ಕೃಷಿಕರ ಮನೋಸ್ಥಿತಿ ಕುರಿತು ರಮೇಶ್ ದೇಲಂಪಾಡಿಯವರ ಅರ್ಥಗರ್ಭಿತ ಮಾತು
ಒಂದು ಕಾಲದಲ್ಲಿ ಜನರಿಗೆ ಅದರಲ್ಲೂ ಕೃಷಿಕರಿಗೆ ತಿಳಿದವರು ಹೇಳಿದ ವಿಚಾರದಲ್ಲಿ ನಂಬಿಕೆ ಇತ್ತು. ನಂಬಿಕಾರ್ಹವಾದ ಸಲಹೆಗಳನ್ನೇ ನೀಡುವವರೂ ಇದ್ದರು. ಇಂದು ಜನತೆಗೆ ನಂಬಿಕೆ ಕಡಿಮೆಯಾಗಿದೆ. ಜನರ ಮನೋಸ್ಥಿತಿಗನುಗುಣವಾಗಿ ಉಳಿದೆಲ್ಲವೂ. ಈ ಬಗ್ಗೆ ಸುಳ್ಯದ ರಮೇಶ್ ದೇಲಂಪಾಡಿ ಎಂಬ ಕೃಷಿಕರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಪ್ರಾಯಗಳನ್ನು ಹೀಗೆ ವ್ಯಕ್ತಪಡಿಸುತ್ತಾರೆ. ಶ್ರೀಯುತರು ತಮ್ಮ ಬರಹದಲ್ಲಿ ಕೆಲವು ಸೂಕ್ಷ್ಮ ವಿಚಾರಗಳನ್ನು ಸೂಚ್ಯವಾಗಿವಾಗಿ ಹೇಳಿದ್ದಾರೆ. ನಾವು ಬದಲಾವಣೆಯಾದರೆ ಮಾತ್ರ ಅಭಿವೃದ್ದಿ ಸಾಧಿಸಲು ಸಾಧ್ಯ ಎಂಬುದನ್ನು ತಮ್ಮ ಈ ಬರಹದಲ್ಲಿ ದ್ವನಿ ಅರ್ಥದಲ್ಲಿ ವಿವರಿಸಿದ್ದಾರೆ….
