ಚಾಲಿಗೆ ರೂ. 50ಸಾವಿರ – ಕೆಂಪಡಿಕೆಗೆ ಗ್ರಹಣ- ಕರಿಮೆಣಸು ಸಧ್ಯವೇ ಚೇತರಿಕೆ
ಕಳೆದ ವಾರದಿಂದ ಭಾರೀ ಚೇತರಿಕೆ ಕಂಡ ಚಾಲಿ + ಕೆಂಪಡಿಕೆ ಧಾರಣೆಯಲ್ಲಿ ಮತ್ತೆ ಚಾಲಿ ಸ್ಪರ್ಧೆಯಲ್ಲಿ ಮುಂದೆ ಹೋಗುವ ಸಾಧ್ಯತೆ ಕಂಡು ಬರುತ್ತಿದೆ. ಚಾಲಿ ಅಡಿಕೆ ಮಾರುಕಟ್ಟೆಗೆ ಬರುತ್ತಾ ಇಲ್ಲ. ಬೆಲೆ ಏರುತ್ತಾ ಇದೆ. ಕೆಂಪು ಇಳಿಕೆಯ ಹಾದಿಯಲ್ಲಿದೆ. ಒಟ್ಟಿನಲ್ಲಿ ಅಡಿಕೆ ಮಾರುಕಟ್ಟೆ ಬಿಡಿಸಲಾಗದ ಕಗ್ಗಂಟಾಗಿದೆ. ಹೊಸ ಅಡಿಕೆ ಮತ್ತು ಹಳೆ ಅಡಿಕೆಯ ಅಂತರವನ್ನು ಕಡಿಮೆ ಮಾಡುವ ತಂತ್ರ ಇದು ಎಂಬುದಾಗಿ ಹೇಳುತ್ತಾರೆ.ಕೆಲವು ಮೂಲಗಳ ಪ್ರಕಾರ ಆಮದು ಸಂಪೂರ್ಣ ನಿಂತು, ಕೊರತೆ ಉಂಟಾಗಿ, ಕರಿಮೆಣಸು ಏರಿಕೆ ಆಗುವ…
