ತೋಟಕ್ಕೆ ಮಣ್ಣು – Fresh soil

ತೋಟಕ್ಕೆ ಹೇಗೆ ಮಣ್ಣು ಹಾಕಬೇಕು- ಯಾವ ಮಣ್ಣು ಸೂಕ್ತ ?

ಅಡಿಕೆ ತೋಟಕ್ಕೆ ಮಣ್ಣು ಹಾಕುವುದು ನಾವೆಲ್ಲಾ ಮಾಡುವ ಒಂದು ಪ್ರಮುಖ ಬೇಸಾಯ ಕ್ರಮ. ಮಣ್ಣು ಹಾಕುವ ಪದ್ದತಿ ಒಳ್ಳೆಯದು. ಅದರೆ ಹಾಕುವಾಗ ಹೇಗೆ ಹಾಕಬೇಕು, ಎಂತಹ ಮಣ್ಣು ಹಾಕಬೇಕು, ಎಷ್ಟು ಪ್ರಮಾಣದಲ್ಲಿ ಹಾಕಬೇಕು ಎಂಬುದು ಪ್ರಾಮುಖ್ಯ ಸಂಗತಿ. ತೀರಾ ಹೆಚ್ಚಿನ ಪ್ರಮಾಣದಲ್ಲಿ ಮಣ್ಣು ಹಾಕಬಾರದು. ಫಲವತ್ತಾಗಿರದ ಮಣ್ಣು ಬೇಡ. ಸಾವಯವ ವಸ್ತುಗಳು ಸೇರಿ ಬಣ್ಣ ಬದಲಾದ ಮಣ್ಣನ್ನು ಹಾಕಿದರೆ ಅದರ ಪ್ರಯೋಜನ ಹೆಚ್ಚು. ತೋಟ- ಹೊಲಕ್ಕೆ ಹೊಸ ಮಣ್ಣು ಹಾಕುವ ಉದ್ದೇಶ ಮಣ್ಣು ಹೆಚ್ಚು ಸಡಿಲವಾಗಿ ಮೇಲು…

Read more
ಹಳೆ ಆಡಿಕೆ

ಹಳೆ ಅಡಿಕೆ- ಹೊಸ ಅಡಿಕೆ ಬೆಲೆ ವ್ಯತ್ಯಾಸ ರೂ.100 ಯಾಕೆ?

ಅಡಿಕೆ ಹಳೆಯದಾದರೆ ಅದಕ್ಕೆ ವಾರ್ಷಿಕ ಶೇ.25 ರ ಬಡ್ಡಿ ಬರುತ್ತದೆ ಎಂಬುದು ಈ ವರ್ಷದ  ಧಾರಣೆಯಲ್ಲಿ ಮನವರಿಯಾಗಿದೆ. ದರ ಹೀಗೇ ಉಳಿದರೆ ಮುಂದೆ ಬೆಳೆಗಾರರು ಯಾವುದಾದರೂ ಬ್ಯಾಂಕ್ ನಲಿ ಸಾಲ ಮಾಡಿ ಅದರ ಬಡ್ಡಿ ಕಟ್ಟಿದರೂ ಹೊಸ ಅಡಿಕೆ ಮಾರಾಟ ಮಾಡಬೇಕಾಗಿಲ್ಲ. ಹೊಸ ಅಡಿಕೆ ಮುಂದಿನ ಫಸಲು ಬರುವ ವರೆಗೆ ಉಳಿಸಿಕೊಂಡರೆ ಅದಕ್ಕೆ ಕಿಲೋ ಮೇಲೆ 100 ರೂ. ಹೆಚ್ಚು ಸಿಗುತ್ತದೆ. ಈ ತನಕ ಹಳೆ ಅಡಿಕೆಗೂ ಹೊಸ ಅಡಿಕೆಗೂ ವ್ಯತ್ಯಾಸ ರೂ. 30-40 ಇರುತ್ತಿತ್ತು.  ಆದರೆ…

Read more
ಸ್ಟ್ರಾಬೆರಿ ಹಣ್ಣು

ನಾವೂ ಬೆಳೆಸಬಹುದೇ ಸ್ಟ್ರಾಬೆರಿ ಬೆಳೆ.

ಕೆಂಪು ಕೆಂಪಾದ ಸ್ಟ್ರಾಬೆರಿ ಹಣ್ಣೆಂದರೆ  ಎಲ್ಲರಿಗೂ  ಇಷ್ಟ. ಈ ಹಣ್ಣು  ಬೆಳೆಸಬೇಕು ತಿನ್ನಬೇಕು ಎಂಬ ತವಕ. ಆದರೆ ಇದನ್ನು ಎಲ್ಲಾ ಕಡೆ ಬೆಳೆಸಲು ಆಗುವುದಿಲ್ಲ. ಸೂಕ್ತ ವಾತಾವರಣದಲ್ಲಿ  ಮಾತ್ರ ಇದು ಉತ್ತಮವಾಗಿ ಬೆಳೆದು ಉತ್ತಮ ಹಣ್ಣುಗಳನ್ನು ನೀಡುತ್ತದೆ.  ಕೈ ಹಿಡಿದರೆ  ಮಾತ್ರ ಇದು ಭಾರೀ ಲಾಭದ ಬೆಳೆ . ನಾವೆಲ್ಲಾ ಮಾರುಕಟ್ಟೆಯಿಂದ ಖರೀದಿ ಮಾಡುವ ಸ್ಟ್ರಾಬೆರಿ ಹಣ್ಣುಗಳು  ಬರುವುದು ಮಹಾರಾಷ್ಟ್ರದ  ಮಹಾಬಲೇಶ್ವರದಿಂದ. ಇದಕ್ಕೆ ಮಹಾಬಲೇಶ್ವರ ಸ್ಟ್ರಾಬೆರಿ ಎಂಬ ಹೆಸರು.  ದೇಶದ ಬೇರೆ ಕಡೆಗಳಲ್ಲಿ ಬೆಳೆಯುತ್ತಾರೆಯಾದರೂ ಇಷ್ಟು ಪ್ರಮಾಣ…

Read more
Shade net house

ಪಾಲೀ ಹೌಸ್ ಬೇಕಾಗಿಲ್ಲ – ನೆರಳು ಮನೆಯೇ ಸಾಕು.

ಬೆಳೆ ಬೆಳೆಸುವಾಗ ಎಷ್ಟು ಸಾಧ್ಯವೋ ಅಷ್ಟು ಖರ್ಚು ಕಡಿಮೆ  ಮಾಡಬೇಕು. ಪಾಲೀ ಹೌಸ್  ಎಂದರೆ ಅದು ಆನೆ ಸಾಕಿದಂತೆ. ಅದರ ಬದಲು ತುಂಬಾ ಕಡಿಮೆ ಖರ್ಚಿನಲ್ಲಿ  ಆಗುವ ನೆರಳು ಬಲೆ  ಅಥವಾ ನೆಟ್ ಹೌಸ್  ಒಳಗೆ  ಬಹುತೇಕ ಎಲ್ಲಾ ನಮೂನೆಯ  ಬೆಳೆಗಳನ್ನೂ ಬೆಳೆಯಬಹುದು. ರೈತರಿಗೆ ಇದೇ ಅನುಕೂಲಕರ.   ನೆರಳು ಮನೆ  ಎಂದರೆ ಬೆಳೆಗಳ ಮೇಲ್ಭಾಗದಲ್ಲಿ ನಿರ್ದಿಷ್ಟ ಪ್ರಮಾಣದ ನೆರಳನ್ನು ಒದಗಿಸುವ  ಪರದೆಯನ್ನು  ಹಾಸಿ ಮಾಡಿದ ರಚನೆ. ಇಲ್ಲಿ ನೆರಳು ಎಂಬುದು ಕೆಲವು ಬೆಳೆಗಳಿಗೆ ಬೇಕಾಗುತ್ತದೆಯಾದರೂ  ಇದರ…

Read more
ಬಸಿಗಾಲುವೆ – ಅಡಿಕೆ, ತೆಂಗಿನ ತೋಟಕ್ಕೆ ಇದು ಯಾಕೆ ತೀರಾ ಅಗತ್ಯ

ಬಸಿಗಾಲುವೆ – ಅಡಿಕೆ, ತೆಂಗಿನ ತೋಟಕ್ಕೆ ಇದು ಯಾಕೆ ತೀರಾ ಅಗತ್ಯ?

ಬಸಿಗಾಲುವೆ  ಇಲ್ಲದ ಅಡಿಕೆ, ತೆಂಗಿನ ತೋಟದಲ್ಲಿ ಯಾವಾಗಲೂ ಒಂದಿಲ್ಲೊಂದು ಸಮಸ್ಯೆ ಇದ್ದೇ ಇರುತ್ತದೆ. ನೆಲಕ್ಕೆ ಮಳೆಯ ಮೂಲಕ ಸೇರುವ ನೀರು ಮಣ್ಣನ್ನು ತೇವವಷ್ಟೇ ಮಾಡಿ  ಸರಾಗವಾಗಿ ಹರಿದು ಹೋಗುತ್ತಿರಬೇಕು. ಆಗ ಸಸ್ಯಗಳ ಆರೋಗ್ಯಕ್ಕೆ ಅದು ಅನುಕೂಲಕರ. ಅಡಿಕೆ ತೆಂಗು, ತಾಳೆ, ಬಾಳೆ, ಕರಿಮೆಣಸು ಮುಂತಾದ ಏಕದಳ ಸಸ್ಯಗಳ ಬೇರು ನೀರಿಗೆ ಸೂಕ್ಷ್ಮ ಗ್ರಾಹಿಯಾಗಿದ್ದು, ಸ್ವಲ್ಪ ಹೆಚ್ಚಾದರೂ ತೊಂದರೆ ಉಂಟುಮಾಡುತ್ತದೆ. ಸಸ್ಯಗಳಿಗೆ ನೀರು ಬೇಕೇ? ಬೇಡ. ಸಸ್ಯಗಳಿಗೆ ಅವು ಬೇರು ಬಿಟ್ಟಿರುವ ಮಣ್ಣು ಎಂಬ ಮಾಧ್ಯಮ ತೇವಾಂಶದಿಂದ ಕೂಡಿದ್ದರೆ…

Read more
ಎಲೆಚುಕ್ಕೆ ರೋಗ ಸಿಂಪರಣೆಯಿಂದ ವಾಸಿಯಾಗುವುದಿಲ್ಲ. ಯಾಕೆ ಗೊತ್ತೇ?

ಸಿಂಪರಣೆಯಿಂದ ಎಲೆ ಚುಕ್ಕೆರೋಗ ವಾಸಿ ಅಸಾಧ್ಯ. ಯಾಕೆ?

ಅಡಿಕೆಗೆ ಬಾದಿತವಾದ ಎಲೆ ಚುಕ್ಕೆರೋಗ ವಾಸಿ ಮಾಡುವುದಕ್ಕೆ ತಜ್ಞರು ಬಹಳಷ್ಟು ಸಲಹೆಗಳನ್ನು ನೀಡುತ್ತಿದ್ದಾರೆ.  ಅವರ ಸಲಹೆಯನ್ನು ಪಾಲಿಸಿದವರಲ್ಲಿ ಈ ರೋಗ ಒಮ್ಮೆ ಹತೋಟಿಯಾದಂತೆ ಕಂಡರೂ ಮತ್ತೆ ನಾನಿದ್ದೇನೆ ಎಂದು ಮರುಕಳಿಸುತ್ತಿದೆ. ದುಬಾರಿ ಬೆಲೆಯ ಶಿಲೀಂದ್ರ ನಾಶಕ- ದುಬಾರಿ ಕೂಲಿ ಸಂಭಾವನೆಯೊಂದಿಗೆ ಎಲೆಚುಕ್ಕೆ ರೋಗ ಓಡಿಸುವ ರೈತರ ಶ್ರಮ ಹೇಳತೀರದು. ಎಲೆ ಚುಕ್ಕೆ ರೋಗವನ್ನು ಅಲ್ಪ ಕಾಲದ ತನಕ ಹತೋಟಿ ಮಾಡಬಹುದೇ ಹೊರತು ಇಲ್ಲದಂತೆ ಮಾಡಲು  ಪ್ರಕೃತಿಯೇ ಸಹಕರಿಸಬೇಕು. ಎಲೆ ಚುಕ್ಕೆರೋಗ ಅಡಿಕೆ ಬೆಳೆಗಾರರ ಪಾಲಿಗೆ ಇಷ್ಟು ದೊಡ್ಡ …

Read more
ಈ ದಾಳಿಂಬೆ ಹಣ್ಣು ಉಚಿತವಾಗಿ ಕೊಟ್ಟರೂ ಗಿರಾಕಿ ಇಲ್ಲ. ಯಾಕೆ?

ಈ  ದಾಳಿಂಬೆ ಹಣ್ಣು ಉಚಿತವಾಗಿ ಕೊಟ್ಟರೂ ಗಿರಾಕಿ ಇಲ್ಲ. ಯಾಕೆ?

ಇಲ್ಲಿ ತೋರಿಸಿದ ದಾಳಿಂಬೆ ಹಣ್ಣು ನೋಡಲು ಆಕರ್ಷಕವಾಗಿಲ್ಲ. ಹಾಗಾಗಿ ಉಚಿತವಾಗಿ ಕೊಟ್ಟರೂ ಕೊಳ್ಳುವುದಕ್ಕೆ ಗಿರಾಕಿ ಇಲ್ಲ. ಇದನ್ನು ಹಣ್ಣು ಮಾರುವ ಅಂಗಡಿ,ಸೂಪರ್ ಮಾರ್ಕೆಟ್ ನಲ್ಲಿ ಮಾರಲಿಕ್ಕಾಗುವುದಿಲ್ಲ. ಇದನ್ನು ರೈತರ ಹೊಲದಿಂದ ಕೊಳ್ಳುವವರೂ ಇಲ್ಲ. ಇದನ್ನು ಉಚಿತವಾಗಿ ಕೊಟ್ಟಂತೆ ರೈತರು ಮಾರಬೇಕು. ರಸ್ತೆ ಬದಿಯಲ್ಲಿ  ಮಂದ ಬೆಳಕಿನಲ್ಲಿ ಅಗ್ಗ- ಭಾರೀ ಅಗ್ಗ  ಎಂದು ಬೊಬ್ಬೆ ಹಾಕಿ ಮಾರಾಟ ಮಾಡಬೇಕು.  ಇದು  ನಮ್ಮ ಮನೋಸ್ಥಿತಿ. ಕೃಷಿಕರಿಗೆ ಗ್ರಾಹಕರು ಅತೀ ಮುಖ್ಯ. ಗ್ರಾಹಕ ಎಂದರೆ ಬಳಕೆದಾರ. ರೈತ  ಬೆಳೆ ಬೆಳೆಯುವಾಗ ಬಳಕೆದಾರರ…

Read more
Farmer harvesting the watermelon

ರೈತರೇ ಹೆಚ್ಚು ಬೆಳೆಸಲು ಹೋಗದಿರಿ- ಪರಿಸ್ಥಿತಿ ಸರಿಯಾಗಿಲ್ಲ…

ಹಿರಿಯರು ಒಂದು ಮಾತು ಹೇಳುತ್ತಾರೆ, ನಿಮ್ಮ ತಲೆಗೆ ನಿಮ್ಮದೇ ಕೈ ಎಂದು. ನಾವು ಬದುಕಲು ನಾವೇ ದುಡಿಯಬೇಕು. ಇದು ಸರಿ ಎಲ್ಲಾ ಕ್ಷೇತ್ರಗಳಲ್ಲೂ ಹೀಗೇನೇ. ಆದರೆ ಕೃಷಿ ಕ್ಷೇತ್ರ ಇದಕ್ಕಿಂತ ಭಿನ್ನ. ಇಲ್ಲಿ ನಾವು ಎಷ್ಟೂ ದುಡಿಯಬಹುದು. ಆದರೆ ಆ ದುಡಿಮೆಗೆ  ಪ್ರತಿಫಲ ಕೊಡುವವರು ಬೇರೆಯವರು. ಇದರಿಂದಾಗಿ ಕೃಷಿ ಕ್ಷೇತ್ರ ಇನ್ನು ಕೆಲವು ವರ್ಷ ಕಾಲ ಮಂಕಾಡೆ ಮಲಗುವ ಸಾಧ್ಯತೆ ಇದೆ. ಕೊರೋನಾ ಉಳಿದೆಲ್ಲಾ ಕ್ಷೇತ್ರಗಳನ್ನು ಬಾದಿಸಿದ್ದು, ಅತ್ಯಲ್ಪ. ಒಂದು ಉದ್ದಿಮೆ ಉತ್ಪಾದನೆ ಮಾಡದಿದ್ದರೆ, ಏನೂ ಆಗುವುದಿಲ್ಲ….

Read more
Suresh nayak on his farm

ರೈತರ ಉದ್ದಾರಕ್ಕೆ ಇದೊಂದೇ ಪರಿಹಾರ.

ರೈತನೊಬ್ಬ ತಾನು ಬೆಳೆದ ಉತ್ಪನ್ನವನ್ನು ತಾನೇ ಮಾರಿ ಸಮಾನ ಮನಸ್ಕರಿಗೂ ಮಾರುಕಟ್ಟೆ ಒದಗಿಸಿಕೊಟ್ಟಿರುವುದು ಬಹುಷಃ  ಇನ್ನೆಲ್ಲೂ ಇರಲಿಕ್ಕಿಲ್ಲ. ಇದು ಈ ಹಿಂದೆಯೂ ಆದ ಉದಾಹರಣೆ ಇಲ್ಲ. ಇದೊಂದು ಹೊಸ ಪರಿಕಲ್ಪನೆ. ಕೊರೋನಾ ಮಹಾಮಾರಿ ದೇಶದ ಅಸಂಖ್ಯಾತ ಜನರಿಗೆ ಬಾರೀ ತೊಂದರೆಯನ್ನು ಉಂಟು ಮಾಡಿತು. ಉದ್ದಿಮೆಗಳು ಮುಚ್ಚಿದವು. ಕೆಲಸಗಾರರು ಕೆಲಸ ಕಳೆದುಕೊಂಡರು. ರೈತರು ಬದುಕಿಗಾಗಿ ಬೆಳೆದ ಬೆಳೆ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾಯಿತು. ಇಂತಹ ಸಂದರ್ಭದಲ್ಲಿ  ಒಬ್ಬ ಕೃಷಿಕ ಮಾಡಿದ ಸಾಧನೆ  ಮಾತ್ರ ಕೃಷಿಕರೆಲ್ಲರಿಗೂ ಅನುಕರಣೀಯ. ಹಿರಿಯಡ್ಕದ…

Read more
ನವೆಂಬರ್ 19-20-21-22-23 ದಿನಗಳಲ್ಲಿ ವಿಶೇಷ ಕಿಸಾನ್ ಮೇಳ.

ನವೆಂಬರ್ 19-20-21-22-23 ದಿನಗಳಲ್ಲಿ ವಿಶೇಷ ಕಿಸಾನ್ ಮೇಳ.

ನವೆಂಬರ್ ತಿಂಗಳು ದಿನಾಂಕ 19 ಶನಿವಾರದಿಂದ ಮೊದಲ್ಗೊಂಡು 20-21-22-23 ರ ಬುಧವಾರದ ತನಕ ನೆಟ್ಟಣದ ಕಿಡುವಿನಲ್ಲಿರುವ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆಯಲ್ಲಿ (CPCRI) ವಿಶೇಷ ಕಿಸಾನ್ ಮೇಳ ನಡೆಯಲಿದೆ. ಇದು ಇಲ್ಲಿನ ಇತಿಹಾಸದಲ್ಲೇ ಆತೀ ದೊಡ್ಡ  ರೈತ ಸಂಪರ್ಕ ಕಾರ್ಯಕ್ರಮವಾಗಿದ್ದು, ಇದಕ್ಕೆ ನಿಮ್ಮೆಲ್ಲರನ್ನೂ ಆಹ್ವಾನಿಸಲಾಗುತ್ತದೆ. ನೀವೂ ಬನ್ನಿ ನಿಮ್ಮ ಎಲ್ಲಾ ಮಿತ್ರರನ್ನೂ ಈ ಕಾರ್ಯಕ್ರಮಕ್ಕೆ ಬರುವಂತೆ ತಿಳಿಸಿ. CPCRI ಸಂಸ್ಥೆಯ ಕರ್ನಾಟಕದಲ್ಲಿರುವ ತೆಂಗು – ಅಡಿಕೆ ಬೀಜೋತ್ಪಾದನಾ ಸಂಸ್ಥೆಗೆ 50 ವರ್ಷಗಳ ಸಂಭ್ರಮ.1972 ರಲ್ಲಿ ದಕ್ಷಿಣ…

Read more
error: Content is protected !!