ಅಡಿಕೆ ಮರಗಳು ಸಾಯುವುದಕ್ಕೆ ಪ್ರಮುಖ ಕಾರಣ ಮತ್ತು ಪರಿಹಾರ.
ಬಹಳಷ್ಟು ಅಡಿಕೆ ಬೆಳೆಗಾರರ ತೋಟದಲ್ಲಿ ಫಲಕೊಡುತ್ತಿರುವ ಸಸಿ/ ಮರಗಳು ಸಾಯುತ್ತವೆ. ರೈತರು ಇಂತಹ ಸಮಸ್ಯೆ ಆದಾಗ ಫೇಸ್ ಬುಕ್ ನಲ್ಲಿ ವಿಷಯ ಹಾಕಿ ಪರಿಹಾರ ಅಪೇಕ್ಷಿಸುತ್ತಾರೆ. ಅಲ್ಲಿ ಒಂದಶ್ಟು ಕಮೆಂಟ್ ಗಳು ಬರುತ್ತವೆ. ಅವರಿಗೆ ಸರಿಕಂಡದ್ದನ್ನು ಸ್ವೀಕರಿಸುತ್ತಾರೆ. ವಾಸ್ತವವಾಗಿ ಅಡಿಕೆ ಸಸಿಗಳು ಸಾಯುವುದಕ್ಕೆ ಕಾರಣ ಎರಡು. ಯಾವುದೇ ಸಸಿ ಸಾಯಬೇಕಾದರೆ ಅದರ ಬೇರಿಗೆ ತೊಂದರೆ ಆಗಿರಬೇಕು ಆಥವಾ ಸಸ್ಯದ ಮೇಲಿನ ಭಾಗಕ್ಕೆ ಯಾವುದಾದರೂ ರೋಗ ತಗಲಿ ಅದರಿಂದಾಗಿ ಸಾಯಬೇಕು. ಇವೆರಡರಲ್ಲಿ ಯಾವುದು ಆಗಿದೆ ಎಂದು ಪರಿಶೀಲಿಸಿದರೆ ಅದಕ್ಕೆ…
