“ಹೊಗೆ” ಬೆಳೆ ಸಂರಕ್ಷಣೆ ಪರಿಸರ ಸ್ನೇಹೀ ವಿಧಾನ.
ಹೊಗೆ ಹಾಕಿದರೆ ಓಡಿಸಲು ಕಷ್ಟವಾದದ್ದನ್ನು ಸುಲಭವಾಗಿ ಓಡಿಸಬಹುದಂತೆ. ಅದಕ್ಕೇ ಹೋಗು ಎನ್ನಲಾಗದಿದ್ದರೆ ಹೊಗೆ ಹಾಕಿ ಎಂಬ ಗಾದೆ ಮಾತು. ಇಂದು ನಮ್ಮ ಕೃಷಿ –ತೋಟಗಾರಿಕಾ ಬೆಳೆಗಳಲ್ಲಿ ಕೀಟಗಳ ಸಮಸ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಹಲವು ಇದೆ. ಸಂಪ್ರದಾಯಿಕ ಕೃಷಿ ಕ್ರಮಗಳನ್ನು ಬಿಟ್ಟು ಸರಳ ಆಧುನಿಕ ಕ್ರಮಗಳನ್ನೇ ಅನುಸರಿಸಿದ ಕಾರಣ ಕೀಟಗಳು – ರೋಗಗಳು ಹೆಚ್ಚಾಗುತ್ತಿವೆ. ಇವುಗಳ ನಿಯಂತ್ರಣಕ್ಕೆ ಕೀಟನಾಶಕ- ರೋಗನಾಶಕಗಳೇ ಅಂತಿಮವಲ್ಲ. ಸರಳವಾಗಿ, ಖರ್ಚಿಲ್ಲದೆ ಮಾಡಬಹುದಾದ ಕೆಲವು ವಿಧಾನಗಳನ್ನು ಮಾಡಿದರೆ ಎಲ್ಲರಿಗೂ ಒಳ್ಳೆಯದು. ತೋಟಗಾರಿಕಾ ಬೆಳೆಗಳಲ್ಲಿ ಹೊಗೆ…
