pest problem

ಅಡಿಕೆ ಹೂಗೊಂಚಲು ಒಣಗುತ್ತಿದೆಯೇ ? ಯಾವ ಕಾರಣ- ಪರಿಹಾರ.

ಅಧಿಕ ಆದಾಯದ ಅಡಿಕೆ ಬೆಳೆಯಲ್ಲಿ ಹೂಗೊಂಚಲು ಒಣಗುವ ಸಮಸ್ಯೆ ಅತೀ ದೊಡ್ಡದು. ಇದಕ್ಕೆ ಪರಿಹಾರ ಸಿಂಗಾರಕ್ಕೆ ಸಿಂಪರಣೆ ಒಂದೇ.ರಾಸಾಯನಿಕ ಸಿಂಪರಣೆ ಇಷ್ಟವಿಲ್ಲದವರು ಮರದಲ್ಲಿ ಒಣಗಿದ ಹೂಗೊಂಚಲು ಶೇಷವನ್ನು ಸಂಪೂರ್ಣವಾಗಿ ತೆಗೆದು ಸ್ವಲ್ಪ ಮಟ್ಟಿಗೆ ನಷ್ಟದಿಂದ ಪಾರಾಗಬಹುದು. ಕಳೆದ ವರ್ಷ ಅಡಿಕೆ ಬೆಳೆಗಾರರು ಭಾರೀ ಪ್ರಮಾಣದಲ್ಲಿ ಬೆಳೆ ನಷ್ಟ ಮಾಡಿಕೊಂಡಿದ್ದಾರೆ. ಕಾರಣ ಉತ್ತಮ ಹೂ ಗೊಂಚಲು ಇತ್ತು. ಆದರೆ ಹೂ ಗೋಂಚಲೆಲ್ಲಾ ಒಣಗಿ ಹಾಳಾಗಿದೆ. ಇದರಿಂದಾಗಿ ಬೆಳೆ ಸುಮಾರು 30% ನಷ್ಟವಾಗಿದೆ. ಈ ವರ್ಷ ಹಾಗಾಗಬಾರದು ಎಂದು ಬೆಳೆಗಾರರು…

Read more
betel leaf

ವೀಳ್ಯದೆಲೆ ಬೆಳೆಗಾರರೇ ನಿಮ್ಮ ಸಮಸ್ಯೆಗೆ ಇಲ್ಲಿದೆ ಉತ್ತರ.

ವೀಳ್ಯದೆಲೆ ಬೇಸಾಯ  ವಾರದ ಆದಾಯದ  ಬೆಳೆಯಾಗಿದ್ದು ಸಾಕಷ್ಟು ರೈತರು ನಿತ್ಯ ಖರ್ಚಿನ ಬೆಳೆಯಾಗಿ ಇದನ್ನು ಬೆಳೆಸುತ್ತಾರೆ. ಕರ್ನಾಟಕದಲ್ಲಿಇದರ ವಿಸ್ತೀರ್ಣ 8288 ಹೆಕ್ಟರ್ ಹಾಗೂ ಇಳುವರಿ 153600 ಮೆ.ಟನ್. ಎಲೆಗಳು ಉತ್ಪತ್ತಿಯಾಗುತ್ತಿದೆ.ಈ ಬೆಳೆಯಲ್ಲಿ ಇತ್ತೀಚೆಗೆ  ಕೆಲವು ರೋಗಗಳು ಬೆಳೆಗಾರರನ್ನು ಸೋಲಿಸುತ್ತಿದೆ. ಎಲೆ ಚುಕ್ಕೆ ರೋಗ, ಎಲೆ ಮುರುಟು ರೋಗ, ಹಾಗೆಯೇ ಎಲೆಯ ಸೊರಗು ರೋಗ, ಜೊತೆಗೆ ಬುಡ ಕೊಳೆಯುವ ರೋಗ ಹೆಚ್ಚಿನ ವೀಲ್ಯದೆಲೆ ಬೇಸಾಯಗಾರರು ಅನುಭವಿಸುತ್ತಿರುವ ಸಮಸ್ಯೆ. ಇಂತಹ ವೀಳ್ಯದೆಲೆಗೆ ಮಾರುಕಟ್ಟೆ ಮೌಲ್ಯ ಇರುವುದಿಲ್ಲ. ಕರ್ನಾಟಕದ ಪ್ರಮುಖ  ವೀಳ್ಯದೆಲೆ…

Read more

ಕರಿಮೆಣಸಿನ ಕಾಳಿನ ತೂಕ ಹೆಚ್ಚಿಸುವುದು ಹೇಗೆ.

ಇನ್ನೇನು ಕರಿಮೆಣಸಿನ ಕಾಳುಗಳು ಬೆಳೆಯುತ್ತಿವೆ. ಕೊಯಿಲು ತಡ ಮಾಡಿದಷ್ಟು ತೂಕ ಹೆಚ್ಚಾಗುತ್ತದೆ. ಒಂದು ಕಿಲೋ ಕರಿಮೆಣಸು ಆಗಲು ಎಷ್ಟು ಒಣ ಕಾಳುಗಳು ಬೇಕು. ಕೆಲವರು 2 ಸೇರು ಬೇಕು ಎನ್ನುತ್ತಾರೆ. ಮತ್ತೆ ಕೆಲವರು  1.75 ಸೇರು ಬೇಕು ಎನ್ನುತ್ತಾರೆ. ಮತ್ತೆ ಕೆಲವರು 1.5ಕಿಲೋ ಸಾಕು ಎನ್ನುತ್ತಾರೆ. ವಾಸ್ತವವಾಗಿ ಚೆನ್ನಾಗಿ ಬೆಳೆದ ಲೀಟರಿನ ಪಾತ್ರೆ (Liter waight)ತುಂಬ ಹಾಕಿದರೆ 750-800 ಗ್ರಾಂ  ಒಣ ತೂಕ ಬರುತ್ತದೆ. ಇದು ಹೇಗೆ ಇಲ್ಲಿದೆ ಮಾಹಿತಿ. ಮೆಣಸಿನ ಬಳ್ಳಿಗೆ ಆಹಾರ ನೀರು ದೊರೆತರೆ…

Read more
inline drip

ಅಧಿಕ ಫಸಲಿಗೆ ನೆರವಾಗುವ ಹೊಸ ಹನಿ ನೀರಾವರಿ ವ್ಯವಸ್ಥೆ.

ಇಡೀ ಹೊಲವನ್ನೇ ಅತ್ಯಂತ ಕಡಿಮೆ ಪ್ರಮಾಣದ ನೀರಿನಲ್ಲಿ ಒದ್ದೆ ಮಾಡುವ ಮಿತ ನೀರಾವರಿ ವ್ಯವಸ್ಥೆ ಎಂದರೆ ಇನ್ ಲೈನ್ ಡ್ರಿಪ್. ನೀರಾವರಿ ಮಾಡಿದ್ದು, ಸಸ್ಯದ ಎಲ್ಲಾ ಬೇರು ವಲಯಕ್ಕೂ ದೊರೆಯುವಂತೆ ಮಾಡಲು ಇನ್ ಲೈನ್ ಡ್ರಿಪ್ ಸೂಕ್ತ. ಇದು ಇಂಚು  ಇಂಚೂ ಭೂಮಿಯನ್ನು ಒದ್ದೆ ಮಾಡುತ್ತದೆ. ಅಲ್ಲೆಲ್ಲಾ ಬೇರುಗಳು ಚಟುವಟಿಕೆಯಿಂದ ಇರುತ್ತದೆ. ಹಾಗೆಂದು ಹನಿ ನೀರವಾರಿಯಷ್ಟೇ ನೀರಿನ ಬಳಕೆ ಆಗುತ್ತದೆ. ಇಂತಹ ನೀರಾವರಿ ವ್ಯವಸ್ಥೆಯಿಂದ ಬೆಳೆಯಲ್ಲಿ ಫಸಲು ಗಣನೀಯ ಹೆಚ್ಚಳವಾಗುತ್ತದೆ.ಹನಿ ನೀರಾವರಿ ಎಂದರೆ ಅದಕ್ಕೆ ಇನ್ನೊಂದು ಹೆಸರು…

Read more
border crops to pest attraction

ಕೀಟಗಳ ನಿಯಂತ್ರಣಕ್ಕೆ ಇದು ಸುರಕ್ಷಿತ ವಿಧಾನ.

ಕೀಟನಾಶಕ ಬಳಕೆಯಿಂದ ತಿನ್ನುವವರಿಗಿಂತ ಬಳಸುವವರಿಗೆ ತೊಂದರೆ ಜಾಸ್ತಿ. ಅದ ಕಾರಣ ಸಾಧ್ಯವಾದಷ್ಟು ಅದರ ಬಳಕೆ ಕಡಿಮೆ ಮಾಡಿ.  ಬಲೆ ಬೆಳೆ ಎಂದರೆ ಒಂದು ಬೆಳೆಗೆ ಬರುವ ಕೀಟವನ್ನು ಮತ್ತೊಂದು ಬೆಳೆಯ ಮೂಲಕ ಆಕರ್ಷಿಸುವುದು. ಮತ್ತು ಮುಖ್ಯ ಬೆಳೆಯನ್ನು ರಕ್ಷಿಸುವುದು.ಎಲ್ಲದಕ್ಕೂ ಕೀಟ  ನಾಶಕ ಪರಿಹಾರ ಅಲ್ಲ. ಅದು ಸಮಂಜಸ ಪರಿಹಾರವೂ ಅಲ್ಲ.  ಸುಲಭದಲ್ಲಿ  ಕೊಯ್ಯುವುದು ಸಾಧ್ಯವಿದ್ದರೆ ಅದರಿಂದಲೇ  ಕೊಯಿಲು ಮಾಡಬೇಕು. ಅಲ್ಲಿಗೆ ಕೊಕ್ಕೆ ಬೇಡ. ನಾವು ಈಗ ಕೊಕ್ಕೆ ಅನಿವಾರ್ಯವಾದಂತೆ  ವರ್ತಿಸುತ್ತೇವೆ. ಹುಳ ಬಿದ್ದಿದೆ ಯಾವ ಕೀಟ ನಾಶಕ…

Read more
Black rice

ಈ ಔಷಧೀಯ ಅಕ್ಕಿಗೆ ಮಾರುಕಟ್ಟೆಯಲ್ಲಿ ರೂ.150 ಬೆಲೆ.

ಅಸ್ಸಾಂ ನಲ್ಲಿ ಬೆಳೆಯುತ್ತಿದ್ದ ಕಪ್ಪು ಅಕ್ಕಿ ಈಗ ಮಲೆನಾಡಿನ ಸಕಲೇಶಪುರ ಸುತ್ತಮುತ್ತ ಬೆಳೆಯುತ್ತಿದ್ದು,  ಇದು ಔಷಧೀಯ ಅಕ್ಕಿಯಾಗಿ ಮಾರಲ್ಪಡುತ್ತದೆ. ಅಕ್ಕಿಯ ಬಣ್ಣ ಬಿಳಿ ಎಂಬುದು ಹೊಸ ತಲೆಮಾರಿನವರಿಗೆ ಗೊತ್ತಿರುವಂತದ್ದು.  ಕರಾವಳಿಯ ಜನಕ್ಕೆ ಕೆಂಪಕ್ಕಿ ( ಕಜೆ) ಗೊತ್ತು. ಉಳಿದೆಡೆ ಬಿಳಿ ಬೆಳ್ತಿಗೆ ಅಕ್ಕಿ. ಆದರೆ ಅಕ್ಕಿಯಲ್ಲಿ ಬೇರೆ ಬಣ್ಣದ ತಳಿಗಳೂ ಭಾರತವೂ ಸೇರಿದಂತೆ ಬೇರೆ ಭತ್ತ ಬೆಳೆಯುವ ಕಡೆ ಇತ್ತು. ಈಗ ಅದು ಅಳಿವಿನಂಚಿಗೆ ತಲುಪಿದೆ. ಅಕ್ಕಿಯಲ್ಲೂ  ಕೆಲವು ತಳಿಗಳಿಗೆ ಔಷಧೀಯ ಮಹತ್ವ ಇದ್ದು, ಅಂತದ್ದರಲ್ಲಿ ಕಪ್ಪಕ್ಕಿಯೂ…

Read more
tulasi tip

ತುಳಿಸಿ ಗಿಡ ಈಗ ಒಣಗುವುದೇಕೆ?

ತುಳಿಸಿ ಗಿಡಕ್ಕೆ ಸುತ್ತು ಬರಬೇಕು ಎನ್ನುತ್ತಾರೆ ಹಿರಿಯರು. ಬೆಳೆಗಳ ಬುಡಕ್ಕೆ ದಿನಾ ಹೋಗಬೇಕು ಎನ್ನುತ್ತಾರೆ  ಕೃಷಿ ವಿಜ್ಞಾನಿಗಳು. ಇದಕ್ಕೆ ಕಾರಣ ಇಲ್ಲಿದೆ. ತುಳಸಿ ಗಿಡದ ಸುತ್ತ ಒಂದು ಸುತ್ತು ಬಂದಾಗ ಎಲೆಗಳೆಲ್ಲಾ ಕಳೆಗುಂದಿರುವುದು ಕಂಡರೆ , ಎರಡನೇ ಸುತ್ತಿಗೆ ಎಲೆಯಲ್ಲಿ ಏನೋ ಇರುವುದೂ, ಮೂರನೇ ಸುತ್ತಿಗೆ ಮತ್ತೂ ಸ್ಪಷ್ಟತೆ, ಹೀಗೇ ಹತ್ತು ಸುತ್ತು ಬರುವಾಗ ಅಲ್ಲಿ ಏನಾಗಿದೆ ಎಂಬುದರ ಪೂರ್ಣ ಚಿತ್ರಣ ನಮಗೆ  ತಿಳಿಯುತ್ತದೆ. ತುಳಸಿ ಗಿಡಕ್ಕೆ ಸುತ್ತು ಬಂದಾಗ ಅದಕ್ಕೆ ಏನಾಗಿದೆ ಎಂಬುದನ್ನು ನೀವೇ ತಿಳಿದುಕೊಳ್ಳಬಹುದು. ತುಳಸಿ…

Read more
farmers grow but price fixed by others

ಕೃಷಿಕರ ಆದಾಯ ದ್ವಿಗುಣವಾಗಲೇ ಇಲ್ಲ –ಯಾಕೆ?

ಸರಕಾರ ಕೃಷಿಕರ ಆದಾಯ ದುಪ್ಪಟ್ಟಾಗಬೇಕು ಎಂದು ಕಾರ್ಯಕ್ರಮಗಳನ್ನು ಹಾಕಿಕೊಂದಂತೆ ದೇಶದಲ್ಲಿ ರೈತರ ಆದಾಯ ಕುಂಠಿತವಾಗುತ್ತಲೇ  ಬರುತ್ತಿದೆ. ಇತ್ತೀಚೆಗೆ ಎಲ್ಲೋ ಖ್ಯಾತ ರೈತ ಪರ ಹೋರಾಟಗಾರರಾದ ಶ್ರೀ ದೇವೇಂದ್ರ ಶರ್ಮ ಇವರು ಹೇಳಿಕೆಕೊಟ್ಟದ್ದು ಗಮನಿಸಿದ್ದೆ. ಇವರು ಹೇಳುತ್ತಾರೆ ಸರಕಾರ ಗ್ರಹಿಸಿದಂತೆ ಆದಾಯ ಹೆಚ್ಚಳವಾಗುವ ಬದಲಿಗೆ ಕಡಿಮೆಯೇ ಆಗುತ್ತಿದೆಯಂತೆ. ಅಷ್ಟೇ ಅಲ್ಲ. ಕೃಷಿಕರ ಆದಾಯವನ್ನು ಕೃಷಿ ನಿರ್ವಹಣೆಯೇ ತಿಂದು ಹಾಕುತ್ತಿದೆಯಂತೆ. ಈ ಬಗ್ಗೆ ಅವರು ಕೊಡುವ ಕೆಲವು ಲೆಕ್ಕಾಚಾರಗಳು ಹೀಗಿವೆ. ನಮ್ಮ ದೇಶದಲ್ಲಿ ಕೃಷಿ ಹೊಲದ ಮಾಲಿಕನಿಗಿಂತ ಕೃಷಿ ಕೂಲಿ…

Read more
ಗೋಲ್ಡನ್ ಫ಼್ಹಿಶ್ ಅಕ್ವೇರಿಯಂ ಮೀನು

ಬಣ್ಣದ ಮೀನು ಸಾಕಾಣಿಕೆ -ಅದಾಯ ಕೊಡುವ ವೃತ್ತಿ.

ಅಲಂಕಾರಕ್ಕಾಗಿ ಮೀನು ಸಾಕುವುದೇ ಅಕ್ವೇರಿಯಂ. ಇದು ಕೃಷಿಕರಿಗೆ  ಹೊಂದುವ ಉಪ ವೃತ್ತಿ. ಪುರಾತನ ಕಾಲದಿಂದಲೂ ಜನ ಆನಂದಕ್ಕಾಗಿ ಮೀನು ಸಾಕಣೆ ಮಾಡುತ್ತಿದ್ದರು. ರಾಜ ಮಹಾರಾಜರ ಕಾಲದಿದಲೂ ಇದು ಇತ್ತು ಎನುತ್ತಾರೆ. ಈಗ ಅಕ್ವೇರಿಯಂ ಮನೆಗೆ ಒಂದು ವಾಸ್ತು ಜೊತೆಗೆ ಪ್ರತಿಷ್ಟೆಯ ವಿಚಾರ. ಅಕ್ವೇರಿಯಂ ಅಥವಾ ಬಣ್ಣದ ಮೀನಿನ ವ್ಯವಹಾರ ಎಂದರೆ  ಸಣ್ಣದೇನಲ್ಲ. ಪ್ರಪಂಚದಲ್ಲಿ ಇದು  30,000 ಕೋಟಿಯ ವ್ಯವಹಾರ. ಇದರಲ್ಲಿ ಭಾರತದ ಪಾಲು 0.008 % ಮಾತ್ರ.  ಅವಕಾಶ ಮಾತ್ರ. ನಮ್ಮ ದೇಶದಲ್ಲಿ  ಅಕ್ವೇರಿಯಂ ಒಳಗೆ ಸಾಕಬಹುದಾದ…

Read more
hibiscus flower

ತೋಟದ ಬೇಲಿಯಲ್ಲಿ ದಾಸವಾಳ ನೆಟ್ಟರೆ ಭಾರೀ ಅನುಕೂಲ.

ಹಿಂದಿನವರು ತಮ್ಮ ಅಡಿಕೆ ತೋಟದ ಬೌಂಡ್ರಿಯ ಸುತ್ತ ದಾಸವಾಳದ ಗಿಡ ನೆಡುತ್ತಿದ್ದರು. ಇದರ ಹಿಂದೆ ಸಾಕಷ್ಟು ವೈಜ್ಞಾನಿಕತೆ ಅಡಗಿದೆ.  ವಿಟ್ಲ, ಪುತ್ತೂರು, ಸುಳ್ಯ , ಕಾಸರಗೋಡು, ಹಾಗೆಯೇ ಶ್ರಿಂಗೇರಿ, ಕೊಪ್ಪ, ಸಾಗರ, ಶಿರಸಿ  ಕಡೆಯ  ಹಳೆಯ ಅಡಿಕೆ ಕೃಷಿಕರ ತೋಟದ ಸುತ್ತ ಬೇಲಿಗಳಲ್ಲಿ ದಾಸವಾಳದ ಸಸ್ಯ ಇರುತ್ತದೆ. ದಾಸವಾಳ ಸಸಿ ಬೆಳೆಸುವುದು ಸುಲಭ. ಅಂದಕ್ಕೆ ಹೂವೂ ಆಗುತ್ತದೆ. ಬೇಲಿ ಧೀರ್ಘ ಕಾಲದ ತನಕ ಹಾಳಾಗುವುದಿಲ್ಲ. ಇದು ಬೇಲಿ ಮಾಡುವವರಿಗೆ ತಿಳಿದಿರುವ ಸಂಗತಿ. ತಮ್ಮ ಹಿರಿಯರು ಇದನ್ನು ಅನುಸರಿಸುತ್ತಿದ್ದರು….

Read more
error: Content is protected !!