ಕೃಷಿಕರ ಮಕ್ಕಳಿಗೆ ಮದುವೆ ಭಾಗ್ಯ- ಯಾಕೆ ಕಷ್ಟವಾಗುತ್ತಿದೆ? ಪರಿಹಾರ ಏನು?
ಬಹಳ ಜನ ಯುವಕರಿಗೆ ಕೃಷಿ ವೃತ್ತಿಯೇ ಆಗಬಹುದು ಎಂಬ ಆಸೆ ಇದೆ. ಅದರೆ ನಮಗೆ ಹೆಣ್ಣು ಸಿಗದೆ ಮದುವೆ ಭಾಗ್ಯದಿಂದ ವಂಚಿತರಾದೇವೋ ಏನೋ ಎಂಬ ಆತಂಕದಿಂದ, ಬೇರೆ ಉದ್ಯೋಗವನ್ನೇ ಹುಡುಕುತ್ತಿದ್ದಾರೆ.ವಾಸ್ತವಾಗಿ ಪರಿಸ್ಥಿತಿಯೂ ಹೀಗೇ ಇದೆ. ಬರೇ ಕೃಷಿಕರಿಗೆ ಮಾತ್ರವಲ್ಲ. ಸಮಾಜದಲ್ಲಿ ಯಾರಿಗೆ ಖಾತ್ರಿಯ ಸಂಪಾದನೆ ಮೂಲ ಇಲ್ಲವೋ,ಯಾರಿಗೆ ಮೈ ಕೈ ಕೊಳಕು ಆಗದ ಬಿಳಿಕಾಲರಿನ ಉದ್ಯೋಗ ಇಲ್ಲವೋ, ಅವರಿಗೆಲ್ಲಾ ಈಗ ಮದುವೆಯೆಂಬ ಜೀವನದ ಅತ್ಯಂತ ಪ್ರಮುಖ ಘಟ್ಟ ಅನಿಶ್ಚಿತ. ಸರಕಾರಿ ಉದ್ಯೋಗ, ಸಾಪ್ಟ್ವೇರ್ ಮಂತಾದ ಅಧಿಕ ಸಂಪಾದನೆಯ…
