ಶ್ರೀಲಂಕಾಕ್ಕೆ ಭಾರತದಿಂದ ಪೊಟ್ಯಾಶ್ ! ನಮ್ಮಲ್ಲಿ ಪೊಟ್ಯಾಶ್ ಭಾರೀ ಕೊರತೆ.
ಶ್ರೀಲಂಕಾ ದೇಶ ಸಾವಯವ ಕೃಷಿಯಲ್ಲಿ ಪ್ರಾಪಂಚಿಕ ಮನ್ನಣೆ ಪಡೆದು, ಸಾವಯವ ಕೃಷಿ ಉತ್ಪನ್ನಗಳನ್ನೇ ಉತ್ಪಾದಿಸುವ ರಾಷ್ಟ್ರವಾಗಬೇಕು ಎಂದು ರಸಗೊಬ್ಬರ ಬ್ಯಾನ್ ಮಾಡಿ ಸಾವಯವ ಕೃಷಿಗೆ ಇಳಿಯಿತು. ಆದರೆ ಲೆಕ್ಕಾಚಾರ ತಲೆಕೆಳಗಾಯಿತು. ಈಗ ತಕ್ಷಣದ ಪರಿಹಾರಕ್ಕಾಗಿ ಭಾರತದಿಂದ ಪೊಟ್ಯಾಶ್ ಖರೀದಿಗೆ ಮುಂದಾಗಿದೆ ಎಂಬುದಾಗಿ ವರದಿಗಳಿವೆ. ಶ್ರೀಲಂಕಾ ಸರಕಾರದ ಸಾವಯವ ಕೃಷಿ ನೀತಿಗೆ ಜನ ಸಮುದಾಯದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲಯಲ್ಲಿ ಈ ಹೇರಿಕೆಯನ್ನು ಸ್ವಲ್ಪ ಸಡಿಲಗೊಳಿಸುವ ನಿರ್ಧಾರಕ್ಕೆ ಸರಕಾರ ಬಂದಿದೆ. ಸಾವಯವ ಕೃಷಿ ಒಮ್ಮಿಂದೊಮ್ಮೆಗೆ ಬದಲಾಗುವ ವಿಚಾರವಲ್ಲ. ನಿಧಾನವಾಗಿ…
