red gram

ತೊಗರಿ ಬೆಳೆಯಲ್ಲಿ 20% ಅಧಿಕ ಇಳುವರಿಗೆ ಹೊಸ ತಂತ್ರಜ್ಞಾನ.

ತೊಗರಿಯ ತವರು ಭಾರತವಾಗಿದ್ದು ಜಗತ್ತಿನ ಶೇಕಡಾ 90 ರಷ್ಟು ತೊಗರಿಯನ್ನು ಇಲ್ಲಿ ಬೆಳೆಯಲಾಗುತ್ತಿದೆ. ತೊಗರಿ ಬೆಳೆಯು ಕಲಬುರಗಿ ಜಿಲ್ಲೆಯ ಒಟ್ಟು ಕ್ಷೇತ್ರದ ಅರ್ಧದಷ್ಟನ್ನು ಹೊಂದಿರುವುದರಿಂದ ಇದನ್ನು “ತೊಗರಿಯ ಕಣಜ” ಎಂದು ಕರೆಯಲಾಗುತ್ತದೆ. ಈ ಕಾರಣಕ್ಕಾಗಿಯೇ ಜಿಯೋ ಟ್ಯಾಗ್‍ನ್ನು ಕೂಡಾ ಪಡೆದುಕೊಂಡು ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಹಿರಿಮೆಯನ್ನು ತಂದುಕೊಟ್ಟಿದೆ. ತೊಗರಿ ಬೆಳೆಯುವ ರೈತರು ವೈಜ್ಞಾನಿಕವಾಗಿ ಸಾಬೀತಾದ  ಕೆಲವು ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡರೆ ಕಡಿಮೆ ಖರ್ಚಿನಲ್ಲಿ ಪೋಷಕಾಂಶಗಳ ನಿರ್ವಹಣೆಯ ಜೊತೆಗೆ 20%  ಅಧಿಕ ಇಳುವರಿಯನ್ನು ಪಡೆಯಬಹುದು. ಕರ್ನಾಟಕ ರಾಜ್ಯದಲ್ಲಿ ಬೆಳೆಯುವ ಬೇಳೆಕಾಳು…

Read more
ಹತ್ತಿ ಕೋಡು- Cotton bulb

ಹತ್ತಿಯ ಎಲೆ ಕೆಂಪಗಾಗುವುದಕ್ಕೆ ಕಾರಣ ಮತ್ತು ಪರಿಹಾರ.

ಉತ್ತರ ಕರ್ನಾಟಕದ ಬಹುತೇಕ ಹತ್ತಿ ಬೆಳೆಯಲಾಗುವ ಪ್ರದೇಶಗಳಲ್ಲಿ ಎಲೆ ಕೆಂಪಾಗುವ ಸಮಸ್ಯೆ  ಹೆಚ್ಚುತಿದ್ದು, ರೈತರು ಇದು ರೋಗವೇ , ಯಾವ ರೋಗ ಎಂಬ ಆತಂಕದಲ್ಲಿ ಸ್ಥಳೀಯ ಬೀಜ, ಕೀಟನಾಶಕ ಮಾರಾಟಗಾರರ ಸಲಹೆ ಮೇರೆಗೆ ಅನವಶ್ಯಕ ಕೀಟ, ರೋಗನಾಶಕ ಬಳಸುತ್ತಿದ್ದಾರೆ. ವಾಸ್ತವವಾಗಿ ಇದು ರೋಗ , ಕೀಟ ಯಾವುದೂ ಅಲ್ಲ. ಬೇಸಾಯ ಕ್ರಮದಲ್ಲಿ ಇದನ್ನು ಸರಿ ಮಾಡಬಹುದು. ನಿರಂತರವಾಗಿ ಬೆಳೆ ಬೆಳೆಯುತ್ತಾ ಇರುವ ಪ್ರದೇಶಗಳಲ್ಲಿ ಸಹಜವಾಗಿ ಕೆಲವು ಪೊಷಕಾಂಶಗಳ ಕೊರತೆ ಕಂಡು ಬರುತ್ತದೆ. ಇದು ಆ ಬೆಳೆ ಈ…

Read more

ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕೃಷಿ ಶಿಕ್ಷಣದ ಅವಕಾಶಗಳು

ನಾಳೆಯೇ CET ಫಲಿತಾಂಶ. ಪಿಯುಸಿ ಪರೀಕ್ಷೆ ಬರೆದು ಸಿಇಟಿ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳ  ಉನ್ನತ ವ್ಯಾಸಂಗದ ಆಯ್ಕೆಗೆ  ಇರುವ ಹಲವಾರು ಅವಕಾಶಗಳಲ್ಲಿ  ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಮೀನುಗಾರಿಕೆ ವಿಷಯಗಳು  ಜಾಗತಿಕ ಮನ್ನಣೆಯನ್ನು ಪಡೆದಿವೆ. ಇದರಲ್ಲಿ ಕೃಷಿಕರ ಮಕ್ಕಳಿಗೆ ಮೀಸಲಾತಿಯೂ ಇದೆ. ಈ ವರ್ಷ ಅದಕ್ಕಾಗಿಯೇ  ಇರುವ ಪರೀಕ್ಷೆಯೂ ಇಲ್ಲ. ಅದುದರಿಂದ ಈ ಕ್ಷೇತ್ರವು ನಿಮ್ಮ ಆಯ್ಕೆಗೆ ಸೂಕ್ತ ಎನ್ನಿಸುತ್ತದೆ. ನಮ್ಮ ಮಕ್ಕಳನ್ನು ಯಾವ ದಾರಿಯಲ್ಲಿ ಮುನ್ನಡೆಸುವುದು ಎಂದು    ಪೋಷಕರು ಗೊಂದಲದಲ್ಲಿದ್ದಾರೆ. ಪಡೆದಿರುವ ಅಂಕಗಳ ಕೊರತೆಯಿಲ್ಲದಿದ್ದರೂ…

Read more

ಅಡಿಕೆ- ಈ ರೀತಿಯಾಗಿ ಯಾಕೆ ಉದುರುತ್ತಿದೆ?

ಈ ವರ್ಷ ಅಡಿಕೆ ಬೆಳೆಗಾರರು ಬಹಳ ಸಮಸ್ಯೆಯನ್ನು  ಅನುಭವಿಸಿದ್ದಾರೆ. ಮೊದಲು ಸಿಂಗಾರ ಒಣಗುವ ಸಮಸ್ಯೆ , ನಂತರ ಮಿಡಿ ಕಾಯಿ ಉದುರುವುದು, ಈಗ ಮತ್ತೆ ಬಲಿಯುತ್ತಿರುವ (ಹಸ) ಕಾಯಿಗಳ ಉದುರುವಿಕೆ. ಬರೇ ಉದುರುವುದು ಮಾತ್ರವಲ್ಲ. ಕಾಯಿಯಲ್ಲಿ  ಸುಟ್ಟಂತಹ ಕಪ್ಪು ಕಲೆಗಳಿವೆ. ಕೊಳೆತ ಇಲ್ಲ. ಇದು ಯಾವ ಸಮಸ್ಯೆ ಎಂಬುದು ನಿಘೂಢವಾಗಿದೆ. ಒಬ್ಬೊಬ್ಬರು ಒಂದೊಂದು ರೀತಿಯ ಅಭಿಪ್ರಾಯ ಹೇಳುತ್ತಿದ್ದಾರೆ. ಕಳೆದ 2 ವರ್ಷಗಳಲ್ಲಿ  ಅದೇನೂ ಮಹಾ ಮಳೆಯೋ, ಅಡಿಕೆಗೆ ಭಾರೀ ಕೊಳೆ ರೋಗ ಬಂತು. ಸುಮಾರು 25-30% ಬೆಳೆ ನಷ್ಟವಾಯಿತು. ಈ…

Read more

ಬಯೋಗ್ಯಾಸ್ ನಿಂದ ಸಿಲಿಂಡರ್ ಗ್ಯಾಸ್- ಸರಕಾರದ ಇಂಗಿತ.

ಭಾರತ ಪೆಟ್ರೋಲಿಯಂ ಇಂಧನ ಕ್ಷೇತ್ರದಲ್ಲಿ ಸ್ವಾವಲಂಭಿಯಲ್ಲ. ಇಲ್ಲಿಗೆ ಬೇಕಾಗುವ ಎಲ್ಲಾ ನಮೂನೆಯ ಇಂಧನಕ್ಕೂ  ಬೇರೆ ದೇಶಗಳ ಅವಲಂಬನೆ ಆಗಲೇ ಬೇಕು. ಸ್ವಾವಲಂಭಿ ಭಾರತದ ಕನಸನ್ನು ಹೊತ್ತ ಕೇಂದ್ರ ಸರಕಾರ, ಇಂಧನ ಕ್ಷೇತ್ರದಲ್ಲಿ ಪರಾವಲಂಭನೆ ಕಡಿಮೆ ಮಾಡಲು ಬಯೋಗ್ಯಾಸ್ (Bio gas with natural gas) ಅನ್ನು ನೈಸರ್ಗಿಕ ಗ್ಯಾಸ್ ಆಗಿ ಪರಿವರ್ತಿಸಲು  ಚಿಂತನೆ ನಡೆಸಿದೆ. ಜೈವಿಕ ಇಂಧನಗಳಲ್ಲಿ ಮೂರು ವಿಧಗಳು. ಒಂದು ಇಥೆನಾಲ್ ಇದು ಸಕ್ಕರೆ ಕಾರ್ಖಾನೆಯಲ್ಲಿ ಲಭ್ಯ. ಇಮ್ಮೊಂದು ಜೈವಿಕ ಸಸ್ಯ ಜನ್ಯ ಇಂಧನಗಳು. ಇವೆರದನ್ನೂ…

Read more
ಎಲೆ ಹಳದಿಯಾಗುವುದಕ್ಕೆ ಒಂದು ಕಾರಣ ಗಂಧಕದ ಕೊರತೆ.Yellowing of leaves is one of sulphur deficiency symptom

ಗಂಧಕ- ಬೆಳೆಗಳಿಗೆ ಅಗತ್ಯವಾಗಿ ಬೇಕಾಗುವ ಪೋಷಕಾಂಶ.

ಬಹಳ ರೈತರು ತಮ್ಮ ಅಡಿಕೆ ಮರದ ಗರಿಗಳು ಹಳದಿಯಾಗಿವೆ, ಮರದ ಸುಳಿಗಳು ಸಣ್ಣದಾಗುತ್ತಿವೆ. ತೆಂಗಿನ  ಮರದಲ್ಲಿ ಕಾಯಿ ಆಗುತ್ತಿಲ್ಲ. ರಸ ಹೀರುವ ಕೀಟಗಳ ಸಮಸ್ಯೆ ಎಂದೆಲ್ಲಾ  ಹೇಳುತ್ತಾರೆ. ಇದಕ್ಕೆ ಒಂದದು ಕಾರಣ ಗಂಧಕ ಎಂಬ ಅಗತ್ಯ ಪೋಷಕದ ಕೊರತೆ. ಬೆಳೆಗಳಲ್ಲಿ ಎಲೆಗಳು (Chlorosis)ಹಳದಿಯಾಗುವುದು, ಬೇರಿನ ಬೆಳವಣಿಗೆ ಕುಂಠಿತವಾಗುವುದು, ರೋಗ, ಕೀಟಗಳಿಗೆ ಬೇಗ ತುತ್ತಾಗುವುದು ಮುಂತಾದ ಕೆಲವು ಸಮಸ್ಯೆಗಳಿಗೆ  ಗಂಧಕದ ಕೊರತೆಯು ಒಂದು ಕಾರಣ. ಪ್ರತೀಯೊಂದು ಬೆಳೆಯೂ ಗಂಧಕವನ್ನು  ಅಪೇಕ್ಷಿಸುತ್ತದೆ. ರೈತರು ಸಲ್ಫೇಟ್ ರೂಪದ ಗೊಬ್ಬರವನ್ನು ಬೆಳೆಗಳಿಗೆ ಕೊಡುತ್ತಿದ್ದರೆ…

Read more
paddy leaf damage by caterpillar

ಭತ್ತದ ಗರಿ ತಿನ್ನುವ ಹುಳ- ನಿಯಂತ್ರಣ.

ಭತ್ತದ ಗದ್ದೆಗಳಲ್ಲಿ ಪೈರು ಬೆಳೆಯುತ್ತಿದೆ. ಈ ಸಮಯದಲ್ಲಿ ಗರಿಗಳು ಬಿಳಿಯಾಗಿ ಕಾಣುವ ಸಮಸ್ಯೆ   ಹಾಗೆಯೇ ಹರಿದು ಹೋದ ಗರಿಗಳು,ಎಲ್ಲಾ ಕಡೆ ಇರುತ್ತದೆ. ದೂರದಿಂದ ನೋಡುವಾಗ ಗರಿಯಲ್ಲಿ ಹರಿತ್ತು ಇಲ್ಲದೆ ಬಿಳಿಯಾಗಿ ಕಾಣಿಸುತ್ತದೆ. ಸಮೀಪ ಹೋಗಿ ನೊಡಿದಾಗ  ಗರಿಯ ಹಸುರು ಭಾಗವನ್ನು ತಿಂದು ಬರೇ ಪತ್ರ ನಾಳಗಳು ಮಾತ್ರ ಉಳಿದುಕೊಂಡಿರುತ್ತವೆ. ಇದಕ್ಕೆ  ಸ್ಕಿಪ್ಪರ್ ಮತ್ತು ಗ್ರೀನ್ ಹಾರ್ನ್ ಕ್ಯಾಟರ್ ಪಿಲ್ಲರ್  ಎಂಬ ಹುಳು ಕಾರಣವಾಗಿರುತ್ತದೆ.Skipper & Green horned catterpiller) ಇದರ ಹೆಸರು philopidus mathyyas & melanitis…

Read more

ರೈತರಿಗೂ ಪ್ರಯೋಜನವಿದೆ- ಉದ್ಯೋಗ ಖಾತ್ರಿ ಯೋಜನೆ.

ಉದ್ಯೋಗ ಖಾತ್ರಿ ಯೋಜನೆ  ಎಂಬ ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗ ಭರವಸೆಯನ್ನು   ನೀಡಲು ಈ ಯೊಜನೆಯು 2006 ರಲ್ಲಿ ಕರ್ನಾಟಕದಲ್ಲಿ ಆರಂಭಗೊಂಡಿದೆ. ಮೂಲತಹ ಕೃಷಿ ಕೂಲಿ ಕಾರ್ಮಿಕರಾಗಿದ್ದವರು, ವರ್ಷ ಪೂರ್ತಿ ರೈತರು ಜಮೀನಿನಲ್ಲಿ ಕೆಲಸ ಲಭ್ಯವಿಲ್ಲದಿದ್ದರೆ , ಪಂಚಾಯತು ವ್ಯವಸ್ಥೆಯು ಇವರಿಗೆ  ವರ್ಷದ ಎಲ್ಲಾ  ಎಲ್ಲಾ ಸಮಯದಲ್ಲಿ ಕೆಲಸ ಕೊಡುತ್ತದೆ. ಉದ್ಯೋಗ   ಇಲ್ಲದ ಸಮಯದಲ್ಲಿ  ಕೃಷಿ ಹೊಂಡ, ಕೆರೆ ಹೂಳೆತ್ತುವುದು, ಅರಣ್ಯೀಕರಣ  ಮುಂತಾದ ಕಾಮಗಾರಿಗಳಲ್ಲಿ  ತೊಡಗಿಸಿಕೊಂಡು ಜೀವನೋಪಾಯ ಮಾಡಿಕೊಳ್ಲಬಹುದು. 2020-21 ಸಾಲಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ 13…

Read more

ತೆಂಗಿನ ಮರದಲ್ಲಿ ಹರಳು(ಮಿಡಿ ) ಉದುರುವುದು ಯಾಕೆ?

ಬಹಳ ಜನ ತಮ್ಮ ತೆಂಗಿನ ಮರದ ಹೂ ಗೊಂಚಲಿನಲ್ಲಿ ಮಿಡಿ ಕಾಯಿ (ಹರಳು) ಉಳಿಯುವುದೇ ಇಲ್ಲ ಎನ್ನುತ್ತಾರೆ. ಕೆಲವರು ಒಂದು ಎರಡು ಮಾತ್ರ ಉಳಿಯುತ್ತದೆ ಎನ್ನುತ್ತಾರೆ. ಕೆಲವರು ಎಲ್ಲಾ ಮಿಡಿಗಳೂ ಪೊಳ್ಳೇ ಆಗುತ್ತವೆ ಎನ್ನುತ್ತಾರೆ. ತೆಂಗಿನ ಮರದ ಹೂ ಗೊಂಚಲಿನಲ್ಲಿ ಮಿಡಿಗಳು ಉದುರಲು ಬೇರೆ ಬೇರೆ ಕಾರಣಗಳು ಇರುತ್ತವೆ. ಮರದ ಲಕ್ಷಣ , ನೀಡುವ ಪೋಷಕಾಂಶ, ಹವಾಮಾನ ಮತ್ತು ಹೊಲದ ಸ್ಥಿತಿಗಳನ್ನು ಅವಲಂಭಿಸಿ ಅದಕ್ಕೆ ಯವ ಕಾರಣ ಎಂಬುದನ್ನು ನಿರ್ಧರಿಸಬಹುದು. ತೆಂಗಿನ ಮರದ ಹೂವು ವ್ಯವಸ್ಥೆ: ತೆಂಗು…

Read more
error: Content is protected !!