ಫಲವತ್ತಾದ ಫಲ್ಗುಣಿ ನದಿಯ ಮುಖಜ ಭೂಮಿಯಲ್ಲಿ ಬೆಳೆದ ರುಚಿಕಟ್ಟಾದ ಕಲ್ಲಂಗಡಿ.

ಮಣ್ಣು ಫಲವತ್ತತೆ ಇದ್ದಾಗ ಅಲ್ಲಿ ಬೆಳೆದ ಫಸಲಿಗೆ ರುಚಿ ಹೆಚ್ಚು.

ಜನ ಒಬ್ಬೊಬ್ಬರು ಒಂದೊಂದು ಹೇಳುತ್ತಾರೆ, ಮುಖ್ಯವಾಗಿ ರಸ ಗೊಬ್ಬರ, ಹೈಬ್ರೀಡ್ ಬೀಜಗಳಿಂದ ತಾವು ಬಳಸುವ ಹಣ್ಣು ತರಕಾರಿಗಳಲ್ಲಿ ರುಚಿ ಹೋಗಿದೆ ಎಂದು. ವಾಸ್ತವವಾಗಿ ಇದು ಸತ್ಯವಲ್ಲ. ಸತ್ಯ ಸಂಗತಿ ಬೇರೆಯೇ ಇದೆ. ಅದು ಮಣ್ಣಿನ ಫಲವತ್ತತೆ. ರುಚಿ ಎನ್ನುವುದು ಹಸಿದವನ ನಾಲಗೆಗೆ ಹೆಚ್ಚು, ಹಸಿವು ಇಲ್ಲದವನಿಗೆ ಕಡಿಮೆ. ಹಾಗೆಂದು ಕೆಲವೊಮ್ಮೆ ಬದಲಾವಣೆ ರುಚಿ ಕೊಡುತ್ತದೆ. ಆದರೆ ಪ್ರತೀಯೊಂದು  ಆಹಾರ ವಸ್ತುವಿಗೂ ಅದರದ್ದೇ ಆದ ರುಚಿ ಗುಣ ಇರುತ್ತದೆ. ಅದು ಬರುವುದು ಆ ನಿರ್ದಿಷ್ಟ ಪ್ರದೇಶದ ಹವಾಗುಣ, ಮಣ್ಣು…

Read more
Areca leaf for cow fodder

ಜಾನುವಾರುಗಳಿಗೆ ಅಡಿಕೆ ಹಾಳೆ ಉತ್ತಮ ಮೇವು ಯಾಕೆ?.

ಜಾನುವಾರುಗಳ ಹೊಟ್ಟೆ ತುಂಬಿಸಲು ಗಟ್ಟಿ ಮೇವು ಬೇಕು. ಅದಕ್ಕೆ ಅಡಿಕೆ ಮರದ ಹಸಿ ಹಾಳೆ ಉತ್ಯುತ್ತಮ. ಜಾನುವಾರು ಸಾಕುವವರು ಪಶುಗಳಿಗೆ ಹಸಿ ಹುಲ್ಲು ಹಾಕುತ್ತೇವೆ. ಆದರೆ ಈ ಹಸಿ ಹುಲ್ಲಿನಲ್ಲಿ  ನಾರಿನ ಅಂಶ (Fiber) ಮತ್ತು ಘನ ಅಂಶ(Solids) ಕಡಿಮೆ. ಆದರೆ ಅಡಿಕೆ ಹಾಳೆಯಂತಹ ಕೃಷಿ ತ್ಯಾಜ್ಯಗಳಲ್ಲಿ ಈ ಅಂಶ ಉತ್ತಮವಾಗಿದೆ. ಇದನ್ನು ಹಸಿ ಹುಲ್ಲಿಗಿಂತ ಕಡಿಮೆ ಪ್ರಮಾಣದಲ್ಲಿ ಕೊಟ್ಟರೂ ಹೊಟ್ಟೆ ತುಂಬುತ್ತದೆ. ದೇಹದ ಚಯಾಪಚಯ ಕ್ರಿಯೆಗೂ ಇದು ಸಹಕಾರಿಯಾಗುತ್ತದೆ. ಮಲೆನಾಡು, ಅರೆಮಲೆನಾಡು, ಹಾಗೂ ಕರಾವಳಿ ಪ್ರದೇಶದಲ್ಲಿ…

Read more
Foxtail bunch

ಭತ್ತಕ್ಕಿಂತ ಲಾಭದ ಬೆಳೆ ನವಣೆ.

ಸಿರಿ ಧಾನ್ಯಗಳ (Minor millets) ಸಾಲಿನಲ್ಲಿ ಪ್ರಮುಖವಾದ ನವಣೆಗೆ ಬೇಡಿಕೆ ಚೆನ್ನಾಗಿದ್ದು, ಕಡಿಮೆ ಇಳುವರಿ ಕೊಡಬಲ್ಲ ಖುಷ್ಕಿ ಭತ್ತದ ಹೊಲದಲ್ಲಿ ಇದನ್ನು ಬೆಳೆದರೆ ಲಾಭವಿದೆ. “ ನವಣೆಯನ್ನು ತಿನ್ನುವನು ಹವಣಾಗಿಹನು ಸರ್ವಜ್ಞ” ನವಣೆ ಆರೋಗ್ಯ ಹಾಗೂ ದೇಹ ಸೌಂದರ್ಯ ಕಾಪಾಡುವುದಕ್ಕೆ ಒಳ್ಳೆಯದು ಎಂದು ಸರ್ವಜ್ಞ ತಿಳಿಸಿದ್ದಾನೆ. ಒಂದು ಕಾಲದಲ್ಲಿ “ಬಂಗಾರಕ್ಕಿ ಅನ್ನ” ಎಂದೇ ಪ್ರಸಿದ್ದಿಯಾಗಿತ್ತು ನವಣೆ ಅಕ್ಕಿ. ಹಿಂದಿನವರಿಗೆ ನವಣೆಯ ಬಿಸಿ ಅನ್ನಕ್ಕೆ ತುಪ್ಪ ನಮ್ಮ ರೈತರ ದಿನನಿತ್ಯದ ಆಹಾರವಾಗಿತ್ತು. ಈಗ ಅದು ಕಣ್ಮರೆಯಾಗಿದೆ.  ಇಂದು  ನಮ್ಮ…

Read more
farmer selling pumpkins

ಮುಂದಿನ ಹಂಗಾಮಿಗೆ ಬೆಳೆ ಯೋಜನೆ ಬದಲಾಯಿಸಿಕೊಳ್ಳಿ.

ರೈತರೇ ಮುಂದಿನ ವರ್ಷದ ಪರಿಸ್ಥಿತಿ ತುಂಬಾ ಅನಿಶ್ಚಿತವಾಗಿದ್ದು, ಕೆಲವು ಆಯ್ದ ಬೆಳೆಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಬೇಕೇ ಬೇಡವೇ ಎಂದು ಎರಡೆರಡು ಬಾರಿ ಯೋಚಿಸಿ ಮುನ್ನಡೆಯಿರಿ. ಒಂದೆಡೆ ಕೊರೋನಾ ಮಹಾಮಾರಿ ಮನುಕುಲವನ್ನು ಅಟ್ಟಾಡಿಸುವಂತೆ ಕಾಣಿಸುತ್ತದೆ. ಇದು ಕಳೆದ ವರ್ಷಕ್ಕೆ ಮುಗಿಯಲಿಲ್ಲ, ಈ ವರ್ಷವೂ ವಕ್ಕರಿಸಿದೆ. ಇದು ಬೇಗ ಮುಗಿಯುವಂತೆ ಕಂಡು ಬರುವುದಿಲ್ಲಅ ಮುಂದೆ ಏನು ಎಂದು ಪ್ರಶ್ಣೆಯಾಗಿಯೇ ಇದೆ. ಹವಾಮಾನ ಸಹ ತನ್ನ ಮಾಮೂಲು ಚಕ್ರವನ್ನು ಬದಲಿಸಿದಂತಿದೆ. ಮುಂಗಾರು ಸಹ ಕೈಕೊಡಬಹುದೇನೋ ಅನ್ನಿಸುತ್ತಿದೆ. ಪೆಟ್ರೋಲ್ –ಡೀಸೆಲ್ ಬೆಲೆ ಗಗನಕ್ಕೇರಿದೆ.ಸರಕಾರವೂ…

Read more
weedicide spray

ಯಾವ ಬೆಳೆಗೆ ಯಾವ ಕಳೆ ನಾಶಕ ಬಳಸಬೇಕು?

ಎಲ್ಲಾ ಬೆಳೆಗೂ ಒಂದೇ ಕಳೆ ನಾಶಕ ಅಲ್ಲ. ಬೆಳೆ ಮತ್ತು ಕಳೆಯನ್ನು ಅವಲಂಭಿಸಿ ಬೇರೆ ಬೇರೆ ಕಳೆ ನಾಶಕಗಳನ್ನು ಬಳಸಿ ಕಳೆ ನಿಯಂತ್ರಣ ಮಾಡಬೇಕಾಗುತ್ತದೆ. ಕಳೆಗಳನ್ನು  ಹುಟ್ಟಿದ ಕಳೆಗಳು ಮತ್ತು ಹುಟ್ಟಲಿರುವ ಕಳೆಗಳು ಎಂದು ಎರಡು ವಿಭಾಗ ಮಾಡಬಹುದು. ಹುಟ್ಟಿದ  ಕಳೆಗಳೆಂದರೆ ನೆಲದಲ್ಲಿ ಹಾಸಿಕೊಂಡು ಇರುತ್ತವೆ. ಹುಟ್ಟಲಿರುವ ಕಳೆಗಳು ನೆಲದಲ್ಲಿ ಬೀಜದ ರೂಪದಲ್ಲಿ ಇರುತ್ತವೆ. ಬೀಜದ ರೂಪದಲ್ಲಿರುವ ಕಳೆಗಳು ಉಳುಮೆ ಮಾಡಿ ಬಿತ್ತನೆ ,ಆಗಿ ನೀರು ಗೊಬ್ಬರ ಕೊಟ್ಟ ತಕ್ಷಣ ಹುಟ್ಟುತ್ತವೆ. ಇದನ್ನು ಬೀಜವೇ ಮೊಳಕೆ ಬಾರದಂತೆ…

Read more
weedicide spraying

ಕಳೆ ನಿಯಂತ್ರಣ ಮಾಡುವ ಸುರಕ್ಷಿತ ವಿಧಾನಗಳು.

ಬೆಳೆಗಳಿಗೆ ನಾವು ಕೊಡುವ ಪೋಷಕಗಳು ಅವುಗಳಿಗೇ ದೊರೆತು ಫಲ ಸಿಗಬೇಕಾದರೆ  ಕಳೆ ನಿಯಂತ್ರಣ ಅತ್ಯಗತ್ಯ. ಕಳೆ ನಿಯಂತ್ರಣಕ್ಕೆ ಇರುವ ವಿಧಾನಗಳಲ್ಲಿ,  ಕೆಲವು ಬೇಸಾಯ ಕ್ರಮಗಳು, ಮತ್ತೆ ಕೆಲವು ಹತ್ತಿಕ್ಕುವ ತಂತ್ರಗಳು, ಹಾಗೆಯೇ ಕೊನೆಯ ಅಸ್ತ್ರವಾಗಿ ಕಳೆ ನಾಶಕಗಳನ್ನು ಬಳಕೆ ಮಾಡಲಾಗುತ್ತದೆ. ಕಳೆ ನಾಶಕಗಳಲ್ಲೂ ಬೆಳೆಗಳನ್ನು ಹೊಂದಿಕೊಂಡು ಅದಕ್ಕೆ ಸೂಕ್ತವಾದ  ಕಳೆ ನಾಶಕವನ್ನು ಮಾತ್ರ ಬಳಕೆ ಮಾಡಬೇಕು. ಯಾವಾಗಲೂ ಕಳೆ ನಿಯಂತ್ರಣ ಮಾಡುವುದಲ್ಲ. ಅದಕ್ಕೂ ನಿರ್ಧಿಷ್ಟ ಕಾಲಾವಧಿ  ಎಂಬುದು ಇದೆ. ಕಳೆ ನಿಯಂತ್ರಣದ ಕೆಲವು ಉಪಾಯಗಳ ಬಗ್ಗೆ ಇಲ್ಲಿ…

Read more
weed and its root zone

ಹೊಲದಲ್ಲಿ ಕಳೆ ಬೇಕು ? ಬೇಡ? ಈ ಸಂದೇಹಕ್ಕೆ ಉತ್ತರ.

ಬೆಳೆ ಬೇಕಾದರೆ ಕಳೆಗಳನ್ನು ಹತ್ತಿಕ್ಕಲೇ ಬೇಕು. ಕಳೆಗಳಿಂದ ಬೆಳೆ ಇಳುವರಿಯಲ್ಲಿ 33% ಕಡಿಮೆಯಾಗುತ್ತದೆ ಎಂಬುದಾಗಿ ಅಧ್ಯಯನ ಹೇಳುತ್ತದೆ.ಇನ್ನೂ ಮುಂದುವರಿದು ಕೆಲವು ತೊಂದರೆ ರಹಿತ ಕಳೆಗಳು ಇದ್ದರೆ ಮಣ್ಣು ಸಂರಕ್ಷಣೆ ಆಗುತ್ತದೆ ಎನ್ನುತ್ತಾರೆ. ಹೊಲದಲ್ಲಿ ಬೇಸಿಗೆಯಲ್ಲಿ ತೇವಾಂಶ ರಕ್ಷಣೆಗೆ ಕಳೆ ಬೇಕು. ಮಳೆಗಾಲದಲ್ಲಿ ಮಣ್ಣು ಸಂರಕ್ಷಣೆಗೆ ಬೇಕು. ಹಾನಿಮಾಡುವ ಕಳೆ ಬೇಡ.                ಬೆಳೆಗಳೊಂದಿಗೆ ಬದುಕುವ ಕೆಲವು  ಸಸ್ಯಗಳು ಬೆಳೆಸಿದ ಬೆಳೆಗಿಂತ  ವೇಗವಾಗಿ ಬೆಳೆಯುತ್ತಾ  ಸ್ಪರ್ಧಿಸಿ ಬೆಳೆಯ ಇಳುವರಿಯನ್ನು ಕಡಿಮೆ ಮಾಡುತ್ತವೆ. ನಮ್ಮ ದೇಶದಲ್ಲಿ  ಕಳೆಗಳಿಂದಾಗಿ  ಒಟ್ಟು ಶೇಕಡ.33…

Read more
Poly bag fruit plant

ಮನೆಯ ಹಿತ್ತಲು, ಟೆರೇಸ್ ನಲ್ಲಿ ಹಣ್ಣು ಹಂಪಲು ಬೆಳೆಯುವ ವಿಧಾನ.

ಅವರವರ ಬಳಕೆಗೆ ಬೇಕಾಗುವ ಹಣ್ಣು ಹಂಪಲುಗಳನ್ನು ಹೀಗೆ ಬೆಳೆದರೆ ಉತ್ತಮ ಗುಣಮಟ್ಟದ ಸುರಕ್ಷಿತ ಹಣ್ಣುಗಳನ್ನು ತಿನ್ನಬಹುದು. ಒಂದು ಕುಟುಂಬಕ್ಕೆ ಮಾವಿನ ಹಣ್ಣು ಎಷ್ಟು ಬೇಕಾಗಬಹುದು? ವರ್ಷಕ್ಕೆ ಹೆಚ್ಚೆಂದರೆ 10 ಕಿಲೋ. ಇದನ್ನು ಉತ್ಪಾದಿಸಲು ಮಾವಿನ ತೋಟ ಮಾಡಬೇಕಾಗಿಲ್ಲ. ಮನೆಯ ಹಿತ್ತಲಲ್ಲಿ ಎಲ್ಲಿ ಗಾಳಿ ಬೆಳೆಕು ಚೆನ್ನಾಗಿ ಲಭ್ಯವಿರುತ್ತದೆಯೋ ಅಲ್ಲಿ ನೆಟ್ಟು ಫಲವನ್ನು ಪಡೆಯಬಹುದು. ಮಾವು ಮಾತ್ರವಲ್ಲ. ನಾವು ತಿನ್ನಬಯಸುವ ಎಲ್ಲಾ ನಮೂನೆಯ  ಹಣ್ಣು ಹಂಪಲುಗಳನ್ನೂ ಇದೇ ತರಹ ಬೆಳೆಸಿ ನಮ್ಮ ಕುಟುಂಬಕ್ಕೆ ಬೇಕಾದ ವಿಷಮುಕ್ತ ಹಣ್ಣು ಹಂಪಲು…

Read more
ಈಗ ಅಡಿಕೆಗೆ ಬೋರ್ಡೋ ಸಿಂಪರಣೆ ಮಾಡಬಹುದೇ

ಈಗ ಅಡಿಕೆಗೆ ಬೋರ್ಡೋ ಸಿಂಪರಣೆ ಮಾಡಬಹುದೇ?

ಮಳೆಗಾಲದಲ್ಲಿ ಕೊಳೆ ನಿವಾರಣೆಗೆ ಸಿಂಪಡಿಸುವ ಬೋರ್ಡೋ ದ್ರಾವಣವನ್ನು ಈಗ ಸಿಂಪಡಿಸುವುದರಿಂದ ಅನುಕೂಲ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ. ಕೊಳೆ ರೋಗಕ್ಕೆ ಸಿಂಪಡಿಸುವ ಮೈಲುತುತ್ತೆ ಮತ್ತು ಸುಣ್ಣ ಇವುಗಳ ಸಮತೋಲಿತ ಮಿಶ್ರಣಕ್ಕೆ ಬೋರ್ಡೋ ದ್ರಾವಣ Bordeaux mixture ಎನ್ನುತ್ತಾರೆ. ಈ ದ್ರಾವಣವು ಶೇ. 1  ರ ಪ್ರಮಾಣದಲ್ಲಿ ಸಿಂಪಡಿಸಬೇಕು ಎಂಬುದು ಶಿಫಾರಸು. ಇದು ತಟಸ್ಥ ಮಿಶ್ರಣವಾಗಿರಬೇಕು. ಇದರಿಂದ ಫಲ ಹೆಚ್ಚು. ಇದನ್ನು ಮಳೆ ಬಂದ ನಂತರವೇ ಸಿಂಪಡಿಸಬೇಕಾಗಿಲ್ಲ. ಮಳೆ ಬರುವ ಮುಂಚೆಯೂ ಇದನ್ನು ಸಿಂಪರಣೆ ಮಾಡಬಹುದು. ಈಗಾಗಲೇ ಅಡಿಕೆ…

Read more
error: Content is protected !!