ಅಡಿಕೆಯ ಮಿಡಿಗಳು ಯಾಕೆ ಉದುರುತ್ತವೆ?

ಬೇಸಿಗೆಯಲ್ಲಿ ಏನೇನೋ ಕಸರತ್ತು ಮಾಡಿ ಹೂಗೊಂಚಲಿನಲ್ಲಿ ಮಿಡಿಗಳನ್ನು ಉಳಿಸಿರುತ್ತೇವೆ. ಆದರೆ ಅದು ಒಂದೆರಡು ಮಳೆ ಬಂದ ತಕ್ಷಣ ಉದುರಲಾರಂಭಿಸುತ್ತದೆ. ಕೆಲವು ಮುಂಚೆಯೇ ಉದುರುತ್ತದೆ. ಇದಕ್ಕೆ ಹಲವು ಕಾರಣಗಳಿದ್ದು, ರೈತರು ತಮ್ಮಲ್ಲಿ ಯಾವ ಸ್ಥಿತಿ ಇದೆಯೋ ಅದಕ್ಕನುಗುಣವಾಗಿ ಉಪಚಾರ ಮಾಡಿ ಅದನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದು. ಮಳೆ ಒಂದು ಬಂದರೆ ಸಾಕು, ಅಡಿಕೆ ಮರದಲ್ಲಿ ಮಿಡಿಗಳು ಉದುರುತ್ತವೆ. ಕೆಲವೊಮ್ಮೆ ಒಂದೆರಡು  ಸಂಖ್ಯೆಯಲ್ಲಿ ಉದುರಿದರೆ  ಕೆಲವೊಮ್ಮೆ ಬಹುತೇಕ ಉದುರುತ್ತದೆ. ಅಂತಹಹ ಮಿಡಿಗಳಲ್ಲಿ ಆ ದಿನ ಉದುರಿದ ಮಿಡಿಯನ್ನು ಒಮ್ಮೆ ಸರಿಯಾಗಿ…

Read more
coconut in close dense

ತೆಂಗಿನ ಸಸಿ ನೆಡುವಾಗ ಎಲ್ಲಿ ಯಾವ ಅಂತರ ಸೂಕ್ತ?

ತೆಂಗನ್ನು 30 ಅಡಿ ಅಂತರದಲ್ಲೂ ಬೆಳೆಯಬಹುದು. ಹಾಗೆಯೇ 15 ಅಂತರದಲ್ಲೂ ಬೆಳೆಯಬಹುದು. ಅದು ಸ್ಥಳ ಮತ್ತು ಪರಿಸ್ಥಿತಿ ಯನ್ನು ಹೊಂದಿಕೊಂಡು. ತೆಂಗನ್ನು ಪ್ಲಾಂಟೇಶನ್ ಆಗಿ ಬೆಳೆಯಲಾಗುತ್ತದೆ. ಅದೇ ರೀತಿಯಲ್ಲಿ ಮನೆ ಹಿತ್ತಲ ಗಿಡವಾಗಿಯೂ, ರಸ್ತೆ ದಾರಿ ಮಗ್ಗುಲಿನ ಬೆಳೆಯಾಗಿಯೂ  ಬೆಳೆಯಲಾಗುತ್ತದೆ. ಇದು ಮುಖ್ಯ ಬೆಳೆಯೂ ಹೌದು. ಮಿಶ್ರ ಬೆಳೆಯೂ ಹೌದು. ತೆಂಗನ್ನು  ಬೆಳೆಸುವಾಗ ಎಲ್ಲಿ ಬೆಳೆಯುತ್ತೀರಿ ಅದರ ಮೇಲೆ ಅಂತರವನ್ನು ನಿರ್ಧರಿಸಿಕೊಳ್ಳಬೇಕು. ಪ್ಲಾಂಟೇಶನ್ ಬೆಳೆಯಾಗಿ: ತೆಂಗಿನ ತೋಟ ಮಾಡುತ್ತೀರೆಂದಾದರೆ  ಅಲ್ಲಿ ಪಾಲಿಸಬೇಕಾದ ಅಂತರ ಭಿನ್ನ. ಮರದಿಂದ ಮರಕ್ಕೆ…

Read more

ಸಸ್ಯಗಳಿಗೆ ಬೋರಾನ್ ಬೇಕು- ಹೆಚ್ಚಾದರೆ ಹೀಗಾಗುತ್ತದೆ.

ಲಘು ಅಥವಾ ಸೂಕ್ಷ್ಮ ಪೋಷಕಾಂಶ ಎಂದರೆ ಅದು ಸಸ್ಯಕ್ಕೆ ಬೇಕಾಗುವುದು ತೀರಾ ಅಲ್ಪ. ಇದನ್ನು ಚಿಟಿಕೆ ಪ್ರಮಾಣದ  ಪೋಷಕ ಎನ್ನಬಹುದು.  ಇದು ಹೆಚ್ಚಾದರೆ ಸಸ್ಯಕ್ಕೆ ಅಪಾಯ. ನಿರಂತರ ಬೆಳೆಗಳನ್ನು  ಬೆಳೆಯುತ್ತಿರುವ ಹೊಲ, ಫಲವತ್ತಾಗಿಲ್ಲದ ಮಣ್ಣು  ಸಾವಯವ ವಸ್ತುಗಳಾದ ಸೊಪ್ಪು, ತರಗೆಲೆ, ಕೊಟ್ಟಿಗೆ ಗೊಬ್ಬರ ಇತ್ಯಾದಿ ಬಳಸದ ಮಣ್ಣಿನಲ್ಲಿ ಸೂಕ್ಷ್ಮ ಪೋಷಕಾಂಶದ ಕೊರತೆ ಉಂಟಾಗುತ್ತದೆ. ಇವು ಬೇಕಾಗುವುದು ಅತೀ ಅಲ್ಪ. ಕೊರತೆಯಾದರೇ ಆಗುವುದೂ ತುಂಬಾ ನಷ್ಟ. ಹೆಚ್ಚಾದರೆ ತೊಂದರೆ ಉಂಟಾಗುತ್ತದೆ. ಬೂದಿ ಹಾಕಿದರೆ ಒಳ್ಳೆಯದು. ಆದರೆ  ಹೆಚ್ಚು ಹಾಕಿದರೆ…

Read more

ಅಡಿಕೆ ಬೆಲೆ ಕುಸಿಯುವ ಆತಂಕ ಇದೆ.

ಕ್ಯಾಂಪ್ಕೋ ಸಂಸ್ಥೆ, ಹಾಗೂ ಕೆಲವು ಖಾಸಗಿ ವ್ಯಾಪಾರಿಗಳು ಚಾಲಿ ಅಡಿಕೆ ಖರೀದಿಯ ಉತ್ಸಾಹದಲ್ಲಿದ್ದಾರೆ.  ಅತ್ತ ಕೆಂಪಡಿಕೆ ವ್ಯವಹಾರದಲ್ಲಿ ಶಿರಸ್ಸಿಯ TSS  ವ್ಯಾಪಾರಕ್ಕೆ ಇಳಿದು ಚಾಲಿಗೆ 32,000 ದಾಟಿಸಿ ಕೆಲವೇ ದಿನಗಳಲ್ಲಿ ಮತ್ತೆ 26,000 ಕ್ಕೆ ಇಳಿಸಿದೆ. ಎಲ್ಲಿಯೂ ಅಡಿಕೆ ಟೆಂಡರ್ ಆಗಿ ಮಾರಾಟ ಆಗಿಲ್ಲ. ಇದು ಬೆಲೆ ಸ್ಥಿತರೆಯ ಬಗ್ಗೆ ಆತಂಕ ಉಂಟು ಮಾಡುತ್ತಿದೆ. ಕೆಂಪಡಿಕೆಗೆ ನಾಲ್ಕು ದಿನಕ್ಕೆ ಹಿಂದೆ 32,000 ಕ್ಕೆ ಒಂದು ಬಿಡ್ಡಿಂಗ್ ನಡೆಯುವುದರಲ್ಲಿತ್ತು. ಆದರೆ  ಕೆಲವು ದೊಡ್ಡ ವ್ಯಾಪಾರೀ  ಕುಳಗಳ ಒತ್ತಡದಿಂದ ಅದು…

Read more
Weed less arecanut garden

ಕಳೆ ಹೆಚ್ಚು ಇದ್ದಲ್ಲಿ ಬೆಳೆ ತುಂಬಾ ಕಡಿಮೆ.

ಬಹಳ ಜನ ಬೆಳೆಗಳಿಗೆ ನೀರು ಕೊಟ್ಟಷ್ಟೂ ಒಳ್ಳೆಯದು ಎಂಬು ಭಾವಿಸುತ್ತಾರೆ. ಮಳೆಗಾಲದ ಮಳೆಗೆ ನೆಲ ಮತ್ತು ಸಸ್ಯಗಳು ಹೇಗೆ ಇರುತ್ತವೆಯೋ ಅದೇ  ರೀತಿ ಬೇಸಿಗೆಯಲ್ಲಿಯೂ ಇರುವಂತೆ ನೋಡಿಕೊಳ್ಳುತ್ತಾರೆ.  ನಮ್ಮ ಈ ವಿಧಾನದಿಂದಾಗಿ ಭೂಮಿಯಲ್ಲಿ ವರ್ಷದಿಂದ ವರ್ಷಕ್ಕೆ ಫಲವತ್ತತೆ ಕ್ಷೀಣಿಸುತ್ತದೆ. ಇಳುವರಿಯೂ ಕಡಿಮೆಯಾಗುತ್ತದೆ. ಇದು ನಮ್ಮೆಲ್ಲರ ಸಮಸ್ಯೆ: ಸಾಮಾನ್ಯವಾಗಿ ನಿರಂತರ 3-4  ವರ್ಷ ಗೊಬ್ಬರ  ಕೊಡುತ್ತಿದ್ದರೆ , ಒಂದು ವರ್ಷ ಏನೂ ಗೊಬ್ಬರ ಕೊಡದಿದ್ದರೂ ಬೆಳೆಯಲ್ಲಿ ಇಳುವರಿ ಕಡಿಮೆಯಾಗಬಾರದು. ಆದರೆ ಆಗುತ್ತದೆ. ಕಾರಣ ನಾವು ವರ್ಷ ವರ್ಷ ಕೊಡುವ…

Read more
ಅಧಿಕ ಸಾಂದ್ರದಲ್ಲಿ ಬೆಳೆದ ಬಾಳೆ ಗೊನೆಯ ನೋಟ

ಒಂದೆಕ್ರೆಯಲ್ಲಿ 2000 ಕ್ಕೂ ಹೆಚ್ಚಿನ ಬಾಳೆ ಬೆಳೆಸುವ ವಿಧಾನ.

ಬಾಳೆ ಬೇಸಾಯ ವಿಧಾನದಲ್ಲಿ ಅಧಿಕ ಇಳುವರಿ ಪಡೆಯಲು ಅನುಕೂಲವಾಗುವ ಹಲವಾರು  ಬೆಳೆ ತಾಂತ್ರಿಕತೆಗಳ ಬಗ್ಗೆ  ಸಂಶೋಧನೆಗಳು ನಡೆಯುತ್ತಿವೆ. ರೈತರೂ ಇದನ್ನು ಅಳವಡಿಸಿ ಯಶಸ್ವಿ ಯಾಗುತಿದ್ದಾರೆ.ಅದರಲ್ಲಿ ಒಂದು ಅಧಿಕ ಸಾಂದ್ರ ಬೇಸಾಯ. ಈ ವಿಧಾನದಲ್ಲಿ ಎಕ್ರೆಗೆ 1230  ರಿಂದ 2000 ಗಿಡಗಳ ತನಕ ಹಿಡಿಸುವ ತಾಂತ್ರಿಕತೆ  ಚಾಲ್ತಿಯಲ್ಲಿದೆ. ಇದರಲ್ಲಿ ಎಕ್ರೆಗೆ 45 ಟನ್ ನಿಂದ 70 ಟನ್ ತನಕವೂ ಇಳುವರಿ ಪಡೆಯಲು ಸಾಧ್ಯ. ಬಾಳೆಯ ಸಾಂಪ್ರದಾಯಿಕ ನಾಟಿ ವಿಧಾನದಲ್ಲಿ  ಗಿಡದಿಂದ ಗಿಡಕ್ಕೆ , ಸಾಲಿನಿಂದ   ಸಾಲಿಗೆ 6 ಅಡಿ ಅಂತರವನ್ನು ಪಾಲಿಸಲಾಗುತ್ತದೆ….

Read more

ಅಂತರ್ಜಲ ಬಳಕೆಗೂ ಬೇಕು – ಲಾಕ್ ಡೌನ್ .

ಒಂದುವರೆ ತಿಂಗಳ ಕಾಲ ಅಂತರ್ಜಲದೊಂದಿಗಿನ  ಅತ್ಯಾಚಾರಕ್ಕೆ ಸ್ವಲ್ಪ ಬಿಡುವಾಗಿತ್ತು. ಆದರೂ ರಾತ್ರೆ ಹೊತ್ತು ಹಳ್ಳಿಯ ಮೂಲೆಗಳಲ್ಲಿ ವ್ಯವಹಾರ ನಡೆಯುತ್ತಿತ್ತು. ಈಗ ಮತ್ತೆ ಅತ್ಯಾಚಾರ ಪ್ರಾರಂಭವಾಗಿದೆ. ಹಳ್ಳಿಯ ಪೆಟ್ರೋಲ್ ಪಂಪುಗಳ ಮುಂದೆ ಮೂರು ನಾಲ್ಕು ಬೋರ್ ಲಾರಿಗಳು ಮೊಕ್ಕಾಂ ಹೂಡಿವೆ. ಒಂದು ತಿಂಗಳು ಅಂತರ್ಜಲಕ್ಕೆ ಬಿಡುಗಡೆ ಸಿಕ್ಕಿದೆ. ಹಾಗೆಯೇ ವರ್ಷದಲ್ಲಿ 2-3 ತಿಂಗಳು ಬಿಡುವು ಕೊಟ್ಟರೆ ಅದೆಷ್ಟೋ ಅಂತರ್ಜಲ ಶೋಷಣೆ ಕಡಿಮೆಯಾಗಬಹುದು. ಅಂತರ್ಜಲದ ಕ್ಷೀಣಿಸುತ್ತಿದೆ: ನಮ್ಮಲ್ಲಿ ಒಂದಷ್ಟು ಜನ ಬೆಳೆಗಳ ಅವಶ್ಯಕತೆಗೆ  ಬೇಕಾದಷ್ಟೇ ಬಳಸಲು ಅಂತರ್ಜಲವನ್ನು ಆವಲಂಭಿಸಿಲ್ಲ. ಅದನ್ನು…

Read more
ತೆಂಗಿನ ಮರ

ತೆಂಗಿನ ತೋಟದಲ್ಲಿ ಗರಿಷ್ಟ ಆದಾಯ ಕೊಡಬಲ್ಲ ಮಿಶ್ರ ಬೆಳೆ.

ಮಿಶ್ರ ಬೆಳೆ ಬೆಳೆಸಲು ಅತೀ ಸೂಕ್ತ ವಾದ ತೋಟ ಎಂದರೆ ತೆಂಗಿನ ತೋಟ. ಇದರ ಮಧ್ಯಂತರದಲ್ಲಿರುವ ಸ್ಥಳಾವಕಾಶ ಬೇರೆ ಯಾವ ಬೆಳೆಯಲ್ಲೂ ಸಿಗದು. ಆದ ಕಾರಣ  ತೆಂಗನ್ನು ಏಕ ಬೆಳೆಯಾಗಿ  ಉಳಿಸಿಕೊಳ್ಳದೆ ಸಾಧ್ಯವಾದಷ್ಟು ಮಿಶ್ರ ಬೆಳೆಗಳನ್ನು  ಬೆಳೆಸಿರಿ. ಒಂದು ತೆಂಗಿನ ತೋಟದಲ್ಲಿ ಮರವೊಂದರಲ್ಲಿ 100 ಕಾಯಿ ಸಿಕ್ಕರೂ ಸಹ  ಒಂದು ಎಕ್ರೆಯಲ್ಲಿ ಸುಮಾರು 8000  ಕಾಯಿಗಳು. ಇದರ ಮಾರಾಟದಿಂದ ಸಿಗಬಹುದಾದ ಸರಾಸರಿ ಉತ್ಪತ್ತಿ, ಸುಮಾರು 80,000 ರೂ. ಗಳು. ಒಂದು ಎಕ್ರೆಗೆ ಇಷ್ಟು ಉತ್ಪತ್ತಿ ಸಾಕೇ?  ಖಂಡಿತವಾಗಿಯೂ …

Read more
Good yield of arecanut

ಅಡಿಕೆ – ಅಧಿಕ ಇಳುವರಿಗೆ ಹೀಗೆ ಗೊಬ್ಬರ ಕೊಡಿ.

ಬಹಳ ಜನ ಅಡಿಕೆ ಬೆಳೆಯಲ್ಲಿ ಭವಿಷ್ಯ ಕಾಣುವವರಿದ್ದಾರೆ. ಅಧಿಕ ಇಳುವರಿ ಬೇಕು, ಯಾವ ಗೊಬ್ಬರ ಕೊಡಬೇಕು ಎಂಬ ಮಾಹಿತಿಗೆ ಕಾಯುತ್ತಿದ್ದಾರೆ. ಇಂಥ ಮಾಹಿತಿ ಇಲ್ಲಿದೆ. ಒಂದು ಅಡಿಕೆ ಮರದ  ಗರಿಷ್ಟ ಉತ್ಪಾದಕತೆ  ಸುಮಾರು  ಮೂರು ಗೊನೆ. ಒಂದು ಗೊನೆಯಲ್ಲಿ ಸರಾಸರಿ 1 ಕಿಲೋ ಅಡಿಕೆ. ನಾಲ್ಕು  ಕಿಲೋ ಅಡಿಕೆ ಬರುವುದು ಅಪರೂಪ. ಸುಮಾರು 2 -3 ಕಿಲೋ ಅಡಿಕೆ ಉತ್ಪಾದನೆ ಪಡೆಯಲು  ವ್ಯವಸ್ಥಿತವಾದ  ಬೇಸಾಯ ಕ್ರಮ ಮತ್ತು ಪೋಷಕಾಂಶ ನಿರ್ವಹಣೆ ಅಗತ್ಯ. ಯಾವ ನಿರ್ವಹಣೆ: ಅಡಿಕೆ ಮರಗಳ…

Read more
error: Content is protected !!