ಬೆಳೆಗಳ ಜೀವ – ಪೊಟ್ಯಾಶಿಯಂ ಪೊಷಕಾಂಶ
ಬೆಳೆ ಯಾವುದೇ ಆಗಿರಲಿ ಅದಕ್ಕೆ ಜೀವ ಬರುವುದು ಪೊಟ್ಯಾಶಿಯಂ ಪೊಷಕಾಂಶ ಲಭ್ಯವಾದಾಗ ಮಾತ್ರ. ನಿಮ್ಮ ಬೆಳೆಗಳು ಹಚ್ಚ ಹಸುರಾಗಿ ಬೆಳೆದಿರುತ್ತವೆ. ಆದರೆ ಇಳುವರಿ ಮಾತ್ರ ತೀರಾ ಕಡಿಮೆ ಇರುತ್ತದೆ.ಬರುವ ಇಳುವರಿಯ ಗುಣಮಟ್ಟವೂ ಚೆನ್ನಾಗಿರುವುದಿಲ್ಲ. ಇದಕ್ಕೆಲ್ಲಾ ಕಾರಣ ಪೊಟ್ಯಾಶಿಯಂ ಎಂಬ ಪೋಷಕದ ಕೊರತೆ. ಇದು ಲಭ್ಯವಾದರೆ ಮಾತ್ರ ಕೈಗೆ ಬಂದ ತುತ್ತು ಬಾಯಿಗೆ ಬರಲು ಸಾಧ್ಯ. ಇದು ಬೆಳೆಗಳಿಗೆ ಶಕ್ತಿ ಕೊಡುವ ಗೊಬ್ಬರ. ನಮ್ಮಲ್ಲಿ ಹೆಚ್ಚಿನವರಿಗೆ ಸಮತೊಲನದ ಗೊಬ್ಬರ ಎಂದರೆ ಏನು ಎಂಬುದು ಇನ್ನೂ ತಿಳಿದಿಲ್ಲ. ಅದಕ್ಕೆ ಸರಿಯಾಗಿ…
