ಚೆನ್ನಾಗಿ ಬಿಸಿಲು ಪಡೆಯುವ ತೆಂಗಿನ ಮರಗಳು.

ಗೊಬ್ಬರ ನಂತರ ಕೊಡಿ- ಉಚಿತವಾಗಿ ಸಿಗುವ ಇದನ್ನು ಮೊದಲು ಒದಗಿಸಿ.

ನಾವು ಬೆಳೆ ಬೆಳೆಸುವಾಗ ಯಾವ ಗೊಬ್ಬರ ಕೊಡಬೇಕು, ಎಷ್ಟು ಕೊಡಬೇಕು. ಮತ್ತೆ ಏನೇನು ಕೊಡಬೇಕು ಎಂದು ಕೇಳುತ್ತೇವೆ. ಅದೆಲ್ಲಾ ನಂತರ. ಮೊದಲು ಉಚಿತವಾಗಿ ಸಿಗುವ ಬಿಸಿಲು ಪೂರ್ಣವಾಗಿ ಸಿಗುವಂತೆ ಮಾಡಿ. ದಾರಿ  ಬದಿಯ ತೆಂಗಿನ ಮರದಲ್ಲಿ ಫಸಲು ಯಾಕೆ ಹೆಚ್ಚು, ತೋಟದೊಳಗಿನ ಅಡಿಕೆ ಮರಳು ಉದ್ದುದ್ದ ಬೆಳೆಯುವುದೇಕೆ? ಬೆಳಗ್ಗಿನಿಂದ ಸಂಜೆ ತನಕ ಬಿಸಿಲು ಪಡೆಯುವ ದೊಡ್ಡ ಮರಗಳಲ್ಲಿ ಫಸಲು ಹೆಚ್ಚು ಏಕೆ? ಎತ್ತರ  ಬೆಳೆದ ಮರದಲ್ಲಿ ಫಸಲು ಹೆಚ್ಚು ಯಾಕೆ? ಇದಕ್ಕೆಲ್ಲಾ ಪ್ರಮುಖ ಕಾರಣ ಸೂರ್ಯನ ಬೆಳಕಿನ ಲಭ್ಯತೆ….

Read more

ಸಾರಜನಕ ಗೊಬ್ಬರ ನಮ್ಮ ಹೊಲದಲ್ಲೇ ಇದೆ ಗೊತ್ತೇ?

ಸಾರಜನಕ  ಗೊಬ್ಬರವಾಗಿ ರಾಸಾಯನಿಕ ರೂಪದ ಯೂರಿಯಾ, ಅಮೋನಿಯಂ ಸಲ್ಫೇಟ್ ಅಥವಾ ನೈಟ್ರೇಟ್ ಮುಂತಾದವುಗಳನ್ನೇ  ಬಳಸಬೇಕಾಗಿಲ್ಲ. ನಿಸರ್ಗ ಸಾರಜನಕ ಸತ್ವದ ಖಣಜ. ನಮ್ಮ ತುರ್ತು ಅವಶ್ಯಕತೆಗಾಗಿ ರಾಸಾಯನಿಕ ವಿಧಾನದ ಮೂಲಕ ಸಾರಜನಕ ಗೊಬ್ಬರವನ್ನು ಉತ್ಪಾದಿಸಿದ್ದು. ನಮ್ಮ ಸುತ್ತಮುತ್ತ ಇರುವ ಸಸ್ಯ ಮತ್ತು ಸಾವಯವ ವಸ್ತುಗಳಲ್ಲಿ  ನೈಸರ್ಗಿಕ ಸಾರಜನಕ ಸಾಕಷ್ಟು ಇದೆ. ಮಣ್ಣಿನಲ್ಲಿ ಸಾಕಷ್ಟು ಸಾರಜನಕದ ಅಂಶ ಇದೆಯಾದರೂ ನಾವು ಯಾಕೆ ಬೇರೆ ಮೂಲದಿಂದ ಸಾರಜನಕವನ್ನು ಬಳಸುತ್ತಿದ್ದೇವೆ ಎಂಬುದು ಎಲ್ಲರ ಭಾವನೆ. ಇದು ಸತ್ಯ. ಕಾರಣ ಇಷ್ಟೇ ಇವು ಬೇರೆ…

Read more

ಸೌರ ವಿದ್ಯುತ್ ಉತ್ಪಾದಿಸಿ – ಮಾರಾಟದಿಂದ ಆದಾಯ ಗಳಿಸಿ

ಸೂರ್ಯನ ಶಾಖದಲ್ಲೂ ದುಡ್ಡು ಮಾಡಬಹುದು ಎಂಬುದು ಸರಕಾರದ ಲೆಕ್ಕಾಚಾರ. ಇದು ಸೋಲಾರ್ ಎನರ್ಜಿ ಮನಿ. ಇದಕ್ಕೆ ಒಮ್ಮೆ ಬಂಡವಾಳ ಹಾಕಿದರೆ ಸಾಕು, ನಂತರ ಕೀಟ, ರೋಗ, ಮಾರುಕಟ್ಟೆ ಮುಂತಾದ ಸಮಸ್ಯೆಗಳೇ ಇಲ್ಲ. ನಿರಂತರ ಆದಾಯ  ಕೊಡುತ್ತಿರುತ್ತದೆ. ಉತ್ತರ ಕರ್ನಾಟಕದ ವರ್ಷದ ಹೆಚ್ಚಿನ ದಿನಗಳಲ್ಲಿ ಬಿಸಿಲು ಇರುವ ಕಡೆಗಳಲ್ಲಿ ಈಗ ಸೂರ್ಯನ ಬೆಳಕಿನಲ್ಲೂ ಹಣ ಮಾಡುವುದು ಸಾಧ್ಯವಾಗಿದೆ. ಸೌರ ವಿದ್ಯುತ್ ಉತ್ಪಾದಿಸಿ ಗ್ರಿಡ್ ಗೆ ಮಾರಿದರೆ ಅದಕ್ಕೆ ಹಣ ದೊರೆಯುತ್ತದೆ. ಹಲವಾರು ಜನ ಇದಕ್ಕೆ ಕೈ ಹಾಕಿದ್ದಾರೆ. ಕೆಲವು…

Read more

ಸಾವಯವ ಸಾರಜನಕ ಗೊಬ್ಬರಗಳ ಮೂಲ ಇವು.

ಸಾರಜನಕ ಎಂಬುದು ರಾಸಾಯನಿಕ ರೂಪದಲ್ಲಿರುವ ಯೂರಿಯಾ, ಅಮೋನಿಯಂ ಸಲ್ಫೇಟ್ ಅಥವಾ ನೈಟ್ರೇಟ್ ಮುಂತಾದ ಮೂಲಗಳಲ್ಲೇ ಬಳಸಬೇಕಾಗಿಲ್ಲ. ನಿಸರ್ಗ ಸಾರಜನಕ ಸತ್ವದ ಖಣಜ. ನಮ್ಮ ತುರ್ತು ಅವಶ್ಯಕತೆಗಾಗಿ ರಾಸಾಯನಿಕ ವಿಧಾನದ ಮೂಲಕ ಸಾರಜನಕ ಗೊಬ್ಬರವನ್ನು ಉತ್ಪಾದಿಸಿದ್ದು. ಮಣ್ಣಿನಲ್ಲಿ ಸಾಕಷ್ಟು ಸಾರಜನಕದ ಅಂಶ ಇದೆಯಾದರೂ ನಾವು ಯಾಕೆ ಬೇರೆ ಮೂಲದಿಂದ ಸಾರಜನಕವನ್ನು ಬಳಸುತ್ತಿದ್ದೇವೆ ಎಂಬುದು ಎಲ್ಲರ ಭಾವನೆ. ಇದು ಸತ್ಯ. ಕಾರಣ ಇಷ್ಟೇ ಇವು ಬೇರೆ ಬೇರೆ ಕಾರಣಗಳಿಂದ ನಷ್ಟವಾಗುತ್ತದೆ. ಇದನ್ನು ಪೂರ್ಣ ಉಳಿಸಲು ಅಸಾಧ್ಯ. ಪ್ರಯತ್ನ ಪಟ್ಟರೆ ಗರಿಷ್ಟ…

Read more
ಸೂಕ್ತವಾದ ನಾಟಿ ವಿಧಾನ

ಕರಿಮೆಣಸು ಬಳ್ಳಿ/ಸಸಿ ಹೇಗೆ ನೆಡಬೇಕು?

ಕರಿಮೆಣಸು ಬೆಳೆಸಲು ಕೆಲವರು ಬಳ್ಳಿ ತುಂಡುಗಳನ್ನು ನಾಟಿ ಮಾಡುತ್ತಾರೆ. ಮತ್ತೆ ಕೆಲವರು ಪ್ಯಾಕೆಟ್  ಸಸಿ ನಾಟಿ ಮಾಡುತ್ತಾರೆ. ಎರಡೂ ಉತ್ತಮ. ಬಳ್ಳಿ ನಾಟಿ ಮಾಡುವವರಿಗೆ ಮುಂಗಾರು ಮಳೆ ಪ್ರಾರಂಭವಾಗುವ ಈ ಸಮಯ ಉತ್ತಮ. ಸಸಿ ನಾಟಿಯನ್ನು  ಯಾವಾಗಲೂ ಮಾಡಬಹುದು. ಬಳ್ಳಿ ತುಂಡುಗಳನ್ನು ನಾಟಿ ಮಾಡಿದರೆ ಅದು  ಮಣ್ಣಿನಲ್ಲಿ ಬೇರು ಬಿಡುವ ತನಕ ಒಣಗದೆ ಇರಬೇಕು. ಹಾಗಾಗಬೇಕಾದರೆ ಬಿಸಿಲು ಇರಬಾರದು. ಹೆಚ್ಚು ಮಳೆಯೂ ಇರಬಾರದು.  ಅದಕ್ಕೇ ಈ ಸಮಯ ಸೂಕ್ತ. ಈಗ ನೆಟ್ಟರೆ ಅನುಕೂಲ ಏನು? ಹಿತಮಿತವಾದ ಮಳೆ…

Read more
Pepper

ಕರಿಮೆಣಸು ಬಳ್ಳಿಗೆ ರೋಗ ಬಾರದಂತೆ ರಕ್ಷಣೆ ಹೀಗೆ.

ಮಳೆಗಾಲ ಬಂದರೆ ಸಾಕು ಕರಿಮೆಣಸಿನ ಬೆಳೆಗೆ ಯಾವಾಗ ರೋಗ ಬರುತ್ತದೆ ಎಂಬುದು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ.ಇದು ಕರಿಮೆಣಸು ಮಾತ್ರವಲ್ಲ ತೀರಾ ಸಪುರ ( ತೆಲೆಕೂದಲು ತರಹದ ) ಬೇರುಗಳಿರುವ ಎಲ್ಲಾ ಬೆಳೆಗಳೂ ಮಳೆಗಾಲ ಅಥವಾ ನೀರು ಹೆಚ್ಚಾಗಿ ಬೇರಿಗೆ ಉಸಿರು ಕಟ್ಟಿದ ತರಹದ  ಸನ್ನಿವೇಶ ಬಂದಾಗ ರೋಗಕ್ಕೆ  ತುತ್ತಾಗುತ್ತದೆ. ಕೆಲವು ಕಡೆ ರೋಗ ಹೆಚ್ಚು, ಇನ್ನು ಕೆಲವು ಕಡೆ ಕಡಿಮೆ. ಇದಕ್ಕೆ ಕಾರಣ ಅವರ ನಿರ್ವಹಣೆ. ಕರಿಮೆಣಸಿನ ಬಳ್ಳಿಯ ಬುಡ ಭಾಗದಲ್ಲಿ ಸುಮಾರು 20 ನಿಮಿಷಗಳ ಕಾಲ…

Read more

ಕೃಷಿಗೆ ಎಲ್ಲವೂ ಇದೆ- ಅದರೆ ನಮಗಲ್ಲ.– ಎನ್ ಸಿ ಪಠೇಲ್.

ಸದ್ಯದ ಪರಿಸ್ಥಿತಿಯಲ್ಲಿ ಕೃಷಿಕರು ಅವರ ತಿಳುವಳಿಕೆಯ ಜ್ಞಾನದಲ್ಲೇ ಕೃಷಿ ಮಾಡುತ್ತಿದ್ದಾರೆ. ಸರಕಾರ ಕೋಟ್ಯಾಂತರ ರೂಪಾಯಿಗಳನ್ನು ಕೃಷಿ ಸಂಶೋಧನೆ ಮತ್ತು ವಿಸ್ತರಣೆಗೆ ಕೊಡುತ್ತಿದೆ. ಇದು ಎಲ್ಲಿಗೆ ಹೋಗುತ್ತದೆಯೋ ಗೊತ್ತಾಗುವುದಿಲ್ಲ. ಶ್ರೀಯುತ ನಾಗದಾಸನ ಹಳ್ಳಿಯ ಪ್ರಗತಿಪರ ಕೃಷಿಕ ಎನ್ ಸಿ ಪಠೇಲ್ ರವರು ವಯಸ್ಸಿನಲ್ಲಿ ಹಿರಿಯರು. ಜೊತೆಗೆ ಬಹಳ ಹಿರಿಯ ಕೃಷಿಕರು. 1990 ಇಸವಿಯಲ್ಲಿ  ಬೆಂಗಳೂರಿನ ಜಿಂದಾಲ್ ಕಂಪೆನಿಯ  ಆಸ್ಪತ್ರೆಯೊಂದರ ಉಧ್ಗಾಟನೆಗೆ ಬಂದಿದ್ದ, ಆಗಿನ ಉಪ ಪ್ರಧಾನಿ  ಶ್ರೀ ದೇವೀ ಲಾಲ್ ಇವರ ಹೊಲಕ್ಕೆ ಭೇಟಿಕೊಟ್ಟಿದ್ದರು. ಅಂದು ಸ್ಥಳದಲ್ಲೇ  ನಾವೆಲ್ಲಾ…

Read more

ಕರಿಮೆಣಸಿನ ಫಸಲಿಗೆ ವಾತಾವರಣದ ಅನುಕೂಲ ಅಗತ್ಯ.

ಮುಂಗಾರು ಮಳೆ ಪ್ರಾರಂಭದಲ್ಲಿ ಕರಿ ಮೆಣಸು ಹೂವು ಕರೆ ಬಿಡುವ ಸಮಯ. ಮೊದಲ ಮಳೆ ಸಿಂಚನವಾದ ಕೂಡಲೇ ಬಳ್ಳಿ ಚಿಗುರಲು ಪ್ರಾರಂಭವಾಗುತ್ತದೆ. ಕೆಲವು ಸ್ವಲ್ಪತಡವಾಗುತ್ತದೆ. ಮತ್ತೆ ಕೆಲವು ಮೇ ತಿಂಗಳ ಕೊನೆಗೇ ಹೂವು ಕರೆ  ಬಿಡಲು ಪ್ರಾರಂಭವಾಗುತ್ತದೆ. ಇದು ಬಳ್ಳಿಯ ಆರೋಗ್ಯ ಮತ್ತು  ತಳಿಯ ಮೇಲೆ  ಅವಲಂಭಿತವಾಗಿದೆ. ತಂಪು ವಾತಾವರಣ ಬೇಕು: ಕರಿಮೆಣಸಿನಲ್ಲಿ ಹೂವು ಕರೆ ಬಿಡುವಾಗ ತಂಪು ವಾತಾವರಣ  ಇರಬೇಕು. ಹಾಗಿದ್ದಾಗ ಅದು ಫಲಿತಗೊಂಡು  ಕಾಳುಗಳಾಗುತ್ತದೆ. ಒಂದು ವೇಳೆ ಬಿಸಿ ವಾತಾವರಣ ಇದ್ದರೆ ಕರೆಗಳು ಅರ್ಧಂಬರ್ಧ…

Read more
ಸಾರಜನಕ ಒದಗಿಸುವ ಯುರಿಯಾ ಗೊಬ್ಬರ

ಸಾರಜನಕ ಒದಗಿಸಬಲ್ಲ ಗೊಬ್ಬರಗಳ ಮಾಹಿತಿ.

ಸಾರಜನಕ ಎಂಬ ಪೋಷಕವು  ನೈಸರ್ಗಿಕವಾಗಿ ಸಾವಯವ ವಸ್ತುಗಳು ಕಳಿತಾಗ ಮಣ್ಣಿಗೆ ಆಮ್ಲ ರೂಪದಲ್ಲಿ ಸೇರಿಕೊಳ್ಳುತ್ತದೆ. ವಾತಾವರಣದಲ್ಲಿ ಇರುವ ಸಾರಜನಕವನ್ನು ಸಸ್ಯಗಳು ಹೀರಿಕೊಂಡು ತಮ್ಮ ಬೇರುಗಳಲ್ಲಿ ಸಂಗ್ರಹಿಸಿ ಮಣ್ಣಿಗೆ ಲಭ್ಯವಾಗುವಂತೆ ಮಾಡುತ್ತವೆ. ಇನ್ನು ಹಲವಾರು ಬೆಳೆ ಉಳಿಕೆಗಳಲ್ಲಿ ಸಾರಜನಕ ಅಂಶ ಇರುತ್ತದೆ. ಇದರಿಂದ ಕೊರತೆಯಾಗುವ ಸಾರಜನಕವನ್ನು ಒದಗಿಸಲು ರಾಸಾಯನಿಕ ಮೂಲದಲ್ಲಿ ಬೇರೆ ಬೇರೆ ಗೊಬ್ಬರಗಳು ಇವೆ. ಸಾರಜನಕ ಎಂಬ ಪೋಷಕವು ಮಳೆ- ಸಿಡಿಲು, ಮಿಂಚುಗಳಿಂದ ಮಣ್ಣಿಗೆ ಲಭ್ಯವಾಗುತ್ತದೆ. ಇದನ್ನು ಬಳಸಿಕೊಂಡು ಕೆಳದರ್ಜೆಯ ಸಸ್ಯಗಳು( ಹಾವಸೆ, ಹುಲ್ಲು ಇತ್ಯಾದಿ) ಮಳೆಗಾಲ…

Read more
ಸಮತೋಲನ ಗೊಬ್ಬರ ಕೊಟ್ಟ ಮರದ ಲಕ್ಷಣ

ಸಾರಜನಕ – ಸಸ್ಯ ಬೆಳವಣಿಗೆಯ ಟಾನಿಕ್.

ಬೆಳೆಗಳ ಪೋಷಣೆಗೆ ಪ್ರಮುಖ ಆಹಾರವಾಗಿ ಸಾರಜನಕ , ರಂಜಕ ಮತ್ತು ಪೊಟ್ಯಾಷ್ ಎಂಬ ಮೂರು ಪೋಷಕಗಳು ಬೇಕು. ಇದನ್ನು ರಾಸಾಯನಿಕ ಮೂಲದಲ್ಲೂ, ನೈಸರ್ಗಿಕ ಮೂಲದಲ್ಲೂ ಪಡೆಯಬಹುದು. ಸಾರಜನಕ ಯಾವುದೇ ಮೂಲದ್ದು ಇರಲಿ, ಅದನ್ನು ಸಸ್ಯಕ್ಕೆ ಬೇಕಾದಷ್ಟು ಬಳಕೆ ಮಾಡಿದರೆ ಅದು ಟಾನಿಕ್. ಇಲ್ಲವಾದರೆ ಇದು ಹಾನಿಕರ. ಸಸ್ಯ ಬೆಳವಣಿಗೆಗೆ ಸುಮಾರು 64 ಪೋಷಕಾಂಶಗಳು ಬೇಕಾಗುತ್ತವೆ. ಅದರಲ್ಲಿ ಬಹುಸಂಖ್ಯೆಯ ಪೋಷಕಗಳು ಮಣ್ಣಿನಲ್ಲಿ, ಗಾಳಿಯಲ್ಲಿ, ನೀರಿನಲ್ಲಿ ಇರುತ್ತವೆ. ಆಯ್ದ ಸುಮಾರು 16  ಪೋಷಕಾಂಶಗಳು  ಅಗತ್ಯವಾಗಿ ಬೇಕಾಗುತ್ತವೆ. ಅದರಲ್ಲಿ ಅಗ್ರ ಫಂಕ್ತಿಯದ್ದು…

Read more
error: Content is protected !!