ಸಸ್ಯಗಳು ಸಮರ್ಪಕವಾಗಿ ಪೋಷಕಾಂಶ ಬಳಕೆ ಸೂಕ್ತ ವಾತಾವರಣ.
ನಾವು ಬೆಳೆಯುವ ಬೆಳೆಗಳು ಸಮರ್ಪಕವಾಗಿ ಪೋಷಕಾಂಶ ಬಳಕೆ ಮಾಡಿಕೊಳ್ಳಲು ಸೂಕ್ತ ವಾತಾವರಣ ಪ್ರಾಮುಖ್ಯ. ಆರೋಗ್ಯವಂತ ವ್ಯಕ್ತಿಗೆ ತಿಂದ ಆಹಾರ ಮೈಗೆ ಹೇಗೆ ತೆಗೆದುಕೊಳ್ಳುತ್ತದೆಯೋ ಹಾಗೆಯೇ ಸಸ್ಯಗಳಿಗೂ ಸಹ. ಆದ ಕಾರಣ ಗೊಬ್ಬರ ಒಂದನ್ನೇ ಕೊಟ್ಟು ಬೆಳೆ ತೆಗೆಯುತ್ತೇವೆ ಎಂದರೆ ಅದು ಅಸಾಧ್ಯ. ಗೊಬ್ಬರಗಳನ್ನು ಸಸ್ಯಗಳು ಬಳಸಿಕೊಳ್ಳಲು ವಾತಾವರಣದ ಅನುಕೂಲ ಸ್ಥಿತಿ ಪ್ರಾಮುಖ್ಯ. ಒಳ್ಳೆಯ ಬೆಳೆಯ ಉತ್ಪಾದನೆಗೆ ಕೇವಲ ರಾಸಾಯನಿಕ ಗೊಬ್ಬರ ಸಾಕಾಗುವುದಿಲ್ಲ. ಮಣ್ಣಿನ ಗುಣ, ತೇವಾಂಶ, ಗಾಳಿಯ ಸಂಚಾರ, ತಾಪಮಾನ ಮತ್ತು ಮಣ್ಣಿನ ಸ್ಥಿತಿಗುಣ (pH) ಹೀಗೆ…
