ಸುಳಿ ಕೊಳೆಗೆ ತುತ್ತಾದ ಅಡಿಕೆ ಸಸಿ

ಅಡಿಕೆ – ಸುಳಿ ಕೊಳೆಯುವುದಕ್ಕೆ ಕಾರಣ ಮತ್ತು ಪರಿಹಾರ.

ಕಳೆದ ಕೆಲವು ವರ್ಷಗಳಿಂದ ಅಡಿಕೆ ಬೆಳೆಗಾರರು ಸಸಿ/ ಮರದ  ಸುಳಿ ಕೊಳೆಯುವ/ ಬುಡ ಕೊಳೆಯುವ ತೊಂದರೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಎದುರಿಸುತ್ತಿದ್ದಾರೆ. ಹವಾಮಾನ ವೆತ್ಯಾಸ ಮತ್ತು ಇನ್ನಿತರ ಕಾರಣಗಳಿಂದ ಇದು ಆಗುತ್ತದೆ. ಸಂಜೆ  ಮಳೆ ಬರುತ್ತದೆ, ಹಗಲು ಭಾರೀ ಪ್ರಖರವಾದ ಬಿಸಿಲು. ಈ ಸನ್ನಿವೇಶದಲ್ಲಿ  ಅಡಿಕೆ, ತೆಂಗು ಮುಂತಾದ ಸಸಿ/ ಮರದ ಎಳೆಯ ಸುಳಿ ಭಾಗದಲ್ಲಿ ಒಂದು ಶಿಲೀಂದ್ರ ಬೆಳೆದು ಅದು ಆ ಭಾಗವನ್ನು ಕೊಳೆಯುವಂತೆ  ಮಾಡಿ ಮರದ ಮೊಳೆಕೆ ತನಕ ವ್ಯಾಪಿಸಿ ಗಿಡವನ್ನು  ಸಾಯುವಂತೆ  ಮಾಡುತ್ತದೆ. ಇದು ಈಗ ಎಲ್ಲಾ…

Read more
ಬೇಗ ಇಳುವರಿ ಕೊಡಬಲ್ಲ ತೆಂಗಿನ ಸಸಿ ಲಕ್ಷಣ - Early yielding nature of plant

ಉತ್ತಮ ಇಳುವರಿ ನೀಡಬಲ್ಲ ತೆಂಗಿನ ಸಸಿಯ ಲಕ್ಷಣಗಳು ಹೇಗೆ ಇರಬೇಕು?

 ಧೀರ್ಘಾವಧಿ ಬೆಳೆಗಳಲ್ಲಿ ಸಸ್ಯ ಮೂಲವನ್ನು ಆರಿಸುವಾಗ ನಮಗೆ ಸ್ವಲ್ಪ ಮಟ್ಟಿಗೆ ಸಸಿ ಹೀಗೆ ಇದ್ದರೆ ಉತ್ತಮ ಎಂಬ ಮಾನದಂಡಗಳನ್ನು ತಿಳಿದಿದ್ದರೆ ಒಳ್ಳೆಯದು.  ಕಾರಣ ಈ ಗಿಡ ನೆಟ್ಟು ಪ್ರತಿಫಲ ತೋರಿಸಲು 5-6 ವರ್ಷ ಬೇಕು. ಆಗ ನಮ್ಮ ಆಯ್ಕೆ ಸ್ವಲ್ಪ ತಪ್ಪಿದ್ದರೆ ಅಷ್ಟೂ ವರ್ಷ ನಷ್ಟ. ಇದಕ್ಕಾಗಿ ಪ್ರತೀಯೊಬ್ಬ ತೆಂಗು ಬೆಳೆಯುವವನೂ ತೆಂಗಿನ ಉತ್ತಮ ಗಿಡದ ಲಕ್ಷಣಗ ಗಳು ಹೀಗೆ ಇರಬೇಕು ಎಂಬುದನ್ನು ತಿಳಿದಿದ್ದರೆ ಒಳ್ಳೆಯದು. ತೆಂಗು ಮಿಶ್ರ ಪರಾಗಸ್ಪರ್ಷದ ಮೂಲಕ ಕಾಯಿ ಕಚ್ಚುವ ಸಸ್ಯವಾಗಿದು, ಯಾವ ಮರದ ಕಾಯಿಯನ್ನು…

Read more
ಮೈದಾನ ಪ್ರದೇಶಕ್ಕೆ ಹೊಂದುವ ನೀರಾವರಿ ಬೇಕಾಗದ ಗೋಡಂಬಿ ತಳಿಗಳು.

ಮೈದಾನ ಪ್ರದೇಶಕ್ಕೆ ಹೊಂದುವ ನೀರಾವರಿ ಬೇಕಾಗದ ಗೋಡಂಬಿ ತಳಿಗಳು.

ಅರೆ ಮಲೆನಾಡು ಮತ್ತು ಬಯಲು ಸೀಮೆಗಳಾದ ತುಮಕೂರು, ಶಿರಾ, ಕೊಲಾರ, ರಾಮನಗರ, ಹಾಗೆಯೇ ಬಾಗಲಕೋಟೆ, ಬೆಳಗಾವಿಯ ಕೆಲವು ಭಾಗಗಳಲ್ಲಿ  ರೈತರು ಈಗಾಗಲೇ ಗೇರು ಬೆಳೆಸುತ್ತಿದ್ದು, ಇಲ್ಲಿನ ಹವಾಮಾನದಲ್ಲಿ ಉತ್ತಮ ಇಳುವರಿ ಬರುತ್ತಿದೆ. ಇಲ್ಲಿನ ಒಣ ಭೂಮಿಗೆ ಇದು ಚೆನ್ನಾಗಿ ಹೊಂದಿಕೊಂಡು ನೀರಾವರಿ ಮಾಡುವುದಿದ್ದರೂ ಅತೀ ಕಡಿಮೆ ನೀರಾವರಿ ಸಾಕು. ಬಾಗಲಕೋಟೆಯ ತೋಟಗಾರಿಕಾ ವಿಶ್ವವಿಧ್ಯಾನಿಲಯ, ಹುಲಕೋಟಿಯ ಕೃಷಿ ಸಂಶೋಧನಾ ಕೇಂದ್ರ, ಚಿಂತಾಮಣಿಯ ತೋಟಗಾರಿಕಾ ಸಂಶೋಧನಾ  ಕೇಂದ್ರಗಳು ಗೋಡಂಬಿ ಬೆಳೆಯನ್ನು  ಬೆಳೆಸುವ ರೈತರಿಗೆ ಮನವರಿಕೆ ಮಾಡಿಕೊಡಲು ಶ್ರಮಿಸುತ್ತಿದ್ದಾರೆ. ಮೈದಾನ ಪ್ರದೇಶಕ್ಕೆ…

Read more

ಕರಾವಳಿ ಮಲೆನಾಡಿಗೆ ಹೊಂದುವ ಉತ್ತಮ ಗೇರು ತಳಿಗಳು

ಗೇರು ಒಂದು ವಿದೇಶಿ ವಿನಿಮಯ ಗಳಿಸುವ ವಾಣಿಜ್ಯ ಬೆಳೆ. ನಮ್ಮ ದೇಶದಲ್ಲಿ ಇದನ್ನು ಕೇರಳ, ಮಹಾರಾಷ್ಟ್ರ, ಗೋವಾ, ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಒರಿಸ್ಸಾ ಈಶಾನ್ಯ ರಾಜ್ಯಗಳು ಹಾಗೂ ಪಶ್ಚಿಮ ಬಂಗಾಳದಲ್ಲೆಲ್ಲಾ ಬೆಳೆಯಲಾಗುತ್ತಿದೆ. ಹೆಚ್ಚು ಪ್ರೊಟೀನ್ ಹಾಗೂ ಕಡಿಮೆ ಪ್ರಮಾಣದ ಶರ್ಕರ ಹೊಂದಿರುವ ಗೇರುಬೀಜಕ್ಕೆ ಪಾಶ್ಚಿಮಾತ್ಯ ದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಇದು ನಮ್ಮ ರಾಜ್ಯದ ಕರಾವಳಿ, ಮಲೆನಾಡು ಅರೆ ಮಲೆನಾಡು ಪ್ರದೇಶಗಳಿಗೆ  ಚೆನ್ನಾಗಿ ಹೊಂದಿಕೆಯಾಗುವ ಬೆಳೆಯಾಗಿದೆ. ಕಡಿಮೆ ನೀರಿನಲ್ಲಿ ಬೆಳೆದು ಆದಾಯ ಕೊಡಬಲ್ಲ ಬೆಳೆ ಎಂದು…

Read more

ಶುಂಠಿ- ಎಲೆಗೆಳು ಹಳದಿಯಾಗದಂತೆ ತಡೆಯುವ ವಿಧಾನ.

ಬ್ಯಾಕ್ಟೀರಿಯಾ ಸೊರಗು ಬರುವುದು ಮುಖ್ಯವಾಗಿ ಗಡ್ಡೆಗಳಲ್ಲಿ ಸೋಂಕು ಇರುವ ಕಾರಣದಿಂದ. ಗಡ್ಡೆಗಳನ್ನು ಆಯ್ಕೆ ಮಾಡುವಾಗ ತುಂಬಾ ಜಾಗರೂಕತೆ ಬೇಕು. ಮಣ್ಣು ಒಮ್ಮೆ ಬೆಳೆ ಬೆಳೆದ ಸ್ಥಳ ಆಗಿರಬಾರದು. ಬಿತ್ತನೆ ಗಡ್ಡೆಯನ್ನು  ಉಪಚರಿಸಿಯೇ ನಾಟಿ ಮಾಡಬೇಕು. ಬ್ಯಾಕ್ಟೀರಿಯಾ ಸೊರಗು ರೋಗವು ಗಿಡವನ್ನು ತಕ್ಷಣಕ್ಕೆ ಸಾಯುವಂತೆ ಮಾಡುವುದಿಲ್ಲ. ಎಲೆ ಹಳದಿಯಾಗುತ್ತಾ ಕೊನೆಗೆ ಸಾಯುತ್ತದೆ.  ಇದು ಬೆಳಯನ್ನು ಏಳಿಗೆಯಾಗಲು ಬಿಡದ ರೋಗ. ಇದು ಸುಡೋಮೋನಾಸ್ ಸೋಲನೇಸಿಯಾರಂ ಎಂಬ  ಬ್ಯಾಕ್ಟೀರಿಯಾ ( ದುಂಡಾಣು) ದಿಂದ ಬರುತ್ತದೆ. ಇದು ಮುಂಗಾರು ಮಳೆ ಪ್ರಾರಂಭವಾಗುವ ಸಮಯದಲ್ಲಿ…

Read more

ರೈತರಿಗೆ ಕೇಂದ್ರ ಸರಕಾರದಿಂದ ಮುಷ್ಟಿ ಸಹಾಯ.

ಇಂದು ಗ್ರಾಮೀಣ ಭಾಗದ ಸಣ್ಣ – ಅತೀ ಸಣ್ಣ ರೈತರು, ಈಗಾಗಲೇ ಸರಾಸರಿ ತಲಾ 1 ಲಕ್ಷಕ್ಕೂ ಹೆಚ್ಚಿನ ಸಾಲದಲ್ಲಿ ಮುಳುಗಿದ್ದಾರೆ. ದೊಡ್ಡ ರೈತರ ಬದುಕೇ ಸಾಲ. ಇದರ ಮೇಲೆ ಇವರಿಗೆ ಮತ್ತೆ ಸಾಲ ಕೊಡುವ ಪ್ಲಾನ್ ನಲ್ಲಿದೆ ಕೇಂದ್ರ ಸರಕಾರ. ವಿಶೇಷ ಪ್ಯಾಕೇಜ್ ಮೂಲಕ ಸಾಲಕೊಟ್ಟು ಭಾರತದ ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದು ಸಾಧ್ಯವೇ ? ಇದರ ಪರಿಣಾಮ ಏನಾಗಬಹುದು? ಕೇಂದ್ರ ಸರಕಾರ ರೈತರ ಕಲ್ಯಾಣಕ್ಕಾಗಿ ಭಾರೀ ಸವಲತ್ತುಗಳನ್ನು ನೀಡಲಿದೆ ಎಂಬ  ಪ್ರತೀಯೊಬ್ಬ ರೈತರ ಆಶಯ …

Read more
ploy mulch of ginger

ಶುಂಠಿ ಸಸಿಗಳು ಯಾಕೆ ಕೊಳೆಯುತ್ತಿವೆ – ಏನು ಪರಿಹಾರ

ಶುಂಠಿ ಬೆಳೆಯ ಅತೀ ದೊಡ್ದ ಸಮಸ್ಯೆ ಎಂದರೆ ಎಲೆ ಕೊಳೆ ಮತ್ತು ಕಾಂಡ ಕೊಳೆ ರೋಗ. ಇದರಿಂದಾಗಿ 25 % ದಿಂದ 75% ತನಕವೂ ಬೆಳೆ ಹಾಳಾಗುತ್ತದೆ. ಇದರ ಮೂಲ ಗಡ್ಡೆ, ವಾತಾವರಣ ಮತ್ತು ನೀರು. ಇದನ್ನು ಮುನ್ನೆಚ್ಚರಿಕೆ ಕ್ರಮದಲ್ಲೇ ನಿಯಂತ್ರಣ ಮಾಡಬೇಕು. ಶುಂಠಿ  ಗಡ್ಡೆ ನಾಟಿ ಮಾಡಿದಲ್ಲಿ ಕೆಲವು ಗಡ್ಡೆಗಳು ಮೊಳಕೆ ಬಾರದೇ ಅಲ್ಲಿಗೆ ಕೊಳೆತು ಹೋಗುವುದಿದೆ. ಮತ್ತೆ ಕೆಲವು ಬಲವಿಲ್ಲದ ಮೊಳಕೆಗಳು, ಇನ್ನು ಕೆಲವು 4-5  ಎಲೆ ಬಂದ ನಂತರ ಹಳದಿಯಾಗುವುದು. ಸಸ್ಯಗಳು ಬೆಳೆಯುತ್ತಿದ್ದಂತೇ …

Read more

ಅಡಿಕೆ ಮರದಲ್ಲಿ ಅಂಟು ಸ್ರವಿಸುವುದಕ್ಕೆ ಕಾರಣ ಮತ್ತು ಪರಿಹಾರ.

ಇತ್ತೀಚಿಗೆ ಮಲೆನಾಡು ಮತ್ತು ಬಯಲುಸೀಮೆಯ ಕೆಲವು ತೋಟಗಳಲ್ಲಿ ಅಡಿಕೆ ಮರದಕಾಂಡ ಮತ್ತು ಸೋಗೆಯ ದಿಂಡಿನಿಂದ ಅಂಟು (ಮೇಣದಂತಹ ಪದಾರ್ಥ) ಸೋರುತ್ತಿರುವುದು ಕಂಡುಬಂದಿದೆ.ಇದನ್ನು ಎಂದೂ ಕಂಡಿಲ್ಲದ ಬೆಳೆಗಾರರು ಸಹಜವಾಗಿ ಗೊಂದಲಕ್ಕೀಡಾಗಿದ್ದಾರೆ. ಈ ವಿದ್ಯಮಾನದ ಬಗ್ಗೆ ಲಭ್ಯವಿರುವ ವೈಜ್ಞಾನಿಕ ಮಾಹಿತಿಯನ್ನು ಈ ಲೇಖನದ ಮೂಲಕ ಬೆಳೆಗಾರ ಅನುಕೂಲಕ್ಕಾಗಿ ನೀಡಲಾಗಿದೆ. ಅಂಟು ಸೋರಲು ಕಾರಣವೇನು? ಕೇವಲ ಅರ್ಧ ಸೆಂಟಿಮೀಟರ್‍ ಉದ್ದವಿರುವ ಯೂಪ್ಲಾಟಿಪಸ್ ಪ್ಯಾರಲ್ಲೆಲಸ್ ಎಂಬ ಕೀಟ. ಇದು  ಅಡಿಕೆ ಮರದಕಾಂಡ ಮತ್ತು ಸೋಗೆಯ ದಿಂಡನ್ನು ಕೊರೆದು ಒಳಗೆ ಪ್ರವೇಶಿಸಿಸುತ್ತದೆ. ಕೀಟವು ಪ್ರವೇಶಿಸಿದ…

Read more
Kare Ishaad

ಉತ್ತರ ಕನ್ನಡದ ವಿಶೇಷ ಮಾವು- ಕರೇ ಈಶಾಡ್.

ಕುಮಟಾ ಅಂಕೋಲಾ ಮಧ್ಯೆ ಹೆಚ್ಚಿನವರ ಮನೆ ಬಾಗಿಲಿನಲ್ಲಿ ಒಂದೆರಡು ಮಾವಿನ ಮರ ಇದ್ದೇ ಇರುತ್ತದೆ. ಇಲ್ಲಿ ಜನ ಯಾವುದಾದರೂ ಮರ ಕಡಿದಾರು ಆದರೆ ಮನೆ ಹಿತ್ತಲಿನಲ್ಲಿರುವ ಕರೇ ಈಶಾಡ್ ಮಾವಿನ ಮರಕ್ಕೆ  ಕೊಡಲಿ ಇಡಲಾರರು. ಕಾರಣ ಇದು ಆ ಪ್ರದೇಶದ ಪ್ರಸಿದ್ದ ಮಾವಿನ ತಳಿ. ಜೊತೆಗೆ ಹಣ್ಣಿನ ಸೀಸನ್‍ನಲ್ಲಿ ಸ್ವಲ್ಪ ಉತ್ಪತ್ತಿ ತಂದುಕೊಡುವ ಬೆಳೆ.    ಕರೇ ಈಶಾಡ್ ಎಂಬುದು ಕುಮಟಾ ಅಂಕೋಲಾ ಮಧ್ಯದ ಪ್ರದೇಶಗಳಲ್ಲಿ ಬೆಳೆಯಲ್ಪಡುವ ಸ್ಥಳೀಯ ಮಾವಿನ ತಳಿ. ಸುಮಾರಾಗಿ ಮುಂಡಪ್ಪದ ಗಾತ್ರದಲ್ಲಿರುವ ಈ…

Read more

ರಾಸಾಯನಿಕ ಮುಕ್ತ ಭತ್ತ ಬೇಸಾಯ ಹೀಗೆ.

ಸಮಗ್ರ  ಕೃಷಿ ಪದ್ದತಿ ಎಂದರೆ ಲಭ್ಯವಿರುವ ನಿಯಮಿತ ಸಂಪನ್ಮೂಲಗಳನ್ನು ಬಳಸಿಕೊಂಡು ಅಧಿಕ ಉತ್ಪಾದನೆ  ಪಡೆಯುವ  ಕೃಷಿ ಪದ್ದತಿ. ಇದರಲ್ಲಿ ಒಂದಕ್ಕೊಂದು ಅನುಕೂಲಗಳಿರುತ್ತವೆ. ಸ್ವಾವಲಂಬಿಯಾಗಿ ಬೆಳೆ ತೆಗೆಯಲು ಇದು ಸಹಕಾರಿ. ಭತ್ತದ ಬೆಳೆಗೆ ಯಾವುದೇ ಕೀಟನಾಶಕ- ರೋಗ ನಾಶಕ ಬಳಕೆ ತುಂಬಾ ಕಷ್ಟ ಹಾಗೆಯೇ  ಅಪಾಯಕಾರಿಯೂ ಸಹ. ಇದನ್ನು  ಬಳಸದೆ ಬೆಳೆ ಬೆಳೆಯಲು  ಭತ್ತದ ಜೊತೆಗೆ ಮೀನು, ಕೋಳಿ ಸಾಕಿ.  ಭತ್ತದ ಪೈರಿನ ಅಧಿಕ ಇಳುವರಿಗೆ ಮೇಲ್ ಸ್ಥರದಲ್ಲಿ ಕೋಳಿ  ಗೊಬ್ಬರಕೊಟ್ಟರೆ  ಮೀನು ಬೆಳೆ ಸಂರಕ್ಷಿಸುತ್ತದೆ. ಇದರಿಂದ ಕೀಟ-…

Read more
error: Content is protected !!