ಶ್ರೀಗಂಧದ ಗಿಡ

ಶ್ರೀಗಂಧದಿಂದ ಕೋಟಿ ಆದಾಯ ಯಾರು ಗಳಿಸಬಹುದು?

ಉಳಿದೆಲ್ಲಾ ಬೆಳೆಗಳಲ್ಲಿ ನಾವು ಸಂಪಾದಿಸಿದ್ದು ಶೂನ್ಯ. ಶ್ರೀಗಂಧದಲ್ಲಿಯಾದರೂ ಕೈತುಂಬಾ ಆದಾಯ ಪಡೆಯಬಹುದೆಂಬ ಹಂಬಲದಲ್ಲಿ  ರೈತರು ಈ ಬೆಳೆಯ ಹಿಂದೆ ಬಿದ್ದಿದ್ದಾರೆ. ಶ್ರೀಗಂಧ ಬೆಳೆಸುವ ಸುದ್ದಿ ಕೇಳಿದರೆ ಸಾಕು ಜನರ ಕಿವಿ ನೆಟ್ಟಗಾಗುತ್ತದೆ. ಈ ಬೆಳೆಯಲ್ಲಿ ಕೋಟಿಗೂ ಹೆಚ್ಚು ಸಂಪಾದಿಸಬಹುದು ಎಂಬ ಸಂಗತಿ ಯಾರ ಕಿವಿಯನ್ನೂ ನೆಟ್ಟಗೆ ಮಾಡದೆ ಇರದು. ನಮ್ಮ ದೇಶವೂ ಸೇರಿದಂತೆ  ಹೊರ ದೇಶಗಳಲ್ಲೂ ಈಗ ಶ್ರೀಗಂಧ ಬೆಳೆ  ಬೆಳೆಯುತ್ತಿದೆ. ಶ್ರೀಗಂಧ ಈಗ ರೈತರು ಬೆಳೆಸಬಹುದಾದ ಬೆಳೆಯಾಗಿದೆ. ಇದನ್ನು ಬೆಳೆಸಲು ಪರವಾನಿಗೆ ಬೇಡ. ಅದನ್ನು ಕಡಿದು…

Read more
ಅಂದು ವನಿಲ್ಲಾ ಮುಂದೆ ಕರಿಮೆಣಸು.

ಅಂದು ವನಿಲ್ಲಾ –ಮುಂದೆ ಕರಿಮೆಣಸು. ಬೆಳೆಗಾರರು ಸಿದ್ಧರಿರಲೇಬೇಕು.

ಒಂದು ಕಾಲದಲ್ಲಿ ಸುಮಾರು 20 ವರ್ಷಕ್ಕೆ ಹಿಂದೆ ವನಿಲ್ಲಾ ಎಂಬ ಸಾಂಬಾರ ಬೆಳೆ ಭಾರೀ ಉಚ್ಛ್ರಾಯ ಸ್ಥಿತಿಗೆ ತಲುಪಿತ್ತು. ವನಿಲ್ಲಾ  ಬೆಳೆಯೊಂದಿದ್ದರೆ  ಕೃಷಿಕನ ಸ್ಥಿತಿಗತಿಯೇ ಬದಲಾಗಲಿದೆ ಎಂಬ ಹವಾ ಇತ್ತು. ಜನ ಭಾರೀ ಪ್ರಮಾಣದಲ್ಲಿ ಬೆಳೆ ಬೆಳೆಸಿದ್ದರು. ಸಾಕಷ್ಟು ಪ್ರಯೋಗಗಳನ್ನೂ ಮಾಡಿದ್ದರು. ಮಾಹಿತಿಗಾಗಿಯೇ ಕೆಲವು ತಜ್ಞರು ಸಿದ್ದರಾಗಿದ್ದರು. ಈ ಬೆಳೆ ರೈತರನ್ನು  ಮರುಳು ಮಾಡಿದಷ್ಟು ಯಾವ ಬೆಳೆಯೂ ಮಾಡಿರಲಿಕ್ಕಿಲ್ಲ. ಬಹುಷಃ ಈ ಬೆಳೆಯನ್ನು ಬೆಳೆಸದವರೇ ಇರಲಿಕ್ಕಿಲ್ಲ. ಅದೇ ಸ್ಥಿತಿ ಕರಿಮೆಣಸಿಗೆ ಬರಬಹುದೇ?  ಸಾಧ್ಯತೆ ಇಲ್ಲದಿಲ್ಲ. ಯಾವುದೇ ಬೆಳೆ…

Read more
tasty vegetable grown with out manure

ನಾವು ತಿನ್ನುವ ಆಹಾರ ರುಚಿ ಇರುವುದಿಲ್ಲ ಕಾರಣ ಇಷ್ಟೇ

ಮಣ್ಣು ಫಲವತ್ತಾಗಿದ್ದರೆ ಅದರಲ್ಲಿ ಬೆಳೆದ ಬೆಳೆಯ ಗುಣಮಟ್ಟ ಉತ್ತಮವಾಗಿರುತ್ತದೆ. ಅದಕ್ಕೆ ರುಚಿಯೂ ಇರುತ್ತದೆ. ಆರೋಗ್ಯಕ್ಕೂ ಉತ್ತಮ. ಮಣ್ಣಿಗೆ ಜೀವ ಇದೆ.ಇದು ಕೃಷಿಗೆ ಜೀವ ಕೊಡುತ್ತದೆ . ಮಣ್ಣಿನಲ್ಲಿ ಅನೇಕ ಪೋಷಕಾಂಶಗಳು ಮತ್ತು ಕಣ್ಣಿಗೆ ಕಾಣದ ಸೂಕ್ಷ್ಮ ಜೀವಿಗಳು ಸೇರಿಕೊಂಡಿವೆ . ಮಣ್ಣು ಇಲ್ಲದೆ ಯಾವುದೇ ಜೀವಿ ಬದುಕಲು ಸಾಧ್ಯವಿಲ್ಲ. ಅದೇ ರೀತಿ ಯಾವುದೇ ಜೀವಿ ಇಲ್ಲದೇ ಮಣ್ಣು ಆಗಲು ಸಾಧ್ಯವಿಲ್ಲ. ಒಂದು ಇಂಚು ಮಣ್ಣು ಆಗಬೇಕಾದರೆ ಸಾವಿರಾರು ವರ್ಷಗಳೇ ಬೇಕಾಗುತ್ತದೆ. ಇಂದು ಅವೈಜ್ಞಾನಿಕ ರಾಸಾಯನಿಕಗಳ ಬಳಕೆಯಿಂದ ಮಣ್ಣು,…

Read more
ಕರಿಮೆಣಸು ಉತ್ತಮ ಕ್ವಾಲಿಟಿ

ರೂ. 615 ದಾಟಿದ ಕರಿಮೆಣಸು ಧಾರಣೆ- ಶಿರಸಿಯ ದಾಖಲೆ.

ಕರಿಮೆಣಸು ಧಾರಣೆ ಕಳೆದ ಕೆಲವು ವರ್ಷಗಳಿಂದ ನೆಲಕಚ್ಚಿತ್ತು. ಅಡಿಕೆಯ ಮಿಶ್ರ ಬೆಳೆಯಾಗಿದ್ದರೂ ಸಹ ಅಡಿಕೆಗಿಂತ ಕಡಿಮೆ ದರದಲ್ಲಿ ಇತ್ತು. ಈ ವರ್ಷ ಅಕ್ಟೋಬರ್ ತಿಂಗಳು ಇದಕ್ಕೆ ಅಂಟಿದ ಗ್ರಹಣ ಬಿಡುಗಡೆಯಾದಂತಾಗಿದೆ. ಮೆಣಸಿನ ಬೆಲೆ ಬಹುಷಃ ಮುಂದಿನ ವರ್ಷಕ್ಕೆ 800 ಆದರೂ ಅಚ್ಚರಿ ಇಲ್ಲ ಎಂಬ ವರದಿಗಳಿವೆ. ದಿನಾಂಕ 24-11-2021 ರ ಬುಧವಾರ  ಶಿರಸಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ  ಕರಿಮೆಣಸಿನ ಬೆಲೆ 615.99 ಗರಿಷ್ಟ ದರ ದಾಖಲಾಗಿದೆ.ಉಳಿದೆಡೆ ಏರಿಕೆ ಆಗಿಲ್ಲ. ಪ್ರಪಂಚದ ಎಲ್ಲಾ ಮೆಣಸು ಬೆಳೆಯುವ ದೇಶಗಳಲ್ಲೂ ಉತ್ಪಾದನೆ…

Read more
ಸಂಪೂರ್ಣ ಸಾವಯವ ತರಕಾರಿ

ಆರೋಗ್ಯ ರಕ್ಷಕ ಸಾವಯವ ತರಕಾರಿಗಳು.

ಗಡ್ಡೆ ಗೆಣಸಿನ ಬೆಳೆ ಬಹಳ ಹಿಂದಿನದ್ದು. ಬಹುಷಃ  ಮಾನವ ಬೇಯಿಸಿ ತಿನ್ನುವುದನ್ನು ಕಲಿಯುವ ಮುಂಚೆ  ಕಂದ ಮೂಲಗಳನ್ನು ತಿಂದು ಬದುಕುತ್ತಿದ್ದರಂತೆ. ಇದರಷ್ಟು ಆರೋಗ್ಯಕರ ತರಕಾರಿ ಬೇರೊಂದಿಲ್ಲ. ಇದಕ್ಕೆ ರಾಸಾಯನಿಕಗಳ ಅಗತ್ಯವೇ ಇಲ್ಲ. ಸಂಪೂರ್ಣ ಸಾವಯವ ತರಕಾರಿ ಎಂದರೆ ಇದು. ಇವುಗಳನ್ನು ಮರೆತು ಹೋದ ತರಕಾರಿಗಳು ಎಂದು ಹೇಳಿದರೂ ತಪ್ಪಾಗಲಾರದು. ತಲೆಮಾರಿನಿದ ತಲೆಮಾರಿಗೆ ಬದಲಾವಣೆಯಾಗುವಾಗ ಕೆಲವು ಮರೆತು ಹೋಗುವ ವಿಚಾರಗಳಿರುತ್ತವೆ. ಅವುಗಳಲ್ಲಿ ಈ ಗಡ್ಡೆ ಗೆಣಸು ತರಕಾರಿಗಳ ಬೆಳೆ ಹಾಗೂ ಅಡುಗೆಯೂ ಸೇರಿದೆ. ಈ ತರಕಾರಿಗಳಲ್ಲಿ  ಇರುವಷ್ಟು ಆರೋಗ್ಯ ಗುಣ…

Read more
ವಿಯೆಟ್ನಾಂ ಸೂಪರ್ ಅರ್ಲಿ ತಳಿಯ ಕಾಯಿ ಹಲಸು ಮತ್ತು ಹಣ್ಣು

1 ವರ್ಷಕ್ಕೆ ಕಾಯಿ ಬಿಡುವ ವಿಶೇಷ ಹಲಸು ಇದು!

ಹಲಸಿನಲ್ಲಿ 1 ವರ್ಷಕ್ಕೆ ಕಾಯಿ ಬರುತ್ತದೆ ಎಂದರೆ ಯಾರಾದರೂ ನಂಬುವುದುಂಟೇ? ಬಹುಷಃ ಹಳೆ ತಲೆಗಳು ಇದನ್ನು ನಂಬಲಿಕ್ಕಿಲ್ಲ. ಈಗ ಹಲಸಿನಲ್ಲಿ ಕಸಿ ಮಾಡಿದ ಸಸಿಗಳನ್ನು ಉತ್ಪಾದಿಸುವ ಕಾರಣದಿಂದ ಸಾಂಪ್ರದಾಯಿಕವಾಗಿ ನಾವು 7-8 ವರ್ಷ ಕಾದು ಇಳುವರಿ ಪಡೆಯುವಂತಹ ಪ್ರಮೇಯ ಇಲ್ಲ. ನೆಟ್ಟು ಗಿಡದ ಬೆಳೆವಣಿಗೆ ಹೊಂದಿ 3-4 ವರ್ಷಕ್ಕೆ ಫಲ ಕೊಡಲು ಪ್ರಾರಂಭವಾಗುತ್ತದೆ. ಆದರೆ ಇದೊಂದು ತಳಿ ಮಾತ್ರ ಕಸಿ ಗಿಡ ನೆಟ್ಟು 1 ವರ್ಷಕ್ಕೆ ಕಾಯಿ ಬಿಡುತ್ತದೆ. ವಿಯೆಟ್ನಾಂ ಸೂಪರ್ ಅರ್ಲಿ (Vietnam super early)…

Read more

ಡ್ರೋನುಗಳ ಹಾರಾಟಕ್ಕೆ ಅನುಮತಿಯೇ ಇಲ್ಲ – ಗೊತ್ತೇ?

ಬಹಳ ಜನ ಅದರಲ್ಲೂ ಕೃಷಿಗೆ ಪ್ರವೇಶಿಸುವ ಹೊಸ ತಲೆಮಾರು  ಅಡಿಕೆ ಮುಂತಾದ ಬೆಳೆಗಳಿಗೆ ಸಿಂಪರಣೆ ಎಂಬ ಪರಿಶ್ರಮದ ಕೆಲಸಕ್ಕೆ ಆತೀ ಆಧುನಿಕ ವ್ಯವಸ್ಥೆಯಾದ ಡ್ರೋನುಗಳನ್ನು ಬಳಸುವ ಬಗ್ಗೆ ಮಾತಾಡುತ್ತಾರೆ.  ಕೆಲವರು ಅದನ್ನು ತಯಾರಿಸಿ ಶ್ಲಾಘ್ಹನೆ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಆದರೆ ಡ್ರೋನು ಬಳಸಿ ಸಿಂಪರಣೆ ಮಾಡುವಂತಿಲ್ಲ. ಡ್ರೋನು ಹಾರಾಟಕ್ಕೆ ಅನುಮತಿಯೂ ಬೇಕು. The Union Government has clarified that drone-spraying is illegal. “As per the provisions of Insecticides Act 1968, aerial application of pesticides need…

Read more
Root System of Areca Nut Plants

Root System of Areca Nut Plants

Farmer who grows areca nut, he must know its root system and its functions. The areca nut plant (Areca catechu), a vital plantation crop in tropical regions, especially in India, exhibits a typical monocotyledonous fibrous root system. The root system of areca nut is crucial for water and nutrient absorption, physical support, and overall plant…

Read more
ಹೊಸತಾಗಿ ತೋಟ ಮಾಡುತ್ತೀರಾ

ಹೊಸತಾಗಿ ತೋಟ ಮಾಡುತ್ತೀರಾ ? ಹೀಗೆ ಮಾಡಿ.

ಹೊಸತಾಗಿ ಅಡಿಕೆ ಸಸಿಗಳನ್ನು  ನೆಡುವಾಗ ಸಾಂಪ್ರದಾಯಿಕ  ಅಂತರದಲ್ಲಿ  ಸ್ವಲ್ಪ ಬದಲಾವಣೆ ಮಾಡಿ ಅಷ್ಟೇ ಸಸಿ ಹಿಡಿಸಿ  ಬೇರೆ  ಬೇರೆ ಅಂತರದಲ್ಲಿ ನಾಟಿ ಮಾಡಿದರೆ  ಮಿಶ್ರ ಬೆಳೆ ಬೆಳೆಸಲು ಸುಲಭ. ಭವಿಷ್ಯದಲ್ಲಿ ಕೆಲಸಗಾರರ ಸಮಸ್ಯೆಗೆ ಇದು ಪರಿಹಾರವಾಗಲಿದೆ. ಮುಂದಿನ ದಿನಗಳಲ್ಲಿ ಕೆಲಸಗಾರರು ಸಿಗುತ್ತಾರೆ ಎಂಬ ಆಶೆ ಬೇಡ. ಇಷ್ಟಕ್ಕೂ ಕೆಲಸಗಾರರಿಗೆ ಕಾಲ ಕಾಲಕ್ಕೆ ಏರಿಕೆಯಾಗುವ ಮಜೂರಿಯನ್ನು ಕೊಡಲು ಕೃಷಿಯ ಉತ್ಪಾದನೆ ಸಾಲದು. ಹೀಗಿರುವಾಗ ನಮಗೆ ಇರುವ ಆಯ್ಕೆ ಕೆಲಸದವರ ಅವಲಂಬನೆಯನ್ನು ಕಡಿಮೆ ಮಾಡುವುದು ಒಂದೇ. ಇದಷ್ಟೇ ಅಲ್ಲ. ಒಂದು…

Read more
ಗ್ರಾಮೀಣ ಪಶು ಸಂಗೋಪನೆ

ಪಶು ಸಂಗೋಪನೆಯಿಂದ -ಆರೋಗ್ಯ ಮತ್ತು ಗೊಬ್ಬರದ ಲಾಭ.

ಹಿಂದಿನಿಂದಲೂ  ಕೃಷಿ ಮಾಡುವವರು  ಹಸು ಸಾಕಾಣಿಕೆ ಮಾಡುತ್ತಿದ್ದರು. ಈಗಲೂ ಹೆಚ್ಚಿನ ಜನ ಕೃಷಿಗೆ ಗೊಬ್ಬರ ಬೇಕು ಎಂಬ ಉದ್ದೇಶಕ್ಕಾಗಿ ಹಸು ಸಕಾಣೆ ಮಾಡುತ್ತಾರೆ. ಕೆಲವು ಜನ ಹಸು ಸಾಕಣೆ ಇಲ್ಲದೆ ಕೃಷಿ ಮಾಡಬಹುದು ಎನ್ನುವ ವಾದದವರೂ ಇದ್ದಾರೆ. ಮಣ್ಣಿನ ಫಲವತ್ತೆತೆ ಹೆಚ್ಚಿಸುವ ನಿಟ್ಟಿನಲ್ಲಿ ಸಾವಯವ ಗೊಬ್ಬರ ಅಗತ್ಯ. ಮಿತವ್ಯಯದಲ್ಲಿ ಸಾವಯವ ಗೊಬ್ಬರ ಆಗುವುದಿದ್ದರೆ ಅದು ಹಸುವಿನ ತ್ಯಾಜ್ಯಗಳಿಂದ ಮಾತ್ರ. ಅಲ್ಲದೆ ನಮ್ಮ ದೇಹಕ್ಕೆ ಬೇಕಾಗುವ ಪೌಷ್ಟಿಕ ಆಹಾರಕ್ಕೂ ಹಸು ಸಾಕಾಣಿಕೆ ಅಗತ್ಯ. ಒಂದೇ ದಿನದಲ್ಲಿ ಗೊಬ್ಬರ ಆಗಬೇಕೇ,…

Read more
error: Content is protected !!