
ಅಂದು ವನಿಲ್ಲಾ –ಮುಂದೆ ಕರಿಮೆಣಸು. ಬೆಳೆಗಾರರು ಸಿದ್ಧರಿರಲೇಬೇಕು.
ಒಂದು ಕಾಲದಲ್ಲಿ ಸುಮಾರು 20 ವರ್ಷಕ್ಕೆ ಹಿಂದೆ ವನಿಲ್ಲಾ ಎಂಬ ಸಾಂಬಾರ ಬೆಳೆ ಭಾರೀ ಉಚ್ಛ್ರಾಯ ಸ್ಥಿತಿಗೆ ತಲುಪಿತ್ತು. ವನಿಲ್ಲಾ ಬೆಳೆಯೊಂದಿದ್ದರೆ ಕೃಷಿಕನ ಸ್ಥಿತಿಗತಿಯೇ ಬದಲಾಗಲಿದೆ ಎಂಬ ಹವಾ ಇತ್ತು. ಜನ ಭಾರೀ ಪ್ರಮಾಣದಲ್ಲಿ ಬೆಳೆ ಬೆಳೆಸಿದ್ದರು. ಸಾಕಷ್ಟು ಪ್ರಯೋಗಗಳನ್ನೂ ಮಾಡಿದ್ದರು. ಮಾಹಿತಿಗಾಗಿಯೇ ಕೆಲವು ತಜ್ಞರು ಸಿದ್ದರಾಗಿದ್ದರು. ಈ ಬೆಳೆ ರೈತರನ್ನು ಮರುಳು ಮಾಡಿದಷ್ಟು ಯಾವ ಬೆಳೆಯೂ ಮಾಡಿರಲಿಕ್ಕಿಲ್ಲ. ಬಹುಷಃ ಈ ಬೆಳೆಯನ್ನು ಬೆಳೆಸದವರೇ ಇರಲಿಕ್ಕಿಲ್ಲ. ಅದೇ ಸ್ಥಿತಿ ಕರಿಮೆಣಸಿಗೆ ಬರಬಹುದೇ? ಸಾಧ್ಯತೆ ಇಲ್ಲದಿಲ್ಲ. ಯಾವುದೇ ಬೆಳೆ…