ಅಡಿಕೆ ಬೆಳೆಗಾರರೇ- ಮೈಲುತುತ್ತೆ ಪರೀಕ್ಷೆ ಹೀಗೆ ಮಾಡಿ.

ಬೋರ್ಡೋ ದ್ರಾವಣ ತಯಾರಿಕೆಗೆ ಬಳಸುವ ಮೈಲುತುತ್ತೆ ಸರಿ ಇಲ್ಲದ ಕಾರಣ ಅಡಿಕೆ ಕೊಳೆರೋಗ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆಯೇ ಎಂಬ ಸಂಶಯ ಇದೆ. ಅದಕ್ಕೆ ಪುಷ್ಟಿ ಕೊಡುವಂತೆ  ಹಿಂದೆ ಕೆಲವೇ ಕೆಲವು ತಯಾರಿಕೆಗಳು ಇದ್ದರೆ ಈಗ ಹಲವಾರು ತಯಾರಕರು, ಹಲವಾರು ಬ್ರಾಂಡುಗಳು ಬಂದು ರೈತರಿಗೆ ಸಂಪೂರ್ಣವಾಗಿ ದ್ವಂದ್ವ ಉಂಟಾಗಿದೆ. ಈ ದ್ವಂದ್ವ ಬೇಡ. ನೀವೇ ಇದನ್ನು ಪರೀಕ್ಷಿಸಿ ಬಳಸಿ.  ಕಾಪರ್ ಸಲ್ಫೇಟ್ ಸರಬರಾಜುದಾರರ ಬಗ್ಗೆ ಅಂತರ್ ಜಾಲದಲ್ಲಿ ಹುಡುಕಿ. ಹಲವಾರು ಜನ ಇದನ್ನು ಒದಗಿಸುವರು ಸಿಗುತ್ತಾರೆ.ದರ ಸಮರವೂ ಇರುತ್ತದೆ….

Read more
ಹಳದಿ ಎಲೆ ರೋಗ ಬಾಧಿತ ಬೆಂಡೆ ಎಲೆ

ಬೆಂಡೆಯ ಹಳದಿ ಎಲೆ ರೋಗಕ್ಕೆ ಮದ್ದು ಇಲ್ಲ.

ಬೆಂಡೆ, ಅಪರೂಪದಲ್ಲಿ ಕುಂಬಳ ಜಾತಿಯ ಸಸ್ಯಗಳಿಗೆ ಬರುವ ಪ್ರಾಮುಖ್ಯ ರೋಗ ಎಂದರೆ ಎಲೆ ಹಳದಿಯಾಗುವ ವೈರಸ್ ರೋಗ. ವೈರಸ್ ಎಂಬುದಕ್ಕೆ ಕನ್ನಡದಲ್ಲಿ ನಂಜಾಣು ಎಂದು ಹೇಳಲಾಗುತ್ತದೆ. ನಂಜಾಣು ಎನ್ನುವುದು ಅತೀ ಸೂಕ್ಷ್ಮ ಜೀವಿಯಾಗಿದ್ದು, ಇದನ್ನು ಸರಿಯಾಗಿ ಅಭ್ಯಸಿಸಿ ಅದಕ್ಕೆ ಪ್ರತ್ಯಔಷಧಿ ತಯಾರಿಸಲು ತುಂಬಾ ಕಷ್ಟ. ಏನಿದ್ದರೂ ನಿರೋಧಕ ಶಕ್ತಿ ಹೊಂದಿದ ತಳಿಯನ್ನು  ಆಯ್ಕೆ ಮಾಡಬೇಕು ಅಷ್ಟೇ. ಬೆಂಡೆಯ ಎಲೆ ಹಳದಿ ರೋಗ ಇಂತದ್ದೇ ಆಗಿದೆ. ಬಿಳಿ ಅಷ್ಟಪಟ್ಟಿ ಬೆಂಡೆ, ಅಥವಾ ಈಗ ಹೊಸತಾಗಿ ಕರೆಯಲಾಗುವ ‘ಕಾರ್ಲ ಬೆಂಡೆ’ ಅಥವಾ…

Read more
ಶುಂಠಿ ಹೊಲ

ಶುಂಠಿ ಬೆಳೆಯ ಪ್ರಮುಖ ಕೀಟ ಮತ್ತು ನಿಯಂತ್ರಣ

ಶುಂಠಿ ಬೆಳೆಯನ್ನು ತುಂಬಾ ನಿಗಾ ವಹಿಸಿ ಬೆಳೆದರೆ ಮಾತ್ರ ಅದು ಕೈ ಹಿಡಿಯುತ್ತದೆ. ನಾಟಿಯಿಂದ ಬೆಳೆವಣಿಗೆ ತನಕ ಪ್ರತೀ ಹಂತದಲ್ಲೂ ತೀವ್ರ ನಿಗಾ ಬೇಕು. ಅಷ್ಟೇ ಗಮನವೂ ಬೇಕು. ಶುಂಠಿಯಲ್ಲಿ ಸಸಿ ಹಂತದಲ್ಲಿ ನಿತ್ಯ ಗಮನಿಸಬೇಕಾದುದು ಅದರ ಕೀಟ ಹಾವಳಿ.ಶುಂಠಿಗೆ ಕಾಂಡ  ಕೊರಕ ಹುಳಿವಿನ ತೊಂಡರೆ ಸಾಮಾನ್ಯವಾಗಿ ಎಲ್ಲಾ ಕಡೆಯಲ್ಲೂ ಕಂಡು ಬರುವ ಸಮಸ್ಯೆ. ಕಾಂಡ ಕೊರಕ ಹುಳು ಹೆಚ್ಚಾದರೆ ಬೆಳೆ ಗಣನೀಯವಾಗಿ ನಷ್ಟವಾಗುತ್ತದೆ. ಇದನ್ನು ನಿತ್ಯ ಗಮನಿಸಿ  ನಿರ್ವಹಣೆ ಮಾಡಬೇಕು. ಯಾವಾಗ ಹೆಚ್ಚು: ಕಾಂಡ ಕೊರಕ…

Read more
coconut palm genetically defected

ತೆಂಗು -ಇಂಥಹ ನ್ಯೂನತೆಗೆ ಪರಿಹಾರ ಏನು?

ಮನುಷ್ಯರಲ್ಲಿ ಒಬ್ಬರಿಗೊಬ್ಬರಿಗೆ ಸಾಮ್ಯತೆ ಇಲ್ಲ ಎಂಬುದು ನಮಗೆಲ್ಲಾ ತಿಳಿದಿರುವ ಸಂಗತಿ.ಅದೇ ರೀತಿಯಲ್ಲಿ ಸಸ್ಯಗಳಲ್ಲೂ ಒಂದು ಸಸ್ಯ ದಂತೆ ಮತ್ತೊಂದು ಸಸ್ಯ ಇರುವುದಿಲ್ಲ. ಪ್ರತಿಯೊಂದಕ್ಕೂ ಅದರದ್ದೇ ಆದ ವಿಭಿನ್ನ ಗುಣ ಇರುತ್ತದೆ. ಆ ಪ್ರಕಾರವೇ ಬೆಳವಣಿಗೆ  ಇರುತ್ತದೆ. ತೆಂಗಿನ ವಿಚಾರದಲ್ಲೂ ಇದು ಪ್ರಸ್ತುತ. ನಾವು ನೆಟ್ಟು ಬೆಳೆಸುವ ತೆಂಗು ನಾಟಿ ಮಾಡಿ ನಾಲ್ಕರಿಂದ ಐದು ವರ್ಷಕ್ಕೆ ಫಸಲಿಗೆ ಆರಂಭವಾಗುತ್ತದೆ. ಆ ಸಮಯದ ವರೆಗೆ ಆ ಸಸಿ ಯಾವ ರೀತಿ ಫಲ ಕೊಡಬಹುದು ಎಂಬುದನ್ನು ಕರಾರುವಕ್ಕಾಗಿ ಹೇಳಲಿಕ್ಕೆ ಬರುವುದಿಲ್ಲ. ಕೆಲವು…

Read more

ಅಧಿಕ ಇಳುವರಿಗೆ ಸಹಾಯಕವಾಗುವ ಸಾವಯವ ಗೊಬ್ಬರಗಳು.

ರಾಸಾಯನಿಕ ಗೊಬ್ಬರಗಳು ಒಮ್ಮೆಗೆ  ಉತ್ತಮ ಫಲಿತಾಂಶ ಕೊಡಬಹುದು. ಆದರೆ ಅದು ಧೀರ್ಘ ಕಾಲದ ತನಕ ಕಷ್ಟ. ಮಣ್ಣಿನ ಫಲವತ್ತತೆಯಿಂದ ಮಾತ್ರ ಧೀರ್ಘಕಾಲಿಕ ಫಲಿತಾಂಶ ಪಡೆಯಲು ಸಾಧ್ಯ. ಧೀರ್ಘಾವಧಿ ಬೆಳೆಗಳಿಗೆ ಮಣ್ಣಿನ ಫಲವತ್ತತೆ ಪ್ರಾಮುಖ್ಯ. ಸಾವಯವ ಅಥವಾ ನೈಸರ್ಗಿಕ ಮೂಲವಸ್ತುಗಳಿಂದ ಮಾತ್ರ ಮಣ್ಣಿನ ಫಲವತ್ತತೆ ವೃದ್ದಿಯಾಗಲು ಸಾಧ್ಯ. ರಾಸಾಯನಿಕ ಗೊಬ್ಬರಗಳು ಎಲ್ಲವೂ ಆಮ್ಲೀಯ ಗುಣದವು. ಇದನ್ನು ಮಣ್ಣಿಗೆ ಹಾಕುವುದರಿಂದ ಮಣ್ಣು ಸ್ವಲ್ಪ ಮಟ್ಟಿಗೆ ಅಜೀರ್ಣಕ್ಕೊಳಗಾಗುತ್ತದೆ. ರಾಸಾಯನಿಕ ಗೊಬ್ಬರಗಳನ್ನು ಬಳಸುವುದರ ಜೊತೆಗೆ  ಸಾವಯವ ವಸ್ತುಗಳನ್ನೂ ಸೇರಿಸುತ್ತಿದ್ದರೆ ಮಣ್ಣು ಆರೋಗ್ಯವಾಗಿರುತ್ತದೆ. ಮಣ್ಣು…

Read more
local areca

ಅಡಿಕೆ- ಸ್ಥಳೀಯ ತಳಿಗಳೇ ಶೇಷ್ಟ – ಯಾಕೆ ಗೊತ್ತಾ?

ಅಡಿಕೆಯಲ್ಲಿ ಅದರಲ್ಲೂ ವಿಶೇಷವಾಗಿ  ಚಾಲಿ ಅಡಿಕೆ ಮಾಡುವ ಪ್ರದೇಶಗಳಲ್ಲಿ ಹಲವಾರು ತಳಿಗಳು ಪರಿಚಯಿಸಲ್ಪಟ್ಟಿವೆ. ಹೊಸತರಲ್ಲಿ  ಭಾರೀ ಸದ್ದು ಗದ್ದಲ ಏರ್ಪಡಿಸಿ, ಮತ್ತೆ ಮತ್ತೆ    ಹೊಸ ತಳಿಗಳ ಪ್ರವೇಶಕ್ಕೆ  ಎಡೆಮಾಡಿಕೊಟ್ಟಿದೆ. ಮಂಗಳ, ಶ್ರೀಮಂಗಳ, ಮೋಹಿತ್ ನಗರ,ಸುಮಂಗಳ, ರತ್ನಗಿರಿ, ಸೈಗಾನ್, ಮಧುರಮಂಗಳ, ಶತಮಂಗಳ ಹೀಗೆಲ್ಲಾ ಪಟ್ಟಿಯೇ ಇದೆ. 1972 ರಿಂದ ಹಲವಾರು ಹೊಸ ಹೊಸ ತಳಿಗಳನ್ನು ಪರಿಚಯಿಸಲಾಗಿದೆ.ಅವೆಲ್ಲವೂ ಕೆಲವೇ ಸಮಯದಲ್ಲಿ ತಳಿ ಮಿಶ್ರಣ ದಿಂದ ತನ್ನ ಮೂಲ ಗುಣ ಕಳೆದುಕೊಂಡಿವೆ.ಆದರೆ ಸ್ಥಳೀಯ ತಳಿಮಾತ್ರ ಅನಾದಿ ಕಾಲದಿಂದ ಹೇಗಿದೆಯೊ ಹಾಗೆಯೇ ಮೌನವಾಗಿ…

Read more

ಮಿಡತೆಗಳಿಗೆ ಅಂಜಬೇಕಾಗಿಲ್ಲ.

ಜನರಲ್ಲಿ ಭಯ ಮೂಡಿಸಿದ ಮಿಡತೆ ಹಾವಳಿ ಬಗ್ಗೆ ಹಿರಿಯ ಕೀಟ ಶಾಸ್ತ್ರಜ್ಞ, ಕರಾವಳಿ ಕರ್ನಾಟಕದ ಕೃಷಿ ತೋಟಗಾರಿಕಾ ವಲಯ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಶ್ರೀ ಎಸ್ ಯು ಪಾಟೀಲ್ ರವರು ಹೇಳುವ ಮಾತುಗಳು ಇವು. ಮೇಲಿನ ಧ್ವನಿ ಮುದ್ರಿಕೆಯಲ್ಲಿ ಈ ವಿಚಾರದ ಬಗ್ಗೆ ಶ್ರೀಯುತರು ವಿವರವಾಗಿ ಹೇಳಿದ್ದಾರೆ. ಈ ಮಿಡತೆಗಳಿಂದ ಯಾವ ಹಾನಿಯೂ ಉಂಟಾಗದು ಭಯಪಡುವ ಅಗತ್ಯ ಇಲ್ಲ.ಮಹಾರಾಷ್ಟ್ರ ದಾಟಿ ಬರುವುದೇ ಸಂದೇಹ. ಮಿಡತೆಗಳಲ್ಲಿ ಉದ್ದ ಮೀಸೆಯವು ಪರಭಕ್ಷಕಗಳು. ಗಿಡ್ಡ ಮೀಸೆಯವು ಮಾತ್ರ ಸ್ವಲ್ಪ ಹಸುರನ್ನು ತಿನ್ನುವವುಗಳು….

Read more

ಮಿಡತೆಗಳು – ನಮ್ಮ ತಲೆಯೊಳಗೆ ಹೊಕ್ಕಿದ ಹುಳಗಳು!

ಉತ್ತರ ಭಾರತದ ಹರ್ಯಾಣ, ಉತ್ತರ ಪ್ರದೇಶ, ಪಂಜಾಬ್, ರಾಜಸ್ಥಾನ , ಮಧ್ಯಪ್ರದೇಶ ಮುಂತಾದ ಕಡೆ ಮಿಡತೆಗಳು ರೈತರ ಹೊಲಕ್ಕೆ ಧಾಳಿ ಮಾಡಿ ದ ವರದಿ ಇದೆ. ಈಗ ಅದು ಮಹಾರಾಷ್ಟ್ರದ  ನಾಗ್ಪುರ ಸುತ್ತಮುತ್ತ  ಇದೆಯಂತೆ. ಇನ್ನು ಇದು ಮಹಾರಾಷ್ಟ್ರದ ಗಡಿಯಾದ ಗುಲ್ಬರ್ಗಾಕ್ಕೆ ಬಂದರೆ ಏನು ಗತಿ ಎಂದು ರೈತರು ಆತಂಕದಲ್ಲಿದ್ದಾರೆ. ಅಂತದ್ದೇನೂ ಆಗುವುದಿಲ್ಲ. ಮೂಲದಲ್ಲಿ ಇದ್ದಷ್ಟು ಸಂಖ್ಯೆ ಮುಂದುವರಿದಂತೆ ಕಡಿಮೆಯಾಗಿದೆ. ಇನ್ನು ಕರ್ನಾಟಕಕ್ಕೆ ಬಂದಾಗ ಅದರ ಸಂಖ್ಯೆ ತುಂಬಾ ಕಡಿಮೆಯಾಗಬಹುದು.  ಈ ಮಿಡತೆಗೆಳು ನಾವು ಕರೆಯುವ ಗ್ರಾಸ್…

Read more
ಬೋರ್ಡೋ ದ್ರಾವಣ ಸಿಂಪಡಿಸಿದ ಮರ

ಬೋರ್ಡೋ ದ್ರಾವಣ ತಾಯಾರಿಕೆ ವಿಧಾನ ಇದು.

ಸುಣ್ಣ ಮತ್ತು ಮೈಲು ತುತ್ತೆಯನ್ನು ಸರಿಯಾದ ಪ್ರಮಾಣದಲ್ಲಿ ಮಿಶ್ರಣ ಮಾಡಿ ತಯಾರಿಸುವ ದ್ರಾವಣಕ್ಕೆ ಬೋರ್ಡೋ  ದ್ರಾವಣ (Bordeaux mixture )ಎಂದು ಹೆಸರು. ಇದು  ಕೊಳೆಯುವ ರೋಗಕ್ಕೆ ಕಾರಣವಾದ  ಶಿಲೀಂದ್ರದ ಬೀಜಾಣುಗಳನ್ನು ಮೊಳಕೆಯೊಡೆಯದಂತೆ  ಪ್ರತಿಬಂಧಿಸುವ ಶಕ್ತಿಯನ್ನು ಹೊಂದಿದೆ. ಪ್ರಾನ್ಸ್ ದೇಶದ ಬೊರ್ಡೋ ಎಂಬ ಪ್ರದೇಶದಲ್ಲಿ ದ್ರಾಕ್ಷಿ ತೋಟಗಳಲ್ಲಿ ಸಸ್ಯಾಣುಗಳಿಂದ ಉಂಟಾಗುವ ರೋಗವನ್ನು ನಿಯಂತ್ರಿಸಲು ಈ ಸಾಮಾಗ್ರಿಗಳ ಪಾಕವನ್ನು ಬಳಸಲಾಗುತ್ತಿತ್ತಂತೆ. ಅದನ್ನು ಮೈಸೂರು ಪ್ರಾಂತ್ಯದಲ್ಲಿ ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಪರಿಚಯಿಸಿದವರು  ಲೆಸ್ಲಿ ಸಿ ಕೋಲ್ ಮನ್ Leslie Charles Coleman…

Read more
ಉಳುಮೆ ರಹಿತ ತೆಂಗಿನ ತೋಟ

ತೆಂಗಿನ ಮರದ ರಸ ಸೋರುವಿಕೆಗೂ ಉಳುಮೆಗೂ ಏನು ಸಂಬಂಧ?

ತೆಂಗಿನ ಮರಕ್ಕೆ ಅತೀ ದೊಡ್ಡ ರೋಗ ಎಂದರೆ ಕಾಂಡದಲ್ಲಿ ರಸ ಸೋರುವಿಕೆ. ರಸ ಸೋರುವಿಕೆ ಪ್ರಾರಂಭವಾಗಿ ಕೆಲವು ವರ್ಷಗಳ ನಂತರ ಮರ ಕಾಯಿ ಬಿಡುವುದು ನಿಲ್ಲಿಸುತ್ತದೆ. ನಿಧಾನವಾಗಿ ಮರ ಕೃಶವಾಗುತ್ತಾ ಬರುತ್ತದೆ. ಇದಕ್ಕೆ ಮೂಲ ಕಾರಣ ಮರದ ಬೇರು ಸಮೂಹಕ್ಕೆ ತೊಂದರೆ ಮಾಡಿರುವುದೇ ಆಗಿರುತ್ತದೆ. ಮರದ ಬುಡ  ಭಾಗ ಉಳುಮೆ ಮಾಡುವಾಗ ಬೇರುಗಳಿಗೆ ಗಾಯ ಅಗಿ ಈ ತೊಂದರೆ ಉಂಟಾಗುತ್ತದೆ. ಪ್ರತೀಯೊಬ್ಬ ತೆಂಗು ಬೆಳೆಯುವವರೂ ತೆಂಗಿನ ಮರದ ಬೇರು ವ್ಯವಸ್ಥೆ ಹೇಗೆ ಇದೆ. ಯಾಕೆ ಅದಕ್ಕೆ ಗಾಯ…

Read more
error: Content is protected !!