2022 ಹೊಸ ವರ್ಷದ ಮೊದಲ ದಿನ – ಚಾಲಿ- ಕರಿಮೆಣಸು ಇಳಿಕೆ. ಕೆಂಪು ಸ್ಥಿರ, ಕೊಬ್ಬರಿ ಏರಿಕೆ.
2021 ಕಳೆದು 2022 ಬಂದಾಯ್ತು. 2021 ನೇ ವರ್ಷದಲ್ಲಿ ಚಾಲಿ ಅಡಿಕೆ ಬೆಳೆಗಾರರು ತಮ್ಮ ಆನುಭವದಲ್ಲಿ ಕಂಡಿರದ ದರ ಏರಿಕೆಯನ್ನು ನೋಡಿದ್ದಾರೆ. ಸಂತೋಷ ಪಡಬೇಕಾದ ಸಂಗತಿ. ಆದರೆ ಕೆಂಪಡಿಕೆಗೆ ಮಾತ್ರ ಅಂಥಃ ಬೆಲೆ ಏರಿಕೆ ಆಗಿಲ್ಲ. ನಿರಾಸೆಯೂ ಆಗಿಲ್ಲ. ಹೊಸ ವರ್ಷದ ಮೊದಲ ದಿನ ಚಾಲಿ ಸ್ವಲ್ಪ ಇಳಿಕೆಯೂ, ಕೆಂಪು ಸ್ಥಿರವಾಗಿಯೂ, ಕರಿಮೆಣಸಿನ ಬೆಲೆ ಕುಸಿತ ಆಗಿದೆ. ಕೊಬ್ಬರಿ ಏರಿದೆ. 2022 ನೇ ಇಸವಿಯೂ ರೈತರ ಪಾಲಿಗೆ ಅದೃಷ್ಟದ ವರ್ಷವಾಗಿಯೇ ಉಳಿಯಲಿದೆ. ಕಳೆದ ಮೂರು ನಾಲ್ಕು…
