ಅಕ್ಟೋಬರ್ ತಿಂಗಳಲ್ಲಿ ಅಡಿಕೆ ,ತೆಂಗು ಬೆಳೆಗೆ ಕೊಡಬೇಕಾದ ಪೋಷಕಾಂಶಗಳು.
ತೋಟಗಾರಿಕಾ ಬೆಳೆಗಳಾದ ಅಡಿಕೆ, ತೆಂಗು ಬೆಳೆಗಳಿಗೆ ಕನಿಷ್ಟ ವರ್ಷದಲ್ಲಿ 3-4 ಕಂತುಗಳಲ್ಲಿ ಗೊಬ್ಬರಗಳನ್ನು ಕೊಡಬೇಕು. ಅದು ರಾಸಾಯನಿಕವೇ ಇರಲಿ, ಸಾವಯವವೇ ಇರಲಿ, ಬೆಳೆಗಳ ಹಸಿವಿಗೆ ಅನುಗುಣವಾಗಿ ಜೂನ್, ಅಕ್ಟೋಬರ್, ಜನವರಿ ಮತ್ತು ಎಪ್ರೀಲ್ ನಲ್ಲಿ ಪೋಷಕಾಂಶಗಳನ್ನು ಕೊಡುವುದು ತುಂಬಾ ಪರಿಣಾಮಕಾರಿ. ಅಡಿಕೆ ,ತೆಂಗಿನ ಬೆಳೆಗಳಿಗೆ ಸಾಮಾನ್ಯವಾಗಿ ಮೊದಲ ಕಂತು ಗೊಬ್ಬರವನ್ನು ಮಳೆಗಾಲ ಪ್ರಾರಂಭದ ಸಮಯದಲ್ಲಿ ಕೊಡುವುದು ವಾಡಿಕೆ. ನಂತರದ ಕಂತನ್ನು ಮಳೆ ಅವಲಂಭಿಸಿ ಅಕ್ಟೋಬರ್ ತಿಂಗಳ ಒಳಗೆ ಕೊಡಬೇಕು. ಅಡಿಕೆಗೆ ಶಿಫಾರಿತ ಪ್ರಮಾಣವಾದ 100:40:120 ಅನ್ನು ಸರಿಯಾಗಿ…
