ರೈತರಿಂದ ಕಿಸಾನ್ ಸಮ್ಮಾನ್ ನಿಧಿ ದುರುಪಯೋಗ- ಮರುಪಾವತಿಗೆ ಆದೇಶ.
ಭಾರತ ಸರಕಾರ ಕೃಷಿಕರಿಗೆ ಸನ್ಮಾನ ಮಾಡುವುದಕ್ಕಾಗಿ ಕೊಡುತ್ತಿರುವ ವಾರ್ಷಿಕ 6000 ರೂ.ಗಳಿಗೂ ನಕಲಿ ರೈತರು ನುಸುಳಿದ್ದಾರಂತೆ. ಕೇಂದ್ರ ಕೃಷಿ ಮಂತ್ರಿಗಳಾದ ನರೇಂದ್ರ ಸಿಂಗ್ ತೋಮರ್ ಇವರು ಪಾರ್ಲಿಮೆಂಟ್ ಗೆ ನೀಡಿದ ಹೇಳಿಕೆಯಂತೆ, ನಮ್ಮ ದೇಶದಲ್ಲಿ ಅರ್ಹತೆ ಇಲ್ಲದ ಸುಮಾರು 42 ಲಕ್ಷ ಮಂದಿ, ಸುಮಾರು 3000 ಕೋಟಿ ಮೊತ್ತದ ಕಿಸಾನ್ ಸಮ್ಮಾನ್ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರಂತೆ. ಸರಕಾರ ಇದೆಲ್ಲದರ ಲೆಕ್ಕ ತೆಗೆದಿದೆ. ಮತ್ತು ಅದನ್ನು ಪಾವಾಸು ಪಡೆಯಲು ಮುಂದಾಗಿದೆ. ಸರಕಾರಕ್ಕೆ ಜನ ಮೋಸ ಮಾಡುವುದೋ ಅಥವಾ ಸರಕಾರ…
