coffee berri

ಕಾಫೀ ಬೆಳೆಗೆ ಬಾಧಿಸಿಗೆ ಕಪ್ಪು ಕೊಳೆ ರೋಗ.

ಕಾಫೀ ಬೆಳೆಗೆ ಎರಡನೇ ಅತೀ ದೊಡ್ಡ ನಷ್ಟ ತಂದೊಡ್ಡುವ ರೋಗ ಕಪ್ಪು ಕೊಳೆ.  ಇದನ್ನು  Black rot  disease ಎಂದು ಕರೆಯುತ್ತಾರೆ. ಮಳೆಗಾಗದಲ್ಲಿ ಯಾವಾಗಲೂ ಬರಬಹುದು. ಆದರೆ ಮುಂಗಾರು ಮಳೆ ಮಧ್ಯಭಾಗ ಮತ್ತು ಕೊನೆ ಭಾಗದಲ್ಲಿ ಇದರ ತೊಂದರೆ ಹೆಚ್ಚು. ಇದು ಅರೇಬಿಕಾ ಕಾಫಿಗೆ ಹೆಚ್ಚಾಗಿಯೂ ರೋಬಸ್ಟಾಕ್ಕೆ ಸ್ವಲ್ಪ ಕಡಿಮೆ. ಈ ರೋಗ ಬಂದರೆ 10-30% ಫಸಲು ಕಡಿಮೆಯಾಗುತ್ತದೆ.   ಆಷಾಢ ಕಳೆದು ಶ್ರಾವಣ ಬಂತೆಂದರೆ ಒಮ್ಮೊಮ್ಮೆ ಮಳೆ ಮತ್ತು ಬಿಸಿಲು ಇರುತ್ತದೆ.  ಆಗಲೇ  ಹೆಚ್ಚಾಗಿ ವಾಯುಭಾರ ಕುಸಿತವೇ…

Read more
ಫಲವತ್ತಾದ ಮಣ್ಣು

ಫಲವತ್ತತೆ ಕಳೆದುಕೊಳ್ಳುತ್ತಿರುವ ಕೃಷಿ ಭೂಮಿ- ಭವಿಷ್ಯದ ಆತಂಕ.

ನಮ್ಮ ದೇಶದ 50% ಕ್ಕೂ ಹೆಚ್ಚಿನ ಕೃಷಿ ಭೂಮಿ ಸಾರ ಕಳೆದುಕೊಂಡು  ಬರಡಾಗುತ್ತಿರುವುದು ಭಾರತ ಸರಕಾರದ ಅಧ್ಯಯನಗಳಿಂದ ತಿಳಿದು ಬಂದಿದೆ. ಅಧ್ಯಯನದ ವರದಿ ಇರಲಿ. ನಮಗೆಲ್ಲಾ ಈ ವಿಚಾರ ಗಮನಕ್ಕೆ ಬಂದಿರುವಂತದ್ದೇ. ನಮ್ಮ ಕೃಷಿ ಭೂಮಿಯಲ್ಲಿ ಬೆಳೆ ಏನೋ ಹಿಂದಿಗಿಂತ ಹೆಚ್ಚು ಬರಬಹುದು. ಆದರೆ ಖರ್ಚು ಮಾತ್ರ ದಿನದಿಂದ ದಿನಕ್ಕೆ  ಹೆಚ್ಚಾಗುತ್ತಿದೆ. ಇತರ  ಬೆಳೆ ನಿರ್ವಹಣೆ ಸಮಸ್ಯೆಗಳೂ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಬೇರೆ ಏನೂ ಅಲ್ಲ. ಮಣ್ಣು ತನ್ನ ಸಾರವನ್ನು ಸ್ವಲ್ಪ ಸ್ವಲ್ಪವೇ ಕಳೆದುಕೊಳ್ಳುತ್ತಿದೆ. ಇದು ಗಂಭೀರ…

Read more
ತಾಜಾ ಸೊಪ್ಪು ತರಕಾರಿ ಮಾರುವವರು

ನಮ್ಮ ಕಾಲಿಗೆ ನಾವೇ ಮೊಳೆ ಹೊಡೆದುಕೊಳ್ಳುವುದು ಹೀಗೆ.

ಯಾವುದೇ ಕೆಲಸ ಮಾಡಬೇಕಾರೂ ಅದು ನಮ್ಮ ಮೈಮೇಲೆ ಬರಬಹುದೇ ಎಂದು ಒಂದಲ್ಲ ಹತ್ತಾರು ಸಲ ಯೋಚಿಸಬೇಕು. ನಾವು ಕಾಲಹರಣಕ್ಕಾಗಿ ಮಾಡುವ ಕೆಲವು ಕೆಲಸಗಳು ನಮ್ಮ ವೃತ್ತಿಗೇ ತೊಂದರೆ ಕೊಡುವಂತಾಗಬಾರದು.ಕೃಷಿಕರು ಬೆಳೆಯುವ ಉತ್ಪನ್ನಗಳಿಗೆ ಅಪಪ್ರಚಾರ ಮಾಡಿ ನಮ್ಮ ಕಾಲಿಗೆ ನಾವೇ ಮೊಳೆ ಹೊಡೆದುಕೊಳ್ಳಬಾರದು. ಕಳೆದ ಎರಡು ದಿನಗಳಿಂದ ನಾವೆಲ್ಲಾ ಚಾಚೂ ತಪ್ಪದೆ ವೀಕ್ಷಿಸುವ ವಾಟ್ಸ್ ಅಪ್, ಫ಼್ಹೇಸ್ ಬುಕ್ ಮುಂತಾದವುಗಳಲ್ಲಿ ಹರಿದಾಡುವ ಒಂದು ವೀಡಿಯೋ ಬಗ್ಗೆ ಇಲ್ಲಿ ಹೇಳಲಿಚ್ಚಿಸುತ್ತೆವೆ. ಇದು ಸೊಪ್ಪು ತರಕಾರಿಗಳನ್ನು ಬಾಡದಂತೆ ಹಚ್ಚ ಹಸುರಾಗಿ ಉಳಿಸಲು…

Read more
ತೆಂಗಿನಲ್ಲಿ 150 ಕಾಯಿಗೂ ಹೆಚ್ಚಿನ ಇಳುವರಿ

ತೆಂಗಿನಲ್ಲಿ 150 ಕ್ಕೂ ಹೆಚ್ಚು ಕಾಯಿ ಪಡೆಯಲು ಕೊಡಬೇಕಾದ ಗೊಬ್ಬರ.

ತೆಂಗಿನ ಮರಕ್ಕೆ ಈ ಪ್ರಮಾಣದಲ್ಲಿ ಗೊಬ್ಬರಗಳನ್ನು ಕೊಟ್ಟರೆ ಸರಾಸರಿ 150  ಕಾಯಿ ಇಳುವರಿ ಪಡೆಯಬಹುದು. ತೆಂಗು ಒಂದು ಏಕದಳ ಸಸ್ಯ. ಇದಕ್ಕೆ ತಾಯಿ ಬೇರು ಇಲ್ಲ. ಇರುವ ಎಲ್ಲಾ ಹಬ್ಬು ಬೇರುಗಳೂ ಆಹಾರ ಸಂಗ್ರಹಿಸಿ ಕೊಡುವ ಬೇರುಗಳಾಗಿದ್ದು, ನಿರಂತರವಾಗಿ ನಿರ್ದಿಷ್ಟ ಪ್ರಮಾಣದ ಪೋಷಕಗಳನ್ನು ಕೊಟ್ಟರೆ  ಇದು ಗರಿಷ್ಟ ಇಳುವರಿಯನ್ನು ಕೊಡಬಲ್ಲುದು. 100 ತೆಂಗಿನ ಮರ ಇದ್ದರೆ ಅದರಲ್ಲಿ ವಾರ್ಷಿಕ ಕನಿಷ್ಟ 10,000  ತೆಂಗಿನ ಕಾಯಿ ಆಗಬೇಕು. ಮನೆ ಹಿತ್ತಲಲ್ಲಿ ಎರಡು ಮರ ಇದ್ದರೆ ಆ ಕುಟುಂಬಕ್ಕೆ ವರ್ಷಕ್ಕೆ…

Read more
ಕಿಸಾನ್ ಸಮ್ಮಾನ್ ಫಲಾನುಭವಿ ರೈತ

ರೈತರಿಂದ ಕಿಸಾನ್ ಸಮ್ಮಾನ್ ನಿಧಿ ದುರುಪಯೋಗ- ಮರುಪಾವತಿಗೆ ಆದೇಶ.

ಭಾರತ ಸರಕಾರ ಕೃಷಿಕರಿಗೆ ಸನ್ಮಾನ ಮಾಡುವುದಕ್ಕಾಗಿ ಕೊಡುತ್ತಿರುವ ವಾರ್ಷಿಕ 6000 ರೂ.ಗಳಿಗೂ ನಕಲಿ ರೈತರು ನುಸುಳಿದ್ದಾರಂತೆ. ಕೇಂದ್ರ ಕೃಷಿ ಮಂತ್ರಿಗಳಾದ ನರೇಂದ್ರ ಸಿಂಗ್ ತೋಮರ್ ಇವರು ಪಾರ್ಲಿಮೆಂಟ್ ಗೆ ನೀಡಿದ ಹೇಳಿಕೆಯಂತೆ, ನಮ್ಮ ದೇಶದಲ್ಲಿ ಅರ್ಹತೆ ಇಲ್ಲದ  ಸುಮಾರು 42 ಲಕ್ಷ  ಮಂದಿ, ಸುಮಾರು 3000 ಕೋಟಿ ಮೊತ್ತದ ಕಿಸಾನ್ ಸಮ್ಮಾನ್ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರಂತೆ. ಸರಕಾರ ಇದೆಲ್ಲದರ ಲೆಕ್ಕ ತೆಗೆದಿದೆ. ಮತ್ತು ಅದನ್ನು ಪಾವಾಸು ಪಡೆಯಲು ಮುಂದಾಗಿದೆ. ಸರಕಾರಕ್ಕೆ ಜನ ಮೋಸ ಮಾಡುವುದೋ ಅಥವಾ ಸರಕಾರ…

Read more
ಹಣ್ಣು ನೊಣ ಬಾಧೆಯಿಂದ ಹಾಳಾಗುವ ಹಾಗಲಕಾಯಿ

ಹಾಗಲಕಾಯಿ- ಹೀರೆಕಾಯಿ ಹಾಳಾಗುವುದಕ್ಕೆ ಕಾರಣ ಏನು ಗೊತ್ತೇ?

ನಾವೆಲ್ಲಾ ಬೆಳೆಸುವ ಹೀರೆಕಾಯಿ, ಹಾಗಲಕಾಯಿ, ಪಡುವಲ ಕಾಯಿ ಮುಳ್ಳು ಸೌತೆ ಹಾಳಾಗುವುದಕ್ಕೆ ಕಾರಣ ಒಂದು ನೊಣ. ಈ ನೊಣದ ಸಂತತಿ ಇತ್ತೀಚಿನ ದಿನಗಳಲ್ಲಿ ಬಹಳ ಹೆಚ್ಚಳವಾಗಿದ್ದು, ಯಾವುದೇ ಬೆಳೆಯನ್ನು ಬಿಡದ ಸ್ಥಿತಿ ಬಂದಿದೆ. ಹಿಂದೆ ಕೆಲವು ಸಿಹಿ ಹಣ್ಣು , ತರಕಾರಿಗಳಿಗೆ ಮಾತ್ರ ಇದ್ದ ಇದರ ಕಾಟ ಈಗ ಬಹುತೇಕ ಎಲ್ಲಾ  ತರಕಾರಿಗಳಿಗೂ ಬಂದಿದೆ. ತೊಂಡೆಯನ್ನೂ ಬಿಡುತ್ತಿಲ್ಲ. ಪಪ್ಪಾಯಿಯನ್ನೂ ಬಿಡುತ್ತಿಲ್ಲ.  ಇವುಗಳ ನಿಯಂತ್ರಣ ಒಂದು ಸಾಹಸವೇ ಆಗಿದೆ. ಹಣ್ಣು ನೊಣ Drosophila melanogaster  ಎಂದು ಕರೆಯಲ್ಪಡುವ  ಒಂದು…

Read more
ಅಕ್ಕಿ ಆಗುವ ಭತ್ತದ ಪೈರಿಗೆ ಸಿಂಪರಣೆ

ನಮ್ಮ ಕೃಷಿ ಉತ್ಪನ್ನಗಳು ಯಾಕೆ ವಿದೇಶಗಳಲ್ಲಿ ತಿರಸ್ಕೃತವಾಗುತ್ತದೆ?

ನಮ್ಮಲ್ಲಿ 90% ಕ್ಕೂ ಹೆಚ್ಚಿನ ರೈತರು ಮಿತಿಗಿಂತ ಹೆಚ್ಚು  ಕೀಟನಾಶಕ ಬಳಸುತ್ತಾರೆ. ಬಹುತೇಕ ಕೃಷಿಕರಿಗೆ ಯಾವ ಹಂತದಲ್ಲಿ ಯಾವ ಕೀಟನಾಶಕ ಬಳಸಬೇಕು ಎಂದು ತಿಳಿದಿಲ್ಲ. ನಾವು ಬಳಸುವ ಕೀಟ ನಾಶಕ ರೋಗನಾಶಕ ಎಷ್ಟು ಸಮಯ ಬೆಳೆಯಲ್ಲಿ ಉಳಿಯುತ್ತದೆ ಎಂಬುದೂ ಗೊತ್ತಿಲ್ಲ. ಅಂಗಡಿಯವರು ಕೊಟ್ಟದ್ದನ್ನು, ಸ್ವಲ್ಪ ಸ್ಟಾಂಗ್ ಇದ್ದರೆ ಒಳ್ಳೆಯದೆಂದು ಬಾಟಲಿಯನ್ನೇ ಕ್ಯಾನಿಗೆ ಸುರಿದು  ಸಿಂಪಡಿಸುವ ಕಾರಣ ಅವು ಬೆಳೆಗಳಲ್ಲಿ ಉಳಿಯುತ್ತದೆ. ಆದ ಕಾರಣ ಅದು ಪರೀಕ್ಷೆಯಲಿ ಸಿಕ್ಕಿ ಬೀಳುತ್ತದೆ. ನಮ್ಮ ದೇಶದಲ್ಲಿ ಮಾತ್ರ ಕೀಟನಾಶಕ ರೋಗನಾಶಕ ಬಳಕೆ…

Read more
ಕುಬ್ಜ ತಳಿಯ ಅಡಿಕೆ ಮರ

ಕುಬ್ಜ ತಳಿಯ ಅಡಿಕೆ-ಹೇಗೆ ಬೆಳೆಸುವುದು? ಏನು ಅನುಕೂಲ?

ಕುಬ್ಜ ತಳಿಯ ಅಡಿಕೆಯನ್ನು ಬೆಳೆಸುವ ಬಗ್ಗೆ ರೈತರರಲ್ಲಿ ಇರುವ ಸಂದೇಹಗಳಿಗೆ ಇಲ್ಲಿದೆ ಸಮಂಜಸ  ಉತ್ತರ. ಕುಬ್ಜ ತಳಿಯ ಅಡಿಕೆಯನ್ನು ವಿಟ್ಲದ CPCRI ಪ್ರಾದೇಶಿಕ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯು  ಹೈಬ್ರೀಡೀಕರಣದ ಮೂಲಕ  ಅಭಿವೃದ್ದಿಪಡಿಸಿದೆ. ಈಗಾಗಲೇ ಇದು ಹಲವು ರೈತರಲ್ಲಿ  ಮಿತ ಸಂಖ್ಯೆಯಲ್ಲಿ ಬೆಳೆಯುತ್ತಿದೆ. ಸಂಸ್ಥೆಯಲ್ಲದೆ ಕೆಲವು ಖಾಸಗಿ ವ್ಯಕ್ತಿಗಳೂ ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಬೆಳೆಸಿದ್ದೂ ಇದೆ.  ಕುಬ್ಜ ತಳಿ ಬೆಳೆಸಿದರೆ ನಿರ್ವಹಣೆ ಸುಲಭ ಎಂದು ಹೊಸಬರು ಅಂದುಕೊಂಡರೆ, ಕೆಲವರು. ಇದರಲ್ಲಿ  ಇತರ ತಳಿಯಷ್ಟು ಇಳುವರಿ ದೊರೆಯುವುದಿಲ್ಲ…

Read more
ಡ್ರಾಗನ್ ಪ್ರುಟ್ ಬೆಳೆ

ಕನ್ನಡ ನಾಡಿನಲ್ಲಿ ಹೊಸ ಹಣ್ಣಿನ ಬೆಳೆಯ ಹವಾ- ಡ್ರ್ಯಾಗನ್ ಫ್ರೂಟ್ ಬೆಳೆ.

ಕಡಿಮೆ ನೀರು, ಕಡಿಮೆ ಫಲವತ್ತಾದ ಭೂಮಿಯಲ್ಲೂ  ಬೆಳೆಯಬಹುದಾದ  ಹಣ್ಣಿನ ಬೆಳೆ ಇದು. ಉತ್ತಮ ಲಾಭ ಇದೆ ಎಂಬುದಾಗಿ ಹೇಳುತ್ತಿದ್ದಾರೆ. ಕರ್ನಾಟಕದ ಬಹಳಷ್ಟು ರೈತರಿಗೆ ಈ ಬೆಳೆಯ ಬಗ್ಗೆ ಆಸಕ್ತಿ ಬಂದು ಬೆಳೆ ಪ್ರದೇಶ ದಿನದಿಂದ ದಿನಕ್ಕೆ ವಿಸ್ತರಣೆ ಆಗುತ್ತಿದೆ. ಡ್ರ್ಯಾಗನ್ ಹಣ್ಣು ಇದು  ನಮ್ಮ ಪ್ರಾದೇಶಿಕ ಹಣ್ಣು ಅಲ್ಲ. ಇದೊಂದು ವಿಶೇಷ ಗುಣವುಳ್ಳ ಹಣ್ಣು. ನಮಲ್ಲಿ ಇತ್ತೀಚೆಗೆ ಇದರ ಪರಿಚಯವಾಗಿದೆ.ಅಮೇರಿಕಾದ ಮೆಕ್ಸಿಕೋದಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ವಿದೇಶದ ಈ ಹಣ್ಣು ಇತ್ತೀಚಿನ ದಿನಗಳಲ್ಲಿ ಬೆಂಗಳೂರು, ಬೀಜಾಪುರ,ಚಿತ್ರದುರ್ಗ, ಬೆಳಗಾವಿ ಮುಂತಾದ…

Read more
ಉತ್ತಮ ಬೆಳವಣಿಗೆಯ ಸಸಿ

ಬಯಲುಸೀಮೆಯ ಅಡಿಕೆ ಬೆಳೆಗಾರರಿಗೆ ಪ್ರಮುಖ ಸಲಹೆಗಳು.

ಬಯಲು ಸೀಮೆಯ ರೈತರು ಈ ತನಕ ನಷ್ಟದ ಬೆಳೆಗಳಾದ ಜೋಳ, ಭತ್ತ ಮುಂತಾದ ಬೆಳೆಗಳನ್ನೇ ಬೆಳೆಸುತ್ತಿದ್ದವರು. ಈಗ ಹೊಸ ಆಕಾಂಕ್ಷೆಯಲ್ಲಿ ಹೆಚ್ಚಿನ ಆದಾಯ ಕೊಡಬಲ್ಲ ಅಡಿಕೆ ಬೆಳೆಯಲು ಪ್ರಾರಂಭಿಸಿದ್ದಾರೆ.  ಇವರಿಗೆ ಅಡಿಕೆ ಬೆಳೆ ಏನು, ಇದನ್ನು ಬೆಳೆಸುವ ಕುರಿತಾಗಿ ಸ್ವಲ್ಪ ಮಟ್ಟಿನ ಸಲಹೆ ಕೊಡುವುದು ಈ ಬರಹದ ಉದ್ದೇಶ.  ಈಗ ಸಾಂಪ್ರದಾಯಿಕ ಬೆಳೆ ಪ್ರದೇಶದ ಪರಿದಿಯನ್ನು ಮೀರಿ  ವ್ಯಾಪಿಸಿದೆ.  ಕರಾವಳಿ ಮಲೆನಾಡಿನ  ರೈತರು ಮಾತ್ರ ಅಡಿಕೆಯಂತಹ ಬೆಳೆ ಬೆಳೆದು ಹೆಚ್ಚು ಆದಾಯ ಸಂಪಾದಿಸುವುದಲ್ಲ. ಇವರೂ ಸಂಪಾದಿಸಬೇಕು. ನಮ್ಮ…

Read more
error: Content is protected !!