rain and water storing tank

ಮಳೆ ನೀರು ಕೊಯಿಲು- ಎಲ್ಲಿ ಸಾಧ್ಯ? ಎಲ್ಲಿ ಅಸಾಧ್ಯ?

ಮಳೆ ಎಂದರೆ ಅದು ಪ್ರಕೃತಿಯ ಕೊಡುಗೆ. ಇದು ಇಷ್ಟೇ ಬರುತ್ತದೆ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ. ಕೆಲವೊಮ್ಮೆ ಹೆಚ್ಚೂ ಬರಬಹುದು. ಕೆಲವೊಮ್ಮೆ ಕಡಿಮೆಯೂ ಬರಬಹುದು. ಅದನ್ನು ಸಂಗ್ರಹಿಸಲು ಬೇಕಾದ ಪಾತ್ರೆಗಳಿಗೆ ಅಳತೆ ಇಲ್ಲ. ಮಳೆ ನೀರು ಕೊಯಿಲು ಇದು ಒಂದು ಸುಂದರವಾದ ವಾಕ್ಯ ಅಷ್ಟೇ. ಧಾರಾಕಾರವಾಗಿ ಸುರಿಯುವ ಕರಾವಳಿ ಮಲೆನಾಡಿನ ಮಳೆ ನೀರನ್ನು ಸಂಗ್ರಹಿಸಲು ಪಾತ್ರೆ ಗಾತ್ರವನ್ನು ಯಾರಾದರೂ ಅಳತೆ ಮಾಡಿದ್ದುಂಟೇ? ಮಳೆ ನೀರನ್ನು  ಹಿಡಿದಿಟ್ಟಾಕ್ಷಣ ಅದು ಎಲ್ಲಾ ಸಮಸ್ಯೆಗೂ ಉತ್ತರವೇ? ಖಂಡಿತವಾಗಿಯೂ ಅಲ್ಲ. ಮಳೆ ನೀರನ್ನು ಸಂಗ್ರಹಿಸುವುದಲ್ಲ….

Read more

ಸತ್ವಯುತ ಕಾಂಪೊಸ್ಟು ತಯಾರಿಕೆ ಹೀಗೆ.

ಕಾಂಪೋಸ್ಟು ಅದರಲ್ಲೇನಿದೆ. ಹೊಂಡ ಮಾಡುವುದು ಅದಕ್ಕೆ  ಎಲ್ಲಾ  ತ್ಯಾಜ್ಯಗಳನ್ನು  ಹಾಕುವುದು ಗೋಬರ್ ಗ್ಯಾಸ್ ಸ್ಲರಿಯನ್ನು  ಎರೆಯುವುದು. ಕೆಲವು ತಿಂಗಳಲ್ಲಿ ಕಾಂಪೋಸ್ಟು  ತಯಾರಾಗುತ್ತದೆ. ಇದು ನಿಜವಾಗಿಯೂ ಸೂಕ್ತ  ಕಾಂಪೋಸ್ಟು ತಾಂತ್ರಿಕತೆ ಆಲ್ಲ. ಇದರಲ್ಲಿ ಯಾವ ಪೋಷಕಗಳೂ ಇರುವುದಿಲ್ಲ. ಸಾವಯವ ತ್ಯಾಜ್ಯಗಳು ಹಾಕಿದ ತರಹವೇ ಯಾವುದೇ ರೂಪಾಂತರಗೊಳ್ಳದೆ ಇರುತ್ತವೆ. ಗುಂಡಿಯ  ಒಳಗಡೆ ನೀರು ಹೆಚ್ಚಾಗಿರುತ್ತದೆ. ಇದು ಸೂಕ್ಷ್ಮ ಜೀವಿಗಳನ್ನು ಬದುಕಲು ಬಿಡುವುದಿಲ್ಲ.  ಯಾವುದೇ ಸಾವಯವ ತ್ಯಾಜ್ಯ ಕಾಂಪೋಸ್ಟು ಕ್ರಿಯೆಗೆ ಒಳಪಟ್ಟಾಗ ಅದು ಹುಡಿ ಆಗಬೇಕು. ಗುಂಡಿ ಪದ್ದತಿಯಲ್ಲಿ ಅದು ಆಗುವುದಿಲ್ಲ….

Read more

ಈ ಆಪ್ ಗಳು ನಿಮಗೆ ತುಂಬಾ ಜ್ಞಾನ ಕೊಡುತ್ತವೆ.

ಮಾಹಿತಿಯ ಕೊರತೆಯಿಂದ ನಮ್ಮ ದೇಶದ ರೈತರು ಮಾರುಕಟ್ಟೆ, ಹವಾಮಾನ, ಸರಕಾರದ ಸವಲತ್ತು ಮತ್ತು  ತಾಂತ್ರಿಕ ನೆರವುಗಳಿಂದ ವಂಚಿತರಾಗುತ್ತಿದ್ದಾರೆ. ಇದನ್ನು ಸರಿಪಡಿಸಿ, ರೈತರಿಗೆ ಅನುಕೂಲ ಮಾಡಿಕೊಡಲು ಭಾರತ ಸರಕಾರದಿಂದ ಬಿಡುಗಡೆಯಾದ ಆಪ್ಲಿಕೇಶನ್ ಗಳು ಇವು.  ಕೃಷಿಗೆ ಬೇಕಾದ ಮಾಹಿತಿ ಎಂದರೆ ಕೇವಲ ಮಾರುಕಟ್ಟೆಗೆ ಸಂಬಂಧಿಸಿದ್ದು ಎಂದಲ್ಲ, ರೈತರಿಗೆ ಬಿತ್ತನೆಗೆ ಭೂಮಿ ಸಿದ್ದಪಡಿಸಿ, ಅದನ್ನು ಮಾರಾಟ ಮಾಡಿ, ನಂತರ ಯಾವ ಬೆಳೆ ಬೆಳೆಯಬಹುದು ಎಂಬುದನ್ನು ಒಳಗೊಂಡ ಮಾಹಿತಿ ಅತ್ಯವಶ್ಯಕ. ಕೃಷಿ ಚಟುವಟಿಕೆ ಎಂದರೆ ಅದು ನಿರಂತರ ಚಟುವಟಿಕೆ. ರೈತರು ತಮಗೆ…

Read more

ಸಾವಯವ ತ್ಯಾಜ್ಯ ಹುಡಿ ಮಾಡಬೇಕೇ? ಯಂತ್ರ ಬಾಡಿಗೆಗೆ ಇದೆ.

ಸಾವಯವ ತ್ಯಾಜ್ಯಗಳಾದ ತೆಂಗಿನ ಗರಿ, ಅಡಿಕೆ ಗರಿ ,ಸೊಪ್ಪು ಸದೆ ಇತ್ಯಾದಿಗಳನ್ನು  ಹುಡಿ ಮಾಡಿ ಬಳಕೆ ಮಾಡಿದರೆ ಅದು ವೇಗವಾಗಿ ಕರಗಿ ಗೊಬ್ಬರವಾಗುತ್ತದೆ. ಹೀಗೆ ಹುಡಿ ಮಾಡಲು ಯಂತ್ರಗಳು ಇವೆ. ಈ ಯಂತ್ರಗಳು ಭಾರೀಪ್ರಮಾಣದ ತ್ಯಾಜ್ಯಗಳನ್ನು  ಕೆಲವೇ ಗಂಟೆಗಳಲ್ಲಿ ಹುಡಿ ಮಾಡಿಕೊಡುತ್ತದೆ. ಪ್ರಸ್ತುತ ರೈತಾಪಿ ವರ್ಗದ ಜನರಿಗೆ ಸರ್ಕಾರವು ರಸಗೊಬ್ಬರದ ದರ ಏರಿಕೆ ಆಗಿರುವಂತಹ ಹಿನ್ನೆಲೆಯಲ್ಲಿ ದೇಶದ ಕೃಷಿ ಸಂಶೋಧನಾ ಅಧ್ಯಯನ ನಡೆಸಿ ಸಾವಯವ ಕೃಷಿಯನ್ನು ಅವಲಂಬಿಸಿದರೆ ಹೆಚ್ಚಿನ ಆದಾಯವನ್ನು ಗಳಿಸಬಹುದೆಂದು ಎಲ್ಲ ಪ್ರಗತಿಪರ ರೈತರು ಸಾವಯವ ಕೃಷಿಯನ್ನು…

Read more
ಕಾಲಬದ್ಧ ನಿರ್ವಹಣೆಯ ಉತ್ತಮ ಇಳುವರಿಯ ಅಡಿಕೆ

ಉತ್ತಮ ಇಳುವರಿ ಪಡೆಯಲು ಈ ವಿಧಾನ ಅನುಸರಿಸಿರಿ.

ಯಾವುದೇ ವೃತ್ತಿಯಲ್ಲಿ ನಾವು ಮಾಡಿದ  ಕೆಲಸವನ್ನು ಒಮ್ಮೆ ತಿರುಗಿ ನೋಡಿದರೆ  ನಮಗೆ ತಪ್ಪು ಯಾವುದು ಸರಿ ಯಾವುದು ಎಂದು ತಿಳಿಯುತ್ತದೆ. ಕೃಷಿಯಲ್ಲಿ ನಾವು ಮಾಡಿದ ನಾಲ್ಕು ಐದು ವರ್ಷಗಳ ಬೆಳೆ  ಕ್ರಮವನ್ನು ಅಭ್ಯಸಿದರೆ ನಮಗೆ ಹೇಗೆ ಮಾಡಿದರೆ ಉತ್ತಮ ಎಂಬುದು ತಿಳಿಯುತ್ತದೆ. ನಾವು ಮಾಡುವ ವೃತ್ತಿಯಲ್ಲಿ ಯಾವಾಗ ಏನು ಮಾಡಿದ್ದೇವೆ ಅದರ ಫಲಿತಾಂಶ ಏನಾಗಿದೆ ಎಂಬುದನ್ನು ಪರಾಂಬರಿಸಿ ಗಮನಿಸುತ್ತಿದ್ದರೆ, ತಪ್ಪು ಎಲ್ಲಿ ಅಗಿದೆ, ಸರಿ ಮಾಡುವುದು ಹೇಗೆ ಎಂದು ನಮಗೇ ತಿಳಿಯುತ್ತದೆ.  ಕೃಷಿಯೂ ಹಾಗೆಯೇ? ನಮ್ಮ ಕೃಷಿ…

Read more
Farmer showing the sheep

ತಿಂಗಳಿಗೆ 30,000 ಸಂಪಾದನೆ ಮಾಡುವ ಸರಳ ವೃತ್ತಿ.

ಜನ ಕೆಲಸ ಇಲ್ಲ. ಸಂಪಾದನೆ ಇಲ್ಲ. ಸರಕಾರ ನಮ್ಮ ನೆರವಿಗೆ ಬರಬೇಕು. ನಮಗೆ ಅದು ಕೊಡಬೇಕು. ಇದು ಕೊಡಬೇಕು ಎಂದು ಹರಟೆ ಹೊಡೆಯುತ್ತಾ ಕಾಲ ಹರಣ ಮಾಡಬೇಕಾಗಿಲ್ಲ. ಅತೀ ಕಡಿಮೆ ಬಂಡವಾಳದಲ್ಲಿ  ತಿಂಗಳಿಗೆ 30,000 ಸಂಪಾದನೆ ಮಾಡಬಹುದು. ಇದು ಚಿತ್ರದುರ್ಗ ಜಿಲ್ಲೆ, ಹೊಸದುರ್ಗದ ಜಾನಕಲ್  ಸೇವನಗರ ಗ್ರಾಮದ  ಪ್ರಿಯಾಂಕ್ ಎಂಬ 22 ವರ್ಷದ  ಯುವಕ ಹೇಳುವ ಮಾತು. ಇವರು  ಬಿ ಬಿ ಎಂ ವ್ಯಾಸಂಗ ಮಾಡುತ್ತಲೇ ಟಗರು ಸಾಕಣೆ ಮಾಡಿ ತಿಂಗಳಿಗೆ 30,000 ರೂ ಸಂಪಾದನೆ ಮಾಡುತ್ತಿದ್ದಾರೆ….

Read more
ಅಡಿಕೆ ರಾಸಿ

ಮುಂದಿನ ತಿಂಗಳಲ್ಲಿ ಅಡಿಕೆ ಧಾರಣೆ ಹೇಗಾಗಬಹುದು?

ಜನವರಿ 2022 ಅಡಿಕೆ ಬೆಳೆಗಾರರು ಹೊಸ ಚಾಲಿ ಅದೂ ಸಾಧಾರಣ ಗುಣಮಟ್ಟದ ಅಡಿಕೆಗೆ ಕಿಲೋ 430-440  ತನಕ ಪೆಡೆದಿದ್ದರು. ಫೆಬ್ರವರಿಯಲ್ಲಿ ಧಾರಣೆ ಕುಂಟುತ್ತಾ  ಸಾಗಿದೆ.  ಕ್ಯಾಂಪ್ಕೋ ಬೆಂಬಲದಲ್ಲಿ ದರ ಬೀಳಲಿಲ್ಲ ಎನ್ನಲಾಗುತ್ತಿದೆ. ಖಾಸಗಿಯವರು ದರ ಇಳಿಸಿ, ನಾವು ಸ್ಪರ್ಧೆಗೆ ಇಲ್ಲ ಎಂದು ಹಿಂದೆ ಸರಿದಿದ್ದಾರೆ. ಈ ಎಲ್ಲಾ ಕಾರಣಗಳಿಂದ ಮುಂದಿನ ತಿಂಗಳು ಚಾಲಿ ಅಡಿಕೆ ದರ ಸ್ವಲ್ಪ ಹಿಂದೆ ಬರುವ ಸಾಧ್ಯತೆ ಕಂಡು ಬರುತ್ತಿದೆ. ಆದಾಗ್ಯೂ ಸ್ವಲ್ಪ ಪ್ರಮಾಣದಲ್ಲಿ  ಆಮದು ಆಗಿದೆಯಾದರೂ, ಇದನ್ನು ಸರಕಾರದ ಗಮನಕ್ಕೆ ತಂದು…

Read more
areca garden with out tilling

ಅಡಿಕೆ- ಬುಡ ಬಿಡಿಸಿ ಗೊಬ್ಬರ ಕೊಡಬೇಕಾಗಿಲ್ಲ.

ಬಹಳ ಜನ ಅಡಿಕೆ , ತೆಂಗಿನ ಮರಗಳಿಗೆ ಗೊಬ್ಬರ ಇತ್ಯಾದಿ ಹಾಕುವಾಗ ಮರದ ಬುಡ ಭಾಗವನ್ನು ಕೆರೆದು ಆ ಅವಕಾಶದ ಒಳಗೆ  ರಾಸಾಯನಿಕ ಗೊಬ್ಬರ, ಕೊಟ್ಟಿಗೆ ಗೊಬ್ಬರ ಕೊಟ್ಟು ಮತ್ತೆ ಮುಚ್ಚುತ್ತಾರೆ.  ಇದಕ್ಕೆ ತಗಲುವ ಖರ್ಚು ಗೊಬ್ಬರಕ್ಕಿಂತ ಹೆಚ್ಚು. ಅದನ್ನು ಉಳಿಸಿದರೆ ಗೊಬ್ಬರ ಜಾಸ್ತಿ ಕೊಟ್ಟು ಇಳುವರಿ ಹೆಚ್ಚು ಪಡೆಯಬಹುದು. ಇಲ್ಲಿ ತೋರಿಸಿರುವ ಚಿತ್ರ ಓರ್ವ ಅಡಿಕೆ  ಬೆಳೆಗಾರ ತನ್ನ ಅಡಿಕೆ  ತೋಟದಲ್ಲಿ ನೆಟ್ಟ ನಂತರ ಗುದ್ದಲಿ ಮುಟ್ಟಿಸಿಲ್ಲ. ಇಲ್ಲಿನ  ಇಳುವರಿ  ಮತ್ತು ಮರದ ಆರೋಗ್ಯ ಬೇರೆಲ್ಲೂ…

Read more
Best Time for Nutrient and Fungicide Spraying.

ಪೋಷಕ ಮತ್ತು ಶಿಲೀಂಧ್ರನಾಶಕ ಸಿಂಪರಣೆಗೆ ಸೂಕ್ತ ಸಮಯ.

ಕೃಷಿಕರು ತಾವು ಬೆಳೆಸುವ ಬೆಳೆಗಳಿಗೆ ಪೋಷಕಾಂಶ, ಶಿಲೀಂದ್ರ  ನಾಶಕ  ಹಾಗೆಯೇ ಕೀಟನಾಶಕಗಳನ್ನು ಸಿಂಪಡಿಸುತ್ತಾರೆ. ಆದರೆ ಹೆಚ್ಚಿನವರು ಅದಕ್ಕೆ ಸೂಕ್ತ ಸಮಯ ಯಾವುದು ಎಂದು ತಿಳಿದಿರುವುದಿಲ್ಲ. ಎಲ್ಲಾ ಪೋಷಕಾಂಶ, ಶಿಲೀಂದ್ರ ನಾಶಕ ಹಾಗೆಯೇ ಕೀಟನಾಶಕಗಳನ್ನು  ತಂಪಾದ ಜಾಗದಲ್ಲಿ (keep in cool place) ಇದಬೇಕು ಎಂದು ಹೇಳಿರುತ್ತಾರೆ. ಕಾರಣ ಅದರ ಕ್ರಿಯಾತ್ಮಕ ಗುಣ ಚೆನ್ನಾಗಿರಲು. ಹಾಗೆಯೇ ಸಿಂಪರಣೆಗೂ ಸಹ ತಂಪಾದ ಹವಾಮಾನ ಇದ್ದರೆ ಅದರ ಫಲಿತಾಂಶ ದುಪ್ಪಟ್ಟು. ಇಂದು ಕೃಷಿಯಲ್ಲಿ ಫೋಲಿಯರ್ ಸಿಂಪಡಣೆ, ಪತ್ರ ಸಿಂಚನ (Foliar Spray)…

Read more
ಸ್ಥಳೀಯ ಹಸುವಿನ ಸಗಣಿಯ ಅಥವಾ ಗೋಮಯ

ವೈಜ್ಞಾನಿಕವಾಗಿಯೂ ಸಾಬೀತಾದ ಸ್ಥಳೀಯ ಹಸು ಸಗಣಿಯ ಈ ಉಪಯೋಗಗಳು.

ಪ್ರಪಂಚದಲ್ಲಿ ಕೇವಲ 12 ಗಂಟೆ ಒಳಗೆ ನಾವು ಕೊಡುವ ಹಸಿ, ಒಣ ಹುಲ್ಲನ್ನು ತಿಂದು ಜೀರ್ಣಿಸಿ ಅದನ್ನು ಸಗಣಿ ರೂಪದ ಗೊಬ್ಬರವಾಗಿ ಬುಟ್ಟಿಯಷ್ಟು ಇದ್ದುದನ್ನು ಬೊಗಸೆ ಯಷ್ಟಕ್ಕೆ ಪರಿವರ್ತಿಸಿಕೊಡುವ ಒಂದು ಜೀವಂತ ಗೊಬ್ಬರ ಮಾಡುವ ಯಂತ್ರ ಇದ್ದರೆ ಅದು ಹಸು/ಎಮ್ಮೆ/ಆಡು, ಕುರಿ ಮಾತ್ರ. ಅದರಲ್ಲೂ ನಮ್ಮ ಸುತ್ತಮುತ್ತ ಅನಾದಿ ಕಾಲದಿಂದ ಸಾಕಣೆಯಲ್ಲಿದ್ದ  ಸ್ಥಳೀಯ ಹಸುವಿನ ಈ ಸಗಣಿಯಲ್ಲೇ ಉಪಯೋಗ ಹೆಚ್ಚು.  ದೇಸೀ ಹಸು ಅಥವಾ ಸ್ಥಳೀಯ ನಾಟಿ ಹಸು ಅಥವಾ ಮೇಯಲು ಬಿಟ್ಟು  ಸಾಕುವ ಹಸುಗಳ ಸಗಣಿಯನ್ನು…

Read more
error: Content is protected !!