
ನಾಗನಿಗೆ ಹಾಲು ಎರೆಯುವುದರಿಂದ ಏನೇನು ಲಾಭವಿದೆ?
ಆಷಾಡ ಮಾಸದ ಅಮಾವಾಸ್ಯೆ ಕಳೆದು ತಕ್ಷಣ ಬರುವ ವಿಷೇಶ ದಿನಗಳಲ್ಲಿ ನಾಗರ ಪಂಚಮಿ ಮೊದಲನೆಯದ್ದು. ಇದು ದಕ್ಷಿಣಾಯನದ ಮೊದಲ ವಿಷೇಷ ದಿನ ಎನ್ನಲಾಗುತ್ತದೆ.ಇದರ ನಂತರ ಚೌತಿ, ಅಷ್ಟಮಿ, ನವರಾತ್ರೆ, ದೀಪಾವಳಿ ಮುಂತಾದ ವಿಷೇಷ ದಿನಗಳು ಬರುತ್ತವೆ. ಎಲ್ಲದಕ್ಕೂ ನಾಗರ ಪಂಚಮಿ ಮುಹೂರ್ತ. ಪಂಚಮಿಯಂದು ನಾಗನಕಲ್ಲಿಗೆ ಅವರವರ ಶಕ್ತಿಯನುಸಾರ ಹಾಲೆರೆಯುತ್ತಾರೆ. ಹೂವು ಹಾಕುತ್ತಾರೆ. ಅರಶಿನ ಲೇಪಿಸುತ್ತಾರೆ. ಸಮರ್ಪಣೆ ಮಾಡುತ್ತಾರೆ. ನೈವೇದ್ಯ ಮಾಡುತ್ತಾರೆ. ಆರತಿ ಎತ್ತುತ್ತಾರೆ. ಧನ್ಯತಾ ಭಾವದಿಂದ ಕಲ್ಲಿನ ಮೂಲಕ ಹರಿದುಬಂದನ್ನು ತೀರ್ಥ ರೂಪದಲ್ಲಿ ಸೇವಿಸಿ ತಮ್ಮ ಮನೆ,…