ಅಡಿಕೆ ನಿಷೇಧವಾದರೂ ಅಚ್ಚರಿ ಇಲ್ಲ.

ಉತ್ತರ ಪ್ರದೇಶದಲ್ಲಿ ಸರಕಾರೀ ಕಚೇರಿಗಳ ಪರಿಸರದಲ್ಲಿ ಗುಟ್ಕಾ ,ಪಾನ್ ಮಸಾಲೆ ತಿನ್ನಬಾರದು ಎಂದು ಅಲ್ಲಿನ ಮುಖ್ಯಮಂತ್ರಿಗಳು  ಆದೇಶ ನೀಡಿದ್ದಾರೆ. UP CM Yogi Adityanath bans gutkha, paan masala in all government offices – India today) ಇತರ ರಾಜ್ಯಗಳೂ ಇದನ್ನು ಅನುಸರಿಸಿದರೆ ಅಡಿಕೆ ಬೆಳೆಗಾರರ ಪಾಡು ಹೇಳ ತೀರದು. ಸ್ವಚ್ಚ ಪರಿಸರದಲ್ಲಿ ಸ್ವಾವಲಂಬಿಗಳಾಗಿ ಬದುಕುತ್ತಿದ್ದ ಕೃಷಿಕರು ಮತ್ತು ಕೃಷಿ ವ್ಯವಸ್ಥೆ ಯ ಮೇಲೆ ದೊಡ್ಡ ಹೊಡೆತವೇ  ಬಿದ್ದಿದೆ. ಎಷ್ಟು ಸಮಯವೋ ತಿಳಿಯದಾಗಿದೆ.  ಎಲ್ಲಾ…

Read more

ಸ್ವಾವಲಂಬಿ ಬದುಕಿಗೆ ಮನೆಯಂಗಳದಲ್ಲಿ ತರಕಾರಿ.

ಅವರವರು ಬೆಳೆದ ತರಕಾರಿ ಹಣ್ಣು  ಹಂಪಲುಗಳನ್ನು ಅವರವರೇ ಬಳಸಿದರೆ  ಅದರಷ್ಟು ಆರೋಗ್ಯಕ್ಕೆ ಒಳ್ಳೆಯದು ಬೇರೊಂದಿಲ್ಲ. ನಾವು ಅಂಗಡಿಯಿಂದ ತರುವ ತರಕಾರಿ ಹಣ್ಣು  ಹಂಪಲುಗಳು ಎಷ್ಟೆಂದರೂ ಅಷ್ಟೇ. ಅದರ ಗಾತ್ರ ದೊಡ್ದದಾಗಲು ನೋಟ ಆಕರ್ಷಕವಾಗಿರಲು ಲೆಕ್ಕಕ್ಕಿಂತ ಹೆಚ್ಚು ಪೋಷಕಾಂಶಗಳನ್ನು ,ನಿಷೇಧಿತ ರಕ್ಷಕಗಳನ್ನು  ಬಳಕೆ  ಮಾಡಲಾಗುತ್ತದೆ ಎನ್ನುತ್ತಾರೆ. ಎಂದೋ ಕೊಯಿದ, ಎಲ್ಲಿಂದಲೋ ತಂದ ತರಕಾರಿ ಹಣ್ಣು ಹಂಪಲುಗಳಲ್ಲಿ ಶಿಲೀಂದ್ರ ಬೆಳೆದಿರುವುದೂ ಇದೆ. ವಿಷ ರಾಸಾಯನಿಕ ಬಳಸಿದ ಉಳಿಕೆ ಅಂಶ ಇರುವುದೂ ಇದೆ. ಇದನ್ನು ತಿಂದು ಆರೋಗ್ಯ ಕೆಡಿಸಿಕೊಳ್ಳುವ ಬದಲು ಅವರವರೇ…

Read more

ಕಲ್ಲಂಗಡಿ ಬೆಳೆಗಾರರ ಕಣ್ಣೀರ ಕಥೆ.

ಕಲ್ಲಂಗಡಿ ಬೆಳೆಗಾರರಾದ ಹಿರಿಯಡ್ಕದ ಸುರೇಶ್ ರವರು ಹೇಳುತ್ತಾರೆ ಈ ವರ್ಷ ಯಾವ ಗ್ರಹಚಾರವೋ ತಿಳಿಯದು. 14  ಎಕ್ರೆಯಲ್ಲಿ ಮಾಡಿದ ಕಲ್ಲಂಗಡಿಯನ್ನು ಯಾರಿಗೆ ಮಾರುವುದೋ , ಯಾರು ಕೊಳ್ಳುವವರೋ ಗೊತ್ತಾಗುತ್ತಿಲ್ಲ. ಈ ನಷ್ಟವನ್ನು ಹೇಗೆ ಹೊಂದಿಸಿಕೊಳ್ಳುವುದು ಎಂದೇ ತಿಳಿಯುತ್ತಿಲ್ಲ ಎನ್ನುತ್ತಾರೆ. ಉಡುಪಿಯಿಂದ ಹೊನ್ನಾವರ ತನಕ ವ್ಯಾಪಿಸಿರುವ ಸಾವಿರ ಎಕ್ರೆಗೂ ಮಿಕ್ಕಿದ ಕಲ್ಲಂಗಡಿ ಬೆಳೆಗಾರರ  ಕಣ್ಣೀರ ಕಥೆ ಹೀಗೆಯೇ. ಅದೇ ರೀತಿ ರಾಜ್ಯದುದ್ದಕ್ಕೂ ಕಲ್ಲಂಗಡಿ ಬೆಳೆದವರ ಪಾಡು ಹೇಳ ತೀರದು. ಈ ವರ್ಷ ಯುಗಾದಿಯ ತರುವಾಯ ಮೇ ತನಕ ಕಲ್ಲಂಗಡಿಗೆ…

Read more

ತೆಂಗಿನೆಣ್ಣೆ-ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ತೆಂಗಿನೆಣ್ಣೆಯೂ ವೈರಸ್ ವಿರುದ್ಧ ಕೆಲಸ ಮಾಡುತ್ತದೆ. ಇದು ಕೊರೋನಾ ವೈರಸ್ ಗೆ ಔಷಧಿ ,ತೆಂಗಿನೆಣ್ಣೆ ತಿನ್ನಿ ಎನ್ನುತ್ತಿದ್ದಾರೆ.  ಇದು ಸುಮ್ಮನೆ ಹೇಳಿದ ವಿಚಾರ ಅಲ್ಲ. ಈ ಬಗ್ಗೆ ಕೆಲವು ಅಧ್ಯಯನಗಳು ನಡೆಯುತ್ತಿವೆ.ಇತ್ತೀಚೆಗೆ ಕೆಲವರು ಈ ಬಗ್ಗೆ ಸಾರ್ವಜನಿಕ ಹೇಳಿಕೆ ನೀಡಲಾರಂಭಿಸಿದ್ದಾರೆ. ಶುದ್ಧ ತೆಂಗಿನೆಣ್ಣೆ ಎಂಬುದು ಅನಾದಿ ಕಾಲದಿಂದಲೂ ಪರಮೌಷಧಿ ಎಂದೇ ಪರಿಗಣಿಸಲ್ಪಟ್ಟಿದೆ.  ಕ್ಕೊಬ್ಬರಿ ಎಣ್ಣೆಯನ್ನು ತಲೆಗೆ ಹಾಕಿದರೆ ಕೂದಲು ಬೆಳೆಯುತ್ತದೆ.  ತುಟಿ ಒಡೆದರೆ ತೆಂಗಿನೆಣ್ಣೆ. ಗಾಯವಾದರೆ ತೆಂಗಿನೆಣ್ಣೆ. ಅಲರ್ಜಿ ಇಂದ ಕಣ್ಣು ಉರಿ, ಮೈ ಉರಿ ಬಂದರೆ…

Read more

ಶ್ರೀಗಂಧದ ಬೆಳೆಗೆ ಆಸರೆ ಸಸ್ಯಗಳು

ಶ್ರೀಗಂಧ ಸಸಿ ಕೊಳ್ಳುವಾಗ ಅದರ ಜೊತೆಗೆ ಒಂದು ತೊಗರಿ ಗಿಡ ಉಚಿತವಾಗಿ ದೊರೆಯುತ್ತದೆ. ಇದು ಯಾಕೆಂದರೆ ಶ್ರೀಗಂಧಕ್ಕೆ ಪಾಸಾಡಿ ( ಜೊತೆ ಸಸ್ಯ) ಇದ್ದರೆ ಮಾತ್ರ ಅದಕ್ಕೆ ಬದುಕು. ಶ್ರೀಗಂಧದ ಬೇರು ಇನ್ನೊಂದು ಸಸ್ಯದ ಬೇರಿನಿಂದ ಆಹಾರವನ್ನು  ಪಡೆದು ಬದುಕುವ ವಿಶಿಷ್ಟ ಸಸ್ಯ. ಹಾಗೆಂದು ಇದು ಬದನಿಕೆ ಸಸ್ಯವಲ್ಲ. ಬದನಿಕೆ ಸಸ್ಯವು  ತಾನು ಆಸರೆ ಪಡೆದ ಸಸ್ಯವನ್ನು ಕೊಲ್ಲುತ್ತದೆ. ಇದು ಸಹಜೀವನ ನಡೆಸುತ್ತದೆ. ಜೊತೆಗೆ ಬೆಳೆದ ಸಸ್ಯವೂ ಬದುಕಿಕೊಳ್ಳುತ್ತದೆ. ಶ್ರೀಗಂಧಕ್ಕೆ ಆಸರೆ ಸಸ್ಯಗಳ ಬಗ್ಗೆ ಅಧ್ಯಯನ ನಡೆಸಿದ…

Read more
Silk cocoon for sale

ಸರ್ಕಾರೀ ಸಂಬಳ ಪಡೆದಂತೆ -ರೇಶ್ಮೆ ಕೃಷಿ.

ರೇಶ್ಮೆ ವ್ಯವಸಾಯ ಮನೆ ಮಂದಿ ಸೇರಿ ತಮ್ಮ ಸಂಪಾದನೆಯನ್ನು ತಾವೇ ಗಳಿಸುವ ವೃತ್ತಿ. ಇದನ್ನು ಮಾಡಲು ದೈಹಿಕ ಶ್ರಮ ಬೇಕಾಗಿಲ್ಲ. ಮಕ್ಕಳಿಂದ ಹಿಡಿದು ವೃದ್ದರ ವರೆಗೆ ಈ ವೃತ್ತಿಯಲ್ಲಿ  ತೊಡಗಿಸಿಕೊಳ್ಳಲು ಅವಕಾಶವಿದೆ. ಬರೇ ಇಷ್ಟೇ ಅಲ್ಲ. ರೇಶ್ಮೆ  ವ್ಯವಸಾಯ ಹೆಚ್ಚು ಇರುವ ಕಡೆ ಇದಕ್ಕೆ ಪೂರಕವಾಗಿ ಸ್ವ ಉದ್ಯೋಗ ಮಾಡಿ ಆದಾಯಗಳಿಸಲೂ ಅನುಕೂಲ ಇದೆ. ನಮ್ಮ ರಾಜ್ಯದ ರಾಮನಗರ, ಕನಕಪುರ, ಕೋಲಾರ, ಶಿಡ್ಲಘಟ್ಟ, ಹಾಗೆಯೇ ಚಿತ್ರದುರ್ಗ ಕಡೆ, ಅಲ್ಲದೆ ಉತ್ತರದಲ್ಲಿ ರಾಮದುರ್ಗ, ಬೆಳಗಾವಿ ಸುತ್ತಮುತ್ತ ಹಲವಾರು ರೈತರು…

Read more

ಅಡಿಕೆಯ ಕಥೆ ವ್ಯಥೆಯಾಗುವ ಮುನ್ಸೂಚನೆ

ರಾಜ್ಯ ಸರಕಾರ  ಜನತೆಗೆ ಮನೆ ಹೊರಡದಂತೆ ಕರ್ಫ್ಯೂ  ವಿಧಿಸಿದೆ. ಅಗತ್ಯ ಸಾಮಾಗ್ರಿಗಳಿಗೆ ವಿನಾಯಿತಿ ನೀಡಿದ್ದರೂ ಅಡಿಕೆ ಎಂಬುದು ಅಗತ್ಯ ಸಾಮಾಗ್ರಿಗಳ ಅಡಿಯಲ್ಲಿ ಬಾರದ ಕಾರಣ ಅಡಿಕೆ ಕೊಳ್ಳುವವರು ತಮ್ಮ ವ್ಯವಹಾರ ನಿಲ್ಲಿಸುವುದು ಗ್ಯಾರಂಟಿ.  ಇನ್ನು ವ್ಯಾಪಾರ ಏನಿದ್ದರೂ ಪರಿಸ್ಥಿತಿ ಅನುಕೂಲಕರವಾಗಿ ಬಂದರೆ ಎಪ್ರೀಲ್ 1 ತರುವಾಯ. ಅಡಿಕೆ, ಕರಿಮೆಣಸು , ಶುಂಠಿ ಮುಂತಾದ ಕೃಷಿ ಉತ್ಪನ್ನಗಳ ಮಾರುಕಟ್ಟೆ  ಎಂಬುದು ಪರಿಸ್ಥಿತಿ ಸರಿಯಾಗಿದ್ದರೆ ಎಲ್ಲವೂ ಸಲೀಸಾಗಿ ಮುಂದುವರಿಯುತ್ತದೆ. ಎಲ್ಲಾದರೂ ಸ್ವಲ್ಪ  ಪರಿಸ್ಥಿತಿ  ಬಿಗಡಾಯಿಸಿದರೆ  ಹೇಗೆ ಮಾರುಕಟ್ಟೆ ಕುಸಿಯುತ್ತದೆ ಎಂದೇ…

Read more

ಮೆಕ್ಕೇ ಜೋಳ ಬೆಳೆಗಾರರು ಕಂಗಾಲಾಗಬೇಕಾಗಿಲ್ಲ.

  ಕೈಯಲ್ಲಿ ತುತ್ತು ಹಿಡಿದುಕೊಂಡ ನಂತರ ಅದನ್ನು ಬಾಯಿಗೆ ಇಡಲೇ ಬೇಕು. ಅದನ್ನು ಸಿಟ್ಟಿನಲ್ಲಿ  ಹೊರ ಚೆಲ್ಲಿದರೆ  ಯಾರಿಗೂ ಏನೂ ಪ್ರಯೋಜನ ಇಲ್ಲ. ನಮ್ಮ ರೈತರು ದಾಸ್ತಾನು ಇಡಬಹುದಾದ ಬೆಳೆಗಳ ಬೆಲೆ ಕುಸಿತವಾದಾಗ ತೆಗೆದುಕೊಳ್ಳೂವ ಅವಸರದ ತೀರ್ಮಾನ ಅವನಿಗೇ ನಷ್ಟದ  ಬಾಬ್ತು ಆಗುತ್ತದೆ. ಮೆಕ್ಕೇ ಜೋಳದ ಬೆಲೆ ಕುಸಿತಕೆ ಕಾರಣ, ಕೋಳೀ  ಉದ್ದಿಮೆಯ ನಷ್ಟ ಎನ್ನಲಾಗುತ್ತಿದೆ. ನಮ್ಮಲ್ಲಿ  ಬೆಳೆಯುವ ಸುಮಾರು 60 % ಹೆಚ್ಚಿನ ಮೆಕ್ಕೇ ಜೋಳ ಕೋಳೀ  ಆಹಾರ ತಯಾರಿಕೆಗೇ ಬಳಸಲ್ಪಡುತ್ತದೆ. ಉಳಿದದ್ದು ಪಶು ಆಹಾರ …

Read more

ತೃಣನಾದೆಯಲೋ ಮಾನವಾ.

ಸಮಸ್ತ ಆರ್ಥಿಕ ವ್ಯವಸ್ಥೆಯನ್ನೂ ಕ್ಷಣ ಮಾತ್ರದಲ್ಲಿ ನಾವು ಯಾರೂ ಕಲ್ಪಿಸದ ರೀತಿಯಲ್ಲಿ ಮಟ್ಟ ಹಾಕಿದ್ದು ಪ್ರಕೃತಿಯೇ. ಇನ್ನು ನಾವು ಪ್ರಕೃತಿಯ ಆಜ್ನೆಯಂತೆ ನಡೆಯಬೇಕು. ನಮ್ಮ ಆಟ ಏನೂ ನಡೆಯಲ್ಲ. ಬ್ಯಾಂಕುಗಳಲ್ಲಿ ಹಣ ಇಲ್ಲ. ಜನರ ತಿರುಗಾಟ ಇಲ್ಲ. ಮಾರುಕಟ್ಟೆ ಎಲ್ಲವೂ ಮಲಗಿದೆ. ಅಂಗಡಿ ಬಾಗಿಲುಗಳು ಮುಚ್ಚಿವೆ. ಸಾರಿಗೆಯ ವಾಹನಗಳಿಲ್ಲ. ಎಲ್ಲರೂ ಅವರವರ ಮನೆಯಲ್ಲಿದ್ದಾರೆ. ಇಡೀ ಅರ್ಥ ವ್ಯವಸ್ಥೆಯೇ ಸ್ಥಬ್ದವಾಗಿದೆ. ಇದು ಎಷ್ಟು ದಿನವೋ ಯಾರಿಗೂ ಗೊತ್ತಿಲ್ಲ. ಸಾಂಕ್ರಾಮಿಕ ರೋಗಗಳು ಕೋಟ್ಯಾಂತರ ರೂ.ಗಳನ್ನು ಬ್ಯಾಂಕಿನಲ್ಲಿಟ್ಟವರನ್ನೂ , ಸಾವಿರಾರು ಎಕ್ರೆ…

Read more

ಏಲಕ್ಕಿ ಬೆಳೆಗೆ ಇದು ಮಾರಕ ರೋಗ

ಏಲಕ್ಕಿ ಬೆಳೆಯಲಾಗುವ ಎಲ್ಲಾ ಕಡೆ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಕಟ್ಟೆ ಮತ್ತು ಕೊಕ್ಕೆ ಕಂದು ರೋಗ ಅಥವಾ ನಂಜಾಣು ರೋಗದ ಲಕ್ಷಣವನ್ನು ತೋರುವ ಸಸ್ಯಗಳಿವೆ. ಇದು ಸರಿಯಾಗುವ ರೋಗ ಅಲ್ಲ. ಹರಡುವ ರೋಗ. ಆದುದರಿಂದ  ಅದನ್ನು ಹಾಗೆಯೇ ಉಳಿಸಿಕೊಳ್ಳಬೇಡಿ. ಕಟ್ಟೆ ಅಥವಾ ಕೊಕ್ಕೆ ಕಂದು ರೋಗದ ಲಕ್ಷಣಕ್ಕೆ ಹೋಲಿಕೆ ಇದ್ದರೆ  ಅದನ್ನು ತೆಗೆದು ಬಿಡಿ. ರೋಗ ಅದರಲ್ಲೂ ನಂಜಾಣು ರೋಗ ಶಿಲೀಂದ್ರ ರೋಗಗಳು ಕೆಲವು ವಾಹಕಗಳ ಮೂಲಕ ಆರೋಗ್ಯವಂತ ಸಸ್ಯಕ್ಕೂ ಪ್ರಸಾರವಾಗುತ್ತದೆ. ಬಾಳೆಯಲ್ಲಿ  ನಂಜಾಣು ರೋಗ ಬಂದದ್ದನ್ನು…

Read more
error: Content is protected !!