ಕೆಂಪಡಿಕೆ ಚೇತರಿಕೆ- ಚಾಲಿ ಅಡಿಕೆಗೆ ಮಬ್ಬು. 21-01-2022 ರಂದು ಧಾರಣೆ.
ನಿರೀಕ್ಷೆಯಂತೆ ಕೆಂಪಡಿಕೆ ಮಾರುಕಟ್ಟೆಯಲ್ಲಿ ಚೇತರಿಕೆ ಪ್ರಾರಂಭವಾಗಿದೆ. ಖರೀದಿಯಲ್ಲಿ ಉತ್ಸಾಹ (Force) ಇದೆ ಎಂಬುದಾಗಿ ವರ್ತಕರು ಹೇಳುತ್ತಿದ್ದಾರೆ. ಯಾವಾಗಲೂ ಸರಾಸರಿ ದರ ಮತ್ತು ಗರಿಷ್ಟ ದರಗಳ ಅಂತರ ಹತ್ತಿರವಾದರೆ ಖರೀದಿಯಲ್ಲಿ ಆಸಕ್ತಿ ಹೆಚ್ಚು ಎನ್ನಲಾಗುತ್ತದೆ. ಇದು ಈಗ ಪ್ರಾರಂಭವಾಗಿದೆ. ಚಾಲಿ ಮಾತ್ರ ಸ್ವಲ್ಪ ಮಬ್ಬು. ದಿನಾಂಕ 21-01-2022 ರಂದು ರಾಜ್ಯದೆಲ್ಲೆಡೆ ಧಾರಣೆ. ಕರಾವಳಿಯ ಚಾಲಿ ಅಡಿಕೆ ಈ ವರ್ಷ ಗುಣಮಟ್ಟ ಇಲ್ಲ. ಯಾವಾಗಲೂ ಕರಾವಳಿಯ ಚಾಲಿ ಅಡಿಕೆ ಎಂದರೆ ಅದಕ್ಕೆ ವಿಶೇಷ ಸ್ಥಾನಮಾನ ಇತ್ತು. ಈ ವರ್ಷದ ಪ್ರತಿಕೂಲ…
