
ಕುಂಟು ನೇರಳೆ-ಕುಂಟಾಲ ಮರಗಳು ಎಲ್ಲಿ ಹೋದವೋ?
ಕುಂಟು ನೇರಳೆ, ಕುಂಟಾಲ ಎಂಬ ಕಾಡು ಸಸ್ಯ ಒಂದು ಕಾಲದಲ್ಲಿ ಎಲ್ಲಾ ಕಡೆಯಲ್ಲೂ ಕಾಣಸಿಗುತ್ತಿದ್ದ ಸಸ್ಯವಾಗಿತ್ತು. ಈಗ ಅದು ಭಾರೀ ಕ್ಷೀಣಗೊಳ್ಳುತ್ತಿದ್ದು, ಪರಿಸರದ ಅಸಮತೋಲನಕ್ಕೆ ಇದೂ ಒಂದು ಕಾರಣವಾಗಿದೆ. ಈ ಸಸ್ಯವನ್ನು ಅವಲಂಭಿಸಿ ಬದುಕುವ ಒಂದಷ್ಟು ಜೀವಿಗಳು ಆಹಾರವಿಲ್ಲದೆ ಬೇರೆ ಬೆಳೆ ಆಶ್ರಯಿಸುವಂತಾಗಿದೆ. ಕುಂಟು ನೇರಳೆ, ಅಥವಾ ಕುಂಟಾಲ ಇದು ನೇರಳೆ ಜಾತಿಯ ಸಸ್ಯವಾಗಿದ್ದು, ಹಿಂದೆ ಎಲ್ಲಾ ಕಡೆ ಇದರ ಸಸ್ಯಗಳು, ಮರಗಳು ಇದ್ದವು.ಇದರ ವೈಜ್ಞಾನಿಕ ಹೆಸರು Syzygium caryophyllatum , ಹೆಚ್ಚು ಎತ್ತರಕ್ಕೆ ಬೆಳೆಯದ ಸಾಧಾರಣ…