ಸಸ್ಯಕ್ಕೆ ಜೀವಮಾನದ ಶಕ್ತಿ ಕೊಡಲು: ಮೂಲಗೊಬ್ಬರ ಅಗತ್ಯ.
ಬೀಜ ಬಿತ್ತುವಾಗ , ಸಸಿ ನೆಡುವಾಗ ಅದಕ್ಕೆ ತಕ್ಷಣ ಮತ್ತು ಅದರ ಜೀವಮಾನದುದ್ದಕ್ಕೂ ಅಂತರ್ಗತ ಶಕ್ತಿ ತುಂಬಲು ಬೇಕಾಗುವುದು ಮೂಲಗೊಬ್ಬರ. ನಮ್ಮ ಹಿರಿಯರು ಬೀಜ ಬಿತ್ತುವ ಸಮಯದಲ್ಲಿ ಬರೇ ಮಣ್ಣಿಗೆ ಬೀಜ ಹಾಕುತ್ತಿರಲಿಲ್ಲ. ಬದಲಿಗೆ ಹುಡಿಯಾದ ಕೊಟ್ಟಿಗೆ ಗೊಬ್ಬರ ಹಾಕಿ ಅದರ ಮೇಲೆ ಬೀಜ ಬಿತ್ತುತ್ತಿದ್ದರು. ಅದು ಆ ಸಸ್ಯಕ್ಕೆ ಪ್ರಾರಂಭದಲ್ಲಿ ಬೆಳವಣಿಗೆಯ ಶಕ್ತಿ ತುಂಬುವುದಕ್ಕಾಗಿ. ಹೀಗೆ ಬಿತ್ತನೆ ಮಾಡಿದ ಸಸಿ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮೊಳಕೆಯಿಂದಲೇ ಸಧೃಢವಾಗಿ ಬೆಳೆಯಲಾರಂಭಿಸುತ್ತದೆ. ಹಸು ಮೇವಿನ ಜೊತೆಯಲ್ಲಿ ತಿಂದ…
