tasty vegetable grown with out manure

ನಾವು ತಿನ್ನುವ ಆಹಾರ ರುಚಿ ಇರುವುದಿಲ್ಲ ಕಾರಣ ಇಷ್ಟೇ

ಮಣ್ಣು ಫಲವತ್ತಾಗಿದ್ದರೆ ಅದರಲ್ಲಿ ಬೆಳೆದ ಬೆಳೆಯ ಗುಣಮಟ್ಟ ಉತ್ತಮವಾಗಿರುತ್ತದೆ. ಅದಕ್ಕೆ ರುಚಿಯೂ ಇರುತ್ತದೆ. ಆರೋಗ್ಯಕ್ಕೂ ಉತ್ತಮ. ಮಣ್ಣಿಗೆ ಜೀವ ಇದೆ.ಇದು ಕೃಷಿಗೆ ಜೀವ ಕೊಡುತ್ತದೆ . ಮಣ್ಣಿನಲ್ಲಿ ಅನೇಕ ಪೋಷಕಾಂಶಗಳು ಮತ್ತು ಕಣ್ಣಿಗೆ ಕಾಣದ ಸೂಕ್ಷ್ಮ ಜೀವಿಗಳು ಸೇರಿಕೊಂಡಿವೆ . ಮಣ್ಣು ಇಲ್ಲದೆ ಯಾವುದೇ ಜೀವಿ ಬದುಕಲು ಸಾಧ್ಯವಿಲ್ಲ. ಅದೇ ರೀತಿ ಯಾವುದೇ ಜೀವಿ ಇಲ್ಲದೇ ಮಣ್ಣು ಆಗಲು ಸಾಧ್ಯವಿಲ್ಲ. ಒಂದು ಇಂಚು ಮಣ್ಣು ಆಗಬೇಕಾದರೆ ಸಾವಿರಾರು ವರ್ಷಗಳೇ ಬೇಕಾಗುತ್ತದೆ. ಇಂದು ಅವೈಜ್ಞಾನಿಕ ರಾಸಾಯನಿಕಗಳ ಬಳಕೆಯಿಂದ ಮಣ್ಣು,…

Read more
Onion crop

ಈರುಳ್ಳಿ ಬೆಳೆಯುವವರು ಗಮನಿಸಬೇಕಾದ ಅಂಶಗಳು.

ಮುಂಗಾರು ಮಳೆ ಬೇಗ ಪ್ರಾರಂಭವಾಗುವುದರಲ್ಲಿದೆ. ಈರುಳ್ಳಿ ಬೆಳೆಗಾರರು ಈಗಲೇ ಸಿದ್ದತೆ ಮಾಡಿಕೊಳ್ಳುವುದು ಉತ್ತಮ. ಈರುಳ್ಳಿ ಬೆಳೆ ರಾಜ್ಯದ ಚಿತ್ರದುರ್ಗ, ಗದಗ, ಬಿಜಾಪುರ, ಬಾಗಲಕೊಟೆ ಮುಂತಾದ ಕಡೆ ಮುಂಗಾರು ಹಂಗಾಮಿನಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಬೆಳೆಗಾರರು ಮಣ್ಣಿನಲ್ಲಿ ಇರುವ ಪೋಷಕಾಂಶಗಳನ್ನು ತಿಳಿದುಕೊಂಡು, ಅದಕ್ಕನುಗುಣವಾಗಿ ಪೋಷಕಾಂಶಗಳನ್ನು ಕೊಡಬೇಕು. ಹೆಚ್ಚು ಬೇಡಿಕೆ ಇರುವ ತಳಿಗಳನ್ನು ಆಯ್ಕೆ ಮಾಡಿ. ರೋಗ ಕೀಟ ನಿಯಂತ್ರಣಕ್ಕೆ ಸಾಧ್ಯವಾದಷ್ಟು ಸುರಕ್ಷಿತ ಬೆಳೆ ವಿಧಾನಗಳನ್ನು ಆಳವಡಿಸಿಕೊಂಡು ಬೆಳೆದರೆ ಲಾಭವಾಗುತ್ತದೆ. ಇತ್ತೀಚೆಗೆ ಮಳೆ ಮತ್ತು ವಾತಾವರಣ ಕೃಷಿಗೆ ಪೂರಕವಾಗಿಲ್ಲ. ಆದ ಕಾರಣ…

Read more
rain and water storing tank

ಮಳೆ ನೀರು ಕೊಯಿಲು- ಎಲ್ಲಿ ಸಾಧ್ಯ? ಎಲ್ಲಿ ಅಸಾಧ್ಯ?

ಮಳೆ ಎಂದರೆ ಅದು ಪ್ರಕೃತಿಯ ಕೊಡುಗೆ. ಇದು ಇಷ್ಟೇ ಬರುತ್ತದೆ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ. ಕೆಲವೊಮ್ಮೆ ಹೆಚ್ಚೂ ಬರಬಹುದು. ಕೆಲವೊಮ್ಮೆ ಕಡಿಮೆಯೂ ಬರಬಹುದು. ಅದನ್ನು ಸಂಗ್ರಹಿಸಲು ಬೇಕಾದ ಪಾತ್ರೆಗಳಿಗೆ ಅಳತೆ ಇಲ್ಲ. ಮಳೆ ನೀರು ಕೊಯಿಲು ಇದು ಒಂದು ಸುಂದರವಾದ ವಾಕ್ಯ ಅಷ್ಟೇ. ಧಾರಾಕಾರವಾಗಿ ಸುರಿಯುವ ಕರಾವಳಿ ಮಲೆನಾಡಿನ ಮಳೆ ನೀರನ್ನು ಸಂಗ್ರಹಿಸಲು ಪಾತ್ರೆ ಗಾತ್ರವನ್ನು ಯಾರಾದರೂ ಅಳತೆ ಮಾಡಿದ್ದುಂಟೇ? ಮಳೆ ನೀರನ್ನು  ಹಿಡಿದಿಟ್ಟಾಕ್ಷಣ ಅದು ಎಲ್ಲಾ ಸಮಸ್ಯೆಗೂ ಉತ್ತರವೇ? ಖಂಡಿತವಾಗಿಯೂ ಅಲ್ಲ. ಮಳೆ ನೀರನ್ನು ಸಂಗ್ರಹಿಸುವುದಲ್ಲ….

Read more
ploughing

“ಮಾಗಿ ಉಳುಮೆ” ಮಾಡುವುದರಿಂದ ಪ್ರಯೋಜನ

ಬೆಳೆ ಬೆಳೆಯುವ ಮಣ್ಣು ಪ್ರಾಕೃತಿಕವಾಗಿ ಸೂರ್ಯನ ಬೆಳಕಿನಿಂದ ವರ್ಷ ವರ್ಷವೂ ಪುನಶ್ಚೇತನ ಆಗಬೇಕು. ಅದಕ್ಕೆ ನೆರವಾಗುವ ಒಂದು ಬೇಸಾಯ ಕ್ರಮ ಮಾಗಿ ಉಳುಮೆ. ಕೃಷಿ ಮಾಡುವಾಗ ಮಣ್ಣಿನ ಉತ್ಪಾದಕತೆ ಎಂಬುದು ಅತೀ ಪ್ರಾಮುಖ್ಯ. ಹೊಲದ ಉತ್ಪಾದಕತೆಯು ಮಣ್ಣಿನ ಗುಣಲಕ್ಷಣಗಳು ಆರೋಗ್ಯ ಮತ್ತು ಪ್ರಮುಖವಾಗಿ ಮಣ್ಣಿನ ಫಲವತ್ತತೆಯನ್ನು ಅವಲಂಬಿಸಿದೆ. ಸಸ್ಯಗಳ ಬೆಳವಣಿಗೆಗೆ ಅತ್ಯವಶ್ಯವಿರುವ ನೀರು ಮತ್ತು ಗಾಳಿಯನ್ನು ಹಿಡಿದಿಟ್ಟುಕೊಳ್ಳುವುದು, ಅಗತ್ಯವಾದಷ್ಟು ಪೋಷಕಾಂಶಗಳನ್ನು ಒದಗಿಸುವುದು ಮಣ್ಣು. ಮಣ್ಣು ಪೋಷಕಾಂಶಗಳ ಆಗರ..ಮಣ್ಣು ಸವೆತದೊಂದಿಗೆ ಮಣ್ಣಲ್ಲಿನ ಉಪಯುಕ್ತವಾದ ಪ್ರಧಾನ ಮತು ಲಘು ಪೋಷಕಾಂಶಗಳು…

Read more
Tomato

ಟೊಮ್ಯಾಟೋ : ಉತ್ತಮ ಇಳುವರಿಗಾಗಿ ಸಮಗ್ರ ರೋಗ ನಿರ್ವಹಣೆ

ಟೊಮಟೋ ಬೆಳೆಗಾರರು ಕಾಲ ಕಾಲಕ್ಕೆ ಬರುವ ರೋಗ ಸಮಸ್ಯೆಗೆ ಈ ರೀತಿ ಪರಿಹಾರ ಕ್ರಮ ಕೈಗೊಳ್ಳಬಹುದು. ಟೊಮ್ಯಾಟೋ ಮುಖ್ಯ ಜೀವಸತ್ವಗಳನ್ನು ಹೊಂದಿರುವ ಜನಪ್ರಿಯ ತರಕಾರಿ ಬೆಳೆಯಾಗಿದ್ದು, ವಿವಿಧ ಮಣ್ಣುಗಳಲ್ಲಿ ಬೆಳೆಯಲಾಗುತ್ತಿದೆ. ನೀರು ಬಸಿದು ಹೋಗುವ ಮಧ್ಯಮ ಕಪ್ಪು ಹಾಗೂ ಮರಳು ಮಿಶ್ರಿತ ಜೇಡಿ ಮಣ್ಣು ಸೂಕ್ತ. ರಸಸಾರ 6 ರಿಂದ 7 ಇದ್ದಲ್ಲಿ ಬೆಳೆಗೆ ಅನುಕೂಲ. ಅಧಿಕ ಮಳೆ ಬೀಳುವ ಕರಾವಳಿ, ಮಲೆನಾಡು ಹೊರತುಪಡಿಸಿ ಮೈದಾನ ಪ್ರದೇಶಗಳಲ್ಲಿ ಇದನ್ನು ವರ್ಷದ ಮೂರು ಮುಖ್ಯ ಕಾಲಗಳಲ್ಲಿ ಬೆಳೆಯಬಹುದು. ಇತ್ತೀಚಿನ…

Read more
Trichoderma Packet

ಟ್ರೈಕೋಡರ್ಮಾ ಬಳಸುವವರಿಗೆ ಉಪಯುಕ್ತ ಮಾಹಿತಿ.

ರೈತರು ತಮ್ಮ ಬೆಳೆಗಳಿಗೆ ಬರುವ ಶಿಲೀಂದ್ರ ರೋಗಗಳನ್ನು ಧೀರ್ಘಾವಧಿ ತನಕ  ನಿಯಂತ್ರಣಕ್ಕೆ ತರಲು ಟ್ರೈಕೋಡರ್ಮಾ ಬಳಸಬಹುದು.  ಇದು  ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಹಾಗೂ ಸಂಶೋಧನಾ ಕೇಂದ್ರ, ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳಲ್ಲಿ ಲಭ್ಯ ಇರುತ್ತದೆ. ಇತ್ತಿಚೀನ ದಿನಗಳಲ್ಲಿ ಸಾವಯವ ಕೃಷಿಯಲ್ಲಿ ಜೈವಿಕ ಗೊಬ್ಬರ ಮತ್ತು ಶಿಲೀಂದ್ರ , ಕೀಟ ನಾಶಕಗಳ  ಬಳಕೆ ಹೆಚ್ಚುತ್ತಿದೆ. ಸಸ್ಯಗಳಲ್ಲಿ ಕಂಡು ಬರುವರೋಗದ ಹತೋಟಿಯನ್ನು ರಾಸಾಯನಿಕ ಶಿಲೀಂಧ್ರನಾಶಕಗಳಿಂದ ಮಾಡುವುದು ಒಂದು. ಆದರೆ ಅದರಲ್ಲಿ  ರಾಸಾಯನಿಕ ಶೇಷ ವಸ್ತುಗಳು ಮಣ್ಣಿನಲ್ಲಿ ಹಾಗೂ ಸಸ್ಯ ಭಾಗಗಳಲ್ಲಿ…

Read more

ಕಡ್ಡಾಯವಾಗಿ ತೆರಿಗೆ ಪಾವತಿಸುವ ಏಕೈಕ ನಾಗರೀಕರು -ರೈತರು

ಎಲ್ಲರ ದೃಷಿಯಲ್ಲಿ ರೈತರು  ಸರಕಾರದ ಸವಲತ್ತು ಪಡೆಯುವವರು ಎಂದು ಗುರುತಿಸಲ್ಪಟ್ಟವರು. ಆದರೆ ವಾಸ್ತವ ಇವರು ಟ್ಯಾಕ್ಸ್ ಕಟ್ಟುವವರು. ಸಮಾಜ ರೈತ ಎಂದರೆ ಸರಕಾರದ ಕಡಿಮೆ ಬಡ್ಡಿ ದರದ ಸಾಲಪಡೆಯುವವ. ಕೇಂದ್ರ ಸರಕಾರದ ಬಳುವಳಿಯಾದ ಕಿಸಾನ್ ಸಮ್ಮಾನ್ ಯೋಜನೆಯ ಹಣ ಪಡೆಯುವವ. ಸಬ್ಸಿಡಿ, ಸವಲತ್ತು  ಪಡೆಯುವ. ಎಂದು ತಿಳಿದಿದ್ದಾರೆ. ವಾಸ್ತವವಾಗಿ ಸರಕಾರ ಇವರಿಗೆ ಕೊಡುವುದೇನಿದ್ದರೂ ಕಿತ್ತುಕೊಂಡದ್ದರ 10%  ಮಾತ್ರ.  ರೈತ ಎಂದರೆ ಸರಕಾರವನ್ನು ಸಾಕುವವ. ದೇಶದ ಆರ್ಥಿಕತೆಗೆ ರೈತನ ಕೊಡುಗೆ ಸಣ್ಣದಲ್ಲ. ಇದನ್ನು ಎಲ್ಲರಿಗೂ ತಿಳಿಸಿ. ರೈತನನ್ನು ಮೊದಲ…

Read more
Lighting effected coconut palm

ತೆಂಗಿನ ಮರಗಳಿಗೆ ಸಿಡಿಲು ಬಡಿದರೆ ಏನು ಮಾಡಬೇಕು?

ಈಗಾಗಲೇ ಮುಂಗಾರು ಪೂರ್ವ ಮಳೆ ಬರಲಾರಂಭಿಸಿದೆ. ಮಿಂಚು ಸಿಡಿಲಿನ ಅಬ್ಬರದಲ್ಲಿ ಬಹಳಷ್ಟು ಕಡೆ ಅಡಿಕೆ, ತೆಂಗಿನ ಮರಗಳು ಬಲಿಯಾಗುತ್ತಿವೆ. ಮಳೆಗಾಲ ಪ್ರಾರಂಭದಲ್ಲಿ ಮತ್ತು ಮಳೆಗಾಲ ಕೊನೆಯಲ್ಲಿ ಮಿಂಚು ಸಿಡಿಲಿನ ಆರ್ಭಟ ಅಧಿಕ. ಮಳೆ ಬಾರದಿದ್ದರೂ ಪ್ರಭಲವಾದ ಈ ಗುಡುಗು ಸಿಡಿಲಿನ ಆರ್ಭಟ ಇದ್ದೇ ಇರುತ್ತದೆ. ಈ ಸಿಡಿಲು ಮೋಡಗಳ ಅಪ್ಪಳಿಸುವಿಕೆಯಿಂದ ಉತ್ಪಾದನೆಯಾಗುವ ಒಂದು ವಿದ್ಯುತ್ ಶಕ್ತಿ. ಇದು ಉತ್ಪಾದನೆಯಾಗಿ  ಅರ್ಥಿಂಗ್ ಆಗಬೇಕು. ಅದು ಎತ್ತರದ ಮರಗಳು, ಅಥವಾ ಕೆಲವು ಮಿಂಚು ಆಕರ್ಶಕಗಳ ಕಡೆಗೆ ಹೆಚ್ಚಿನ ಪ್ರಮಾಣದಲ್ಲಿ  ತಲುಪುತ್ತದೆ….

Read more
ಕಹಿ ಮುಳ್ಳು ಸೌತೆ

ಕಹಿಯಾಗುತ್ತಿರುವ ಸೌತೇ ಕಾಯಿ- ಆತಂಕದಲ್ಲಿ ರೈತರು.

ಸಿಹಿ ಸೌತೇ ಕಾಯಿ ಈಗ ಕಹಿ ಸೌತೇ ಆಗಲಾರಂಭಿಸಿದೆ. ಅದು ಬರೇ ಮುಳ್ಳು ಸೌತೆ ಮಾತ್ರವಲ್ಲ, ಸಾಂಬಾರ್ ಸೌತೆಗೂ  ಪ್ರಾರಂಭವಾಗಿದೆ. ಸುಮಾರು 10 ವರ್ಷಕ್ಕೆ ಹಿಂದೆ ಮುಳ್ಳು ಸೌತೆ ಬೆಳೆಯುವವರಿಗೆ ಈ ಸಮಸ್ಯೆ ಇರಲಿಲ್ಲ. ಯಾರೇ ಬೀಜ ಕೊಡಲಿ, ಅವರದ್ದೇ ಬೀಜ ಹಾಕಿದರೂ ಮುಳ್ಳು ಸೌತೆ ಎಂದರೆ ಅದನ್ನು ಹಸಿಯಾಗಿ ತಿನ್ನಬಹುದುದಿತ್ತು.  ಈಗಿತ್ತಲಾಗಿ ಬೀಜ ಹಾಕಿ ಮುಳ್ಳು ಸೌತೆ  ಆದ ನಂತರ ಅದನ್ನು ಕೊರೆದು ಅದರ ಒಳ ತಿರುಳಿನ ಒಂದು ತುಂಡನ್ನು ಬಾಯಿಗಿಟ್ಟು ಪರೀಕ್ಷಿಸಿದ ನಂತರ  ರುಚಿ…

Read more
error: Content is protected !!