ನೈಟ್ರೋಫಾಸ್ಫೇಟ್ ರಸಗೊಬ್ಬರಗಳು – ಸಮತೋಲನ ಪೋಷಣೆಗೆ, ಉತ್ತಮ ಬೆಳೆಗೆ
ಇಂದಿನ ದಿನಗಳಲ್ಲಿ ರೈತರು ಹಲವಾರು ಕಾಂಪ್ಲೆಕ್ಸ್ ರಸಗೊಬ್ಬರಗಳನ್ನು ಬಳಸುತ್ತಾರೆ. ಆದರೆ, ಇವು ಯಾವ ರೂಪದ ಪೋಷಕಾಂಶಗಳನ್ನು ಹೊಂದಿವೆ ಮತ್ತು ಅವು ಹೇಗೆ ಕೆಲಸ ಮಾಡುತ್ತವೆ ಎಂಬುದರ ಬಗ್ಗೆ ಸ್ಪಷ್ಟವಾದ ತಿಳಿವಳಿಕೆ ಕೆಲವರಿಗೆ ಇಲ್ಲ. ಇಂತಹ ರಸಗೊಬ್ಬರಗಳಲ್ಲಿ ನೈಟ್ರೋ ಫಾಸ್ಫೇಟ್ ರಸಗೊಬ್ಬರಗಳು (Nitrophosphate Fertilizers) ವಿಶೇಷ ಸ್ಥಾನ ಪಡೆದಿವೆ. ಇವು ಬೆಳೆಗಳಿಗೆ ಸಾರಜನಕ (N) ಮತ್ತು ರಂಜಕ (P) ಪೊಟ್ಯಾಶಿಯಂ (ಪೊಟ್ಯಾಶಿಯಂ ಆಯ್ಕೆ) ಎಂಬ ಮೂರು ಮುಖ್ಯ ಪೋಷಕಾಂಶಗಳನ್ನು ಲಭ್ಯವಾಗುವ ರೂಪದಲ್ಲಿ ಒದಗಿಸುತ್ತವೆ.ವಿಶೇಷವಾಗಿ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ, ಪೋಷಕಾಂಶ…
