕೆ ಧಾರಣೆಯ ಈಗಿನ ಪರಿಸ್ಥಿತಿ ಬೆಳೆಗಾರರನ್ನು ಚಿಂತೆಗೀಡುಮಾಡಿದ್ದು, ಇಳಿಕೆಯಾದೀತೋ ಎಂಬ ಆತಂಕ ಉಂಟುಮಾಡಿದೆ. ಬೆಳೆಗಾರರು ಆತಂಕ ಪಡಬೇಕಾಗಿಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಈಗ ದರ ಇಳಿಕೆ ಆಗಿದೆ. ಮುಂದೆ ಇದು ಸರಿಯಾಗುತ್ತದೆ. ಈ ಸಮಯದಲ್ಲಿ ದರ ಇಳಿಕೆ ಆಗುವುದು ಸಹಜವಾಗಿದೆ.ಈಗ ಕೃಷಿಕರಿಗೆ ಹಣದ ಅಗತ್ಯ ಇರುತ್ತದೆ. ಬೆಳೆಗಾರರಿಗೆ ಮಾರಾಟ ಮಾಡದೆ ನಿರ್ವಾಹ ಇಲ್ಲದ ಸ್ಥಿತಿ ಇರುತ್ತದೆ. ಅದಕ್ಕೆ ಅನುಗುಣವಾಗಿ ದರ ಇಳಿಕೆ ಆಗುತ್ತದೆ. ಈಗ ಅದದ್ದೂ ಇದೆ. ಬೆಳೆಗಾರರೆಲ್ಲರೂ ಅಧಿಕ ಬೆಲೆ ಸಿಗಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಸಾಧ್ಯವಾದಷ್ಟು…

Read more
pest problem

ಅಡಿಕೆ ಹೂಗೊಂಚಲು ಒಣಗುತ್ತಿದೆಯೇ ? ಯಾವ ಕಾರಣ- ಪರಿಹಾರ.

ಅಧಿಕ ಆದಾಯದ ಅಡಿಕೆ ಬೆಳೆಯಲ್ಲಿ ಹೂಗೊಂಚಲು ಒಣಗುವ ಸಮಸ್ಯೆ ಅತೀ ದೊಡ್ಡದು. ಇದಕ್ಕೆ ಪರಿಹಾರ ಸಿಂಗಾರಕ್ಕೆ ಸಿಂಪರಣೆ ಒಂದೇ.ರಾಸಾಯನಿಕ ಸಿಂಪರಣೆ ಇಷ್ಟವಿಲ್ಲದವರು ಮರದಲ್ಲಿ ಒಣಗಿದ ಹೂಗೊಂಚಲು ಶೇಷವನ್ನು ಸಂಪೂರ್ಣವಾಗಿ ತೆಗೆದು ಸ್ವಲ್ಪ ಮಟ್ಟಿಗೆ ನಷ್ಟದಿಂದ ಪಾರಾಗಬಹುದು. ಕಳೆದ ವರ್ಷ ಅಡಿಕೆ ಬೆಳೆಗಾರರು ಭಾರೀ ಪ್ರಮಾಣದಲ್ಲಿ ಬೆಳೆ ನಷ್ಟ ಮಾಡಿಕೊಂಡಿದ್ದಾರೆ. ಕಾರಣ ಉತ್ತಮ ಹೂ ಗೊಂಚಲು ಇತ್ತು. ಆದರೆ ಹೂ ಗೋಂಚಲೆಲ್ಲಾ ಒಣಗಿ ಹಾಳಾಗಿದೆ. ಇದರಿಂದಾಗಿ ಬೆಳೆ ಸುಮಾರು 30% ನಷ್ಟವಾಗಿದೆ. ಈ ವರ್ಷ ಹಾಗಾಗಬಾರದು ಎಂದು ಬೆಳೆಗಾರರು…

Read more
ಮೊಡ ಕವಿದ ವಾತಾವರಣ

ಬದಲಾದ ಹವಾಮಾನ – ಕೃಷಿಗೆ ಆತಂಕ.

ಬೇಸಿಗೆ ಕಾಲದಲ್ಲಿ ಕೆಲವು ಸಮಯದಲ್ಲಿ ಒಂದೆರಡು ದಿನ ಮೋಡ ಕವಿದ ವಾತಾವರಣ ಇರುತ್ತದೆ. ಸಾಮಾನ್ಯವಾಗಿ ಮಾವು, ಗೇರು ಹೂ ಬೀಡುವ ಸಮಯದಲ್ಲಿ  ಇದು ಹೆಚ್ಚು. ಈ ಮೋಡ ಕವಿದ  ದಿನಗಳು ಬೆಳೆಗಳಿಗೆ  ಹಾಳು. ಈ ವರ್ಷದ ಹವಾಮಾನ ಯಾಕೋ ಭಿನ್ನವಾಗಿದೆ. ಡಿಸೆಂಬರ್ ವರೆಗೂ ಮಳೆ. ಚಳಿಯಂತೂ ತೀರಾ ಕಡಿಮೆ. ಆಗಾಗ ಮೋಡ ಕವಿದ ವಾತಾವರಣ. ಕೆಲವು  ತಜ್ಞರು ಹೇಳುವಂತೆ ಮುಂದಿನ ವರ್ಷಗಳಲ್ಲಿ  ಹವಾಮಾನ ಸ್ಥಿತಿ ಸ್ವಲ್ಪ ಸ್ವಲ್ಪವೇ ಬದಲಾವಣೆ ಆಗುತ್ತಾ, ಅಕಾಲಿಕ ಮಳೆ- ಅತಿಯಾದ ಬಿಸಿಲು ಬಂದು…

Read more
ಕಳೆನಾಶಕಗಳಿಂದ ಫಲವತ್ತತೆ ಕ್ಷೀಣಿಸುತ್ತದೆ. ಹೇಗೆ?

ಕಳೆನಾಶಕಗಳಿಂದ ಫಲವತ್ತತೆ ಕ್ಷೀಣಿಸುತ್ತದೆ. ಹೇಗೆ?

ನಮ್ಮ ಹೊಲಗಳ ಫಲವತ್ತತೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಜನ ಸಾವಯವ ಗೊಬ್ಬರ ಕಡಿಮೆಯಾಗಿ ಹೀಗಾಗಿದೆ ಎಂದು ಅಭಿಪ್ರಾಯ ಪಡುತ್ತಾರೆ. ಇದು ಸ್ವಲ್ಪ ಮಟ್ಟಿಗೆ  ಸರಿಯಾದರೂ ಅದರ ಜೊತೆಗೆ ಇನ್ನೂ ಒಂದು ಕಾರಣ ಇದೆ. ಅದು ಕಳೆನಾಶಕಗಳ ಬಳಕೆ. ಕಳೆನಾಶಕಗಳನ್ನು ಬಳಸಿದಲ್ಲಿ ಮಣ್ಣಿನ ರಚನೆ ಹಾಳಾಗುತ್ತದೆ. ಅದು ಹೇಗೆ ಎಂಬ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. ಕಳೆ ನಾಶಕ ಇದು ತೋಟವನ್ನು ಚೊಕ್ಕವಾಗಿರಿಸುತ್ತದೆ. ಒಡಾಡುವುದಕ್ಕೆ, ಸುಲಭ ಎಂಬುದು ನಮ್ಮ  ಅಭಿಪ್ರಾಯ. ಕಳೆಗಳು ಬೆಳೆಗೆ ಪೂರೈಸಿದ ಪೋಷಕಗಳನ್ನು ಬೇಗ ಕಬಳಿಸುತ್ತದೆ,…

Read more
ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವ ವ್ಯಾಪಾರಿ

ರಾಜ್ಯದಲ್ಲಿ ಮಾರುಕಟ್ಟೆ ಧಾರಣೆ ದಿನಾಂಕ 15-09-2021

ಕರ್ನಾಟಕ ರಾಜ್ಯದ ವಿವಿಧ  ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಇಂದು 15-09-2021  ವಿವಿಧ ಕೃಷಿ ಉತ್ಪನ್ನಗಳ ಮಾರುಕಟ್ಟೆ  ಬೆಲೆ ಹೀಗಿರುತ್ತದೆ. ಧವಸ ಧಾನ್ಯಗಳು     ಕನಿಷ್ಟ ಬೆಲೆ , ಗರಿಷ್ಟ ಬೆಲೆ Wheat / ಗೋಧಿ; Mexican / ಮೆಕ್ಸಿಕನ್ (*), 1800, 2000 Red / ಕೆಂಪು (*), 1219, 2800 White / ಬಿಳಿ (*), 1077, 3577 H.D. / ಹೈಬ್ರಿಡ್ (*), 1850, 2600 Local / ಸ್ಥಳೀಯ (*), 1069,…

Read more

ನಮ್ಮ ಕೃಷಿ ವ್ಯವಸ್ಥೆಯಲ್ಲಿ ಮಹಾನ್ ಸಂಚಲನ ಇದರಿಂದ ಮಾತ್ರ ಸಾಧ್ಯ.

ತಜ್ಞರು ಕ್ಷೇತ್ರ  ಜ್ಞಾನ ಇಲ್ಲದೆ ಏನೋನೋ ಸುಧಾರಣೆಗಳನ್ನು ಸರಕಾರಕ್ಕೆ ಶಿಫಾರಸು ಮಾಡುತ್ತಾರೆ. ಇದು ಕೃಷಿಕರ ಬದುಕನ್ನು ಉತ್ತಮಪಡಿವುದು ಅಷ್ಟಕ್ಕಷ್ಟೇ. ನಿಜವಾಗಿ ಮೂಲಭೂತ ಅಗತ್ಯ ಬೇರೆಯೇ ಇದೆ. ಭಾರತ ದೇಶದ ರೈತ ತನ್ನ ಜೀವಮಾನದಲ್ಲಿ  ನೆಮ್ಮದಿಯ ಜೀವನವನ್ನು ಕಳೆಯುವುದು ಬರೇ ಮಕ್ಕಳಾಟಿಕೆಯ ವಯಸ್ಸಿನಲ್ಲಿ ಮಾತ್ರ. ಜವಾಬ್ಧಾರಿ ಬಂದ ನಂತರ ತನ್ನ ಕೊನೇ ಉಸಿರಿನ ತನಕವೂ ರೈತ ನೆಮ್ಮದಿಯ ಜೀವನ ನಡೆಸಲಾರ. ಒಂದಿಲ್ಲೊಂದು ತಲೆಬಿಸಿಯಲ್ಲೇ (Tension)ಅವನು ಅಲ್ಪಾಯುಷಿಯಾಗಿ ಅಂತ್ಯವನ್ನು ಕಾಣುತ್ತಾನೆ. ವ್ಯಕ್ತಿಯೊಬ್ಬನಿಗೆ ಬದುಕುವ ಹಕ್ಕು ಇರುವಾಗ ನೆಮ್ಮದಿಯ ಬದುಕಿಗೆ ಬೇಕಾಗುವ…

Read more
banana plants

ಮಳೆಗಾಲದಲ್ಲಿ ಬಾಳೆ ಸಸ್ಯ ಮಗುಚಿ ಬೀಳುವುದಕ್ಕೆ ಕಾರಣ- ಪರಿಹಾರ.

ಮಳೆಗಾಲದಲ್ಲಿ ಬಾಳೆ ದಂಟು ಮುರಿದು ಬೀಳುವ ಸಮಸ್ಯೆ ಎಲ್ಲಾ ಕಡೆಯಲ್ಲೂ ಕಂಡು ಬರುತ್ತದೆ. ಅಂತಹ ಬಾಳೆಯ ಕಾಂಡವನ್ನು ಸ್ವಲ್ಪ ಕಡಿದು ನೋಡಿದರೆ ಕಾಂಡ ಹಾಳಾಗಿರುತ್ತದೆ. ಬಾಳೆಯ ಸಸ್ಯಗಳು ಇನ್ನೇನೋ ಗೊನೆ ಹಾಕಬೇಕು ಎಂಬ ಹಂತದಲ್ಲಿ, ಅಥವಾ ಗೊನೆ ಹಾಕಿ ಬೆಳೆಯುತ್ತಿರುವ ಹಂತದಲ್ಲಿ ಇದಕ್ಕೆ ಇಂದು ಕೀಟ ತೊಂದರೆ  (Pseudostem borer,and Rhizome weevil)ಮಾಡುತ್ತದೆ. ಈ ಕೀಟದ ಚಟುವಟಿಕೆ ಮಳೆಗಾಲ ಪ್ರಾರಂಭದಲ್ಲಿ ಮತ್ತು ಕೊನೆಗೆ ಹೆಚ್ಚು. ಇದರಿಂದ ಇಡೀ  ಗೊನೆ ಹಾಳಾಗುತ್ತದೆ. ಉಳಿದ ಬಾಳೆಗೂ ಪ್ರಸಾರವಾಗುತ್ತದೆ. ಬಾಳೆ ಗೊನೆ…

Read more
ಬಟರ್ ಪ್ರೂಟ್ ಕಾಂಡ ಕೊರಕ ದುಂಬಿ ಕೊರೆದ ಭಾಗ

ಬಟರ್ ಫ್ರೂಟ್ ಮರಗಳು ಸಾಯುವುದಕ್ಕೆ ಕಾರಣ ಮತ್ತು ಪರಿಹಾರ.

ಬಟರ್ ಫ್ರೂಟ್ ಬೆಳೆ ಈಗ ಎಲ್ಲೆಂದರಲ್ಲಿ ಭಾರೀ ಪ್ರಮಾಣದಲ್ಲಿ ಬೆಳೆಯುತ್ತಿರುವ ಬೆಳೆಯಾಗಿದ್ದು, ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೂ ಈ ಬೆಳೆಯ ಬಗ್ಗೆ ಜನ ಉತ್ಸುಕರಾಗಿದ್ದಾರೆ. ಬಹಳಷ್ಟು ಜನ  ಬೆಳೆ ಬೆಳೆಯಲು ಮುಂದಾಗಿದ್ದಾರೆ. ಆದರೆ ಬಹಳಷ್ಟು ಜನ ಬೆಳೆಸಿದ ಸಸಿ/ ಫಲ ಕೊಡುತ್ತಿರುವ  ಮರ ಕಾಣು ಕಾಣುತ್ತಿದ್ದಂತೆ  ಸಾಯುತ್ತಿವೆ.  ಮರಗಳು ಸಾಯುವುದಕ್ಕೆ ಕಾರಣ ಕಾಂಡ ಕೊರಕ ಕೀಟ. ಇದನ್ನು ನಿಯಂತ್ರಿಸದೆ ಇದ್ದರೆ ಆಕಾಂಕ್ಷೆಯಲ್ಲಿ ಬೆಳೆದ ಬೆಳೆ ನಾಶವಾಗುತ್ತದೆ. ಇದರ ನಿಯಂತ್ರಣ ವಿಧಾನ ಹೀಗೆ. ಬಟರ್ ಫ್ರೂಟ್ (Avocado) ಸಸ್ಯ ಸ್ವಲ್ಪ…

Read more

ವರ್ಜಿನ್ ಕೋಕೋನಟ್ (VCO) ಎಂಬುದು ಎಲ್ಲಾ ಸತ್ಯವಲ್ಲ.

ಕೊರೋನಾ ರೋಗದ ವಿರುದ್ಧ ದೇಹದ ಅಂತಃ ಶಕ್ತಿ ಹೆಚ್ಚಿಸಲು ವರ್ಜಿನ್ ಕೋಕೋನಟ್ ಆಯಿಲ್ ಒಳ್ಳೆಯದು ಎಂದು ಪ್ರಚಾರ ಪ್ರಾರಂಭವಾಗಿದೆ. ಅದರ ಜೊತೆಗೆ ಈ ಎಣ್ಣೆಗೆ ಬೇಡಿಕೆ ಹೆಚ್ಚಿದೆ. ನಿಜವಾಗಿ ವರ್ಜಿನ್ ಕೋಕೋನಟ್ ಆಯಿಲ್ ಮತ್ತು ತೆಂಗಿನೆಣ್ಣೆಗೆ ಏನು ವ್ಯತ್ಯಾಸ. ತೆಂಗಿನ ಕಾಯಿಯಿಂದಲೇ ಹಿಂದಿನಿಂದಲೂ ಎಣ್ಣೆ ತೆಗೆಯುತ್ತಿದ್ದುದು. ಇತ್ತೀಚಿನ ಕೆಲವು ವರ್ಷಗಳ ಹಿಂದೆ ನಮ್ಮಲ್ಲಿ ಶತಮಾನಗಳಿಂದ ಪ್ರಚಲಿತದಲ್ಲಿದ್ದ ಗಾಣದಿಂದ ಎಣ್ಣೆ ತೆಗೆಯುವ ತಂತ್ರಜ್ಞಾನ ವನ್ನು ಓವರ್ ಟೇಕ್ ಮಾಡಿ ಬಂದ ತಂತ್ರಜ್ಞಾನವೇ ವರ್ಜಿನ್ ಕೋಕೋನಟ್ ಆಯಿಲ್. ತೆಂಗಿನ ಕಾಯಿಯಿಂದ…

Read more
ರಸಗೊಬ್ಬರವನ್ನು ಮೀರಿಸುವ ಶಕ್ತಿ ಉಳ್ಳ ಸಾವಯವ ಗೊಬ್ಬರ – ಸಮುದ್ರ ಪಾಚಿ.

ರಸಗೊಬ್ಬರವನ್ನು ಮೀರಿಸುವ ಶಕ್ತಿ ಉಳ್ಳ ಸಾವಯವ ಗೊಬ್ಬರ – ಸಾಗರಪಾಚಿ.

ಭಾರತದ ಕೃಷಿ ವ್ಯವಸ್ಥೆಯನ್ನು  ಗೊಬ್ಬರದಲ್ಲಿ ಸ್ವಾವಲಂಭಿಯಾಗಿ ಮುನ್ನಡೆಸಲು ಸಧ್ಯೋಭವಿಷ್ಯದಲ್ಲಿ ಸಮುದ್ರ ಪಾಚಿ ಎಂಬ ಸಾಗರದ ನೀರಿನಲ್ಲಿ ಬೆಳೆಯುವ ಸಸ್ಯದ ಸಾವಯವ ಗೊಬ್ಬರ ಪ್ರವೇಶಿಸಲಿದೆ.  ರಸಗೊಬ್ಬರವನ್ನು ಮೀರಿಸುವ ಶಕ್ತಿ ಉಳ್ಳ ಈ ಗೊಬ್ಬರದಲ್ಲಿ ಬಹುಬಗೆಯ ಪೋಷಕಾಂಶಗಳಿವೆ. ಕಳಕೊಳ್ಳುತ್ತಿರುವ ಮಣ್ಣಿನ ಜೈವಿಕ ಗುಣಧರ್ಮವನ್ನು ಇದು ಮರಳಿ ನೀಡಲು ಶಕ್ತ ಎನ್ನುತ್ತದೆ ವಿಜ್ಞಾನ. ಇದನ್ನು ಮಾನವ ಬಳಕೆಯ ಔಷದೋಪಚಾರಕ್ಕೆ ಬಳಸಲಾಗುತ್ತದೆ. ಹಾಗೆಯೇ ಸಸ್ಯ ಪೋಷಕವಾಗಿಯೂ ಬಳಕೆ ಮಾಡಲಾಗುತ್ತದೆ. ಭವಿಷ್ಯದಲ್ಲಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಇದು ನಮ್ಮ ಬೆಳೆಗಳನ್ನು ಮೇಲೆತ್ತಲಿದೆ. ಸಮುದ್ರ ಪಾಚಿ, ಅಥವಾ…

Read more
error: Content is protected !!