ಚಳಿಗಾಲ –ಬೆಳೆಗಳಿಗೆ ಶಕ್ತಿ ತುಂಬುವ ಋತುಮಾನ.
ಮಳೆಗಾಲ- ಚಳಿಗಾಲ- ಬೇಸಿಗೆ ಕಾಲ ಈ ಮೂರು ಋತುಮಾನಗಳು ಕೃಷಿಗೆ, ಹಾಗೆಯೇ ಎಲ್ಲಾ ಜೀವ ಜಂತುಗಳಿಗೂ ಅತ್ಯಗತ್ಯ. ಒಂದು ಕಾಲದಲ್ಲಿ ಆದ ತೊಂದರೆ ಮತ್ತೊಂದು ಕಾಲದಲ್ಲಿ ಸರಿಯಾಗಲಿ ಇದು ಪ್ರಕೃತಿ ಮಾಡಿಕೊಂಡ ನೈಸರ್ಗಿಕ ಚಿಕಿತ್ಸೆ ಎನ್ನಬಹುದು.ನಮ್ಮ ಜೀವಾನಾಧಾರ ವೃತ್ತಿಯಾದ ಕೃಷಿಗೆ ಮೂರು ಋತುಮಾನಗಳೂ ಅತೀ ಪ್ರಾಮುಖ್ಯ. ಒಂದರಲ್ಲಿ ವ್ಯತ್ಯಾಸವಾದರೂ ಫಸಲು ವ್ಯತ್ಯಯವಾಗುತ್ತದೆ. ವಿಷೇಶವಾಗಿ ಚಳಿಗಾಲದ ಎಂಬುದು ನಮ್ಮ ಬೆಳೆಗಳಿಗೆ ವಿರಾಮದ (Rest) ಕಾಲ ಎಂದೇ ಹೇಳಬಹುದು. ವಿರಾಮ ಸಿಕ್ಕಿದಷ್ಟೂ ಅದು ಮತ್ತೆ ಚೈತನ್ಯಕ್ಕೆ ಒಳಪಡುತ್ತದೆ. ನಮ್ಮ ಕೃಷಿ…
