ವೇಸ್ಟ್ ಡಿ ಕಂಪೊಸರ್

“ವೇಸ್ಟ್ ಡಿ ಕಂಪೋಸರ್ “ ಒಂದು ಗೊಬ್ಬರ ಅಲ್ಲ.

ಹೆಸರೇ ಹೇಳುತ್ತದೆ, ಇದು ಕೃಷಿ ತ್ಯಾಜ್ಯಗಳನ್ನು ಕಳಿಯಿಸಿ ಕೊಡುವ ಜೀವಾಣುಗಳನ್ನು ಹೊಂದಿರುವ ಉತ್ಪನ್ನ ಎಂದು. ಆದರೆ ಜನ ಇದನ್ನೇ ಗೊಬ್ಬರ ಎಂದು ಭಾವಿಸಿ, ಎಲ್ಲದಕ್ಕೂ ವೇಸ್ಟ್ ಡಿ ಕಂಪೋಸರ್ ಬಳಸಿ ಎಂದು ಸಲಹೆ ಕೊಡುತ್ತಾರೆ.  ಯಾವ ಲಾಭಕ್ಕಾಗಿ ಹೀಗೆ ಮಾಡುತ್ತಿದ್ದಾರೆಯೋ ತಿಳಿಯದು. ಬರೇ ಇದನ್ನು ಬಳಸಿ ಬೆಳೆಗಳಿಗೆ ಪೋಷಕಾಂಶದ ತೃಷೆ ತೀರಿತೆಂದಾದರೆ ಅದು ಒಂದು ಅದ್ಭುತವೇ ಸರಿ. ಗೊಬ್ಬರಗಳು ಅಥವಾ ಪೊಷಕಾಂಶಗಳಲ್ಲಿ ಸ್ಥೂಲ ಗೊಬ್ಬರಗಳು ಮತ್ತು ತೀಕ್ಷ್ಣ ಗೊಬ್ಬರಗಳು ಎಂದು ಎರಡು ವಿಧ. ಈಗ ಅದರಲ್ಲಿ ನ್ಯಾನೋ…

Read more
good cow structure

ಇದು ಉತ್ತಮ ಹಸುವಿನ ಲಕ್ಷಣ

ಹೈನುಗಾರಿಕೆಯ ಯಶಸ್ಸು ಹಸುವಿನ ಆಯ್ಕೆಯಿಂದ ಮೊದಲ್ಗೊಳ್ಳುತ್ತದೆ. ಪ್ರತೀಯೊಂದು ಸಸ್ಯ, ಪ್ರಾಣಿ, ಮನುಷ್ಯರಿಗೆ  ವಂಶಗುಣದಲ್ಲೇ ಕೆಲವು ವಿಶೇಷತೆಗಳು ಇರುತ್ತವೆ. ಆದರ ಮೇಲೆ  ಅವುಗಳ ಉತ್ಪಾದಕತೆಯು ನಿಂತಿರುತ್ತದೆ. ಕೃಷಿಕರಲ್ಲಿ ಬಹುತೇಕ ಮಂದಿ ಹೈನುಗಾರಿಕೆ ಅವಲಂಬಿತರು. ಹಸು ಕೊಳ್ಳುವುದು, ಕೊಡುವುದು ಇದ್ದೇ ಇರುತ್ತದೆ. ಹೀಗಿರುತ್ತಾ ಕೊಳ್ಳುವ ಹಸು ಹೇಗಿರಬೇಕು ಎಂಬ ಬಗ್ಗೆ  ಪ್ರತೀಯೊಬ್ಬರಿಗೂ ಗೊತ್ತಿರಲೇ ಬೇಕು. ಹಸು ಕೊಳ್ಳುವುದು ಒಂದು ಪರೀಕ್ಷೆ: ಯಶಸ್ವೀ  ಹೈನುಗಾರಿಕೆಯ ಆಧಾರಸ್ಥಂಬವಾದ ಹಸು- ಕರುವನ್ನು ರೈತರು ತಮ್ಮ ಮನೆಯಲ್ಲೇ ತಳಿ ಸುಧಾರಣೆಯ ಮೂಲಕ ಪಡೆಯುವುದು ಎಲ್ಲದಕ್ಕಿಂತ ಉತ್ತಮ….

Read more
Healthy pepper vine

“ಟ್ರೈಕೋಡರ್ಮಾ’ ರೋಗ ನಿರೋಧಕ ಶಕ್ತಿಗೆ ಸಂಜೀವಿನಿ

ಟ್ರೈಕೋಡರ್ಮಾ ಅಥವಾ ಇನ್ಯಾವುದೇ ಜೀವಾಣುಗಳನ್ನು ಮಣ್ಣಿಗೆ ಸೇರಿಸುವುದರಿಂದ ಮಣ್ಣಿನ ಜೈವಿಕ ಗುಣಧರ್ಮ ಬದಲಾಗುತ್ತದೆ. ಎಲ್ಲಾ ಜೀವಾಣುಗಳೂ ಮಣ್ಣು ಮೂಲದವುಗಳೇ ಆಗಿದ್ದು, ಅವುಗಳನ್ನು ಸಂಸ್ಲೇಶಿಸಿ ಕೃತಕವಾಗಿ ಬೆಳೆಸಿ ಸೂಕ್ತ ಮಾದ್ಯಮದಲ್ಲಿ ಸೇರಿಸಿ ರೈತರಿಗೆ ಬೇರೆ ಬೇರೆ ಬೆಳೆಗೆ ಬಳಕೆ ಮಾಡಲು ಕೊಡಲಾಗುತ್ತದೆ. ಇದು ಸಸ್ಯಗಳಿಗೆ  ರೋಗ ನಿರೋಧಕ ಶಕ್ತಿಯನ್ನು ಕೊಡಬಲ್ಲ ಮತ್ತು ರೋಗಕಾರಕ ಸೂಕ್ಷ್ಮಾಣು ಜೀವಿಗಳ ಜೊತೆಗೆ ಬದುಕಿ ಅದನ್ನು ನಿಶ್ಕ್ರಿಯಗೊಳಿಸುವ ಶಕ್ತಿಯನ್ನು ಹೊಂದಿದೆ. ಟ್ರೈಕೋಡರ್ಮಾ  ಎಂಬ ಶಿಲೀಂದ್ರವನ್ನು ಬಹಳ ಹಿಂದೆಯೇ ಸೂಕ್ಷ್ಮಾಣು ಜೀವಿ ಶಾಸ್ತ್ರಜ್ಞರು (1974)ಮಣ್ಣಿನಲ್ಲಿರುವುದನ್ನು ಗುರುತಿಸಿದ್ದಾರೆ….

Read more
pepper plantation

ಕರಿಮೆಣಸಿಗೆ ರೋಗ ಕಡಿಮೆಯಾಗಲು ಈ ಸರಳ ಕ್ರಮ ಅನುಸರಿಸಿ.

ನಿಮ್ಮ ಹೊಲದಲ್ಲಿ ಇರುವ ಕರಿಮೆಣಸಿನ ಬಳ್ಳಿಯನ್ನು ಒಮ್ಮೆ ಪರಾಂಬರಿಸಿ ನೋಡಿ. ತೆಂಗು, ಅಡಿಕೆ  ಮರಗಳಿಗೆ ಮೆಣಸು  ಬಳ್ಳಿ ಬಿಟ್ಟಿದ್ದು, ಆ ಮರ ಯಾವುದೇ ಕಾರಣಕ್ಕೆ ಸತ್ತು ಹೋದರೆ ಅದರಲ್ಲಿ ಇರುವ ಮೆಣಸಿನ ಬಳ್ಳಿ ಸಾಯಬೇಕು ಎಂದರೂ ಸಾಯಲಾರದು. ಮರ ಶಿಥಿಲವಾಗಿ ನೆಲಕ್ಕೆ ಬಿದ್ದ ನಂತರವೂ ಬಳ್ಳಿ ಜೀವಂತವಾಗಿರುತ್ತದೆ. ಇದು ಕರಿಮೆಣಸಿನ ಬಳ್ಳಿಯಲ್ಲಿ ನಾವು ಕಲಿಯಲಿಕ್ಕಿರುವ ಬೇಸಾಯ ಕ್ರಮ. ಮೆಣಸಿನ ಬಳ್ಳಿಗೆ ಅದರ ಶರೀರ ಪ್ರಕೃತಿಗೆ ಅನುಗುಣವಾಗಿ ನಾವು ಪೋಷಕಾಂಶ ನೀಡದ  ಕಾರಣದಿಂದ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಬಳ್ಳಿಗೆ …

Read more
soft wood grated plant

‘ಮೃದು ಕಾಂಡ ಕಸಿ’ ಎಲ್ಲರೂ ಮಾಡಬಹುದಾದ ಸರಳ ಕಸಿ.

ಈಗ ನಿಮ್ಮಲ್ಲಿ ಹಲಸಿನ ಕಾಯಿ ಇದೆ. ಮಾವಿನ ಹಣ್ಣಿನ ಗೊರಟು ಇದೆ. ಹಾಗೆಯೇ ತಿಂದ ಇತರ ಹಣ್ಣು ಹಂಪಲುಗಳೂ  ಇರಬಹುದು. ಅದನ್ನು ಎಲ್ಲೆಂದರಲ್ಲಿ ಬಿಸಾಡಬೇಡಿ. ಪ್ಲಾಸ್ಟಿಕ್ ತೊಟ್ಟೆಗೆ ಹಾಕಿ ಸಸಿ ಮಾಡಿಕೊಳ್ಳಿ. ಯಾವಾಗಲಾದರೂ ಒಂದು ಉತ್ತಮ ಹಲಸು, ಮಾವು ಹಣ್ಣು ಹಂಪಲು, ಕೊಡುವ ಮರ ಸಿಕ್ಕರೆ ಅಲ್ಲಿಂದ ಒಂದೆರಡು ಗೆಲ್ಲು ತಂದು ಸಸಿ ಮಾಡಿಕೊಳ್ಳಬಹುದು. ಕಸಿ ಕಲಿಯುವುದೇ ಹಾಗೆ. ಯಾರನ್ನೂ ಅವಲಂಭಿಸದೇ ಬರೇ ಓದಿ, ನೋಡಿ ಮಾಡಬಹುದಾದ ಕಸಿ ವಿಧಾನ ಎಂದರೆ ಮೃದು ಕಾಂಡ ಕಸಿ. ಇದರಲ್ಲಿ…

Read more
Farmer showing the sheep

ತಿಂಗಳಿಗೆ 30,000 ಸಂಪಾದನೆ ಮಾಡುವ ಸರಳ ವೃತ್ತಿ.

ಜನ ಕೆಲಸ ಇಲ್ಲ. ಸಂಪಾದನೆ ಇಲ್ಲ. ಸರಕಾರ ನಮ್ಮ ನೆರವಿಗೆ ಬರಬೇಕು. ನಮಗೆ ಅದು ಕೊಡಬೇಕು. ಇದು ಕೊಡಬೇಕು ಎಂದು ಹರಟೆ ಹೊಡೆಯುತ್ತಾ ಕಾಲ ಹರಣ ಮಾಡಬೇಕಾಗಿಲ್ಲ. ಅತೀ ಕಡಿಮೆ ಬಂಡವಾಳದಲ್ಲಿ  ತಿಂಗಳಿಗೆ 30,000 ಸಂಪಾದನೆ ಮಾಡಬಹುದು. ಇದು ಚಿತ್ರದುರ್ಗ ಜಿಲ್ಲೆ, ಹೊಸದುರ್ಗದ ಜಾನಕಲ್  ಸೇವನಗರ ಗ್ರಾಮದ  ಪ್ರಿಯಾಂಕ್ ಎಂಬ 22 ವರ್ಷದ  ಯುವಕ ಹೇಳುವ ಮಾತು. ಇವರು  ಬಿ ಬಿ ಎಂ ವ್ಯಾಸಂಗ ಮಾಡುತ್ತಲೇ ಟಗರು ಸಾಕಣೆ ಮಾಡಿ ತಿಂಗಳಿಗೆ 30,000 ರೂ ಸಂಪಾದನೆ ಮಾಡುತ್ತಿದ್ದಾರೆ….

Read more
ಶ್ರೀಗಂಧದ ಸಸಿಗಳು

ಶ್ರೀಗಂಧ ಬೆಳೆಯಿಂದ ಕೋಟಿ ಗಳಿಕೆ ಸಾಧ್ಯವೇ?

ಶ್ರೀಗಂದ ಬೆಳೆದರೆ ರೈತರು ಕೋಟಿಯಲ್ಲಿ ಮಾತಾಡಬಹುದಂತೆ. ರೈತರೇ ಕೋಟಿಯ ಆಶೆಗಾಗಿ ಗಂಧ ಬೆಳೆಸಬೇಡಿ. ಆದರೆ ಹೋದರೆ ಬಂದರೆ ಕೊಟಿ ಅಷ್ಟೇ.    ಶ್ರೀಗಂಧದ ಬೆಳೆ ಎಲ್ಲದಕ್ಕಿಂತ ಸುಲಭ,ನಿರ್ವಹಣೆ ಇಲ್ಲ, ಬಂಡವಾಳದ ಅವಶ್ಯಕತೆ ಇಲ್ಲ, ಕಡಿಮೆ ಪರಿಶ್ರಮದಲ್ಲಿ ಕೋಟಿ ಲೆಕ್ಕದ ಆದಾಯ ಎಂದೆಲ್ಲಾ ಸಲಹೆ ಕೊಡುವವರು ಸಾಕಷ್ಟು ಜನ ಇದ್ದಾರೆ. ಮಾಡುವುದು ಯಾರೋ, ಬಂಡವಾಳ ಯಾರದ್ದೋ , ಹೇಳುವವರಿಗೆ ಪರೋಕ್ಷವಾಗಿ ತಕ್ಷಣದ ಲಾಭ ಇರುತ್ತದೆ. ಹಿತ್ತಾಳೆಯನ್ನು ಅಪ್ಪಟ ಚಿನ್ನವೆಂದೇ ವಾದ ಮಾಡುವವರಿರುತ್ತಾರೆ. ರೈತರೇ ಕೋಟಿ ಮಾಡಲಾಗುವುದಿದ್ದರೆ ನಿಮಗೆ ಯಾರೂ…

Read more
ಅಡಿಕೆ ಮರಗಳಿಗೆ ಸುಣ್ಣ ಬಳಿದು ಬಿಸಿಲಿನಿಂದ ರಕ್ಷಣೆ

ಅಡಿಕೆ ಮರಕ್ಕೆ ಸುಣ್ಣ ಯಾಕೆ ಕೊಡಲೇ ಬೇಕು? ಇದರಿಂದಾಗಿ ಲಾಭ ಎಷ್ಟು?

ಅಡಿಕೆ ಮರದ ಕಾಡಕ್ಕೆ ನಿರಂತರ ಬಿಸಿಲಿನ ಹೊಡೆತ ಬೀಳುವುದರಿಂದ ಆ ಭಾಗ ಬಿಸಿಯಾಗುತ್ತದೆ. ಮೊದಲಿಗೆ ಬಿಸಿಲು ತಾಗಿದ ಭಾಗ ಹಳದಿ ಮಿಶ್ರ ಕೆಂಪು ಬಣ್ಣದಲ್ಲಿ ಕಾಣಿಸುತ್ತದೆ. ವರ್ಷ ಕಳೆದಾಗ ಅಲ್ಲಿ ಸಣ್ಣ ಒಡಕು ಕಾಣಿಸುತ್ತದೆ. ಎರಡು ಮೂರು ವರ್ಷ ಕಳೆದಾಗ ಆ ಭಾಗ ನಿರ್ಜೀವವಾಗುತ್ತದೆ. ಅದು ಎದ್ದು ಬರಲೂ ಬಹುದು. ಗಾಳಿಗೆ ಬೀಳಲೂ ಬಹುದು. ಇದನ್ನು ತಡೆಯುವ ಉಪಾಯ ಮರದ ಕಾಂಡಕ್ಕೆ ಎಅರಡನೇ ವರ್ಷದಿಂದ ಸಾದ್ಯವಾದಷ್ಟು ವರ್ಷದ ತನಕ ಸುಣ್ಣದ ಲೇಪನ ಒಂದೇ. ಚಳಿಗಾಲ ಪ್ರಾರಂಭವಾಗುವ ಕಾರ್ತಿಕ…

Read more
ಉಪಚಾರ ಮಾಡಿ ಚೆನ್ನಾಗಿ ಹೂ ಬಿಟ್ಟ ಮಾವಿನ ಮರ.

ಮಾವಿನ ಮರದಲ್ಲಿ ಹೂ ಬರಲು ಇದನ್ನು ಮಾಡಬೇಕು.

ಮಾವಿನ ಮರದಲ್ಲಿ ಡಿಸೆಂಬರ್ ತಿಂಗಳಿಂದ ಪ್ರಾರಂಭವಾಗಿ ಫೆಬ್ರವರಿ ತನಕ ಹೂವಾಗುತ್ತದೆ. ಹೂವಾಗುವ ಸಮಯದಲ್ಲಿ  ಮರದ ಆರೋಗ್ಯ ಉತ್ತಮವಾಗಿರಬೇಕು. ಮುಖ್ಯವಾಗಿ ಮಾವಿನ ಹೂ ಬರುವ ಮೊಗ್ಗು (bud) ಭಾಗ ಆರೋಗ್ಯವಾಗಿದ್ದರೆ, ಅಂದರೆ ಕೀಟ , ರೋಗ ಸೋಂಕಿನಿಂದ ಮುಕ್ತವಾಗಿದ್ದರೆ, ಹೂ ಹೆಚ್ಚು ಬರುತ್ತದೆ. ಮುಂದೆ ಹೂವಿಗೆ ಬರುವ ಕೀಟಗಳೂ ಕಡಿಮೆಯಾಗುತ್ತವೆ. ಹೂವು ಉದುರುವುದು ಕಡಿಮೆಯಾಗಿ ಕಾಯಿ ಕಚ್ಚುವಿಕೆ ಹೆಚ್ಚುತ್ತದೆ. ಇದಕ್ಕೆ ಮರ ಚಿಗುರುವ ಮುಂಚೆ ಕೆಲವು ಉಪಚಾರಗಳನ್ನು ತಪ್ಪದೆ ಮಾಡಬೇಕು. ಗೇರು ಮರ ಚಿಗುರಿದರೆ ಅದರಲ್ಲಿ ಹೂ ಗೊಂಚಲು…

Read more
50,000 ಬೆಲೆಯ ಬಿದಿರು ಬೊಂಬು

ಈ ಬಿದಿರಿನ ಗಳಕ್ಕೆ ರೂ. 50,000 ನಂಬುತ್ತೀರಾ? ಇದು ನಿಜ.

ಬಿದಿರಿನ ಒಂದು ಗಳ ಅದರಲ್ಲೂ ಮುಳ್ಳು ಇರುವ ಸ್ಥಳೀಯ ಬಿದಿರಿನ ಒಂದು ಗಳಕ್ಕೆ ಹೆಚ್ಚೆಂದರೆ 100-200 ರೂ. ಪಡೆಯುವವರು ಇರಬಹುದು. ಈ ಹಿಂದೆ ಕೆಲವರು ಮರ ಹತ್ತಲು ಬಿದಿರಿನ ಏಣಿಗಳನ್ನು ಬಳಸುತ್ತಿದ್ದರು. ಆ ಕಾಲ ಹೋಯಿತು.ಬಿದಿರಿನ ಏಣಿಯ ಬದಲು ಅಲ್ಯೂಮೀನಿಯಂ ಏಣಿ ಬಂದು ಬಿದಿರು ತೆರೆಯ ಮರೆಯಾಯಿತು. ಹಿಂದೆ ಮನೆ ಕಟ್ಟುವಾಗ ಮರದ ಬದಲಿಗೆ ಬಿದಿರಿನ ಗಳಗಳನ್ನು ಹಾಕಿ ಛಾವಣಿ ಮಾಡುತ್ತಿದ್ದರು. ಈಗ ಬಿದಿರಿನ ಗಳದ ಛಾವಣಿ  ಮಾಡುವ ಖರ್ಚಿಗಿಂತ ಕಡಿಮೆ ಬೆಲೆಗೆ ಬೇರೆ ಸಾಮಾಗ್ರಿಗಳಿಂದ ಮಾಡಲಿಕ್ಕಾಗುತ್ತದೆ….

Read more
error: Content is protected !!